ಇನ್ನರ್‌ವೇರ್ ಹಾಗೂ ಹೆಲ್ತ್ ಕನೆಕ್ಷನ್
ಅತಿ ಟೈಟ್ ಹಾಗೂ ಅನ್‌ಫಿಟ್ ಬ್ರಾ ಸ್ತನಗಳ ಚರ್ಮದ ಮೇಲೆ ಹೆಚ್ಚು ಒತ್ತಡ ಹೇರುವುದರಿಂದ, ಹಾರ್ಮೋನ್‌ಗಳಲ್ಲಿನ ಲಿವೋಟೋನಿನ್ ಅಂಶ ಹೆಚ್ಚುತ್ತದೆ. ಜೊತೆಗೆ ಬ್ರೆಸ್ಟ್ ಕ್ಯಾನ್ಸರ್‌ನ ಭಯ ಕಾಡುತ್ತದೆ. ತಜ್ಞರು ಈ ಕುರಿತಾಗಿ, ಅನ್‌ಫಿಟ್ ಬ್ರಾ ಬ್ರೆಸ್ಟ್ ಮೇಲೆ ಕ್ರಾನಿಕ್ ಪ್ರೆಶರ್ ಹೇರುತ್ತದೆ, ಇದರಿಂದ ಸ್ತನದಲ್ಲಿ ಸಣ್ಣದಾಗಿ ನೋವು ಕಾಡಲಾರಂಭಿಸುತ್ತದೆ. ನಿರ್ಲಕ್ಷಿಸಿದರೆ ಮುಂದೆ ಅದು ತೀವ್ರ ಸ್ವರೂಪಕ್ಕೆ ತಿರುಗಬಹುದು. ಇದೇ ತರಹ ಅನ್‌ಫಿಟ್ ಪ್ಯಾಂಟಿ ಆರಿಸಿದಾಗಲೂ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆದರೂ ಮಹಿಳೆಯರು ಇನ್ನರ್‌ವೇರ್‌ನ್ನು ಫ್ಯಾಷನ್ ದೃಷ್ಟಿಯಿಂದ ನೋಡುತ್ತಾರೆಯೇ ಹೊರತು ಆರೋಗ್ಯದ ದೃಷ್ಟಿಯಿಂದಲ್ಲ.
ಸಮರ್ಪಕ ಫಿಟಿಂಗ್
ಫ್ಯಾಬ್ರಿಕ್ಸ್ ಮತ್ತು ಮಹಿಳಾ ಆರೋಗ್ಯಕ್ಕೂ ತುಂಬಾ ನಂಟಿದೆ. ಇತ್ತೀಚಿನ ದಿನಗಳಲ್ಲಂತೂ ಫ್ಯಾಷನ್ ದೃಷ್ಟಿಯಿಂದ ಇನ್ನರ್‌ವೇರ್‌ನ ಸಾವಿರಾರು ವೆರೈಟಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಹಿಳೆಯರು ವಿಭಿನ್ನ ಉಡುಗೆಗಳಿಗಾಗಿ ವಿಭಿನ್ನ ಫಿಟಿಂಗ್ಸ್ ಪ್ಯಾಟರ್ನ್ ಇರುವಂಥ ಬ್ರಾ ಪ್ಯಾಂಟಿ ಖರೀದಿಸುತ್ತಾರೆ. ಆದರೆ ಇಂಥವನ್ನು ಕೇವಲ ಕೆಲವು ವಿಶೇಷ ಸಂದರ್ಭಗಳಿಗಾಗಿ ಇರಿಸಿಕೊಂಡರೆ ಒಳ್ಳೆಯದು. ಅದರ ಬದಲಿಗೆ ದಿನದಿನ ಫ್ಯಾಷನ್ ಹೆಸರಿನಲ್ಲಿ ಅನ್‌ಫಿಟ್ ಇನ್ನರ್‌ವೇರ್ ಧರಿಸುವುದರಿಂದ ಆರೋಗ್ಯದ ಗಂಭೀರ ಸಮಸ್ಯೆಗಳು ತಲೆದೋರಬಹುದು.
ಸರಿಯಾದ ಸಪೋರ್ಟ್ ಅತ್ಯಗತ್ಯ
ಸಾಮಾನ್ಯವಾಗಿ ಮಹಿಳೆಯರು ಭಾವಿಸುವುದೆಂದರೆ ಬಟ್ಟೆಯಿಂದಾದ ಇನ್ನರ್‌ವೇರ್‌ನಿಂದ ಆರೋಗ್ಯದ ಮೇಲೆ ಎಂಥ ದುಷ್ಪರಿಣಾಮ ಆಗಲು ಸಾಧ್ಯ? ಆದರೆ ಇದ್ದಕ್ಕಿದ್ದಂತೆ ಈ ಪರಿಣಾಮಗಳು ಕಾಣಿಸದೇ ಹೋದರೂ, ದೀರ್ಘಾವಧಿ ಬಳಕೆ ನಂತರ ಅದರ ಅಡ್ಡ ಪರಿಣಾಮಗಳು ಖಂಡಿತಾ ಗೋಚರಿಸುತ್ತವೆ.
ತಜ್ಞರ ಪ್ರಕಾರ, ಇನ್ನರ್‌ವೇರ್ ಆರಿಸುವ ಮುನ್ನ, ಅದರ ಸಮರ್ಪಕ ಸೈಜ್ ಕಡೆ ಗಮನಹರಿಸಬೇಕು. ಅದರಲ್ಲೂ ಬ್ರಾ ಆರಿಸುವಾಗ ಅದರ ಫಿಟಿಂಗ್‌ನತ್ತ ವಿಶೇಷ ಗಮನ ನೀಡಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ, ಸ್ತನಗಳಲ್ಲಿ ಮೂಳೆ ಇರುವುದಿಲ್ಲ, ಬದಲಿಗೆ ಬಲು ಸೂಕ್ಷ್ಮ ಟಿಶ್ಯೂಗಳಿರುತ್ತವೆ. ಅಸಮರ್ಪಕ ಅಳತೆಯ ಬ್ರಾ ಬಳಸುವುದರಿಂದ ಇವಕ್ಕೆ ಹಾನಿ ತಪ್ಪಿದ್ದಲ್ಲ.
ಬ್ರೆಸ್ಟ್ ಫೈಬರ್, ಟಿಶ್ಯು, ಗ್ಲಾಂಡ್ಯುಲರ್ ಟಿಶ್ಯು, ಫ್ಯಾಟ್ ಸೇರಿ ಸ್ತನಗಳಾಗುತ್ತವೆ. ಇದಕ್ಕೆ ಸರಿಯಾದ ಸಪೋರ್ಟ್‌ನ ಅಗತ್ಯವಿದೆ, ಅದು ಬ್ರಾದಿಂದ ಮಾತ್ರ ಸಿಗುತ್ತದೆ. ಆದ್ದರಿಂದ ಕೇವಲ ಸರಿಯಾದ ಸಪೋರ್ಟ್ ನೀಡುವ ಬ್ರಾವನ್ನಷ್ಟೇ ಆರಿಸಬೇಕು.
ಟೈಟ್ ಫಿಟಿಂಗ್ ಅಪಾಯ ತಪ್ಪಿದ್ದಲ್ಲ : ಒಂದು ಸಮೀಕ್ಷೆಯ ಪ್ರಕಾರ, ಎಷ್ಟೋ ಮಹಿಳೆಯರು ತಾವು ಕೊಂಡ ಬ್ರಾಪ್ಯಾಂಟಿಗಳಿಗೆ ಟೈಟ್‌ಫಿಟ್ ಒದಗಿಸಬೇಕೆಂದು, ಅದಕ್ಕೆ ಎಕ್ಸ್ಟ್ರಾ ಹೊಲಿಗೆ ಅಥವಾ ಸೇಫ್ಟಿಪಿನ್ ಹಾಕಿ ಬಿಗಿ ಮಾಡುತ್ತಾರೆ. ಇನ್ನರ್‌ವೇರ್‌ನ್ನು ಧರಿಸಿ ಹಳೆಯದಾದಂತೆ ಅವು ಲೂಸ್ ಆಗಿಹೋಗುತ್ತವೆ ಎಂದು ಹೀಗೆ ಮಾಡುತ್ತಾರೆ. ಇವನ್ನು ಟೈಟ್ ಮಾಡಲೇಬೇಕೆಂದು ಹೀಗೆ ಮಾಡುತ್ತಾರೆ. ಆದರೆ ವೈಜ್ಞಾನಿಕಾಗಿ ವಿಮರ್ಶಿಸಿದರೆ, ಈ ತರಹದ ಟೈಟ್ ಫಿಟಿಂಗ್ಸ್ ಸರಿಯಲ್ಲ, ಖಂಡಿತಾ ದುಷ್ಪರಿಣಾಮಗಳಾಗುತ್ತವೆ.
ಟೈಟ್ ಫಿಟಿಂಗ್‌ನ ಬ್ರಾ ಧರಿಸುವುದರಿಂದ ಕುತ್ತಿಗೆ, ಭುಜ, ಬೆನ್ನಿನಲ್ಲಿ ನೋವು ಮೂಡುತ್ತದೆ. ಜೊತೆಗೆ ಮಾಂಸಖಂಡಗಳು ಎಳೆದಂತಾಗಿ, ತೀವ್ರ ನೋವು ಕಾಡುತ್ತದೆ. ಇದೇ ತರಹ ಟೈಟ್ ಪ್ಯಾಂಟಿಗಳಿಂದ ಕಿಬ್ಬೊಟ್ಟೆಯ ನೋವು ಹೆಚ್ಚುತ್ತದೆ. ಪ್ಯಾಂಟಿಯ ಟೈಟ್ ಎಲಾಸ್ಟಿಕ್‌ನಿಂದ ತ್ವಚೆ ಮೇಲೆ ಪ್ರೆಶರ್ ಪಾಯಿಂಟ್ಸ್ ಮೂಡುತ್ತವೆ, ಹೆಚ್ಚಿನ ನೋವಿಗೆ ಕಾರಣವಾಗುತ್ತವೆ.
ಪೋಸ್ಚರ್ ಕೆಡಿಸುವ ಬಿಗಿ ಒಳವಸ್ತ್ರಗಳು
ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಅತಿಯಾದ ಬಿಗಿ ಬ್ರಾ ಧರಿಸುತ್ತಾರೆ. ಹೀಗಾಗಿ ಅವರ ಬೆನ್ನು ಮುಂಭಾಗಕ್ಕೆ ಬಾಗಿರುತ್ತದೆ. ಹೀಗಾಗಲು ಮುಖ್ಯ ಕಾರಣ ಬೆನ್ನಿನ ಮೇಲ್ಭಾಗದ ಬಳುಕುವಿಕೆ ಕಡಿಮೆ ಆಗಿಹೋಗಿರುತ್ತದೆ. ಎಷ್ಟೋ ಸಲ ಟೈಟ್ ಬ್ರಾ ಧರಿಸುವುದರಿಂದ ಬೆನ್ನಿನ ಮೇಲ್ಭಾಗದಲ್ಲಿ ಬಿಗಿತದ ಕಾರಣ, ಫ್ಯಾಟ್ ಜಮೆಗೊಳ್ಳುತ್ತದೆ, ಸೊಂಟದ ಬಳಿ ಟೈರ್ ಸೇರಿಕೊಳ್ಳುತ್ತದೆ. ಜೊತೆಗೆ ಬ್ರಾ ಬ್ಯಾಂಡ್ ಅತ್ಯಧಿಕ ಟೈಟ್ ಆಗುವುದರಿಂದ ಉಸಿರಾಟದ ತೊಂದರೆಯೂ ಹೆಚ್ಚುತ್ತದೆ.
ಒಂದು ಸಮೀಕ್ಷೆಯ ಪ್ರಕಾರ ಇತ್ತೀಚೆಗೆ ಥಾಂಗ್ಸ್ ಪ್ಯಾಂಟಿ ಫ್ಯಾಷನ್‌ನಲ್ಲಿದೆ, ಹೆಚ್ಚಿನ ಮಹಿಳೆಯರು ಇದನ್ನೇ ಏಕೆ ಧರಿಸುತ್ತಾರೆಂದರೆ, ಟ್ರೌಸರ್ಸ್ ಅಥವಾ ಡ್ರೆಸ್ ಧರಿಸಿದಾಗ, ಇವುಗಳ ಕಟ್‌ಲೈನ್ ಔಟ್‌ಫಿಟ್ಸ್ ಮೇಲ್ಭಾಗದಲ್ಲಿ ಇಣುಕುವುದಿಲ್ಲ ಎಂಬುದಕ್ಕಾಗಿ. ಆದರೆ ತಜ್ಞರ ಪ್ರಕಾರ, ಥಾಂಗ್ಸ್ ಟೈಟ್ ಫಿಟಿಂಗ್ಸ್ ಆಗಿರುತ್ತವೆ, ಇವು ನೈಲಾನ್ ಫ್ಯಾಬ್ರಿಕ್ಸ್ ಹೌದು. ಇವನ್ನು ದೀರ್ಘಕಾಲ ಧರಿಸುವುದರಿಂದ ತ್ವಚೆಗೆ ಗಾಳಿಯ ಸಂಪರ್ಕ ತಪ್ಪುತ್ತದೆ. ಇದರಿಂದ ಯೂರಿನರಿ ಟ್ರಾಕ್ಟ್ ವೆಜೈನ್ ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್‌ಗಳು ಆಗುತ್ತವೆ.
ಸಾಮಾನ್ಯವಾಗಿ ತಜ್ಞರು ಬ್ರೀಫ್ಸ್ ಯಾ ಬಾಯ್‌ಶಾರ್ಟ್ಸ್ ಧರಿಸುವ ಸಲಹೆ ನೀಡುತ್ತಾರೆ. ಆದರೆ ಥಾಂಗ್ಸ್ ನಿಮ್ಮ ನೆಚ್ಚಿನ ಆಯ್ಕೆಯಾದರೆ, ಆದಷ್ಟೂ ಕಾಟನ್ ಫ್ಯಾಬ್ರಿಕ್ಸ್ ನದನ್ನೇ ಆರಿಸಿ.
ಒಂದು ಸಮೀಕ್ಷೆಯ ಪ್ರಕಾರ, ಮಾನವರ ಮಲದಲ್ಲಿ ಸಿಗುವಂಥ ಇಕೋಲೈ ಬ್ಯಾಕ್ಟೀರಿಯಾ ಥಾಂಗ್ಸ್ ನೆರವಿನಿಂದ ಯೋನಿ ಸೇರಿಕೊಳ್ಳುವ ಸಾಧ್ಯತೆಗಳಿವೆ. ಅಕಸ್ಮಾತ್ ಇವು ಗರ್ಭಾಶಯ ಪ್ರವೇಶಿಸಿದರೆ ಆ ಮಹಿಳೆ ಪೆಲ್ವಿಕ್ ಇನ್‌ಫ್ಲಮೇಟರಿ ಡಿಸೀಸ್‌ಗೆ ಒಳಗಾಗುವ ಸಾಧ್ಯತೆಗಳಿವೆ. ಮೂತ್ರಕೋಶಕ್ಕೆ ಇವು ನುಗ್ಗಿದರೆ, ಯೂರಿನರಿ ಇನ್‌ಫೆಕ್ಷನ್ ಆಗುತ್ತದೆ.
ಫ್ಯಾಬ್ರಿಕ್ ಬಣ್ಣಗಳ ಕಡೆಗೂ ಗಮನವಿರಲಿ
ಬದಲಾಗುತ್ತಿರುವ ಟ್ರೆಂಡ್‌ಗೆ ತಕ್ಕಂತೆ ಇನ್ನರ್‌ವೇರ್ ಸಹ ಫ್ಯಾಷನ್ನಿನ ಭಾಗವಾಗಿದೆ. ಈಗ ಇದು ಹಲವು ಬಗೆಯ ಫ್ಯಾಬ್ರಿಕ್ಸ್ ಮತ್ತು ಬಣ್ಣಗಳಲ್ಲಿ ಲಭ್ಯ. ಆಧುನಿಕ ತರುಣಿಯರಲ್ಲಿ ತಮ್ಮ ಇನ್ನರ್‌ವೇರ್‌ನ್ನು ಫ್ಲಾಂಟ್ ಮಾಡುವ ಕ್ರೇಜ್ ಕೂಡ ಹೆಚ್ಚಿದೆ. ಹೀಗಾಗಿಯೇ ಇನ್ನರ್‌ವೇರ್ ಬಹು ಸ್ಟೈಲಿಶ್ ಡಿಸೈನರ್ ಆಗುತ್ತಿವೆ. ಇನ್ನರ್‌ವೇರ್‌ನ ಬ್ಯೂಟಿಯಲ್ಲಿರುವ ಕೊರತೆಯೂ ಇರಬಾರದೆಂದೇ ಇದರ ತಯಾರಕರು, ಅದರ ಫ್ಯಾಬ್ರಿಕ್‌ನತ್ತ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ತ್ವಚೆಗೆ ಅದರ ಸಂಪರ್ಕದಿಂದಾಗುವ ಹಾನಿಗಳತ್ತಲೂ ಅವರಿಗೆ ಲಕ್ಷ್ಯವಿಲ್ಲ, ಸುಂದರವಾಗಿ ಎದ್ದು ಕಾಣಬೇಕು ಅಷ್ಟೆ. ಅದರಲ್ಲೂ ನೈಲಾನ್, ಸಿಂಥೆಟಿಕ್, ಲೈಕ್ರಾದಂತಹ ಫ್ಯಾಬ್ರಿಕ್ಸ್ ನ ಇನ್ನರ್‌ವೇರ್, ತ್ವಚೆ ಮತ್ತು ಗಾಳಿ ನಡುವೆ ಸಂಪರ್ಕವಿಲ್ಲದಂತೆ ಅಡ್ಡಿಪಡಿಸುತ್ತದೆ.
ತಜ್ಞರ ಪ್ರಕಾರ ಬ್ರಾ ಯಾವ ಪ್ಯಾಂಟಿ ಇರಲಿ, ಸದಾ ಕಾಟನ್ ಫ್ಯಾಬ್ರಿಕ್ಸ್ ನದ್ದೇ ಇರಬೇಕು. ಬದಲಿಗೆ ನೈಲಾನ್, ಮೈಕ್ರಾ, ಸಿಂಥೆಟಿಕ್ ಆದರೆ ಅಂಥದರ ನಡುವೆ ಕಾಟನ್ ಲೈನಿಂಗ್ ಇರಲೇಬೇಕು. ಇದರಿಂದ ತ್ವಚೆಗೆ ಆಕ್ಸಿಜನ್ ಸಿಗುತ್ತಿರುತ್ತದೆ.
ಇದೇ ತರಹ ಇತ್ತೀಚೆಗೆ ಬಣ್ಣಗಳೂ ಸಹ ನಾನಾ ಬಗೆಯಲ್ಲಿ ಫ್ಯಾಷನೆಬಲ್ ಎನಿಸಿವೆ. ಹಿಂದೆಲ್ಲ ಈ ಬಣ್ಣಗಳನ್ನು ಹೆಚ್ಚಾಗಿ ಔಟ್‌ಫಿಟ್ಸ್ಗೆ ಮಾತ್ರ ಬಳಸುತ್ತಿದ್ದರು. ಆದರೆ ಈಗ ಇನ್ನರ್‌ವೇರ್‌ಗಳೂ ಎಲ್ಲ ಬಣ್ಣಗಳಲ್ಲಿ ಲಭ್ಯ. ಬೇಸಿಕ್ ಬಣ್ಣದ ಇನ್ನರ್‌ವೇರ್ ನಿಮ್ಮ ಆಯ್ಕೆಯಲ್ಲ ಎನಿಸಿದರೆ, ಆಗ ನೀವು ನಿಮ್ಮ ಆಯ್ಕೆಯ ಇನ್ನರ್‌ವೇರ್‌ನ ಬಣ್ಣ ನಿಮ್ಮ ತ್ವಚೆಗೆ ತಗುಲುತ್ತಿಲ್ಲ ತಾನೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಒಂದು ಪಕ್ಷ ಹಾಗೇ ಆಗುತ್ತಿದ್ದರೆ, ನೀವು ಕೂಡಲೇ ಜಾಗೃತರಾಗಬೇಕು. ಏಕೆಂದರೆ ಬಣ್ಣಗಳೆಲ್ಲ ಕೆಮಿಕಲ್ಸ್ ಮಯ ಆಗಿರುವುದರಿಂದ, ಅವು ಚರ್ಮಕ್ಕೆ ತಗುಲಿದರೆ ಸೋಂಕು ತಪ್ಪಿದ್ದಲ್ಲ! ಆದ್ದರಿಂದ ಉನ್ನತ ಬ್ರ್ಯಾಂಡ್‌ನ ಇನ್ನರ್‌ವೇರ್‌ನ್ನು ಮಾತ್ರ ಖರೀದಿಸಿ.
– ಜಿ. ಅನುರಾಧಾ