ಬಿ. ಪಾವನಿ
ಕೊಂಚ ಯೋಚಿಸಿ. ನಿಮ್ಮ ಲಗ್ನಪತ್ರಿಕೆ (ರಿಂಗ್ ಸೆರೆಮನಿ)ಯಲ್ಲಿ ನಿಮಗೆ ಉಂಗುರ ತೊಡಿಸಲು ಹುಡುಗ ನಿಮ್ಮ ಕೈ ಯಾಚಿಸುತ್ತಾನೆ ಮತ್ತು ಮರುಕ್ಷಣವೇ ನಿಮ್ಮ ಉಗುರುಗಳ ಸತ್ತಮುತ್ತ ಕತ್ತರಿಸಿದ, ಒಡೆದ ಕ್ಯುಟಿಕಲ್ಸ್ ನೋಡಿ ಅವನು ಹುಬ್ಬು ಗಂಟಿಕ್ಕಿದರೆ ನಿಮಗೆ ಏನನ್ನಿಸುತ್ತದೆ? ನಿಮ್ಮ ಬಾಯ್‌ಫ್ರೆಂಡ್ ಪ್ರೀತಿಯಿಂದ ನಿಮ್ಮ ಕೈ ಒತ್ತಿದಾಗ ನಿಮ್ಮ ಶುಷ್ಕ ಹಾಗೂ ಒರಟಾದ ತ್ವಚೆ ಆತನಿಗೆ ಚುಚ್ಚಿದರೆ ನಿಮ್ಮ ಮೇಲೆ ಯಾವ ಇಂಪ್ರೆಶನ್ ಬರಬಹುದು?
ಈಗೀಗ ಮಹಿಳೆಯರು ಮುಖದ ಸೌಂದರ್ಯದ ಜೊತೆ ಜೊತೆಯಲ್ಲೇ ಕೈಕಾಲುಗಳ ಸೌಂದರ್ಯದ ಬಗ್ಗೆಯೂ ಗಮನಕೊಡುತ್ತಿದ್ದಾರೆ. ವಿಶೇಷವಾಗಿ ಕೈಗಳ ಸೌಂದರ್ಯಕ್ಕೆ ಅವರು ಹೆಚ್ಚು ಗಮನ ಕೊಡುತ್ತಿದ್ದಾರೆ. ಅದಕ್ಕೆ ಅವರು 15 ದಿನಗಳಿಗೊಮ್ಮೆ ಪಾರ್ಲರ್‌ಗೆ ಹೋಗುತ್ತಿದ್ದಾರೆ. ಯಾವಾಗಲೂ ಮಹಿಳೆಯರ ಉಗುರುಗಳು ನೇಲ್‌ಪಾಲಿಶ್‌ನಿಂದ ಅಲಂಕೃತವಾಗಿರುತ್ತವೆ. ಆದರೆ ಕೈಗಳ ಸೌಂದರ್ಯಕ್ಕೆ ಇಷ್ಟು ಸಾಕೆ? ದುಬಾರಿ ಮೆನಿಕ್ಯೂರ್ ನಂತರ ಬಹಳಷ್ಟು ಮಹಿಳೆಯರ ಕ್ಯುಟಿಕಲ್ಸ್ ಹೊರಬಂದಿರುತ್ತದೆ. ಅವು ಕೈಗಳ ಸೌಂದರ್ಯ ಕಡಿಮೆ ಮಾಡುತ್ತದೆ ಅಲ್ಲದೆ, ಉಗುರುಗಳಿಗೆ ಇನ್‌ಫೆಕ್ಷನ್ ಉಂಟುಮಾಡುತ್ತದೆ.
ವಿಶೇಷವಾಗಿ ಚಳಿಗಾಲದಲ್ಲಿ ತ್ವಚೆ ಶುಷ್ಕವಾದಾಗ ಕ್ಯುಟಿಕಲ್ಸ್ ಕೂಡ ಡ್ರೈ ಮತ್ತು ಕಠಿಣವಾಗುತ್ತವೆ. ಆಗ ಕ್ಯುಟಿಕಲ್ಸಿನ ತೊಂದರೆಯಿಂದ ಪರಿಹಾರ ಪಡೆಯಲು ಹಾಗೂ ಕೈಗಳ ಸೌಂದರ್ಯಕ್ಕೆ ಅಂಟಿದ ಕಲೆ ದೂರ ಮಾಡಲು ಮಹಿಳೆಯರು ಕ್ಯುಟಿಕಲ್ಸಿಗೆ ಹಾನಿ ಉಂಟುಮಾಡುವ ವಿಧಾನಗಳನ್ನು ಬಳಸುತ್ತಾರೆ. ಅನೇಕ ಬಾರಿ ಪರಿಸ್ಥಿತಿ ಎಷ್ಟು ಬಿಗಡಾಯಿಸುತ್ತದೆ ಎಂದರೆ ನೇಲ್ ಸರ್ಜರಿ ಮಾಡಿಸಬೇಕಾಗಿ ಬರುತ್ತದೆ.
ಇದರ ಬಗ್ಗೆ ಡರ್ಮಟಾಲಜಿಸ್ಟ್ ಡಾ. ರಮಣ್ ಹೀಗೆ ಹೇಳುತ್ತಾರೆ, “ಹೆಚ್ಚಿನ ಮಹಿಳೆಯರು ಉಗುರುಗಳನ್ನು ಗಮನಿಸುವುದನ್ನು ಫ್ಯಾಷನ್‌ಗೆ ಹೊಂದಿಸಿ ನೋಡುತ್ತಾರೆ. ಆದರೆ ಉಗುರುಗಳ ಸ್ವಚ್ಛತೆ ಶರೀರದ ಇತರ ಭಾಗಗಳ ಸ್ವಚ್ಛತೆಯಂತೆಯೇ ಅಷ್ಟೇ ಅಗತ್ಯವಾಗಿದೆ. ಇಷ್ಟೇ ಅಲ್ಲ, ಕ್ಯುಟಿಕಲ್ಸ್ ಬಗ್ಗೆಯೂ ಅವರಿಗೆ ಮಾಹಿತಿ ಕಡಿಮೆ ಇರುತ್ತದೆ. ಹೆಚ್ಚಿನ ಮಹಿಳೆಯರು ಕ್ಯುಟಿಕಲ್ಸನ್ನು ಡೆಡ್ ಸ್ಕಿನ್ ಎಂದು ತಿಳಿದು ಅದನ್ನು ಕತ್ತರಿಸುತ್ತಾರೆ ಅಥವಾ ಹಲ್ಲಿನಿಂದ ಅಗಿಯುತ್ತಿರುತ್ತಾರೆ. ಕ್ಯುಟಿಕಲ್ಸ್ ತ್ವಚೆಯ ಮೃತ ಅಲ್ಲ, ಜೀವಿತ ಭಾಗವಾಗಿದೆ ಹಾಗೂ ಉಗುರುಗಳ ಸುರಕ್ಷಾ ಕವಚವಾಗಿದೆ. ಕ್ಯುಟಿಕಲ್ಸ್ ಉಗುರುಗಳನ್ನು ಬ್ಯಾಕ್ಟೀರಿಯಲ್ ಅಟ್ಯಾಕ್ ಮತ್ತು ಇನ್‌ಫೆಕ್ಷನ್‌ನಿಂದ ರಕ್ಷಿಸುತ್ತವೆ.
”ಒಂದು ವೇಳೆ ನಿಮ್ಮ ಕ್ಯುಟಿಕಲ್ಸ್ ಶುಷ್ಕ ಅಥವಾ ಒಡೆದಿದ್ದರೆ ಕೂಡಲೇ ಚಿಕಿತ್ಸೆ ಮಾಡಿಸುವುದು ಬಹಳ ಅಗತ್ಯ. ಏಕೆಂದರೆ ಚಿಕಿತ್ಸೆ ಇಲ್ಲದಿದ್ದರೆ ಕ್ಯುಟಿಕಲ್ಸ್ ಡ್ಯಾಮೇಜ್ ಆಗುತ್ತದೆ. ಅದರ ನೇರ ಪರಿಣಾಮ ಉಗುರುಗಳ ಮೇಲೆ ಬೀಳುತ್ತದೆ. ’’
ಡಾ. ರಮಣ್ ಪ್ರಕಾರ ಕ್ಯುಟಿಕಲ್ಸ್ ಡ್ಯಾಮೇಜ್ ಆಗುವುದರ ಅರ್ಥ ಉಗುರುಗಳ ಆಕಾರ ಹಾಳಾಗುವುದು. ಅನೇಕ ಬಾರಿ ಉಗುರುಗಳಲ್ಲಿ ಬಿಳಿ ಕಲೆ ಮತ್ತು ಗೆರೆಗಳು ಕಂಡುಬರುತ್ತವೆ. ಅದರಿಂದ ಕ್ಯುಟಿಕಲ್ಸ್ ಡ್ಯಾಮೇಜ್ ಆಗುತ್ತವೆ.
ಹೀಗಾಗದಿರಲು ಚಳಿಗಾಲ ಬಂದ ಕೂಡಲೇ ಕ್ಯುಟಿಕಲ್ಸ್ ಮೇಲೆ ಮಾಯಿಶ್ಚರೈಸರ್ ಹಚ್ಚಿ. ಡಾ. ರಮಣ್ ಹೀಗೆ ಹೇಳುತ್ತಾರೆ, ಕ್ಯುಟಿಕಲ್ಸ್ ಮೇಲೆ ಮಾಯಿಶ್ಚರೈಸರ್ ಹಚ್ಚುವುದಕ್ಕೂ ಒಂದು ವಿಧಾನವಿದೆ. ಯಾವುದೇ ಮಾಯಿಶ್ಚರೈಸರ್ ಹಚ್ಚುವುದರಿಂದ ಕ್ಯುಟಿಕಲ್ಸ್ ಡ್ಯಾಮೇಜ್ ಆಗುವುದನ್ನು ತಪ್ಪಿಸಲಾಗುವುದಿಲ್ಲ. ಅದಕ್ಕಾಗಿ ಹೆವಿ ಮಾಯಿಶ್ಚರೈಸರ್ ಕ್ರೀಂ ಬರುತ್ತದೆ. ಅದನ್ನು ಉಪಯೋಗಿಸಿದರೆ ಕ್ಯುಟಿಕಲ್ಸ್ ಒಡೆಯುವುದು, ಕತ್ತರಿಸುವುದನ್ನು ತಡೆಯಬಹುದು.
ಕ್ಯುಟಿಕಲ್ಸ್ ಕೇರ್ ಟಿಪ್ಸ್
ಕ್ಯುಟಿಕಲ್ಸನ್ನು ಮಾಯಿಶ್ಚರೈಸ್ ಮಾಡಲು ಎಲ್ಲಕ್ಕೂ ಮೊದಲು ಅವನ್ನು ಸಜ್ಜುಗೊಳಿಸಿ. ಅದಕ್ಕೆ 10 ರಿಂದ 15 ನಿಮಿಷಗಳವರೆಗೆ ಉಗುರುಗಳನ್ನು ತುಸು ಬೆಚ್ಚಗಿನ ನೀರಿನಲ್ಲಿ ಅದ್ದಿಡಿ. ಅವು ಸಾಫ್ಟ್ ಆದಾಗ ಕ್ಯುಟಿಕಲ್ಸ್ ಹೆಚ್ಚು ದೊಡ್ಡದಾಗಿವೆಯೇ ಎಂದು ಗಮನಿಸಿ. ಹಾಗೆ ಆಗಿದ್ದಲ್ಲಿ ಕ್ಯುಟಿಕಲ್ಸನ್ನು ಕೈಗಳಿಂದ ಹಗುರವಾಗಿ ಹಿಂದಕ್ಕೆ ತಳ್ಳಿ, ಅದಕ್ಕೆ ಯಾವುದೇ ಉಪಕರಣ ಉಪಯೋಗಿಸಬೇಡಿ.
– ಈಗ ಕ್ಯುಟಿಕಲ್ಸ್ ಮಾಯಿಶ್ಚರೈಸರ್‌ಗೆ ಸಿದ್ಧವಿದೆ. ಆದರೆ ಅದಕ್ಕಾಗಿ ದಿನ ಉಪಯೋಗಿಸುವ ಬಾಡಿ ಲೋಶನ್ ಉಪಯೋಗಿಸಬೇಡಿ. ಈ ಲೋಶನ್‌ನಿಂದ ಕ್ಯುಟಿಕಲ್ಸಿಗೆ ಯಾವುದೇ ಲಾಭವಾಗುವುದಿಲ್ಲ. ಏಕೆಂದರೆ ಕ್ಯುಟಿಕಲ್ಸ್ ಮೇಲೆ ಬೆಳೆದ ತ್ವಚೆ ಬಹಳ ನಾಜೂಕಾಗಿರುತ್ತದೆ. ಅದರ ಮೇಲೆ ಹೆವಿ ಮಾಯಿಶ್ಚರೈಸರ್ ಹಚ್ಚುವುದೇ ಲಾಭಕರ.
– ಒಂದು ವೇಳೆ ನಿಮ್ಮ ಕ್ಯುಟಿಕಲ್ಸ್ ಡ್ರೈ ಆಗಿ ಉಗುರುಗಳೊಂದಿಗೇ ಅಂಟಿಕೊಂಡಿದ್ದರೆ ಸಿಟ್ರಿಕ್ ಆಮ್ಲವಿರುವ ಕ್ರೀಂ ಖರೀದಿಸಿ ತನ್ನಿ. ಅಂತಹ ಮಾಯಿಶ್ಚರೈಸರ್ ಕ್ಯುಟಿಕಲ್ಸಿಗೆ ಬಹಳ ಲಾಭಕಾರಿ. ಅದಲ್ಲದೆ ಪೆಟ್ರೋಲಿಯಂ ಜೆಲ್ಲಿ, ಗ್ಲಿಸರಿನ್, ಸನ್‌ಫ್ಲವರ್ ಸೀಡ್ ಆಯಿಲ್ ಇತ್ಯಾದಿ ಕೂಡ ಕ್ಯುಟಿಕಲ್ಸಿಗೆ ಸುರಕ್ಷತೆ ಕೊಡುತ್ತವೆ. ಜೊತೆಗೆ ಈ ಪ್ರಾಕೃತಿಕ ಮಾಯಿಶ್ಚರೈಸರ್ ನಿಮ್ಮ ಕೈಗಳ ತ್ವಚೆಯನ್ನು ಸುರಕ್ಷಿತವಾಗಿಡುತ್ತದೆ.
– ಒಮ್ಮೊಮ್ಮೆ ಕ್ಯುಟಿಕಲ್ಸ್ ಉಗುರಿನಿಂದ ಬೇರೆಯಾಗುತ್ತದೆ. ಆಗ ಕ್ಯುಟಿಕಲ್ಸ್ ಆಯಿಲ್ ಒಳ್ಳೆಯ ಆಯ್ಕೆ. ಉಗುರುಗಳಿಗೆ ಏಟು ಬೀಳುವುದು, ತಪ್ಪು ವಿಧಾನದಿಂದ ಮೆನಿಕ್ಯೂರ್ ಮಾಡಿಸಿಕೊಂಡಿರುವುದರಿಂದ ಹೀಗಾಗುತ್ತದೆ. ಇದನ್ನು ಡೀ ಅಟ್ಯಾಚ್ಡ್ ಕ್ಯುಟಿಕಲ್ಸ್ ಎಂದೂ ಕರೆಯುತ್ತಾರೆ. ಅದರಿಂದ ಪಾರಾಗಲು ಅಗಸೆಯ ಎಣ್ಣೆ, ಸಿಟ್ರಿಕ್ ಆ್ಯಸಿಡ್ ಬೇಸ್ಡ್ ಲೋಶನ್ ಉಪಯೋಗಿಸಿ. ಅವು ಕ್ಯುಟಿಕಲ್ಸನ್ನು ಹೈಡ್ರೇಟ್ ಮಾಡುತ್ತವೆ. ಜೊತೆಗೆ ಅವನ್ನು ರಿಪೇರ್ ಮಾಡಿ ರೀ ಅಟ್ಯಾಚ್ ಮಾಡುತ್ತವೆ.
– ಅನೇಕ ಮಹಿಳೆಯರು ಉಗುರುಗಳನ್ನು ಶರೀರದ ಡೆಡ್ ಪಾರ್ಟ್ ಎಂದು ತಿಳಿದುಕೊಂಡಿದ್ದಾರೆ. ಆದರೆ ನೇಲ್ ಗ್ರೋಥ್ ಮ್ಯಾಟ್ರಿಕಲ್ಸ್ ಉಗುರಿನ ಯಾವ ಭಾಗವೆಂದರೆ ಅದು ಜೀವಂತವಾಗಿದ್ದು, ಸತತವಾಗಿ ಉಗುರಿನ ಸೈಜ್ ಹೆಚ್ಚಿಸುತ್ತದೆ. ತ್ವಚೆಯನ್ನು ಬಿಟ್ಟು ಮುಂದೆ ಸಾಗುವ ಉಗುರನ್ನು ಡೆಡ್ ಎನ್ನುತ್ತಾರೆ. ಆದ್ದರಿಂದ ಕ್ಯುಟಿಕಲ್ಸ್ ಡ್ಯಾಮೇಜ್ ಆದರೆ ಇಡೀ ಉಗುರಿನ ಮೇಲೆ ಪ್ರಭಾವ ಬೀರುತ್ತದೆ.
ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರನ್ನು ಉಪಯೋಗಿಸಿದರೆ ತ್ವಚೆ ಶುಷ್ಕವಾಗಿ ನಿರ್ಜೀವವಾಗುತ್ತದೆ. ಅದರಿಂದಲೇ ಕ್ಯುಟಿಕಲ್ಸಿನ ತ್ವಚೆಯೂ ಶುಷ್ಕ ಹಾಗೂ ನಿರ್ಜೀವವಾಗುತ್ತದೆ. ಆದ್ದರಿಂದ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರನ್ನೇ ಉಪಯೋಗಿಸಿ.
– ಒಂದುವೇಳೆ ನೀವು ಆ್ಯಂಟಿ ಬ್ಯಾಕ್ಟೀರಿಯಲ್ ಸೋಪ್ ಅಥವಾ ಹೆಚ್ಚು ಸುವಾಸನೆ ಇರುವ ಸೋಪ್ ಉಪಯೋಗಿಸಿದರೆ ಅದರಿಂದಲೂ ಕ್ಯುಟಿಕಲ್ಸಿಗೆ ಹಾನಿಯಾಗಬಹುದು. ಏಕೆಂದರೆ ಅಂತಹ ಸೋಪ್‌ಗಳಲ್ಲಿ ಹೆಚ್ಚು ಕೆಮಿಕಲ್ಸ್ ಉಪಯೋಗಿಸಿರುತ್ತಾರೆ.
– ಒಂದು ವೇಳೆ ಹ್ಯಾಂಡ್‌ಕ್ರೀಂ ಖರೀದಿಸುತ್ತಿದ್ದರೆ ಅದು ಡೀಮೆಥಿಕೋನ್ ಮತ್ತು ಗ್ಲಿಸರಿನ್‌ಯುಕ್ತವಾಗಿದೆಯೇ ಇಲ್ಲವೇ ಎಂದು ಪರೀಕ್ಷಿಸಿ. ಏಕೆಂದರೆ ಈ ಎರಡೂ ತ್ವಚೆಯಲ್ಲಿ ಆರ್ದ್ರತೆ ಉಂಟುಮಾಡುತ್ತವೆ.
– ಲ್ಯಾಕ್ಟಿಕ್ ಆ್ಯಸಿಡ್ ಮತ್ತು ಯೂರಿಯಾಯುಕ್ತ ಹ್ಯಾಂಡ್‌ಕ್ರೀಂ ಶುಷ್ಕ ತ್ವಚೆಗೆ ಬಹಳ ಲಾಭಕಾರಿ. ಏಕೆಂದರೆ ಅದು ತ್ವಚೆಯನ್ನು ಹೈಡ್ರೇಟ್ ಆಗಿಡುತ್ತದೆ.
– ಅನೇಕ ಮಹಿಳೆಯರು ಮಾತು ಮಾತಿಗೆ ಕೈಗಳಿಗೆ ಸ್ಯಾನಿಟೈಸರ್ ಹಚ್ಚುತ್ತಾರೆ. ಅದು ತಪ್ಪು. ಏಕೆಂದರೆ ಹೆಚ್ಚಿನ ಸ್ಯಾನಿಟೈಸರ್‌ಗಳು ಆಲ್ಕೋಹಾಲ್‌ಯುಕ್ತವಾಗಿರುತ್ತವೆ. ಆಲ್ಕೋಹಾಲಿಗೆ ಕ್ರಿಮಿಕೀಟಗಳೊಂದಿಗೆ ಹೋರಾಡುವ ಶಕ್ತಿ ಇರುತ್ತದೆ. ಆದರೆ ಇನ್ನೊಂದು ಕಡೆ ಸ್ಯಾನಿಟೈಸರ್ ತ್ವಚೆಯನ್ನು ಹೆಚ್ಚು ಶುಷ್ಕವನ್ನಾಗಿಯೂ ಮಾಡಿಬಿಡುತ್ತದೆ. ಆದ್ದರಿಂದ ನೀವು ಸ್ಯಾನಿಟೈಸರ್ ಉಪಯೋಗಿಸುತ್ತಿದ್ದರೆ ಅದರ ನಂತರ ಹ್ಯಾಂಡ್‌ಕ್ರೀಮನ್ನೂ ಅಗತ್ಯವಾಗಿ ಹಚ್ಚಿ.
– ಕೆಲವು ಮಹಿಳೆಯರಿಗೆ ಡಾರ್ಕ್ ಕ್ಯುಟಿಕಲ್ಸಿನಿಂದ ಬೇಸರವಾಗುತ್ತದೆ. ಅದರಿಂದ ಪಾರಾಗಲು ಅವರು ಕ್ಯುಟಿಕಲ್ಸನ್ನು ಉಜ್ಜುತ್ತಾರೆ. ಅದು ತಪ್ಪು. ಏಕೆಂದರೆ ಉಜ್ಜುವುದರಿಂದ ಕ್ಯುಟಿಕಲ್ಸ್ ಡ್ಯಾಮೇಜ್ ಆಗುತ್ತದೆ. ಇನ್‌ಫೆಕ್ಷನ್‌ನ ಅಪಾಯ ಹೆಚ್ಚುತ್ತದೆ.
– ಡಾರ್ಕ್ ಕ್ಯುಟಿಕಲ್ಸಿಗೆ ಒಳ್ಳೆಯ ಆಯ್ಕೆಯೆಂದರೆ ಕೈಗಳಿಗೂ ಸನ್‌ಸ್ಕ್ರೀನ್ ಲೋಶನ್ ಹಚ್ಚುವುದು. ಅದರಿಂದ ಕ್ಯುಟಿಕಲ್ಸ್ ಮೇಲಿನ ಟ್ಯಾನಿಂಗ್ ಕಡಿಮೆಯಾಗುತ್ತದೆ.
– ಡಾರ್ಕ್ ಕ್ಯುಟಿಕಲ್ಸ್ ಉಂಟಾಗಲು ಕಾರಣ ವಿಟಮಿನ್ ಬಿ7 ಮತ್ತು ಫಾಲಿಕ್ ಆ್ಯಸಿಡ್ ಶರೀರದಲ್ಲಿ ಕಡಿಮೆಯಾಗಿರುವುದು. ಈ ಕೊರತೆ ದೂರಮಾಡಲು ಬಿ ಕೆರೋಟಿನ್ ಮತ್ತು ಫಾಲಿಕ್ ಆ್ಯಸಿಡ್‌ಯುಕ್ತ ಡಯೆಟ್ ಸೇವಿಸಬೇಕು.
– ಚಳಿಗಾಲದಲ್ಲಿ ಕೈಗವಸುಗಳನ್ನು ಧರಿಸಿ ಕ್ಯುಟಿಕಲ್ಸನ್ನು ಡ್ಯಾಮೇಜ್ ಆಗದಂತೆ ತಡೆಯಬಹುದು. ಆದ್ದರಿಂದ ಮನೆಯಿಂದ ಹೊರಡುವ ಮೊದಲು ಕೈಗವಸು ಅಗತ್ಯವಾಗಿ ಧರಿಸಿ. ಏಕೆಂದರೆ ಚಳಿಗಾಲದಲ್ಲಿ ಬೀಸುವ ಗಾಳಿ ತ್ವಚೆಯನ್ನು ಶುಷ್ಕಗೊಳಿಸುತ್ತದೆ. ರಾತ್ರಿ ಮಲಗುವ ಮೊದಲು ಕೈಗಳಿಗೆ ಹ್ಯಾಂಡ್‌ಕ್ರೀಂ ಹಚ್ಚಿಕೊಳ್ಳಿ ಮತ್ತು ಕೈಗವಸು ಧರಿಸಿ ಮಲಗಿ. ಚಳಿಯಿಂದ ಒರಟಾಗಿರುವ ಕೈಗಳು ಬೆಳಗ್ಗೆ ಮೃದುವಾಗಿರುತ್ತದೆ.
–