ಬೇಸಿಗೆ ಕೊನೆಯಾಗುತ್ತಾ ಮಳೆಗಾಲ ಆರಂಭಗೊಳ್ಳುವ ದಿನಗಳಲ್ಲಿ, ಗಾಳಿಯಲ್ಲಿ ಬಹಳಷ್ಟು ಉಷ್ಣಾಂಶ ಇರುತ್ತದೆ, ಅದರಿಂದ ಚರ್ಮ ಹೆಚ್ಚು ಟ್ಯಾನ್‌ ಆಗುತ್ತದೆ. ಬದಲಾಗುತ್ತಿರುವ ಋತುಮಾನದ ಪರಿಣಾಮ ಇಡೀ ದೇಹದ ಚರ್ಮದ ಮೇಲಾಗುವುದರ ಜೊತೆಯಲ್ಲೇ ಕೂದಲಿನ ಮೇಲೂ ತೋರಿಸುತ್ತದೆ. ಹೀಗಾಗಿ ಬಾಡಿ ಕೇರ್‌ ಬಗ್ಗೆ ನಿರ್ಲಕ್ಷ್ಯ ವಹಿಸಲೇಬಾರದು. ಈ ಸಂದರ್ಭದಲ್ಲಿ ಏನೆಲ್ಲ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? :ಚರ್ಮದ ಸುಧಾರಣೆಗಾಗಿ ಸ್ಟ್ರಾಂಗ್‌ ಫೇಶಿಯಲ್ ನ ಅಗತ್ಯವಿದೆ. ಈ ಸೀಸನ್‌ನಲ್ಲಿ ಚರ್ಮದ ಪೋರ್ಸ್‌ ಓಪನ್‌ ಇರುತ್ತವೆ. ಆಗ ಚರ್ಮ ಬೆವರಿನಿಂದ ತೊಯ್ದು, ಟ್ಯಾನ್‌ ಆಗಿ, ಆಯ್ಲಿ ಆಗುತ್ತದೆ. ಇದಕ್ಕಾಗಿ ಆ್ಯಂಟಿ ಟ್ಯಾನಿಂಗ್‌ ಫೇಶಿಯಲ್ ಅಥವಾ ಜೆಲ್ ಬೇಸ್‌ ಫೇಶಿಯಲ್ ಮಾಡಿಸುವುದರಿಂದ ಹೆಚ್ಚಿನ ಲಾಭವಿದೆ.

ಆ್ಯಂಟಿ ಟ್ಯಾನಿಂಗ್‌ ಫೇಶಿಯಲ್ : ಇದರಿಂದ ಚರ್ಮಕ್ಕೆ ಆದ ಟ್ಯಾನಿಂಗ್‌ ದೂರವಾಗುತ್ತದೆ. ಜೊತೆಗೆ ಕನಿಷ್ಠ ಕಾಲಾವಧಿಯಲ್ಲಿ ಚರ್ಮ ಅತಿ ಮೃದು ಮತ್ತು ಹೆಚ್ಚು ತಾಜಾ ಆಗುತ್ತದೆ.

ಕೂದಲಿನ ಆರೈಕೆ : ಈ ಸೀಸನ್‌ನಲ್ಲಿ ಗಾಳಿಯಲ್ಲಿ ಹೆಚ್ಚು ತೇವಾಂಶ ಇರುತ್ತದೆ. ಹೀಗಾಗಿ ಕೂದಲನ್ನು ಹೆಚ್ಚು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ವಾರದಲ್ಲಿ 1 ಸಲ ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿ. ಆಮೇಲೆ ಉತ್ತಮ ಶ್ಯಾಂಪೂನಿಂದ ತೊಳೆಯಿರಿ. ಕೂದಲು ಗಿಡ್ಡವಾಗಿದ್ದರೆ 2 ದಿನಗಳಿಗೊಮ್ಮೆ ಅಥವಾ ಉದ್ದಕ್ಕಿದ್ದರೆ ವಾರಕ್ಕೆ 2-3 ಸಲ ಶ್ಯಾಂಪೂ ಹಾಕಿ ತೊಳೆಯಿರಿ. ಹೀಗೆ ತೊಳೆದ ನಂತರ ಕೂದಲಿಗೆ  ಡೀಪ್‌ ಕಂಡೀಶನಿಂಗ್‌ ಮಾಡಿ. ಮಳೆಗಾಲಕ್ಕೆ ಮುಂಚೆ ಅಥವಾ ಮಳೆಗಾಲದಲ್ಲಿ ಗಾಳಿಯಲ್ಲಿ ಹೆಚ್ಚು ತೇವಾಂಶ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಈ ಸೀಸನ್‌ನಲ್ಲಿ ಸ್ಟ್ರೇಟ್‌ನಿಂಗ್‌, ರೀಬೌಂಡಿಂಗ್‌, ಪರ್ಮಿಂಗ್‌ ಇತ್ಯಾದಿ ಬೇಡ. ಈ ಸೀಸನ್‌ ಸರಿಹೋದ ಮೇಲೆ ಅಥವಾ ಮಳೆ ನಿಂತಿದೆ ಎನಿಸಿದರೆ, ಇವನ್ನು ಮುಂದುವರಿಸಬಹುದು.

ಜೆಲ್ ಬೇಸ್‌ ಫೇಶಿಯಲ್ : ಆ್ಯಂಟಿ ಟ್ಯಾನಿಂಗ್‌ ಫೇಶಿಯಲ್ ಜೊತೆ ಜೊತೆಯಲ್ಲೇ ಜೆಲ್‌ ಬೇಸ್‌ ಸಹ ಮಾಡಿಸುವುದರಿಂದ ಹೆಚ್ಚಿನ ಲಾಭವಿದೆ. ಇದರಲ್ಲಿ ಕ್ರೀಂ ಬದಲಿಗೆ ಜೆಲ್‌ ಬಳಸುತ್ತಾರೆ. ಇದರಿಂದ ಆಯ್ಲಿ ಚರ್ಮಕ್ಕೆ ಹೆಚ್ಚು ಲಾಭವಿದೆ. ಕ್ರೀಮೀ ಫೇಶಿಯಲ್ ನಿಂದ ಚರ್ಮ ಮತ್ತಷ್ಟು ಆಯ್ಲಿ ಆಗುವ ಅವಕಾಶವಿದೆ. ಅದರ ಬದಲಿಗೆ ಜೆಲ್‌ ಫೇಶಿಯಲ್ ಮಾಡಿಸುವುದರಿಂದ ಈ ಸಮಸ್ಯೆ ದೂರವಾಗುತ್ತದೆ. ಜೆಲ್‌ ಬೇಸ್‌ ಫೇಶಿಯಲ್ ನಿಂದ ಬಹಳ ಬೇಗ ತ್ವಚೆಯ ಮೇಲೆ ಪರಿಣಾಮ ಆಗುತ್ತದೆ. ಚರ್ಮ ಅತಿ ಮೃದು, ಹೊಳೆ ಹೊಳೆಯುವಂತೆ, ಆಯ್ಲಿ ಫ್ರೀ ಆಗಿ ಕಾಣಿಸುತ್ತದೆ. ಇದಕ್ಕಾಗಿ ಒಂದಿಷ್ಟು ಮನೆ ಮದ್ದುಗಳನ್ನು ಸಹ ಮಾಡಬಹುದು : ಮೆನಿಕ್ಯೂರ್‌  ಪೆಡಿಕ್ಯೂರ್‌ : ತುಸು ಬೆಚ್ಚಗಿನ ನೀರಿಗೆ 2-3 ಹನಿ ಹರ್ಬಲ್ ಶ್ಯಾಂಪೂ ಮತ್ತು 1 ಚಮಚ ಆ್ಯಂಟಿಸೆಪ್ಟಿಕ್‌ ಲೋಶನ್‌ ಹಾಕಿರಿಸಿ, ಅದರಲ್ಲಿ ನಿಮ್ಮ ಪಾದಗಳನ್ನು ಮುಳುಗಿಸಿ. ನಂತರ ಪ್ಯೂಮಿಕ್‌ ಸ್ಟೋನ್‌ನಿಂದ ಪಾದ, ಹಿಮ್ಮಡಿಗಳನ್ನು ತಿಕ್ಕಬೇಕು. ಇದೇ ತರಹ ಕೈಗಳಿಗೂ ಮಾಡಿ. ಡೆಡ್‌ಸ್ಕಿನ್‌ ಮತ್ತು ಚರ್ಮದ ಮೇಲಿನ ಹೆವಿ ಡಸ್ಟ್ ದೂರವಾಗುತ್ತದೆ. ನಂತರ ಆಯಿಲ್ ‌ಫ್ರೀ ಮಾಯಿಶ್ಚರೈಸರ್‌ ಅಥವಾ ಬಾಡಿಲೋಶನ್‌ ಹಚ್ಚಿರಿ. ಆಗ ಚರ್ಮ ಅತಿಮೃದು ಮತ್ತು ನಳನಳಿಸುತ್ತಿರುವಂತೆ ತೋರುತ್ತದೆ.

ಸ್ಕಿನ್‌ ಟ್ಯಾನ್‌ : ಟ್ಯಾನ್‌ ಆಗಿರುವ ಚರ್ಮಕ್ಕೆ ಹೊಳಪು ನೀಡಲು ಮನೆಯಲ್ಲೇ ಫೇಸ್‌ಪ್ಯಾಕ್‌ ರೆಡಿ ಮಾಡಿ ಬಳಸಬಹುದು. ಇದಕ್ಕಾಗಿ ಚಂದನ, ತೇದ ಜಾಯಿಕಾಯಿ, ಅರಿಶಿನ ಬೆರೆಸಿ ಮಿಶ್ರಣವನ್ನು ಟ್ಯಾನ್‌ ಆದ ಭಾಗಕ್ಕೆ ಹಚ್ಚಿರಿ. ಅದು ಒಣಗಿದ ನಂತರ ತೊಳೆಯಿರಿ.

ಗಮನಿಸಿ :

– ಈ ಸೀಸನ್‌ನಲ್ಲೂ ಧಾರಾಳ ನೀರು ಕುಡಿಯಬೇಕು.

– ಎಳನೀರು, ಜೂಸ್‌, ಮಜ್ಜಿಗೆ, ಮಿಲ್ಕ್ ಶೇಕ್‌ ಇತ್ಯಾದಿಗಳ ಜೊತೆ ರಸಭರಿತ ಹಣ್ಣು ಸೇವಿಸಿ.

– ಈ ಸೀಸನ್‌ನಲ್ಲಿ ಡ್ರೈಫ್ರೂಟ್ಸ್ ಕಡಿಮೆ ಸೇವಿಸಿ. ಇದರಿಂದ ದೇಹಕ್ಕೆ ಅನಗತ್ಯ ಉಷ್ಣತೆ ಏರುತ್ತದೆ.

– ಬಿ. ಸಂಧ್ಯಾ

ದೈಹಿಕ ಸ್ವಚ್ಛತೆ

ಗಾಳಿಯಲ್ಲಿ ಉಷ್ಣತೆ, ತೇವಾಂಶ ಎರಡೂ ಇರುವುದರಿಂದ ಈ ಸೀಸನ್‌ನಲ್ಲಿ ಮನೆಯಿಂದ ಹೊರಗೆ ಹೊರಟಾಗ ಚರ್ಮ ಬೆವರಿನಿಂದ ತೊಯ್ದು ಅಂಟಂಟಾಗುತ್ತದೆ. ಹೀಗಿರುವಾಗ ಪ್ರತಿದಿನ 2-3 ಸಲ ಮೆಡಿಕೇಟೆಡ್‌ ಸೋಪ್‌ ಅಥವಾ ಬಾಡಿವಾಶ್‌ನಿಂದ ಸ್ನಾನ ಮಾಡಿ. ಸ್ನಾನದ ನಂತರ ದೇಹದ ಮೇಲೆ ಸುಗಂಧಭರಿತ ಟಾಲ್ಕಂ ಪೌಡರ್‌, ಪರ್ಫ್ಯೂಮ್ ಸಿಂಪಡಿಸಿ. ಆಗ ನಿಮ್ಮ ದೇಹದಿಂದ ಬೆವರಿನ ದುರ್ವಾಸನೆ ಬರುವುದಿಲ್ಲ. ನೀವು ಬಹಳ ಪ್ರಫುಲ್ಲಿತರಾಗಿ ಇರುತ್ತೀರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ