ಗರ್ಭವತಿ ಆದ ಮೇಲೆ ನೀವು ಫ್ಯಾಷನ್‌ ಟ್ರೆಂಡ್ಸ್ ಬಿಟ್ಟುಬಿಡಬೇಕು ಅಂತೇನಲ್ಲ. ಮೆಟರ್ನಿಟಿ ಔಟ್‌ಫಿಟ್ಸ್ ಜೊತೆ ಜೊತೆಯಲ್ಲೇ ಮಾರುಕಟ್ಟೆಯಲ್ಲಿ ಬಗೆಬಗೆಯ ಇನ್ನಿತರ ಉಡುಗೆಗಳು ಲಭ್ಯವಿದ್ದು, ಅವು ನಿಮಗೆ ಸೂಪರ್‌ ಸ್ಟೈಲಿಶ್ ಲುಕ್ಸ್ ನೀಡುತ್ತವೆ. ಇಂಥ ಉಡುಗೆಗಳನ್ನು ಆರಿಸುವಾಗ ಯಾವ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕೆಂದು ಗಮನಿಸಿ :

ಶಿಫ್ಟ್ ಡ್ರೆಸ್

ಅಫಿಶಿಯಲ್ ಮೀಟಿಂಗ್ಸ್ ನಲ್ಲಿ ಶಿಫ್ಟ್ ಡ್ರೆಸ್‌ ಕ್ಲಾಸಿ ಲುಕ್‌ ನೀಡುತ್ತದೆ. ಆದ್ದರಿಂದ ನಿಮ್ಮ ವಾರ್ಡ್‌ರೋಬ್‌ಗೆ ಅಗತ್ಯ ಶಿಫ್ಟ್ ಡ್ರೆಸೆಸ್‌ ತುಂಬಿಸಿ. ಸ್ಟೈಲ್‌ ಜೊತೆ ಕಂಫರ್ಟ್‌ ಕೂಡ ಬೇಕೆನಿಸಿದರೆ,  ಲೈನ್‌ವುಳ್ಳ ಶಿಫ್ಟ್ ಡ್ರೆಸ್‌ ಖರೀದಿಸಿ. ಹಾಟ್‌ ಲುಕ್ಸ್ ಗಾಗಿ ಸ್ಪೆಗೆಟಿ ಸ್ಟ್ರಾಪ್ಸ್ ಯಾ ಸ್ಕೂಪ್‌ ನೆಕ್‌ವುಳ್ಳ ಶಿಫ್ಟ್ ಡ್ರೆಸ್‌ ಖರೀದಿಸಿ.

11-outfits-pregnant

ಜಂಪ್‌ ಸೂಟ್‌

ಪ್ರೆಗ್ನೆನ್ಸಿಯಲ್ಲಿ ಕ್ಯೂಟ್‌ ಲುಕ್ಸ್ ಬೇಕೆನಿಸಿದರೆ, ನೀವು ಜಂಪ್‌ ಸೂಟ್‌ ಟ್ರೈ ಮಾಡಬಹುದು. ಇದರ ಜೊತೆ ಆಗಾಗ ಟೀ ಶರ್ಟ್‌, ಸಾದಾ ಫುಲ್ ಶರ್ಟ್‌ ಇತ್ಯಾದಿ ಟ್ರೈ ಮಾಡಿ. ಹೀಗೆ ಒಂದೇ ಜಂಪ್‌ ಸೂಟ್‌ನಲ್ಲಿ ನೀವು 2 ಬಗೆಯ ಲುಕ್ಸ್ ಪಡೆಯಬಹುದು. ಸ್ಲಿಮ್ ಲುಕ್ಸ್ ಗಾಗಿ ಬ್ಲ್ಯಾಕ್‌ ಜಂಪ್‌ ಸೂಟ್‌ ಆರಿಸಿ.

ಮ್ಯಾಕ್ಸಿ ಡ್ರೆಸ್

ಶಾರ್ಟ್‌ ಟ್ರಿಪ್‌ ಅಥವಾ ಬೀಚ್‌, ಫಾಲ್ಸ್ ಗೆಂದು ಹೊರಟಿದ್ದೀರಾ? ಆಗ ಮ್ಯಾಕ್ಸಿ ಡ್ರೆಸ್‌ ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ ಆಗಿರಲಿ. ಇಂಥ ಪಿಕ್‌ನಿಕ್‌ಗಳಿಗೆ ಈ ಡ್ರೆಸ್‌ಗಿಂತ ಬೆಟರ್‌ ಮತ್ತೊಂದಿಲ್ಲ. ಇದು ಹೆಚ್ಚು ಆರಾಮದಾಯಕ ಕೂಡ. ಸ್ಟೈಲಿಶ್‌ ಗ್ಲಾಮರ್‌ಗಾಗಿ ಮ್ಯಾಕ್ಸಿ ಡ್ರೆಸ್‌ ಮೇಲೆ ಬೆಲ್ಟ್ ಧರಿಸಿ.

ರಾಂಪ್ಡ್ರೆಸ್

ಎಲಿಗೆಂಟ್‌ ಲುಕ್ಸ್ ಗಾಗಿ ರಾಂಪ್‌ ಡ್ರೆಸ್‌ ಕೂಡ ಟ್ರೈ ಮಾಡಬಹುದು. ಇದು ಅಡ್ಜಸ್ಟೆಬಲ್ ಆಗಿರುವುದರಿಂದ, ಇದನ್ನು 9 ತಿಂಗಳು ಮಾತ್ರವಲ್ಲ, ಪ್ರೆಗ್ನೆನ್ಸಿ ನಂತರ ಧರಿಸಬಹುದಾಗಿದೆ. ಅಗತ್ಯ ಎನಿಸಿದರೆ ರಾಂಪ್‌ ಡ್ರೆಸ್‌ ಬದಲು ರಾಂಪ್‌ ಟಾಪ್‌ ಸಹ ಧರಿಸಬಹುದು.

fashion

ಸ್ಟೋಲ್

ನಿಮ್ಮ ಪ್ಲೇನ್‌ ಔಟ್‌ಫಿಟ್‌ಗೆ ಸ್ಮಾರ್ಟ್‌ ಲುಕ್‌ ನೀಡಲು ವಾರ್ಡ್‌ರೋಬ್‌ನಲ್ಲಿ ಕಲರ್‌ಫುಲ್ ಸ್ಟೋಲ್ ನ ಕಲೆಕ್ಷನ್‌ ಸಹ ಇಟ್ಟುಕೊಳ್ಳಿ. ಸ್ಟೋಲ್‌ ಬೇಬಿ ಬಂಪ್‌ನ್ನು ಕವರ್‌ ಮಾಡಲಿಕ್ಕೂ ಬರುತ್ತದೆ. ನೀವು ಟೀಶರ್ಟ್‌ ಧರಿಸುವಿರಾದರೆ, ಸ್ಟೋಲ್ ಬದಲು ಸ್ಕಾರ್ಫ್‌ ಬಳಸಿರಿ.

ಒನ್‌ ಪೀಸ್‌ ಡ್ರೆಸ್‌

ಗರ್ಭವತಿ ಆದ ಮೇಲೆ ಹೇಗಪ್ಪ ಪಾರ್ಟಿಗೆ ಹೋಗುವುದು ಎಂದು ಸಂಕೋಚಪಡಬೇಡಿ. ಈವ್ನಿಂಗ್‌ ಪಾರ್ಟಿಯಂಥ ವಿಶೇಷ ಸಂದರ್ಭಗಳಿಗೆ ಒನ್‌ ಪೀಸ್‌ ಡ್ರೆಸ್‌ ಧರಿಸುವುದರಿಂದ, ನೀವು ಇನ್ನಷ್ಟು ಗ್ಲಾಮರಸ್‌ ಆಗಿ ಕಾಣಿಸುವಿರಿ. ನೀವು ಪಾರ್ಟಿಯ ಆಕರ್ಷಕ ಕೇಂದ್ರಬಿಂದು ಆಗಬಯಸಿದರೆ, ಆಫ್‌ಶೋಲ್ಡರ್‌ ಫ್ಲೋರ್‌ ಸ್ವೀಪಿಂಗ್‌ ಒನ್‌ ಪೀಸ್‌ ಡ್ರೆಸ್‌ ಧರಿಸಿರಿ.

ಟ್ಯೂನಿಕ್‌ ನೀ

ಉದ್ಯೋಗಸ್ಥ ವನಿತೆಯಾಗಿದ್ದರೆ, ನಿಮ್ಮ ವಾರ್ಡ್‌ರೋಬ್‌ನಲ್ಲಿ 3-4 ಬಗೆಯ ಟ್ಯೂನಿಕ್‌ ಡ್ರೆಸೆಸ್‌ ಅಗತ್ಯ ಇರಿಸಿಕೊಳ್ಳಿ. ಆಫೀಸ್‌ನಲ್ಲಿ ಫಾರ್ಮಲ್ ಲುಕ್ಸ್ ಗಾಗಿ ಟ್ಯೂನಿಕ್‌ ಬೆಸ್ಟ್ ಎನಿಸುತ್ತದೆ. ಇದನ್ನು ನೀವು ಲೆಗಿಂಗ್‌  ಜೀನ್ಸ್ ಎರಡರ ಜೊತೆಗೂ ಧರಿಸಬಹುದು. ಥೈಸ್‌ ಲೆಂಥ್‌, ಬ್ರೆಸ್ಟ್ ಸ್ಲೀವ್ಸ್, ವೀನೆಕ್‌ ಟ್ಯೂನಿಕ್‌ ಇತ್ಯಾದಿ ಪ್ಯೂರ್‌ ಫಾರ್ಮಲ್ ಲುಕ್ಸ್ ಗೆ ಬೆಸ್ಟ್ ಎನ್ನಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ