ಗರ್ಭವತಿ ಆದ ಮೇಲೆ ನೀವು ಫ್ಯಾಷನ್ ಟ್ರೆಂಡ್ಸ್ ಬಿಟ್ಟುಬಿಡಬೇಕು ಅಂತೇನಲ್ಲ. ಮೆಟರ್ನಿಟಿ ಔಟ್‌ಫಿಟ್ಸ್ ಜೊತೆ ಜೊತೆಯಲ್ಲೇ ಮಾರುಕಟ್ಟೆಯಲ್ಲಿ ಬಗೆಬಗೆಯ ಇನ್ನಿತರ ಉಡುಗೆಗಳು ಲಭ್ಯವಿದ್ದು, ಅವು ನಿಮಗೆ ಸೂಪರ್ ಸ್ಟೈಲಿಶ್ ಲುಕ್ಸ್ ನೀಡುತ್ತವೆ. ಇಂಥ ಉಡುಗೆಗಳನ್ನು ಆರಿಸುವಾಗ ಯಾವ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕೆಂದು ಗಮನಿಸಿ :
ಶಿಫ್ಟ್ ಡ್ರೆಸ್
ಅಫಿಶಿಯಲ್ ಮೀಟಿಂಗ್ಸ್ ನಲ್ಲಿ ಶಿಫ್ಟ್ ಡ್ರೆಸ್ ಕ್ಲಾಸಿ ಲುಕ್ ನೀಡುತ್ತದೆ. ಆದ್ದರಿಂದ ನಿಮ್ಮ ವಾರ್ಡ್‌ರೋಬ್‌ಗೆ ಅಗತ್ಯ ಶಿಫ್ಟ್ ಡ್ರೆಸೆಸ್ ತುಂಬಿಸಿ. ಸ್ಟೈಲ್ ಜೊತೆ ಕಂಫರ್ಟ್ ಕೂಡ ಬೇಕೆನಿಸಿದರೆ, ಲೈನ್‌ವುಳ್ಳ ಶಿಫ್ಟ್ ಡ್ರೆಸ್ ಖರೀದಿಸಿ. ಹಾಟ್ ಲುಕ್ಸ್ ಗಾಗಿ ಸ್ಪೆಗೆಟಿ ಸ್ಟ್ರಾಪ್ಸ್ ಯಾ ಸ್ಕೂಪ್ ನೆಕ್‌ವುಳ್ಳ ಶಿಫ್ಟ್ ಡ್ರೆಸ್ ಖರೀದಿಸಿ.
ಜಂಪ್ ಸೂಟ್
ಪ್ರೆಗ್ನೆನ್ಸಿಯಲ್ಲಿ ಕ್ಯೂಟ್ ಲುಕ್ಸ್ ಬೇಕೆನಿಸಿದರೆ, ನೀವು ಜಂಪ್ ಸೂಟ್ ಟ್ರೈ ಮಾಡಬಹುದು. ಇದರ ಜೊತೆ ಆಗಾಗ ಟೀ ಶರ್ಟ್, ಸಾದಾ ಫುಲ್ ಶರ್ಟ್ ಇತ್ಯಾದಿ ಟ್ರೈ ಮಾಡಿ. ಹೀಗೆ ಒಂದೇ ಜಂಪ್ ಸೂಟ್‌ನಲ್ಲಿ ನೀವು 2 ಬಗೆಯ ಲುಕ್ಸ್ ಪಡೆಯಬಹುದು. ಸ್ಲಿಮ್ ಲುಕ್ಸ್ ಗಾಗಿ ಬ್ಲ್ಯಾಕ್ ಜಂಪ್ ಸೂಟ್ ಆರಿಸಿ.
ಮ್ಯಾಕ್ಸಿ ಡ್ರೆಸ್
ಶಾರ್ಟ್ ಟ್ರಿಪ್ ಅಥವಾ ಬೀಚ್, ಫಾಲ್ಸ್ ಗೆಂದು ಹೊರಟಿದ್ದೀರಾ? ಆಗ ಮ್ಯಾಕ್ಸಿ ಡ್ರೆಸ್ ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಆಗಿರಲಿ. ಇಂಥ ಪಿಕ್‌ನಿಕ್‌ಗಳಿಗೆ ಈ ಡ್ರೆಸ್‌ಗಿಂತ ಬೆಟರ್ ಮತ್ತೊಂದಿಲ್ಲ. ಇದು ಹೆಚ್ಚು ಆರಾಮದಾಯಕ ಕೂಡ. ಸ್ಟೈಲಿಶ್ ಗ್ಲಾಮರ್‌ಗಾಗಿ ಮ್ಯಾಕ್ಸಿ ಡ್ರೆಸ್ ಮೇಲೆ ಬೆಲ್ಟ್ ಧರಿಸಿ.
ರಾಂಪ್ ಡ್ರೆಸ್
ಎಲಿಗೆಂಟ್ ಲುಕ್ಸ್ ಗಾಗಿ ರಾಂಪ್ ಡ್ರೆಸ್ ಕೂಡ ಟ್ರೈ ಮಾಡಬಹುದು. ಇದು ಅಡ್ಜಸ್ಟೆಬಲ್ ಆಗಿರುವುದರಿಂದ, ಇದನ್ನು 9 ತಿಂಗಳು ಮಾತ್ರವಲ್ಲ, ಪ್ರೆಗ್ನೆನ್ಸಿ ನಂತರ ಧರಿಸಬಹುದಾಗಿದೆ. ಅಗತ್ಯ ಎನಿಸಿದರೆ ರಾಂಪ್ ಡ್ರೆಸ್ ಬದಲು ರಾಂಪ್ ಟಾಪ್ ಸಹ ಧರಿಸಬಹುದು.
ಸ್ಟೋಲ್
ನಿಮ್ಮ ಪ್ಲೇನ್ ಔಟ್‌ಫಿಟ್‌ಗೆ ಸ್ಮಾರ್ಟ್ ಲುಕ್ ನೀಡಲು ವಾರ್ಡ್‌ರೋಬ್‌ನಲ್ಲಿ ಕಲರ್‌ಫುಲ್ ಸ್ಟೋಲ್ ನ ಕಲೆಕ್ಷನ್ ಸಹ ಇಟ್ಟುಕೊಳ್ಳಿ. ಸ್ಟೋಲ್ ಬೇಬಿ ಬಂಪ್‌ನ್ನು ಕವರ್ ಮಾಡಲಿಕ್ಕೂ ಬರುತ್ತದೆ. ನೀವು ಟೀಶರ್ಟ್ ಧರಿಸುವಿರಾದರೆ, ಸ್ಟೋಲ್ ಬದಲು ಸ್ಕಾರ್ಫ್ ಬಳಸಿರಿ.
ಒನ್ ಪೀಸ್ ಡ್ರೆಸ್
ಗರ್ಭವತಿ ಆದ ಮೇಲೆ ಹೇಗಪ್ಪ ಪಾರ್ಟಿಗೆ ಹೋಗುವುದು ಎಂದು ಸಂಕೋಚಪಡಬೇಡಿ. ಈವ್ನಿಂಗ್ ಪಾರ್ಟಿಯಂಥ ವಿಶೇಷ ಸಂದರ್ಭಗಳಿಗೆ ಒನ್ ಪೀಸ್ ಡ್ರೆಸ್ ಧರಿಸುವುದರಿಂದ, ನೀವು ಇನ್ನಷ್ಟು ಗ್ಲಾಮರಸ್ ಆಗಿ ಕಾಣಿಸುವಿರಿ. ನೀವು ಪಾರ್ಟಿಯ ಆಕರ್ಷಕ ಕೇಂದ್ರಬಿಂದು ಆಗಬಯಸಿದರೆ, ಆಫ್‌ಶೋಲ್ಡರ್ ಫ್ಲೋರ್ ಸ್ವೀಪಿಂಗ್ ಒನ್ ಪೀಸ್ ಡ್ರೆಸ್ ಧರಿಸಿರಿ.
ಟ್ಯೂನಿಕ್ ನೀ
ಉದ್ಯೋಗಸ್ಥ ವನಿತೆಯಾಗಿದ್ದರೆ, ನಿಮ್ಮ ವಾರ್ಡ್‌ರೋಬ್‌ನಲ್ಲಿ 3-4 ಬಗೆಯ ಟ್ಯೂನಿಕ್ ಡ್ರೆಸೆಸ್ ಅಗತ್ಯ ಇರಿಸಿಕೊಳ್ಳಿ. ಆಫೀಸ್‌ನಲ್ಲಿ ಫಾರ್ಮಲ್ ಲುಕ್ಸ್ ಗಾಗಿ ಟ್ಯೂನಿಕ್ ಬೆಸ್ಟ್ ಎನಿಸುತ್ತದೆ. ಇದನ್ನು ನೀವು ಲೆಗಿಂಗ್ ಜೀನ್ಸ್ ಎರಡರ ಜೊತೆಗೂ ಧರಿಸಬಹುದು. ಥೈಸ್ ಲೆಂಥ್, ಬ್ರೆಸ್ಟ್ ಸ್ಲೀವ್ಸ್, ವೀನೆಕ್ ಟ್ಯೂನಿಕ್ ಇತ್ಯಾದಿ ಪ್ಯೂರ್ ಫಾರ್ಮಲ್ ಲುಕ್ಸ್ ಗೆ ಬೆಸ್ಟ್ ಎನ್ನಬಹುದು.
ಮೆಟರ್ನಿಟಿ ಜೀನ್ಸ್
ಪ್ರೆಗ್ನೆನ್ಸಿಯಲ್ಲಿ ಎಂದೂ ಸ್ಕಿನ್ ಟೈಟ್ ಜೀನ್ಸ್ ಧರಿಸಬೇಡಿ. ಆದರೆ ಈಗ ಮೆಟರ್ನಿಟಿ ಜೀನ್ಸ್ ನ್ನು ಅಗತ್ಯ ಧರಿಸಿರಿ. ಸ್ಟ್ರೆಚ್ ಮೆಟೀರಿಯಲ್ ನಿಂದ ತಯಾರಾದ ಇದು ಸಾಕಷ್ಟು ಕಂಫರ್ಟೆಬಲ್ ಎನಿಸುತ್ತದೆ. ಜೀನ್ಸ್ ಜೊತೆ ಪ್ಲೇಯರ್ ಟಾಪ್ ಧರಿಸಿ, ನೀವು ಬೇಬಿ ಬಂಪ್‌ನ್ನು ಕವರ್ ಮಾಡಿಕೊಳ್ಳಬಹುದು.
ಸ್ಕರ್ಟ್
ಕ್ಯಾಶುಯೆಲ್ ಲುಕ್ಸ್ ಗಾಗಿ ಸ್ಕರ್ಟ್‌ಗಿಂತ ಬೆಸ್ಟ್ ಆಯ್ಕೆ ಮತ್ತೊಂದಿಲ್ಲ. ನೀವು ಸ್ಟೈಲ್ ಜೊತೆ ಕಂಫರ್ಟ್ ಕೂಡ ಬಯಸಿದರೆ, ಹೈ ವೇಯ್ಸ್ಟ್ ಸ್ಕರ್ಟ್ ಕೊಳ್ಳಿರಿ. ಶುಕ್ಲಪಕ್ಷದ ಚಂದ್ರನಂತೆ ದಿನೇದಿನೇ ಬೆಳೆಯುತ್ತಿರುವ ನಿಮ್ಮ ಹೊಟ್ಟೆಗೆ ಇದು ಸುಲಭವಾಗಿ ಅಡ್ಜಸ್ಟ್ ಆಗುತ್ತದೆ. ಸೆಮಿ ಕ್ಯಾಶ್ಯುಯೆಲ್ ಲುಕ್ಸ್ ಗಾಗಿ ಸ್ಕರ್ಟ್ ಜೊತೆ ಟಾಪ್ ಧರಿಸಿರಿ. ಇದರ ಮೇಲೆ ಶ್ರಗ್ ಯಾ ಡೆನಿಮ್ ಸ್ಲೀವ್ ಲೆಸ್ ಜ್ಯಾಕೆಟ್ ಧರಿಸಬಹುದು.
ಲೆಗಿಂಗ್
ನಿಮ್ಮ ಮೆಟರ್ನಿಟಿ ವಾರ್ಡ್‌ರೋಬ್‌ನಲ್ಲಿ ಡಿಫರೆಂಟ್ ಶೇಡ್ಸ್ ನ 3-4 ಲೆಗಿಂಗ್ಸ್ ಅಗತ್ಯ ಇಟ್ಟುಕೊಳ್ಳಿ. ಈ ಲೆಗಿಂಗ್ಸ್ ಸಾಕಷ್ಟು ಕಂಫರ್ಟೆಬಲ್ ಎನಿಸುತ್ತದೆ. ಸ್ಟ್ರೆಚೆಬಲ್ ಆದಕಾರಣ, ಇದನ್ನು ಧರಿಸಿ ನೀವು ಹಾಯಾಗಿ ಕುಳಿತೇಳಬಹುದು, ಕಾಲು ಚಾಚಬಹುದು. ಸ್ಮಾರ್ಟ್ ಲುಕ್ಸ್ ಗಾಗಿ ಲೆಗಿಂಗ್ ಜೊತೆ ಲಾಂಗ್ ಟಾಪ್, ಟ್ಯೂನಿಕ್ ಯಾ ಕುರ್ತಿ ಧರಿಸಿರಿ.
ಪ್ರೆಗ್ನೆನ್ಸಿ ಸಂದರ್ಭದಲ್ಲಿ ನಿಮ್ಮ ಸ್ವೆಟ್‌ಪ್ಯಾಂಟ್ಸ್ ಕಲೆಕ್ಷನ್ಸ್ ನಲ್ಲಿ ಜಾಗರ್‌ನ್ನೂ ಸೇರಿಸಿ. ಸ್ವೆಟ್‌ಪ್ಯಾಂಟ್ಸ್ ಗೆ ಹೋಲಿಸಿದಾಗ ಇದರ ಲುಕ್ಸ್ ಹೆಚ್ಚು ಬ್ಯೂಟಿಫುಲ್ ಎನಿಸುತ್ತದೆ. ಇದನ್ನು ಜಾಗಿಂಗ್ ಸಮಯದಲ್ಲಿ ಮಾತ್ರವಲ್ಲದೆ, ಆಫೀಸ್‌ಗೂ ಸಹ ಧರಿಸಬಹುದು. ನೀವು ಸ್ಪೋರ್ಟಿ ಲುಕ್ಸ್ ಬಯಸಿದರೆ, ಜಾಗರ್ ಜೊತೆ ಲೂಸ್ ಟೀಶರ್ಟ್ ಧರಿಸಿರಿ.
ಕಾರ್ಡಿಗನ್
ಫ್ಯಾಶೆನೆಬಲ್ ಲುಕ್ಸ್ ಗಾಗಿ ನಿಮ್ಮ ವಾರ್ಡ್‌ರೋಬ್‌ನಲ್ಲಿ ಕಾರ್ಡಿಗನ್ ಇರಿಸಿಕೊಳ್ಳಲು ಮರೆಯದಿರಿ. ಇದು ಎಂದೂ ಔಟ್ ಆಫ್ ಫ್ಯಾಷನ್ ಎನಿಸದು. ಇದನ್ನು ನೀವು ಟೀಶರ್ಟ್ ಯಾ ಟಾಪ್ ಜೊತೆ ಧರಿಸಬಹುದು. ಸ್ಟೈಲಿಶ್ ಲುಕ್ಸ್ ಗಾಗಿ ಕಾರ್ಡಿಗನ್‌ನ್ನು ಓಪನ್ ಇರಿಸಿ, ಇದನ್ನು ಬೆಲ್ಟ್ ಯಾ ಬಟನ್ಸ್ ನಿಂದ ಕವರ್ ಮಾಡಬೇಡಿ.
– ಜಿ. ದಿವ್ಯಾ