ಪ್ರಕೃತಿ ಹೆಣ್ಣಿಗೆ ನೈಸರ್ಗಿಕ ರೂಪ ಸೌಂದರ್ಯದ ಸಿರಿತನ ನೀಡಿದೆ. ಆದರೆ ಮಹಿಳೆಯರು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಸ್ಟ್ರೆಸ್‌, ವಯೋಸಹಜ ಗುಣಗಳಿಂದ ಇದರಲ್ಲಿ ಕೊರತೆ ಕಾಣುತ್ತಾರೆ. ಕ್ರಮೇಣ ಅವರು ತಮ್ಮ ನೈಸರ್ಗಿಕ ಸೌಂದರ್ಯ ಕಳೆದುಕೊಳ್ಳುತ್ತಾರೆ. ಅದಾದ ಮೇಲೆ ಹಲವು ಬಗೆಯ ಸ್ಕಿನ್‌ ಪ್ರಾಬ್ಲಮ್ಸ್ ಅವರನ್ನು ಮುತ್ತಿಕೊಳ್ಳುತ್ತವೆ. ನಂತರ ಅವರು ಶಾರ್ಟ್‌ಕಟ್‌ ಅನುಸರಿಸಿ ಬ್ಯೂಟಿಪಾರ್ಲರ್‌, ಹೇರ್‌ ಸೆಲೂನ್‌, ಸ್ಪಾ ಇತ್ಯಾದಿಗಳಿಗೆ ಭೇಟಿ ನೀಡುತ್ತಾರೆ. ಇದರಿಂದ ಸಮಯ ಮತ್ತು ಕಷ್ಟಪಟ್ಟು ಗಳಿಸಿದ ಹಣ ಎರಡೂ ಹಾಳು. ಹೀಗೆ ಕೃತಕವಾಗಿ ಎಷ್ಟೇ ಮೇಕಪ್‌ ಮಾಡಿಸಿಕೊಂಡರೂ ಅವರ ಸೌಂದರ್ಯವೇನೂ ಮರಳಿಬಾರದು. ಅದರ ಬದಲಿಗೆ ಕೆಳಗಿನ ಡೇಲಿ ಟಿಪ್ಸ್ ಫಾಲೋ ಮಾಡಿ ಬೇಸಿಗೆಯಲ್ಲೂ ನಿಮ್ಮ ಸೌಂದರ್ಯ ನಳನಳಿಸುವಂತೆ ಮಾಡಿ.

ಡಾರ್ಕ್‌ ಮೊಣಕೈ ಮಂಡಿಗಳು

ನೀವು ಬ್ಯಾಲೆನ್ಸ್ಡ್ ಡಯೆಟ್‌ ಮತ್ತು ನಿಯಮಿತ ವ್ಯಾಯಾಮಗಳಿಂದ ಬ್ಯೂಟಿಫುಲ್ ಫಿಗರ್‌ ಪಡೆದಿದ್ದರೂ, ನೀವು ಹಾಟ್‌, ಸೆಕ್ಸೀ ಟೀಶರ್ಟ್‌, ಸ್ಕರ್ಟ್‌ ಧರಿಸಲು ಹಿಂಜರಿಯುವಿರಿ. ಹಾಗೆಯೇ ನಿಮ್ಮ ನಯ, ನುಣುಪಾದ ಬಾಹುಗಳ ವೋಡಿ ಬೀರಲು ಸ್ಲೀವ್ ಲೆ‌ಸ್‌ ಡ್ರೆಸೆಸ್‌ ಧರಿಸಲು ಹಿಂಜರಿಯುವಿರಿ. ಕಾರಣ… ಮಂಡಿ ಮತ್ತು ಮೊಣಕೈ ಡ್ರೈ ಡಾರ್ಕ್‌ ಆಗಿರುವುದು.

ಈ ಭಾಗಗಳು ಸದಾ ಉಪೇಕ್ಷಿಸಲ್ಪಡುತ್ತವೆ. ಹಾಗಾಗಿ ಈ ಭಾಗದಲ್ಲಿ ಸುಲಭವಾಗಿ ಡೆಡ್‌ ಸ್ಕಿನ್‌ ಜಮೆಗೊಳ್ಳುತ್ತದೆ. ಅದರಿಂದಾಗಿ ಅವು ಗಾಢ ಬಣ್ಣಕ್ಕೆ ತಿರುಗುತ್ತವೆ. ಒಂದೇ ಕಡೆ ಮೊಣಕೈ ಊರಿ ಕೆಲಸ ಮಾಡುವ ಅಭ್ಯಾಸವಿರುವವರಿಗೂ ಸಹ ಈ ಭಾಗದ ಚರ್ಮ ಗಾಢ ಹಾಗೂ ಅತಿ ಶುಷ್ಕವಾಗುತ್ತದೆ. ಇದರಿಂದ ಪಾರಾಗಲು, ಮೊಣಕೈ ಊರಿ ಕೆಲಸ ಮಾಡುವ ಅಭ್ಯಾಸ ತಪ್ಪಿಸಿ. ಜೊತೆಗೆ ರಸ ಹಿಂಡಿದ ನಿಂಬೆ ಹೋಳಿನಿಂದ ಈ ಭಾಗಗಳನ್ನು ಆಗಾಗ ಉಜ್ಜುತ್ತಿರಬೇಕು. ಆಮೇಲೆ ತಣ್ಣೀರಿನಿಂದ ತೊಳೆಯಬೇಕು. ಅದನ್ನು ಒರೆಸಿ ಬಾದಾಮಿ ಎಣ್ಣೆಯಿಂದ ಮಸಾಜ್‌ ಮಾಡಬೇಕು. ಹೀಗೆ ಮಾಡುವುದರಿಂದ ಆ ಭಾಗದ ಚರ್ಮ ಮೃದು ಹಾಗೂ ತಿಳಿಯಾಗುತ್ತದೆ.

ಏಜಿಂಗ್‌/ಸ್ಲಾಗಿಂಗ್‌ ನೆಕ್‌ಲೈನ್‌

ಸಾಮಾನ್ಯವಾಗಿ ಮಹಿಳೆಯರು ಮುಖಕ್ಕೆ ತರತರಹದ ಕ್ರೀಂ, ಲೋಶನ್‌, ಮಾಯಿಶ್ಚರೈಸರ್‌ ಹಚ್ಚುತ್ತಿರುತ್ತಾರೆ. ಅದರಿಂದ ಮುಖದ ಕಾಂತಿ ಹೆಚ್ಚುವುದೂ ನಿಜ. ಆದರೆ ಸಾಮಾನ್ಯವಾಗಿ ಕುತ್ತಿಗೆಯನ್ನು ನಿರ್ಲಕ್ಷಿಸುತ್ತಾರೆ, ಅದರ ತ್ವಚೆ ಮುಖಕ್ಕಿಂತಲೂ ತೆಳು ಆಗಿರುತ್ತದೆ. ಸುತ್ತಲೂ ಫ್ಯಾಟಿ ಟಿಶ್ಯು ಸಹ ಕಡಿಮೆ ಇರುತ್ತವೆ. ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಕುತ್ತಿಗೆಯ ಚರ್ಮದ ಎಲಾಸ್ಟಿಸಿಟಿ ಕಡಿಮೆ ಆಗುತ್ತದೆ. ಪರಿಣಾಮವಾಗಿ ಪ್ರೀಮೆಚ್ಯೂರ್‌ ಏಜಿಂಗ್‌, ಫೈನ್‌ಲೈನ್ಸ್ ಮತ್ತು ಡಿಸ್‌ಕಲರೇಶನ್‌ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಈ ಕುತ್ತಿಗೆಯೇ ಹೆಚ್ಚುತ್ತಿರುವ ವಯಸ್ಸನ್ನು ಎತ್ತಿ ತೋರಿಸುವ ಸಾಧನವಾಗಿದೆ.

ಈ ಎಲ್ಲಾ ಸಮಸ್ಯೆಗಳಿಂದ ದೂರವಾಗಲು, ಕುತ್ತಿಗೆಯ ತ್ವಚೆಯನ್ನು ನಿಯಮಿತಯವಾಗಿ ಎಕ್ಸ್ ಫಾಲಿಯೇಟ್‌ ಮಾಡಿಸಿ. ಯಾವುದೇ ಕ್ರೀಂ ಲೈಟ್‌ನಿಂಗ್‌ ಅಥವಾ ಆ್ಯಂಟಿಏಜಿಂಗ್‌ನ್ನು ಮುಖಕ್ಕೆ ಹಚ್ಚಿದ ನಂತರ ಕುತ್ತಿಗೆಗೂ ಸವರಬೇಕು. ಡೇಲಿ ಮಾಯಿಶ್ಚರೈಸರ್‌ ಸಹ ಹಚ್ಚಬೇಕು. ಕೆಳಭಾಗದಿಂದ ಮೇಲಿನೆಡೆಗೆ ಲಘುವಾಗಿ ಕೈಗಳಿಂದ ನೀವುತ್ತಾ, ಬಾದಾಮಿ ಎಣ್ಣೆಯಿಂದ ಚೆನ್ನಾಗಿ ಮಸಾಜ್‌ ಮಾಡಿ.

ಏಜಿಂಗ್‌ ಹ್ಯಾಂಡ್ಸ್

ಮುಖಕ್ಕಿಂತಲೂ ಹೆಚ್ಚಾಗಿ ಕೈಗಳ ಕಡೆ ಗಮನ ನೀಡಬೇಕಾದ ಅಗತ್ಯವಿದೆ. ಬಹಳ ಕಠಿಣಕರ ಕೆಲಸಗಳನ್ನು ಮಾಡುತ್ತಾ ಹಾರ್ಡ್‌ ಡಿಶ್‌ವಾಶರ್‌ ಡಿಟರ್ಜೆಂಟ್‌ ಬಳಸುವುದರಿಂದ ಕೈಗಳ ನರಗಳು, ರಕ್ತನಾಳಗಳು ತಿರುಚುತ್ತವೆ. ಇದರಿಂದ ಆ ಭಾಗದ ಚರ್ಮ ಶುಷ್ಕ, ಒರಟು, ಕಪ್ಪು ಆಗುತ್ತದೆ. ಇದನ್ನು ಹೋಗಲಾಡಿಸುವುದು ಬಹಳ ಕಷ್ಟಕರ. ಇದರಿಂದ ಪಾರಾಗಲು, ಸ್ನಾನದ ನಂತರ ತುಸು ಮೃದು ಆಗಿರುವ ಕೈಗಳಿಗೆ ಹೆವಿ ಕ್ರೀಮೀ ಮಾಯಿಶ್ಚರೈಸರ್‌ನ್ನು ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿ. ಇದನ್ನು ತಕ್ಷಣ ಮಾಡುವುದರಿಂದ, ತ್ವಚೆಯಲ್ಲಿರುವ ಮೃದುತ್ವ ಒಳಗೇ ಲಾಕ್‌ ಆಗುತ್ತದೆ. ಜೊತೆಗೆ, ಕೈಗಳನ್ನು ತೊಳೆಯಬೇಕಾದಾಗ ಲೋಶನ್‌ನ್ನು ರೀಅಪ್ಲೈ ಮಾಡಿ. ಮನೆಯಿಂದ ಹೊರಗೆ ಹೊರಡುವಾಗ ಮರೆಯದೆ SPF 15 ಸನ್‌ಸ್ಕ್ರೀನ್‌ನ್ನು ಹಚ್ಚಿಕೊಳ್ಳಿ. ಮನೆಯ ಎಲ್ಲಾ ಕೆಲಸಗಳೂ ಮುಗಿದ ನಂತರ, ಕೊಬ್ಬರಿ ಎಣ್ಣೆಯಿಂದ ಕೈಗಳ ಮಸಾಜ್‌ ಮಾಡಿ. ಬ್ರ್ಯಾಂಡೆಡ್‌, ದುಬಾರಿ ಕ್ರೀಂ, ಲೋಶನ್‌ ಹೆಚ್ಚು ಪ್ರಭಾವಶಾಲಿ ಎಂಬುದು ನಿಜ. ಇವು ತ್ವಚೆಯ ಆಳಕ್ಕಿಳಿದು ಕೈಗಳನ್ನು ಬಲು ಮೃದು ಮಾಡುತ್ತವೆ. ರಾತ್ರಿ ಮಲಗುವ ಮುನ್ನ ಕೈಗಳಿಗೆ ಹತ್ತಿಯ ಗ್ಲವ್ಸ್ ಧರಿಸಿ ಮಲಗಬೇಕು. ವಾರದಲ್ಲಿ ಒಂದು ಸಲ ಸ್ಕ್ರಬ್‌  ಹ್ಯಾಂಡ್‌ಪ್ಯಾಕ್‌ ಅಪ್ಲೈ ಮಾಡಿ.

ಬಿಸಿಲಿನಲ್ಲಿ ಪಾದಗಳನ್ನು ಸಂರಕ್ಷಿಸಿ

ಇಡೀ ದೇಹದ ಭಾರ ಹೊರುವ ಪಾದಗಳು ಹೆಚ್ಚು ನಿರ್ಲಕ್ಷಿತ ಆಗಿರುತ್ತವೆ. ಒಡೆದ ಹಿಮ್ಮಡಿ, ಡೆಡ್‌ ಸೆಲ್ಸ್ ಸಂಗ್ರಹಣೆ, ಶುಷ್ಕ ಕಪ್ಪು ತ್ವಚೆಯ ಉಪಸ್ಥಿತಿ ಪಾದದ ಅಂದ ಕೆಡಿಸುತ್ತವೆ. ಡೆಡ್‌ ಸ್ಕಿನ್‌ ಸೆಲ್ಸ್ ನ್ನು ತೊಲಗಿಸಲು, ದಿನ ಬಿಟ್ಟು ದಿನ ಹಿಮ್ಮಡಿಗಳನ್ನು ಪ್ಯೂಮಿಕ್‌ ಸ್ಟೋನ್‌ನಿಂದ ತಿಕ್ಕಿ ತೊಳೆಯಿರಿ. ಸೀ ಸಾಲ್ಟ್ ಗೆ ತುಸು ಕೊಬ್ಬರಿ ಎಣ್ಣೆ ಬೆರೆಸಿ ಮನೆಯಲ್ಲೇ ಸ್ಕ್ರಬ್‌ ಸಿದ್ಧಪಡಿಸಿ. ಪಾದಗಳನ್ನು ತೊಳೆದು ಒರೆಸಿ, ಮಾಯಿಶ್ಚರೈಸರ್‌ ಹಚ್ಚಿದ ನಂತರ ಇದನ್ನು ಪ್ರತಿನಿತ್ಯ ಹಚ್ಚಬೇಕು. ಪಾದದ ಬೆರಳು ಸಂದಿಗೆ ಫಂಗಲ್ ಇನ್‌ಫೆಕ್ಷನ್‌ ಆಗಿದ್ದರೆ, ತಕ್ಷಣ ಚಿಕಿತ್ಸೆ ಮಾಡಿಸಿ. ಬರಿಗಾಲಲ್ಲೇ ಕಲ್ಲುಮುಳ್ಳು, ಧೂಳು ಮಣ್ಣಿದ್ದ ಕಡೆ ಓಡಾಡಬೇಡಿ. ಸದಾ ಚಪ್ಪಲಿ ಧರಿಸಿರಿ. ಹೊರಗಿನಿಂದ ಮನೆಗೆ ಬಂದಾಗ, ಪಾದ ತೊಳೆದು ಮೇಲಿನ ಸ್ಕ್ರಬ್‌ ಹಚ್ಚುತ್ತಿರಿ.

ಡಾರ್ಕ್‌ ಸರ್ಕಲ್ಸ್

ಕಂಗಳು ಎಷ್ಟೇ ಮನೋಹರವಾಗಿರಲಿ, ಅವುಗಳ ಕೆಳಗೆ ಕಪ್ಪು ವೃತ್ತ ಅಥವಾ ಡಾರ್ಕ್‌ ಸರ್ಕಲ್ಸ್ ಇದ್ದರೆ, ಮುಖದ ಅಂದ ಕೆಡುತ್ತದೆ. ರಾತ್ರಿ ಪೂರ್ತಿ ನೆಮ್ಮದಿಯ ನಿದ್ದೆ ಇಲ್ಲದಿರುವಿಕೆ, ಪೌಷ್ಟಿಕ ಆಹಾರದ ಕೊರತೆ, ಟೆನ್ಶನ್‌, ಮಾನಸಿಕ ಒತ್ತಡಗಳು ಈ ಡಾರ್ಕ್‌ ಸರ್ಕಲ್ಸ್ ಹೆಚ್ಚಲು ಕಾರಣ.

`ಪ್ರಿಸರ್ ವೇಶನ್‌ ಈಸ್‌ ಬೆಟರ್‌ ದ್ಯಾನ್‌ ಕ್ಯೂರ್‌’ ಎಂಬ ಆಂಗ್ಲ ನಾಣ್ಣುಡಿಯಂತೆ ಡಾರ್ಕ್‌ ಸರ್ಕಲ್ಸ್ ಮೂಡುವ ಮೊದಲೇ ಅದು ಬಾರದಂತೆ ಎಚ್ಚರ ವಹಿಸುವುದು ಲೇಸು. ಆದ್ದರಿಂದ ಪೌಷ್ಟಿಕ ಆಹಾರ ಸೇವಿಸಿ, ನೆಮ್ಮದಿಯಾಗಿ ಕಣ್ತುಂಬಾ ನಿದ್ದೆ ಮಾಡಿ. ಡೇಲಿ ರೆಟಿನಾಯುಕ್ತ ಐ ಕ್ರೀಮನ್ನು ರಾತ್ರಿ ಮಲಗುವ ಮುನ್ನ ಹಚ್ಚಿರಿ. ಎಂದೂ ಬೋರಲು ಮಲಗಿ ನಿದ್ರಿಸಬೇಡಿ. ಲ್ಯಾಪ್‌ಟಾಪ್‌, ಮೊಬೈಲ್‌ಗಳಲ್ಲಿ ಸದಾ ಕಣ್ಣು ನೆಟ್ಟಿರಬೇಡಿ. ಪ್ರತಿದಿನ ಸ್ವಲ್ಪ ಹೊತ್ತು ರೋಸ್‌ ವಾಟರ್‌ನಲ್ಲಿ ಹತ್ತಿ ಅದ್ದಿ ಕಂಗಳ ಮೇಲೆ 15-20 ನಿಮಿಷ ಇರಿಸಿಕೊಳ್ಳಿ. ಕಂಗಳ ಅಕ್ಕಪಕ್ಕದ ತ್ವಚೆ ಬಲು ನಾಜೂಕು. ಹಾಗಾಗಿ ಅದರ ಮೇಲೆ ಬೇಗ ಫೈನ್‌ಲೈನ್ಸ್ ಮೂಡುತ್ತವೆ. ಡೇಲಿ ಕೇರ್‌ ಜೊತೆ ಕಂಗಳಿಗೂ ವ್ಯಾಯಾಮ ಅಗತ್ಯ.

ಫ್ರೀಝಿ ಹೇರ್

ಅತ್ಯಧಿಕ ಮಾಲಿನ್ಯ ಮತ್ತು ಗಾಳಿಯಲ್ಲಿ ಆರ್ದ್ರತೆಯ ಕೊರತೆಯ ಕಾರಣ, ಕೂದಲು ಫ್ರೀಝಿ ಆಗುತ್ತದೆ. ಇಂಥ ಕೂದಲನ್ನು ಮ್ಯಾನೇಜ್‌ ಮಾಡುವುದು ಸಮಸ್ಯೆಯೇ ಆಗುತ್ತದೆ. ಫ್ರೀಝಿ ಕೂದಲಿಗೆ ಚಿಕಿತ್ಸೆ ಒದಗಿಸಬಹುದು, ಇದಕ್ಕಾಗಿ ವಾರದಲ್ಲಿ ಒಂದು ಸಲ ಡೀಪ್‌ ಕಂಡೀಶನಿಂಗ್‌ ಮಾಡಿ. ಹೋಮ್ ಮೇಡ್‌ ಕಂಡೀಶನರ್‌ ಬೆಟರ್‌ ಎನಿಸುತ್ತವೆ. ಇಷ್ಟು ಮಾತ್ರಲ್ಲದೆ, ಹೇರ್‌ ಮಾಸ್ಕ್ ನ್ನು ಸಹ ಬಳಸಬಹುದು. ರೆಡಿಮೇಡ್‌ ಮಾಸ್ಕ್ ಮಾತ್ರವಲ್ಲದೆ, ಎಗ್‌ಯೋಕ್‌  ಆಲಿವ್ ಆಯಿಲ್‌ ಬೆರೆಸಿ ಉತ್ತಮ ಮಾಸ್ಕ್ ರೆಡಿ ಮಾಡಬಹುದು.

ಹೇರ್‌ ಫಾಲ್

ನಮ್ಮ ತಲೆಯ ಕೂದಲು ವಿಶೇಷ ಆರೈಕೆ ಬಯಸುತ್ತದೆ. ಇಲ್ಲದಿದ್ದರೆ ಸೂರ್ಯನ UV ಕಿರಣಗಳು ಹಾಗೂ ದಿನನಿತ್ಯದ ಮಾಲಿನ್ಯದಿಂದ, ಕೂದಲು ಡ್ಯಾಮೇಜ್‌ ಆಗುತ್ತವೆ. ಹೀಗಾಗಿ ದಿನೇದಿನೇ ಕೂದಲು ಉದುರತೊಡಗುತ್ತದೆ. ಪ್ರೊಟೀನ್‌ ಡಯೆಟ್‌ನ ಕೊರತೆಯೂ ಇದಕ್ಕೆ ಒಂದು ಕಾರಣವಿರಬಹುದು. ಹೇರ್‌ ಲಾಸ್‌ನ್ನು ಟ್ರೀಟ್‌ ಮಾಡಲು ವಾರದಲ್ಲಿ 2 ಸಲ ಆಯ್ಲಿಂಗ್‌ ಮಾಡಿ, ಹೆಡ್‌ ಮಸಾಜ್‌ ಮಾಡಬಹುದು. ಇದಕ್ಕೆ ಕೊಬ್ಬರಿ ಎಣ್ಣೆ ಉತ್ತಮ ಸಾಧನ, ಆದರೆ ಇನ್ನೂ ಉತ್ತಮ ಪರಿಣಾಮ ಪಡೆಯಲು ಕೊಬ್ಬರಿ ಎಣ್ಣೆ + ಬಾದಾಮಿ ಎಣ್ಣೆ + ಆಲಿವ್ ಆಯಿಲ್‌ನ್ನು ಸಮಪ್ರಮಾಣದಲ್ಲಿ ಬೆರೆಸಿ, ತುಸು ಬೆಚ್ಚಗೆ ಮಾಡಿ, ತಲೆಗೂದಲಿಗೆ ಹಚ್ಚಿ ಮಸಾಜ್‌ ಮಾಡಿ. ಹೇರ್‌ ಕ್ಯಾಪ್‌ (ಶವರ್‌ ಕ್ಯಾಪ್‌) ಬಳಸಿ ನಿದ್ದೆ ಮಾಡಿ. ಬೆಳಗ್ಗೆ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ. ಕೂದಲಿನಲ್ಲಿ ಎಂದೂ ಕೊಳೆ, ಬೆವರು ಜಮೆಗೊಳ್ಳಲು ಬಿಡಬೇಡಿ. ಬಿಸಿಲಿನಿಂದ ರಕ್ಷಿಸಿಕೊಳ್ಳಿ. ಸ್ಕಾರ್ಫ್‌ ಕಟ್ಟಿಕೊಂಡು ಹೊರಗೆ ಹೊರಡಿ.

– ಎಸ್‌. ನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ