ದೀಪಾವಳಿಯ ಶುಭ ಸಂದರ್ಭದಲ್ಲಿ ನಿಮ್ಮ ಸಂಗಾತಿಯೊಂದಿಗೆ ವಿಶೇಷ ದೀಪಾವಳಿ ಪಾರ್ಟಿಗೆ ಹೋಗುವುದಾದರೆ, ನಿಮ್ಮ ಶೈಲಿ ಹಾಗೂ ಗತ್ತು ಕೂಡ ಅನನ್ಯವಾಗಿರಬೇಕು…..
ದೀಪಾವಳಿಯ ಹಬ್ಬವಿದ್ದು, ಮನಸಿನ ಮಾತನ್ನಾಡದಿದ್ದರೆ ಅದು ಸಾಧ್ಯವೇ ಇಲ್ಲ! ಏಕೆಂದರೆ ದೀಪಾವಳಿಯಂತಹ ಹಬ್ಬದ ಸಂಭ್ರಮ ನಿಮ್ಮಿಷ್ಟದ ಪ್ರೀತಿಯ ಸಂಗಾತಿ ಜೊತೆಗಿದ್ದಾಗ ಮಾತ್ರ ಪೂರ್ಣಗೊಳ್ಳುತ್ತದೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ದೀಪಾವಳಿ ಆಚರಿಸುವ ಮಜವೇ ಬೇರೆ.
ನಮ್ಮ ಪ್ರೀತಿಯ ಸಂಗಾತಿಯೊಂದಿಗೆ ಸಮಯ ಕಳೆಯುವುದು ಯಾವುದೇ ಹಬ್ಬಕ್ಕಿಂತ ಕಡಿಮೆಯಿಲ್ಲ. ಇನ್ನು ದೀಪಾವಳಿಯ ಶುಭ ವೇಳೆಯಲ್ಲಿ ನಿಮ್ಮ ಪ್ರೀತಿ ನಿಮ್ಮ ಜೊತೆಗಿದ್ದರೆ, ಕೇಳಬೇಕೇ! ಪ್ರತಿಯೊಬ್ಬರಿಗೂ ತಮ್ಮ ಸಂಗಾತಿಯೊಂದಿಗೆ ಆಚರಿಸುವ ದೀಪಾವಳಿಯೇ ಅತ್ಯಂತ ವಿಶೇಷವಾದದ್ದು.
ಪಂಕಜ್ ಉದಾಸ್ ರ ಗಝಲ್ ಸಾಲು `ಕೌನ್ ಸಿ ಬಾತ್ ಹೈ ತುವ್ ಮೇ ಐಸಿ, ಇತ್ನೆ ಅಚೇ ಕ್ಯೋಂ ಲಗ್ತೇ ಹೋ…..’ ಎಂಬುದು ಕೇವಲ ಹಾಡಿನ ಸಾಲಷ್ಟೇ ಅಲ್ಲ, ಪ್ರೀತಿಸುವ ಹೃದಯದ ಆಳವಾದ ಭಾವನೆ. ಕಣ್ಮುಂದೆ ಸಾವಿರಾರು ಸುಂದರ ಮುಖಗಳಿದ್ದರೂ, ಹೃದಯ ತನಗೆ ಅತ್ಯಂತ ಹತ್ತಿರವಾದ ಮತ್ತು ವಿಶೇಷವಾದ ಆ ಒಂದು ವ್ಯಕ್ತಿಗಾಗಿ ಮಾತ್ರ ಮಿಡಿಯುತ್ತದೆ.
ಅದಕ್ಕಾಗಿಯೇ ಸಾವಿರಾರು ಜನರ ಗುಂಪಿನಲ್ಲೂ ಪ್ರೀತಿಯಲ್ಲಿ ಮುಳುಗಿರುವ ವ್ಯಕ್ತಿ ತನ್ನ ಹೃದಯ ಮಿಡಿಯುವ ಆ ಒಂದು ಮುಖನ್ನವಷ್ಟೇ ನೋಡಲು ಬಯಸುತ್ತಾನೆ. ಅವನು ಕೇವಲ ಒಂದೇ ಮಾತು ಹೇಳುತ್ತಾನೆ, `ನೀನೇ ನನ್ನ ಜೀವನ. ಬರಿ ನೀನಷ್ಟೇ ನನ್ನ ಜೀವನ,’ ಎಂದು. ದೀಪಾವಳಿಯ ಶುಭ ಸಂದರ್ಭದಲ್ಲಿ ಪ್ರೀತಿಸುವ ವ್ಯಕ್ತಿಗೆ ತನ್ನ ಪ್ರೀತಿಯ ಸಂಗಾತಿ ಜೊತೆ ಹಬ್ಬವನ್ನು ಆಚರಿಸುವ ಅವಕಾಶ ಸಿಕ್ಕಾಗ, ಈ ದೀಪಾವಳಿಯನ್ನು ತನ್ನ ಸಂಗಾತಿಗೆ ಅತ್ಯಂತ ವಿಶೇಷವಾಗಿಸಲು ಏನು ಮಾಡಬೇಕು ಎಂಬ ಆಸೆ ಮನಸ್ಸಿನಲ್ಲಿರುತ್ತದೆ. ಇಂತಹ ವಿಶೇಷ ಪ್ರೇಮಿಗಳಿಗಾಗಿ ಕೆಲವು ಸಲಹೆಗಳು ಇಲ್ಲಿವೆ, ಇವುಗಳನ್ನು ಅನುಸರಿಸಿದರೆ ಖಂಡಿತವಾಗಿಯೂ ಈ ಬಾರಿಯ ದೀಪಾವಳಿ ಸದಾ ನಿಮ್ಮ ನೆನಪಿನಲ್ಲಿ ಉಳಿಯುಂತೆ ವಿಶೇಷವಾಗುತ್ತದೆ :
ದೀಪಾವಳಿಯಲ್ಲಿ ವಿಶಿಷ್ಟ ಲುಕ್ ಅಳವಡಿಸಿಕೊಳ್ಳಿ : ಯುವತಿಯರು ತಮ್ಮ ಪ್ರೇಮಿಯೊಂದಿಗೆ ದೀಪಾವಳಿ ಪಾರ್ಟಿಗೆ ಹೋಗುತ್ತಿದ್ದರೆ, ತಮ್ಮ ಸಂಗಾತಿಗೆ ಇಷ್ಟವಾಗುವಂತಹ ಸಾಂಪ್ರದಾಯಿಕ ಹಾಗೂ ಆಕರ್ಷಕ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ಸೀರೆ, ಶರಾರಾ, ಕರಾರಾ ಅಥವಾ ಸುಂದರವಾದ ಡಿಸೈನರ್ ಸಲ್ವಾರ್ ಕುರ್ತಾ. ಇದರ ಜೊತೆಗೆ ಸುಂದರ ಹಾಗೂ ಧರಿಸಲು ಆರಾಮದಾಯಕಾಗಿರುವ ಕ್ಲಾಸಿ ಆಭರಣಗಳನ್ನು ಧರಿಸಿ. ನಿಮ್ಮ ಉಡುಪಿಗೆ ಹೊಂದುವಂತಹ ಮೇಕಪ್ ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಇದರ ಜೊತೆಗೆ ನಿಮ್ಮ ಪ್ರೇಮಿಯನ್ನು ಆಕರ್ಷಿಸಲು ಅವರಿಗೆ ಇಷ್ಟವಾಗುವ ಸುಗಂಧದ್ರವ್ಯವನ್ನು ಬಳಸಿ. ಇದರಿಂದ ಅವರು ನಿಮ್ಮ ನೋಟ ಹಾಗೂ ಉಡುಪಿನಿಂದಷ್ಟೇ ಅಲ್ಲದೆ, ನಿಮ್ಮ ಸುವಾಸನೆಗೂ ಮಂತ್ರಮುಗ್ಧರಾಗುತ್ತಾರೆ. ದೀಪಾವಳಿಯ ಸಮಯದಲ್ಲಿ ಎಲ್ಲೆಲ್ಲೂ ದೀಪಗಳ ಸಾಲು ಹಾಗೂ ವರ್ಣರಂಜಿತ ವಾತಾವರಣ ಕಂಗೊಳಿಸುತ್ತಿರುತ್ತದೆ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಕಾರು, ಬೈಕ್ ಅಥವಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಲಾಂಗ್ ಡ್ರೈವ್ಹೋಗಿ, ದೀಪಗಳಿಂದ ಅಲಂಕೃತಗೊಂಡ ರಸ್ತೆ, ಅಂಗಡಿಗಳು ಹಾಗೂ ದೀಪಾವಳಿಯ ಸುಂದರ ವಾತಾವರಣದ ಸವಿಯನ್ನು ಖಂಡಿತವಾಗಿಯೂ ಅನುಭವಿಸಿ.
ಸರ್ ಪ್ರೈಸ್ ಪಾರ್ಟಿ ಆಯೋಜಿಸಿ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ಒಂದು ಸುಂದರವಾದ ಉಡುಗೊರೆ ನೀಡುವುದು ಅತ್ಯಗತ್ಯ. ಆದ್ದರಿಂದ, ನಿಮ್ಮ ಪ್ರೇಮಿಗೆ ಅವರ ಇಷ್ಟಕ್ಕೆ ತಕ್ಕಂತೆ ಒಂದು ಸುಂದರ ದೀಪಾವಳಿ ಗಿಫ್ಟ್ ಖಂಡಿತವಾಗಿಯೂ ನೀಡಿ. ಉದಾಹರಣೆಗೆ, ಯುವಕನಾಗಿದ್ದರೆ ತನ್ನ ಪ್ರೇಯಸಿಗೆ ಬಜೆಟ್ ಗೆ ಅನುಗುಣವಾಗಿ ಆರ್ಟಿಫಿಶಿಯಲ್ ಜ್ಯೂವೆಲರಿ, ಪರ್ಸ್ ಅಥವಾ ಪರ್ಫ್ಯೂಮ್ ನೀಡಬಹುದು. ಅದೇ ರೀತಿ ಯುವಕನಿಗೆ ಗಿಫ್ಟ್ ನೀಡಬೇಕಿದ್ದರೆ, ಸುಂದರವಾದ ಟೀಶರ್ಟ್, ವಾಚ್, ಬ್ರೇಸ್ ಲೆಟ್, ಲಾಕೆಟ್ ಅಥವಾ ಚೈನ್ ನೀಡಬಹುದು. ಈ ಸಮಯದಲ್ಲಿ ನಿಮ್ಮ ಸಂಗಾತಿಯ ಇಷ್ಟಾನಿಷ್ಟಗಳನ್ನು ಮರೆಯಬೇಡಿ.
ನಿಮ್ಮ ಸಂಗಾತಿಯ ಇಷ್ಟವನ್ನು ಗಮನದಲ್ಲಿಟ್ಟುಕೊಂಡು ಉಡುಗೊರೆ ನೀಡಿದರೆ ಅವರು ಖಂಡಿತವಾಗಿ ಸಂತೋಷಪಡುತ್ತಾರೆ. ನಿಮ್ಮ ಸಂಗಾತಿ ನಿಮಗೆ ಅತ್ಯಂತ ವಿಶೇಷವಾಗಿರುವುದರಿಂದ, ಅವರನ್ನು ಡಿನ್ನರ್ ಗಾಗಿ ಸ್ವಲ್ಪ ಗೌಪ್ಯತೆ ಸಿಗುವಂತಹ ಹೋಟೆಲ್ ಗೆ ಕರೆದುಕೊಂಡು ಹೋಗಿ. ಅಲ್ಲಿ ನೀವು ಪ್ರಶಾಂತವಾಗಿ ಅವರೊಂದಿಗೆ ಗುಣಮಟ್ಟದ ಸಮಯ ಕಳೆಯಬಹುದು ಹಾಗೂ ನಿಮ್ಮ ಮನಸ್ಸಿನ ಮಾತನ್ನು ಹಂಚಿಕೊಳ್ಳಬಹುದು. ದೀಪಾವಳಿಯ ಸಂದರ್ಭದಲ್ಲಿ ನಿಮ್ಮ ಸಂಗಾತಿಗಾಗಿ ಇಂತಹ ಸರ್ ಪ್ರೈಸ್ ಪಾರ್ಟಿ ಆಯೋಜಿಸಿದರೆ, ನಿಮ್ಮೊಂದಿಗೆ ಆಚರಿಸಿದ ಈ ದೀಪಾವಳಿ ಅವರಿಗೆ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತಹ ದೀಪಾವಳಿಯಾಗುತ್ತದೆ, ಹ್ಯಾಪಿ ದೀಪಾವಳಿ!
– ಪ್ರತಿನಿಧಿ





