ತೆಲುಗು ಕಿರುತೆರೆಯಲ್ಲಿ ಹಲವು ಪ್ರತಿಭಾವಂತ ಡ್ಯಾನ್ಸರ್‌ಗಳನ್ನು ಪರಿಚಯಿಸಿದ ಜೀ ತೆಲುಗಿನ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ‘ಆಟ’ ಹೊಸ ಸೀಸನ್‌ನೊಂದಿಗೆ ಮತ್ತೆ ಬರಲು ಸಜ್ಜಾಗಿದೆ.

ನೃತ್ಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತಾ ಬಂದಿರುವ ಈ ಶೋ, ಹೊಸ ಸೀಸನ್ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಇದರ ಭಾಗವಾಗಿ ಜೀ ತೆಲುಗು ಬೆಂಗಳೂರಿನಲ್ಲಿ ಆಡಿಷನ್ ನಡೆಸುತ್ತಿದೆ. ನೃತ್ಯದಲ್ಲಿ ಆಸಕ್ತಿ ಇರುವವರಿಗೆ ತಮ್ಮ ಪ್ರತಿಭೆ ತೋರಿಸಲು ಇದೊಂದು ಉತ್ತಮ ಅವಕಾಶವಾಗಿದೆ.

18ರಿಂದ 30 ವರ್ಷದೊಳಗಿನವರು ಈ ಆಡಿಷನ್‌ನಲ್ಲಿ ಭಾಗವಹಿಸಬಹುದು. ನವೆಂಬರ್ 22, ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಆಡಿಷನ್ ನಡೆಯಲಿದೆ.

ನೃತ್ಯದಲ್ಲಿ ಆಸಕ್ತಿ ಹೊಂದಿರುವವರು ಅಬ್ಬಯ್ಯ ನಾಯ್ಡು ಸ್ಟುಡಿಯೋ, ಲೇಔಟ್ 134, 7ನೇ ಕ್ರಾಸ್ ರಸ್ತೆ, ನಾಯ್ಡು ಲೇಔಟ್, ಚಿಕ್ಕಲಸಂದ್ರ, ಬೆಂಗಳೂರು ಇಲ್ಲಿಗೆ ನಿಗದಿತ ಸಮಯದಲ್ಲಿ ನೇರವಾಗಿ ಆಡಿಷನ್ ಸ್ಥಳಕ್ಕೆ ಭೇಟಿ ನೀಡಿ ಭಾಗವಹಿಸಬಹುದು. ನಿಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿ, ಜೀ ತೆಲುಗಿನ ‘ಆಟ’ ಶೋನಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆದುಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ