ಬೇಸಿಗೆಯಲ್ಲಿ ಪ್ರವಾಸಕ್ಕೆ ಹೊರಡುವಾಗ ಜಲಪಾತಗಳ ತಾಣಗಳನ್ನು ತಪ್ಪದೆ ಗಮನಿಸಿ. ಬನ್ನಿ, ಛತ್ತೀಸ್ಗಢದ ಸುಂದರ ಕಾಂತಿ ಹೊಮ್ಮಿಸುವ ಜಲಪಾತಗಳ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ………!
ಚಿತ್ರಕೂಟ ಜಲಪಾತ: ಮಿನಿ ನಯಾಗರಾ ಎಂದು ಕರೆಸಿಕೊಳ್ಳುವ ಪ್ರಸಿದ್ಧ ಚಿತ್ರಕೂಟ ಜಲಪಾತ ಬಸ್ತರ್ ಜಿಲ್ಲೆಯ ಹೆಡ್ಕ್ವಾರ್ಟರ್ಸ್ ಜಗದ್ಪುರದಿಂದ 39 ಕಿ.ಮೀ. ದೂರದಲ್ಲಿ ಲೋಹಂಡಿಗುಡಾ ವಿಕಾಸ್ ಖಂಡದ ಒಳಗೆ ಇದೆ. ಇಂದ್ರಾವತಿ ನದಿ ಒಡಿಶಾದ ಕಾಲಾಹಾಂಡಿ ಜಿಲ್ಲೆಯ ಮೂಲಕ ಬಸ್ತರ್ ಪ್ರವೇಶಿಸುತ್ತದೆ. ಈ ನದಿ ಜಗದ್ಪುರದ ನೆಲವನ್ನು ಸಮೃದ್ಧಗೊಳಿಸಿ ಚಿತ್ರಕೂಟದ ಬಳಿ ಜಲಪಾತ ಸೃಷ್ಟಿಸಿ ದಂತೆವಾಡ ಜಿಲ್ಲೆಯಲ್ಲಿ ಪ್ರವೇಶಿಸುತ್ತದೆ ಹಾಗೂ ಬಾರ್ಸೂರ್ ನಲ್ಲಿ 7 ಧಾರೆಗಳ ಜಲಪಾತ ಉಂಟು ಮಾಡಿ ಭೂಪಾಲಪಟ್ಟಣಂ ಭದ್ರಕಾಳಿಯ ಬಳಿ ಗೋದಾವರಿ ನದಿಯಲ್ಲಿ ಸೇರಿಕೊಳ್ಳುತ್ತದೆ.
ಚಿತ್ರಕೂಟ ಜಲಪಾತದ ಅಗಲ ಸುಮಾರು 200 ಮೀಟರ್ ಇದೆ. ಅದು 90 ಅಡಿ ಆಳದಲ್ಲಿ ದುಮುಕಿ ಸುಂದರ ಜಲಪಾತ ಉಂಟು ಮಾಡುತ್ತದೆ. ಮಳೆಗಾಲದ ನಂತರ ನೀರಿನ ಪ್ರವಾಹ ಹಲವು ಝರಿಗಳಲ್ಲಿ ಹಂಚಿಹೋಗಿ ಜಲಪಾತಗಳ ರೂಪ ಧರಿಸುತ್ತವೆ. ಪ್ರಪಾತದ ಕೆಳ ಭಾಗದಲ್ಲಿ ಹೊಂಡಗಳಿವೆ. ನೀರು ಭಾರಿ ವೇಗದಿಂದ ಕೆಳಗಿನ ಪ್ರಪಾತದಲ್ಲಿ ಬೀಳುವ ನೀರಿನ ಕಣಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಉಂಟಾಗುವ ಕಾಮನಬಿಲ್ಲಿನ ಸೌಂದರ್ಯ ಪ್ರವಾಸಿಗರ ಮನಸ್ಸನ್ನು ಮುದಗೊಳಿಸುತ್ತದೆ. ರಾಜಧಾನಿ ರಾಯ್ಪುರ್ ನಿಂದ 300 ಕಿ.ಮೀ. ದೂರದಲ್ಲಿರುವ ಜಗದ್ಪುರ್ ಹೆಡ್ಕ್ವಾರ್ಟರ್ಸ್ನಿಂದ 39 ಕಿ.ಮೀ. ದೂರದಲ್ಲಿದೆ.
ತೀರಥ್ಗಢ ಜಲಪಾತ : ಕಲಕಲ ಧ್ವನಿ ಮಾಡುತ್ತಾ ಕೆಳಗೆ ದುಮುಕುವ ಜಲ ಪ್ರವಾಹವನ್ನು ಜಲಪಾತದ ರೂಪದಲ್ಲಿ ನೋಡಲು ಬಹಳ ಮೋಹಕವಾಗಿರುತ್ತದೆ. ಮಳೆಗಾಲದ ನಂತರ ಹೋದರೆ ಜಲಪಾತವನ್ನು ನೋಡಲು ಬಹಳ ಖುಷಿಯಾಗುತ್ತದೆ. ಜಗದ್ಪುರ್ನಿಂದ ಕೋಟಾ ಮಾರ್ಗದಲ್ಲಿ 29 ಕಿ.ಮೀ. ದೂರದಲ್ಲಿ ಬಲಗಡೆಯಲ್ಲಿ ಒಂದು ರಸ್ತೆ ಸಿಗುತ್ತದೆ. ಅಲ್ಲಿಂದ ಮುಂದೆ ಹೋದರೆ ಬಸ್ತರ್ನ ಇನ್ನೊಂದು ರಮಣೀಯ ಸ್ಥಳ ಕಂಡುಬರುತ್ತದೆ. ಬಸ್ತರ್ನ ಅತ್ಯಂತ ಸುಂದರ ಜಲಪಾತಗಳ ಸಮೂಹದ ಮುಕುಟ ತೀರಥ್ಗಢ ಜಲಪಾತ. ಕಾಂಗೆರ್ ನದಿ ತನ್ನ ಉಪನದಿಗಳು ಅಥವಾ ಮುನಗಾಬಹಾರ್ನಂತಹ ಸಣ್ಣ ನಾಲೆಗಳೊಂದಿಗೆ ಸೇರಿ ತನ್ನ ಅಸ್ತಿತ್ವವನ್ನು ವೃದ್ಧಿ ಮಾಡಿಕೊಂಡು ಇಡೀ ವರ್ಷ ನೀರು ಹರಿಸುತ್ತದೆ. ರಾಜಧಾನಿ ರಾಯ್ಪುರದಿಂದ ಜಗದ್ಪುರ್ ರಾಷ್ಟ್ರೀಯ ಹೆದ್ದಾರಿಯಿಂದ 340 ಕಿ.ಮೀ. ಜಿಲ್ಲಾ ಹೆಡ್ಕ್ವಾರ್ಟರ್ಸ್ ಬಸ್ತರ್ನಿಂದ 39 ಕಿ.ಮೀ. ಅಂತರದಲ್ಲಿದೆ.
ಘಟರಾನಿ : ಮಳೆಗಾಲದಲ್ಲಿ ದೇವಸ್ಥಾನದ ಬಳಿ ಝರಿಗಳ ತುಂತುರು ಹನಿಗಳಿಂದ ಕೂಡಿದ ಈ ಪ್ರದೇಶ ವಿಶ್ವದ ಉತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಪ್ರವಾಸಿಗರು ಪ್ರಾಕೃತಿಕ ಸೌಂದರ್ಯವನ್ನು ನೋಡಿ ನಲಿಯುತ್ತಾರೆ. ಇದು ಘಟಾರಾನಿ ಜತಮಯೀನಿಂದ 25 ಕಿ.ಮೀ. ದೂರದಲ್ಲಿದೆ. ಇದೂ ಸಹ ಕಣ್ಮನ ಸೆಳೆಯುವ ಜಲಪಾತವಾಗಿದೆ. ಪ್ರಕೃತಿ ಪ್ರೇಮಿಗಳು ಈ ಜಾಗಗಳಿಗೆ ಹೋಗಲು ಅತ್ಯಂತ ಒಳ್ಳೆಯ ಸಮಯ ಆಗಸ್ಟ್ ನಿಂದ ಡಿಸೆಂಬರ್.
ಈ ಜಾಗ ರಾಜಧಾನಿ ರಾಯ್ಪುರ್ನ ಆಗ್ನೇಯ ದಿಕ್ಕಿನಿಂದ 75 ಕಿ.ಮೀ. ದೂರದಲ್ಲಿದೆ. ರಾಜಿವ್ನಿಂದ ಇದೇ ದಿಕ್ಕಿನಲ್ಲಿ 25 ಕಿ.ಮೀ. ದೂರದಲ್ಲಿ ಜಿಲ್ಲಾ ಹೆಡ್ಕ್ವಾರ್ಟರ್ಸ್ ಗರಿಯಾಬಂದ್ನಿಂದ ವಾಯುವ್ಯ ದಿಕ್ಕಿನಲ್ಲಿ 25 ಕಿ.ಮೀ. ಆದರೆ ಫಿಂಗೇಶ್ವರ ಹೆಡ್ಕ್ವಾರ್ಟರ್ಸ್ ನಿಂದ ದಕ್ಷಿಣ ದಿಕ್ಕಿನಲ್ಲಿ ಶೇ.15 ಕಿ.ಮೀ. ದೂರದಲ್ಲಿ ಫುಲ್ಝರೀ ಗ್ರಾಮದ ಕಾಡಿನಲ್ಲಿದೆ.
ಜತಮಯೀ : ಜತಮಯೀ ರಾಯ್ಪುರ್ನಿಂದ ಸುಮಾರು 70 ಕಿ.ಮೀ. ದೂರದಲ್ಲಿ ರಾಜಿವ್ ದಾರಿಯಲ್ಲಿ ಇದೆ. ಜತಮಯೀ ಬೆಟ್ಟವನ್ನು ಪ್ರವಾಸಿ ಕೇಂದ್ರವಾಗಿ ವಿಕಸಿತಗೊಳಿಸಿದ್ದರಿಂದ ಜನ ಈ ಮನಮೋಹಕ ಪ್ರಾಕೃತಿಕ ಸ್ಥಳವನ್ನು ನೋಡಿ ಆನಂದಿಸುತ್ತಿದ್ದಾರೆ. ಪಟೇಲಾದ ಬಳಿ ಇರುವ ಜತಮಯೀ ಬೆಟ್ಟ ಸುಮಾರು 70 ಮೀಟರ್ಗಳು. ಇಲ್ಲಿನ ಶಿಖರದ ಮೇಲೆ ಬಹಳ ದೊಡ್ಡ ಆಕಾರದ ಕಲ್ಲು, ಯಾರೋ ಅವನ್ನು ಕೂರಿಸಿದಂತೆ ಒಂದರ ಮೇಲೊಂದು ಇವೆ.
ರಾಜಧಾನಿ ರಾಯ್ಪುರ್ನಿಂದ 84 ಕಿ.ಮೀ. ಛತ್ತೀಸ್ಗಢದ ಪ್ರಯಾಗ್ರಾಜ್ ರಾಜಿವ್ನಿಂದ ಕೇವಲ 37 ಕಿ.ಮೀ. ದೂರದಲ್ಲಿದೆ.
ಅಮೃತಧಾರಾ : ಜಿಲ್ಲಾ ಹೆಡ್ ಕ್ವಾರ್ಟರ್ಸ್ನಿಂದ 35 ಕಿ.ಮೀ. ವೈಕುಂಠಪುರ್ ನಾಗಪುರ್ ವೈಗ್ರಾಮ್ ನಿಂದ 8 ಕಿ.ಮೀ. ದೂರದಲ್ಲಿ ಅಮೃತಧಾರಾ ಜಲಪಾತವಿದೆ. ಈ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ ಉತ್ತರ ದಿಕ್ಕಿನಲ್ಲಿದೆ. ಅಲ್ಲಿಂದ ಹಸದೇ ನದಿ ಉದ್ಭವವಾಯಿತು ಎಂದು ಹೇಳುತ್ತಾರೆ.
ಅಮೃತಧಾರಾ ತನ್ನ ಅಲೌಕಿಕ ಕಾಂತಿಯಿಂದ ಬಹಳ ಪ್ರಸಿದ್ಧವಾಗಿದೆ. ಸುಮಾರು 150 ಅಡಿಗಳ ಎತ್ತರದಿಂದ ದುಮುಕುವ ನೀರು ಹಾಲಿನಂತೆ ಕಂಡುಬರುತ್ತದೆ. ಇಂದು ಈ ಜಲಪಾತ ಕೊರಿಯಾದ ಜಿಲ್ಲೆಯ ಅತ್ಯಂತ ಎತ್ತರ ಹಾಗೂ ಪ್ರೇಕ್ಷಣೀಯ ಜಲಪಾತವಾಗಿದೆ. ಮೇಲಿನಿಂದ ಬೀಳುವ ನೀರಿನ ಸಣ್ಣ ಸಣ್ಣ ಕಣಗಳು ಗಾಳಿಯೊಂದಿಗೆ ಸೇರಿ ಮನಸ್ಸಿಗೆ ತಂಪು ನೀಡುತ್ತದೆ.
– ಪಿ.ಜಿ. ದಿವ್ಯಾ