ಉರಿಬಿಸಿಲಿನಲ್ಲಿ ಸಾಮಾನ್ಯವಾಗಿ ಜನ ಹಿಂದೆ ಮುಂದೆ ಯೋಚಿಸದೆ ಹೊರಗೆ ಹೊರಟುಬಿಡುತ್ತಾರೆ. ಇದರ ನಿರ್ಲಕ್ಷ್ಯತೆಯ ಪರಿಣಾಮ ಅವರ ಚರ್ಮ ಅನುಭವಿಸಬೇಕಾಗಿ ಬರುತ್ತದೆ. ಬಿಸಿಲಿನ ಪರಿಣಾಮವನ್ನು ಎಲ್ಲ ವಯಸ್ಸಿನವರ ಮೇಲೂ ಉಂಟಾಗುತ್ತದೆ. ಹೆಸರಾಂತ ಸೌಂದರ್ಯ ತಜ್ಞೆ ಶಹನಾಜ್‌ ಹುಸೇನ್‌ ಈ ಕುರಿತಂತ ಹೀಗೆ ಹೇಳುತ್ತಾರೆ?

``ನಮಗೆ ಬಿಸಿಲಿನಿಂದ ಅನೇಕ ಲಾಭಗಳಿರುವಂತೆ, ಬಹಳಷ್ಟು ದುಷ್ಪರಿಣಾಮಗಳು ಕೂಡ ಉಂಟಾಗಬಹುದು. ಚರ್ಮಕ್ಕೆ ಬಿಸಿಲಿನಿಂದಾಗುವಷ್ಟು ಹಾನಿ ಬೇರಾವುದರಿಂದಲೂ ಆಗುದಿಲ್ಲ.

ಗೌರವರ್ಣದವರಿಗೆ ಬಿಸಿಲಿನಿಂದ ಹೆಚ್ಚು ಹಾನಿಯಾಗುತ್ತದೆ. ಚರ್ಮ ಎಷ್ಟು ಹೆಚ್ಚು ಕಪ್ಪಾಗಿರುತ್ತೋ, ಅದು ಬಿಸಿಲನ್ನು ಅಷ್ಟೇ ಸಮರ್ಥವಾಗಿ ಎದುರಿಸುತ್ತದೆ ಎಂದು ಶಹನಾಜ್‌ ಹೇಳುತ್ತಾರೆ.

ಕಪ್ಪು ಚರ್ಮದವರಿಗೂ ಬಿಸಿಲಿನಿಂದ ಅಷ್ಟಿಷ್ಟು ಪರಿಣಾಮ ಆಗಿಯೇ ಆಗುತ್ತದೆ. ಕಪ್ಪು ಚರ್ಮದಲ್ಲಿ ಮೆಲನಿನ್‌ ಪ್ರಮಾಣ ಅಧಿಕವಾಗಿರುವುದರಿಂದ ಸೂರ್ಯನ ಕಿರಣಗಳಿಂದ ಸಂರಕ್ಷಣೆ ದೊರೆಯುತ್ತದೆ. ಸೂರ್ಯನ ಕಿರಣಗಳು ನಮ್ಮ ಚರ್ಮದ ತೀರ ಒಳಭಾಗದತನಕ ಹೋಗುತ್ತವೆ. ಇದರಿಂದ ಮೇಲ್ಭಾಗದ ಚರ್ಮಕ್ಕೆ ಹಾನಿಯಾಗುವುದಿಲ್ಲ. ಆದರೆ ಚರ್ಮದ ಆಂತರಿಕ ಭಾಗದ ಊತಕಗಳಿಗೆ ಹಾನಿಯಾಗುತ್ತದೆ.

ಯಾವುದೇ ಒಬ್ಬ ವ್ಯಕ್ತಿ ನಿರಂತರವಾಗಿ ಬಿಸಿಲಿನ ಸಂಪರ್ಕಕ್ಕೆ ಬರುತ್ತಿದ್ದರೆ, ಅಂತಹ ವ್ಯಕ್ತಿಯ ಚರ್ಮದಲ್ಲಿ ವೃದ್ಧಾಪ್ಯದ ಲಕ್ಷಣಗಳು ಬಹು ಬೇಗ ಗೋಚರಿಸಲಾರಂಭಿಸುತ್ತವೆ. ಹೆಚ್ಚು ಅವಧಿಯವರಿಗೆ ಬಿಸಿಲಿನಲ್ಲಿ ಇರುವುದರಿಂದ `ಸ್ಕಿನ್‌ ಕ್ಯಾನ್ಸರ್‌' ಕೂಡ ಬರಬಹುದು. ಬಿಸಿಲಿನ ಅತ್ಯಧಿಕ ಹಾನಿಕಾರಕ ಪರಿಣಾಮ ಚರ್ಮದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮ ಶುಷ್ಕಗೊಳ್ಳುತ್ತದೆ, ಒರಟಾಗುತ್ತದೆ, ಸುಕ್ಕುಗಟ್ಟುತ್ತದೆ. ಮುಖದ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ. ಅಷ್ಟೇ ಅಲ್ಲ, ರಕ್ತಧಮನಿಗಳು ಹಿಗ್ಗುತ್ತವೆ. ಆ ಕಾರಣದಿಂದಾಗಿ ಚರ್ಮ ಕೆಂಪಾಗಿ ಗೋಚರಿಸುತ್ತದೆ.

ಸನ್ಬರ್ನ್ಏಕಾಗುತ್ತದೆ?

ಸೂರ್ಯನ ಬೆಳಕಿನಲ್ಲಿರುವ ಅಲ್ಟ್ರಾವೈಲೆಟ್‌ ಕಿರಣಗಳು ಚರ್ಮದ ಸಂಪರ್ಕಕ್ಕೆ ಬಂದಾಗ ನಮಗೆ ತುರಿಕೆ ಅಥವಾ ಉರಿಯ ಅನುಭೂತಿ ಉಂಟಾಗುತ್ತದೆ. ಬಳಿಕ ಅಲ್ಲಿ ಕೆಂಪು ಗುಳ್ಳೆಗಳು, ಸುಕ್ಕುಗಳು ಉಂಟಾಗುತ್ತವೆ. ಅಲ್ಟ್ರಾವೈಲೆಟ್‌ ಕಿರಣಗಳು ಚರ್ಮದ ಮೆಲನಿನ್‌ನ್ನು ನಾಶಗೊಳಿಸುತ್ತವೆ. ಇದರ ಪರಿಣಾಮವೆಂಬಂತೆ ಚರ್ಮ ಗೋಧಿವರ್ಣ ಹಾಗೂ ಕಪ್ಪುವರ್ಣ ತಾಳುತ್ತದೆ.

ಬಿಸಿಲಿನಲ್ಲಿ ನಿರಂತರವಾಗಿ ಕೆಲಸ ಮಾಡುವುದರಿಂದ ಫೋಟೋ ಏಜಿಂಗ್‌ನ ಸಮಸ್ಯೆ ಅಧಿಕಗೊಳ್ಳುತ್ತದೆ. ಈ ಕಾರಣದಿಂದಾಗಿ ಚರ್ಮದಲ್ಲಿ ಅವಧಿಗೂ ಮುನ್ನವೇ ಸುಕ್ಕುಗಳು ಉಂಟಾಗುತ್ತವೆ. ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಜನರು ಉಷ್ಣ ಪ್ರಕೋಪಕ್ಕೆ ತುತ್ತಾಗುತ್ತಾರೆ. ಏಕೆಂದರೆ ಈ ಅವಧಿಯಲ್ಲಿ ಸೂರ್ಯನ ತಾಪ ಅಧಿಕವಾಗಿರುತ್ತದೆ. ಮಕ್ಕಳು, ಪುರುಷರು, ಮಹಿಳೆಯರು ಯಾರೇ ಆಗಲಿ ಇದರ ಸಮಸ್ಯೆಗೆ ತುತ್ತಾಗುತ್ತಾರೆ.

ಚರ್ಮ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಸನ್‌ಬರ್ನ್‌ ಸಮಸ್ಯೆಯ ಜೊತೆಗೆ ಸ್ಕಿನ್‌ ಅಲರ್ಜಿ ಕೂಡ ಸಾಮಾನ್ಯ ಸಂಗತಿ. ಈವರೆಗೆ ಅಲ್ಟ್ರಾವೈಲೆಟ್‌ `ಎ' ಮತ್ತು `ಬಿ' ಕಿರಣಗಳಷ್ಟೇ ಭೂಮಿಯ ತನಕ ತಲುಪುತ್ತಿದ್ದವು. ಆದರೆ ಗ್ಲೋಬಲ್ ವಾರ್ಮಿಂಗ್‌ನ ದುಷ್ಪರಿಣಾಮಗಳಿಂದಾಗಿ `ಸಿ' ಕಿರಣಗಳು ಕೂಡ ತಲುಪುತ್ತಿರುವುದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.

ಇನ್‌ಫೆಕ್ಷನ್‌ನಿಂದಲೂ ಸನ್‌ಬರ್ನ್‌ ಚರ್ಮ ತಜ್ಞರ ಹೇಳಿಕೆಯ ಪ್ರಕಾರ ಡಿಯೋಡರೆಂಟ್‌, ಸೋಪ್‌, ಪರ್ಫ್ಯೂಮ್, ಬೆಳ್ಳುಳ್ಳಿ, ಔಷಧಿಗಳ ಕಾರಣದಿಂದ ಸನ್‌ಬರ್ನ್‌ ಸಮಸ್ಯೆ ಉಂಟಾಗಬಹುದು. ಡಿಯೋಡರೆಂಟ್‌ ಅಥವಾ ಸೋಪ್‌ನಲ್ಲಿ ಕಂಡುಬರುವ ಟಿಬಿಎಸ್‌ ಏಜೆಂಟ್‌ನ ಕಾರಣದಿಂದ ಯಾವಾಗಲಾದರೊಮ್ಮೆ ಬಿಸಿಲಿನ ಸಂಪರ್ಕಕ್ಕೆ ಬಂದಾಗ ಫೋಟೊ ಕಾಂಟ್ಯಾಕ್ಟ್ ಅಲರ್ಜಿ ಉಂಟಾಗುತ್ತದೆ. ಪರ್ಫ್ಯೂಮ್ ನಲ್ಲಿ ಕಂಡುಬರುವ ಸಿಕ್ಸ್ ಮಿಥೈಲ್ ಕ್ಯುಮಾರಿನ್‌ ಸಬ್‌ಸ್ಟೆಂಟ್‌ ಅಲರ್ಜಿಗೆ ಕಾರಣವಾಗುತ್ತದೆ. ಬಿಸಿಲಿನ ಸಂಪರ್ಕಕ್ಕೆ ಬಂದಾಗ ಚರ್ಮದಲ್ಲಿ ತುರಿಕೆ ಅಥವಾ ಉರಿತದ ಅನುಭವವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ