ಇಬ್ಬರು ಯುವತಿಯರು ಒಟ್ಟಿಗಿರುವುದು ಹೆಚ್ಚು ಸುಖದಾಯಕ
ಮನೆಯವರ ದೂರಿನ ಪ್ರಕಾರ ಪೊಲೀಸರು 2 ವರ್ಷಗಳ ಕಾಲ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಒಟ್ಟಿಗಿರುವುದನ್ನು ಪತ್ತೆ ಮಾಡಿದರು. ಅವರಿಬ್ಬರೂ ತಮ್ಮ ಕುಟುಂಬಗಳ ವಿರುದ್ಧ ಹೊರಗೆ ಹೋಗಿ ಒಟ್ಟಿಗೇ ಇರಲು ತೀರ್ಮಾನಿಸಿದ್ದರೆಂದು ತಿಳಿದುಬಂತು. ಒಬ್ಬಳು ಜಯಪುರ್ನಲ್ಲಿ ಅಕೌಂಟೆಂಟ್ ಆಗಿದ್ದರೆ, ಇನ್ನೊಬ್ಬಳು ರಿಸೆಪ್ಶನಿಸ್ಟ್ ಆಗಿದ್ದಾಳೆ.
ಇಬ್ಬರಲ್ಲೂ ದೈಹಿಕ ಸಂಬಂಧವಿತ್ತೇ ಅಥಾವ ಇಲ್ಲವೇ ಎಂದು ಇನ್ನೂ ಪರೀಕ್ಷಿಸಿಲ್ಲ. ಪೊಲೀಸರು ಮಧ್ಯೆ ಪ್ರವೇಶಿಸಲು ಕಾರಣವೇನೆಂದರೆ ಮನೆಯವರು ಅವರಿಬ್ಬರ ಅಪಹರಣವಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಸಂತೋಷದ ವಿಷಯವೇನೆಂದರೆ ಪೊಲೀಸರು ಇಬ್ಬರ ಹೇಳಿಕೆ ಪಡೆದು ಅವರನ್ನು ಬಿಟ್ಟುಬಿಟ್ಟರು. ನಿಮ್ಮ ಹೆಣ್ಣುಮಕ್ಕಳಿಗೆ ಬುದ್ಧಿ ಹೇಳುವುದಾದರೆ ಹೇಳಿ ಎಂದು ಎರಡೂ ಮನೆಯವರಿಗೆ ತಿಳಿಸಿದರು.
ಇಬ್ಬರು ಯುವತಿಯರು ಒಟ್ಟಿಗಿರುವುದು ಈಗ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಯುವಕನೊಂದಿಗೆ ಒಟ್ಟಿಗಿರುವುದು ಯುವತಿಗೆ ಹೊರೆಯಾಗುತ್ತದೆ. ಅವಳಿಗೆ ಯಾವಾಗಲೂ ಗರ್ಭಿಣಿಯಾಗುವ ಭಯ ಇದ್ದೇ ಇರುತ್ತದೆ. ನೆರೆಯವರು, ಸಹೋದ್ಯೋಗಿಗಳ ವ್ಯಂಗ್ಯ ಬಾಣಗಳಿಗೂ ಗುರಿಯಾಗಬೇಕಾಗುತ್ತದೆ. ಇಬ್ಬರು ಹುಡುಗಿಯರು ಒಟ್ಟಿಗಿದ್ದರೆ ಸಾಮಾನ್ಯವಾಗಿ ಆಪತ್ತುಗಳಿರುವುದಿಲ್ಲ. ಸಮಾಜ ಕೊಂಚ ಸಹಾಯ ಮಾಡುತ್ತದೆ. ಅವರು ಮುಚ್ಚಿದ ಬಾಗಿಲಿನ ಹಿಂದೆ ಹೇಗೇ ಇದ್ದರೂ ಅವರನ್ನು ರೇಗಿಸುವುರಿಂದ ಜನ ರಕ್ಷಿಸುತ್ತಾರೆ.
ಒಂದುವೇಳೆ ಹಳ್ಳಿಗಳಿಂದ ಬಂದು ನಗರಗಳಲ್ಲಿ ಇರಬೇಕೆಂದರೆ ಇಬ್ಬರು ಮೂವರು ಹುಡುಗಿಯರು ಒಟ್ಟಿಗಿರುವುದು ಹೆಚ್ಚು ಒಳ್ಳೆಯದು ಹಾಗೂ ಸುಲಭವಾಗಿದೆ. ಒಂದುವೇಳೆ ಅವರ ನಡುವೆ ಲೈಂಗಿಕ ಸಂಬಂಧವಿದ್ದರೆ ಬಹುಶಃ ಹುಡುಗರ ಹಸ್ತಕ್ಷೇಪ ಇರುವುದಿಲ್ಲ. ಅವರು ಆರಾಮವಾಗಿ ವರ್ಷಗಟ್ಟಲೇ ಜೊತೆಗಿರಬಹುದು. ಹಣದ ವಿಷಯವಾಗಿ ವಿವಾದ ಉಂಟಾಗಬಹುದು. ಆದರೆ ಸ್ತ್ರೀ-ಪುರುಷರ ವಿವಾದಗಳಿಗೂ ಕಾರಣವಾಗಬಹುದು.
ಮನೆಗಳಿಂದ ದೂರವಿರುವ ಹುಡುಗಿಯರ ತಂದೆತಾಯಿಯರಿಗೂ ಈ ಸ್ಥಿತಿ ಸುಖದಾಯಕಾಗಿರುತ್ತದೆ. ಏಕೆಂದರೆ ಇದರಲ್ಲಿನ ಗೆಳೆತನ ಅಥವಾ ಸೋದರಿ ಭಾವನೆ ಹೆಚ್ಚು ಸುರಕ್ಷಿತ, ಸ್ನೇಹಭರಿತ ಹಾಗೂ ಶಾಶ್ವತ ಆಗಿರುತ್ತದೆ. ಹುಡುಗಿಯರು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ಮೇಲಿನ ಹುಡುಗಿಯರ ನಾಪತ್ತೆ ಪ್ರಸಂಗದಲ್ಲಿ ಅವರು ಮನೆಯವರಿಗೆ ಹೇಳಿ ಹೊರಟರೇ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಎಂದು ಮನೆಯವರಿಗೆ ತಿಳಿದಿತ್ತು. ಏಕೆಂದರೆ 2 ವರ್ಷವೆಂದರೆ ದೊಡ್ಡ ಗಲಾಟೆಯೇ ಆಗಬೇಕಿತ್ತು. ಜನ ಕಥೆಗಳನ್ನು ಕಟ್ಟಲಿ ಎಂದು ಅವರು ಬಯಸುವುದಿಲ್ಲ. ಅಸಲಿಗೆ ಮನೆಯವರು ಇಂತಹ ಸಂಬಂಧಗಳನ್ನು ಮದುವೆಗೆ ಮುಂಚೆ ಪ್ರೋತ್ಸಾಹಿಸಬೇಕು. ಏಕೆಂದರೆ ಇಬ್ಬರು ಹುಡುಗಿಯರು ಸೋದರಿಯರಾಗಿರದೆ ಒಟ್ಟಿಗಿದ್ದರೆ, ತಾವು ಒಟ್ಟಿಗಿರುವಲ್ಲಿ ಯಾವ ರೀತಿಯ ಕೊಡುಕೊಳ್ಳುವ ವ್ಯವಹಾರ ಮಾಡಬೇಕು ಮತ್ತು ಎಂತಹ ಇಚ್ಛೆಗಳನ್ನು ಹೊಂದಿರಬೇಕು ಎಂದು ತಿಳಿದಿರುತ್ತಾರೆ. ಇದೇ ಜ್ಞಾನ ಮದುವೆಯ ಬಳಿಕ ಕೆಲಸಕ್ಕೆ ಬರುತ್ತದೆ. ಇಬ್ಬರು ಹುಡುಗಿಯರು ಜೊತೆಗಿದ್ದರೆ ವಾಸ್ತವಿಕತೆ ತಿಳಿಯುತ್ತದೆ ಮತ್ತು ಅವರಿಬ್ಬರೂ ಉತ್ತಮ ಪತ್ನಿಯರಾಗುತ್ತಾರೆ.
ಮೇಕಪ್ನಿಂದ ಹೆಚ್ಚು ಆತ್ಮವಿಶ್ವಾಸ
ಉದ್ಯೋಗಸ್ಥ ಮಹಿಳೆಯರು ಆಫೀಸ್ಗೆ ಅತಿಯಾಗಿ ಮೇಕಪ್ ಮಾಡಿಕೊಂಡು ಅಥವಾ ಕೇವಲ ಮುಖ ತೊಳೆದುಕೊಂಡು ಹೋಗಬಹುದು. ಕೂದಲು ಹಾಗೆಯೇ ಬಿಟ್ಟುಕೊಂಡು ಪುರುಷರ ಹಾಗೆ ಆಫೀಸ್ಗೆ ಬರಬಹುದು. ಈ ಕುರಿತಾದ ಪ್ರಶ್ನೆ ಸಾಕಷ್ಟು ದಿನಗಳಿಂದ ಚರ್ಚೆಯಲ್ಲಿದೆ.
ಕೆಲವರು ಹೇಳುವುದೇನೆಂದರೆ, ಮಹಿಳೆಯರು ಆಫೀಸು, ಕಾರ್ಖಾನೆ, ಮಾಲ್ಗಳಿಗೆ ಪುರುಷರ ಹಾಗೆ ಸಾದಾ ಸೀದಾ ಪೋಷಾಕು ಹಾಗೂ ಮೇಕಪ್ ಮಾಡಿಕೊಳ್ಳದೆಯೇ ಬರಬೇಕು. ಮತ್ತೆ ಕೆಲವರು ಹೇಳುವುದೇನೆಂದರೆ ಮಹಿಳೆಯರು ಸಾಕಷ್ಟು ಅಲಂಕರಿಸಿಕೊಂಡು ಬರಬೇಕು.
ವಾಸ್ತವದಲ್ಲಿ ಈ ವಿವಾದ ವೃದ್ಧಾಪ್ಯದಲ್ಲಿ ಕಾಲಿಟ್ಟಿರುವ ಉದ್ಯೋಗಸ್ಥ ಮಹಿಳೆಯರು ಹಾಗೂ ಯುವತಿಯರ ನಡುವಿನದ್ದು, ಉದ್ಯೋಗಸ್ಥ ಮಹಿಳೆ ಹೇಗೆ ಕಂಡರೇನು? ಆ ಬಗ್ಗೆ ಪುರುಷರು ತಲೆಕೆಡಿಸಿಕೊಳ್ಳುವುದಿಲ್ಲ. ಒಮ್ಮೆ ಕಣ್ಣೆತ್ತಿ ನೋಡಬಹುದು ಅಷ್ಟೆ. ಆ ಬಳಿಕ ತಮ್ಮ ಕೆಲಸದಲ್ಲಿ ಮಗ್ನರಾಗಿಬಿಡುತ್ತಾರೆ. ಕೆಲಸವೇ ನನ್ನ ಗುರಿ ಎಂದು ಅವರು ಭಾವಿಸಿರುತ್ತಾರೆ.
ಬೇರೆ ಸಂಗಾತಿ ಮಹಿಳೆಯರು ಅವಶ್ಯವಾಗಿ ಉರಿದುಹೋಗುತ್ತಾರೆ. ಅನುಭವಿ, ಬುದ್ಧಿವಂತ ಹಾಗೂ ದೇಹದ ಬಗ್ಗೆ ಕಡಿಮೆ ಗಮನ ಕೊಡುವ ಮಹಿಳೆಯರಿಗೆ ಈಗ ಬಹಳ ಕೆಡುಕೆನಿಸುತ್ತದೆ. ಈಗ ಸ್ಪರ್ಧೆ ಕೇವಲ ಕೆಲಸದ ಬಗೆಗಷ್ಟೇ ಉಳಿದಿಲ್ಲ. ನೋಡುವುದರಲ್ಲೂ ಸುಂದರವಾಗಿ ಕಾಣಬೇಕು ಎನ್ನುವುದು ಅವರ ಯೋಚನೆಯಾಗಿರುತ್ತದೆ.
ಹಿರಿಯ ವಯಸ್ಸಿನ ಪುರುಷ ಬಾಸ್ಗಳ ಗಮನ ಸೆಳೆಯಲು ಸಾಮಾನ್ಯವಾಗಿ ಮೇಕಪ್ ಮಾಡಿಕೊಂಡ ಮಹಿಳೆಯರು ಯಶಸ್ವಿಯಾಗುತ್ತಾರೆ. ತಮ್ಮ ವ್ಯಕ್ತಿತ್ವದಲ್ಲಿ ಏನೇ ಲೋಪಗಳಿದ್ದರೂ ಅದರಲ್ಲಿ ಇದು ಮುಚ್ಚಿಹೋಗುತ್ತದೆ. ಈ ಬಗ್ಗೆ ಬಹಳಷ್ಟು ಜನರಿಗೆ ಪಶ್ಚಾತ್ತಾಪ ಉಂಟಾಗುತ್ತದೆ.
ಯಾವ ಕ್ಷೇತ್ರದಲ್ಲಿ ವ್ಯಕ್ತಿತ್ವದ ವಿಶೇಷ ಅಗತ್ಯ ಇರುವುದಿಲ್ಲವೋ ಅಲ್ಲಿ ಮೇಕಪ್ ವಿವಾದದ ವಿಷಯವೇ ಆಗುತ್ತದೆ.
ಅಂದಹಾಗೆ, ಮೇಕಪ್ ಮಾಡಿಕೊಳ್ಳುವುದು ಪ್ರತಿಯೊಬ್ಬ ಮಹಿಳೆಯ ನೈಸರ್ಗಿಕ ಹಕ್ಕು ಆಗಬೇಕು. ಅದು ಆಕೆಯ ವ್ಯಕ್ತಿತ್ವದ ಭಾಗ. ಗಡ್ಡ ಬೆಳೆಸಿದ ಪುರುಷರು, ಕೆದರಿದ ಕೂದಲು, ಹರಿದ, ಅಸ್ತವ್ಯಸ್ತ ಪೋಷಾಕು ಧರಿಸಿದ ಪುರುಷರು ಯಾವ ಕ್ಷೇತ್ರದಲ್ಲೂ ಸಲ್ಲುವುದಿಲ್ಲ. ಅದೇ ರೀತಿ ಸ್ಮಾರ್ಟ್ ಆಗಿರದ ಮಹಿಳೆಯರು ಕೂಡ ಯಾವ ಕ್ಷೇತ್ರದಲ್ಲೂ ಸಲ್ಲುವುದಿಲ್ಲ.
ಮೇಕಪ್ ಆತ್ಮವಿಶ್ವಾಸ ದೊರಕಿಸಿ ಕೊಡುತ್ತದೆ. ಅವಳಲ್ಲಿ ಶಕ್ತಿ ತುಂಬುತ್ತದೆ. ನೈಸರ್ಗಿಕ ಗುಣಗಳನ್ನು ಹೊರಹೊಮ್ಮಿಸುತ್ತದೆ.
ಅದನ್ನು ಎನ್ಕ್ಯಾಷ್ ಮಾಡಿಕೊಳ್ಳುವುದು ಪ್ರತಿಯೊಬ್ಬ ಸುಂದರ ಸ್ತ್ರೀಯರ ಹಕ್ಕಾಗಿದೆ. ಕೆಲವರು ತಮ್ಮ ಬುದ್ಧಿಯನ್ನು ಉಪಯೋಗಿಸುತ್ತಾರೆ, ಮತ್ತೆ ಕೆಲವರು ಸೌಂದರ್ಯವನ್ನೇ ಬಂಡವಾಳವಾಗಿಸಿಕೊಳ್ಳುತ್ತಾರೆ.
ಶಿಕ್ಷಣ, ಕ್ರೀಡೆ, ಅಭಿನಯ, ಮದುವೆ, ಸ್ನೇಹ ಇವೆಲ್ಲದರಲ್ಲಿ ವ್ಯಕ್ತಿತ್ವದ ಪ್ರಭಾವ ಇರುತ್ತದೆ. ಸ್ಮಾರ್ಟ್ ಸ್ತ್ರೀ-ಪುರುಷರು ಸ್ವಲ್ಪ ಹೆಚ್ಚೇ ಯಶಸ್ಸು ಕಾಣುತ್ತಾರೆ. ಈ ಬಗ್ಗೆ ಆಕ್ಷೇಪಗಳು ಕೇಳಿಬರಬಹುದು. ಇದನ್ನು ನಿರಾಕರಿಸುವುದು ತಪ್ಪು ಎನಿಸುತ್ತದೆ. ಮನೆಯಲ್ಲೇ ಇರಲಿ, ರಾಜಕೀಯದಲ್ಲಿಯೇ ಇರಲಿ, ಆಫೀಸ್, ಕಾರ್ಖಾನೆ ಹೀಗೆ ಎಲ್ಲಿದ್ದರೂ ಮೇಕಪ್ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ಯಾವುದರಲ್ಲಿ ಅತಿಯಾದರೂ ಅದು ಅಹಿತಕರವೇ.
ಯೋಗದ ಹೆಸರಿನಲ್ಲಿ ಭೋಗ!
ಗೋವಾದಲ್ಲಿ ಇಬ್ಬರು ತಿಳಿವಳಿಕೆಯುಳ್ಳ ವಿದೇಶಿ ಮಹಿಳೆಯರ ಮೇಲೆ ಯೋಗ ಗುರುವೊಬ್ಬ ಬಲಾತ್ಕಾರ ಮಾಡಿರುವುದು ಹೊಸ ವಿಷಯವೇನಲ್ಲ. ತಾಂತ್ರಿಕ ಅನುಷ್ಠಾನಗಳ ನೆಪವೊಡ್ಡಿ ಶತಶತಮಾನಗಳಿಂದ ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಪುಸಲಾಯಿಸಲಾಗುತ್ತಿದೆ. ದೇಹ ಕ್ಷಣಿಕ. ಅದರ ಮೇಲಿನ ಪ್ರತಿಯೊಂದು ಕ್ರಿಯೆ ಹಾಗೂ ಉತ್ತುಂಗ ಸುಖ ಪಡೆಯಲು ನಡೆಸಲಾಗುವ ತಾಂತ್ರಿಕ ಪ್ರಕ್ರಿಯೆಗಳು ದೇವರಿಂದ ದೊರೆತದ್ದಾಗಿವೆ. ಯಾವ ಗುರುವಿನ ಬಳಿ ಈ ಜ್ಞಾನ ಇದೆಯೋ, ಆ ಗುರುವಿಗೆ ಪೂಜೆ ಮಾಡಿ, ಹಣ ಕೊಡಿ. ಆತ ದೇಹದೊಂದಿಗೆ ಏನೇ ಆಟ ಆಡಿದರೂ ಆಡಬಹುದು.
ಈ ರೀತಿಯ ಸ್ವಯಂ ಘೋಷಿತ ಗುರುಗಳು ಆನ್ಲೈನ್ನಲ್ಲಿ ಪ್ರತ್ಯಕ್ಷವಾಗುತ್ತಿದ್ದಾರೆ. ಅಮೆರಿಕ ಮತ್ತು ಕೆನಡಾದ ಇಬ್ಬರು ಮಹಿಳೆಯರು 38 ವರ್ಷದ ಪ್ರತೀಕ್ ಕುಮಾರ್ ಅಗ್ರವಾಲ್ ನ ಮಾತಿನ ಮೋಡಿಗೆ ಸಿಲುಕಿದರು. 7 ದಿನಗಳ ತರಬೇತಿ ಕೋರ್ಸ್ಗೆ ಬಂದು ತಲುಪಿದರು.
ಯೋಗದ ಪ್ರಚಾರವನ್ನು ಯಾವ ರೀತಿ ಕೈಗೊಳ್ಳಲಾಗುತ್ತಿದೆ ಎಂದರೆ, ಪ್ರತಿಯೊಂದು ರೋಗಕ್ಕೂ ಯೋಗವೇ ಮದ್ದು ಎಂಬಂತೆ. ಆ ಕಾರಣದಿಂದ ಜನ ಕುರಿಗಳಂತೆ ಯೋಗ ಗುರುಗಳ ಹತ್ತಿರ ಧಾವಿಸುತ್ತಿದ್ದಾರೆ.
ಆ ಮಹಿಳೆಯರಿಗೆ ಯಾವುದಾದರೂ ಮಾನಸಿಕ ಸಮಸ್ಯೆಗಳಿರಬಹುದು, ಹಾಗೆಂದೇ ಅವರು ಯೋಗಕ್ಕೆ ಆಕರ್ಷಿತರಾಗಿ ಧೂರ್ತನ ಕೈಗೆ ಸಿಲುಕಿರಬಹುದು. ಅವರು ಬಲಾತ್ಕಾರದ ಆರೋಪವನ್ನು ಹೊರೆಸಿದ್ದಾರೆ. ಅವರ ಹಣವಂತೂ ಹೋಗಿಯೇ ಇರುತ್ತದೆ ಎನ್ನುವುದಂತೂ ಪಕ್ಕಾ.
ಪೊಲೀಸರು ಇಂತಹ ಪ್ರಕರಣಗಳಲ್ಲಿ ಹೆಚ್ಚಿಗೆ ಏನೂ ಮಾಡುವುದಿಲ್ಲ. ಏಕೆಂದರೆ ಮುಖ್ಯವಾಗಿ ಸಂತ್ರಸ್ಥರು ಸ್ವತಃ ತಾವೇ ಬಂದು ಸಿಲುಕಿರುತ್ತಾರೆ. ಅವರಿಗೆ ಒತ್ತಡ ಹೇರಲಾಗಿತ್ತು ಎಂಬುದನ್ನು ಸಾಬೀತುಪಡಿಸುವುದು ಕಷ್ಟ. ಸ್ಪಷ್ಟೀಕರಣದಲ್ಲಿ ಈ ತೆರನಾದ ಸಂಬಂಧಗಳ ಬಗ್ಗೆ ನಿರಾಕರಣೆ ಮಾಡಿದರೆ ಅಥವಾ ಅದನ್ನು ಒಪ್ಪಿಗೆಯಿಂದ ಮಾಡಿದ ಸಂಬಂಧ ಎಂದು ಹೇಳಿದರೆ ಅದನ್ನು ತಪ್ಪು ಎಂದು ಸಾಬೀತುಪಡಿಸುವುದು ಕಷ್ಟ.
ಯೋಗದ ಹೆಸರಿನಲ್ಲಿ ನಮ್ಮ ದೇಶದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಏನೇನು ಮಾಡುತ್ತಿದ್ದಾರೆ ಎಂಬುದನ್ನು ಹೇಳುವುದು ಕಷ್ಟ. ಇದನ್ನು ರೋಗದ ಚಿಕಿತ್ಸೆಗೆ ಸೂಕ್ತ ಪರಿಹಾರ ಎಂದು ಸಾಬೀತುಪಡಿಸಲಾಗಿದೆ. ಇದರ ಪರಿಣಾಮ ಎಂಬಂತೆ ದೊಡ್ಡ ದೊಡ್ಡ ಆಸ್ಪತ್ರೆಗಳು ಕೂಡ ಯೋಗದ ಲೇಬಲ್ ಅಂಟಿಸಿ ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿವೆ.
ಈ ನಯವಂಚಕ ಮಾಡಿದ್ದು ಮಾಮೂಲು ಎನಿಸುತ್ತದೆ. ಯಾರು ತುಂಬಾ ಚುರುಕಾಗಿರುತ್ತಾರೊ ಅವರು ಯೋಗದ ಹೆಸರಿನಲ್ಲಿ ಮಜವಾಗಿ ಭೋಗದ ಜೀವನ ನಡೆಸುತ್ತಿದ್ದಾರೆ.