ಬಿಸಿಲು ನಮ್ಮ ದೇಹದ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡೂ ತರಹದ ಪ್ರಭಾವ ಬೀರುತ್ತದೆ. ಸೂರ್ಯನ UV ಕಿರಣಗಳು ತಾಕಿದಾಗ ಸಹಜವಾಗಿಯೇ ಸನ್‌ ಬರ್ನ್‌, ಹೀಟ್‌ ಸ್ಟ್ರೋಕ್‌, ಕಂಗಳ ಅಲರ್ಜಿ, ಏಜಿಂಗ್‌, ಸ್ಕಿನ್‌ ಕ್ಯಾನ್ಸರ್‌ವರೆಗೂ ಸಮಸ್ಯೆಗಳು ಹೆಚ್ಚು ಸಂಭವವಿದೆ.

UV ಕಿರಣಗಳಲ್ಲೂ 3 ಬಗೆಯುಂಟು. UV ಅಂದ್ರೆ ಅಲ್ಟ್ರಾವೈಲೆಟ್ ಏಜಿಂಗ್‌ ರೇಸ್‌, ಇದರ ದೆಸೆಯಿಂದ ಚರ್ಮದಲ್ಲಿ ಸುಕ್ಕು ಹೆಚ್ಚುತ್ತದೆ, ಚರ್ಮ ಜೋತು ಬೀಳುತ್ತದೆ, ಇದರಿಂದಾಗಿ ವಯಸ್ಸಾಗುವುದಕ್ಕೆ ಮೊದಲೇ ವೃದ್ಧಾಪ್ಯ ಇಣುಕಿದಂತೆ ಕಾಣುತ್ತದೆ. UV ಅಂದ್ರೆ ಅಲ್ಟ್ರಾವೈಲೆಟ್‌ ಬರ್ನಿಂಗ್‌ ರೇಸ್‌, ಇದರ ದೆಸೆಯಿಂದ ಸನ್‌ ಬರ್ನಿಂಗ್‌ ಹೆಚ್ಚುತ್ತದೆ. UV ಅಂದ್ರೆ ಅಲ್ಟ್ರಾವೈಲೆಟ್‌ ಕ್ಯಾನ್ಸರ್ ರೇಸ್‌, ಇದರ ದೆಸೆಯಿಂದ ಚರ್ಮಕ್ಕೆ ಕ್ಯಾನ್ಸರ್‌ ಸಹ ಆಗಬಹುದು. ಈ UV ಕಿರಣಗಳು ಹೇಗೆ ಹಾನಿ ಮಾಡುತ್ತದೆ ಎಂದು ತಿಳಿಯೋಣ.

ಸನ್ಬರ್ನ್ಸನ್ಟ್ಯಾನ್ಸಮಸ್ಯೆ

ದೇಹಕ್ಕೆ ಸ್ವಲ್ಪ ಮಟ್ಟಿನ ಸೂರ್ಯ ಕಿರಣದ ಅಗತ್ಯ ಇದ್ದೇ ಇದೆ. ಇದರಿಂದ ದೇಹಕ್ಕೆ ವಿಟಮಿನ್‌ D ಸಿಗುತ್ತದೆ. ಅದರಿಂದಾಗಿ ಮೂಳೆ ಸಶಕ್ತಗೊಳ್ಳುತ್ತದೆ. ಆದರೆ ನಮ್ಮ ಚರ್ಮ ಹೆಚ್ಚು ಸನ್‌ ಎಕ್ಸ್ಪೋಶರ್‌ಗೆ ಒಳಗಾದರೆ, ಚರ್ಮಕ್ಕೆ ಸನ್‌ ಬರ್ನ್‌ ಸನ್‌ ಟ್ಯಾನ್‌ತಪ್ಪಿದ್ದಲ್ಲ. ಇದಕ್ಕೆ ಸನ್‌ ಕೇರ್‌ ಪ್ರೊಟೆಕ್ಷನ್‌ ಫ್ಯಾಕ್ಟರ್‌ ಬೇಕಾಗುತ್ತದೆ. ಇವೆರಡೂ ವಿಭಿನ್ನ ಸ್ಥಿತಿಗಳು ಎಂಬುದನ್ನು ಮರೆಯಬಾರದು. ಸನ್‌ ಬರ್ನ್‌ ಆದಾಗ ಚರ್ಮ ಡಾರ್ಕ್‌ ಆಗುತ್ತದೆ. ಜೊತೆಗೆ ಒರಟೊರಟಾಗುತ್ತದೆ. ಇದರಿಂದ ಸೌಂದರ್ಯ ಹಾಳಾಗುತ್ತದೆ. ಅದೇ ಸನ್‌ ಟ್ಯಾನ್‌ ಸ್ಥಿತಿಯಲ್ಲಿ ದೇಹ ಕೆಂಪಾಗುತ್ತದೆ, ಉರಿ ಹೆಚ್ಚುತ್ತದೆ.

ಸ್ಕಿನ್ಏಜಿಂಗ್ಪಿಗ್ಮೆಂಟೇಶನ್

ಹೆಚ್ಚುತ್ತಿರುವ ವಯಸ್ಸಿನಿಂದಾಗಿ ಚರ್ಮ ಸುಕ್ಕು ಬೀಳುವುದು ಸಹಜ, ಆದರೆ ಬಿಸಿಲು ಈ ಸಮಸ್ಯೆ ಹೆಚ್ಚಿಸುತ್ತದೆ. ಅತಿ ಹೆಚ್ಚಿನ ಬಿಸಿಲಿನ ಕಾರಣ ಅಕಾಲ ವೃದ್ಧಾಪ್ಯ ಕಾಡತೊಡಗುತ್ತದೆ. UV ಕಿರಣಗಳು ಚರ್ಮದ ಕೊಲೋಜೆನ್‌ ಮತ್ತು ಎಲಾಸ್ಟಿಕ್‌ ಟಿಶ್ಯೂಗಳಿಗೆ ಹಾನಿ ಮಾಡುತ್ತದೆ. ಹೀಗಾಗಿ ಚರ್ಮ ಬಲು ನಾಜೂಕಾಗಿ ಬಿಡುತ್ತದೆ. ಕೃತಕವಾಗಿ ರಿಪೇರಿ ಮಾಡಿದರೂ ಚರ್ಮ ಹಿಂದಿನ ಯೌವನದ ಸ್ಥಿತಿಗೆ ಮರಳದು. ನಮ್ಮ ಸಹಜ ಚರ್ಮದ ಬಣ್ಣ ಮೆಲನಿನ್‌ ಎಂಬ ಸ್ಕಿನ್‌ ಪಿಗ್ಮೆಂಟ್‌ ಕಾರಣ ಗೋಚರಿಸುತ್ತದೆ. ಇದು ಚರ್ಮಕ್ಕೆ ಬಣ್ಣ ನೀಡುತ್ತದೆ ಹಾಗೂ ನ್ಯಾಚುರಲ್ ಸನ್‌ಸ್ಕ್ರೀನ್‌ ತರಹ ಕೆಲಸ ನಿರ್ವಹಿಸುತ್ತದೆ. ತೀವ್ರ ಬಿಸಿಲಿನ ಕಾರಣ ಮೆಲನಿನ್‌ ಅಂಶ ಹೆಚ್ಚಾಗುತ್ತದೆ. ಇದನ್ನೇ ಟ್ಯಾನಿಂಗ್‌ ಹೆಚ್ಚಿತು ಎನ್ನುವುದು. ಈ ರೀತಿ ಮೆಲನಿನ್‌ ಅಸಾಮಾನ್ಯ ರೂಪದಲ್ಲಿ ಹೆಚ್ಚಿದರೆ, ಇದರಿಂದ ಪಿಗ್ಮೆಂಟೇಶನ್‌ ಸ್ಥಿತಿ ಮೂಡುತ್ತದೆ. ಈ ಪಿಗ್ಮೆಂಟೇಶನ್‌ ಸ್ಪೇಕ್‌, ಬ್ಲೆಮಿಶೆಸ್‌, ಸನ್‌ ಸ್ಪಾಟ್‌ ಇತ್ಯಾದಿ ರೂಪ ತಳೆಯುತ್ತದೆ. ಇದರಿಂದ ಸ್ಕಿನ್‌ ಟೋನ್‌ ಸಮಸ್ಯೆ ಅಸಾಮಾನ್ಯ ಆಗುತ್ತದೆ.

ಕಂಗಳ ಸೋಂಕು

ಬೇಸಿಗೆಯ ತೀವ್ರತೆ ಹೆಚ್ಚಿದಂತೆ ಅನೇಕ ಸಮಸ್ಯೆಗಳೂ ಹೆಚ್ಚುತ್ತವೆ. ಸೂರ್ಯನ UV ಕಿರಣಗಳ ಜೊತೆ ಧೂಳು ಮಣ್ಣು ಸಹ ಸೇರುವುದರಿಂದ ಕಂಗಳಲ್ಲಿ ನವೆ, ಉರಿ, ಕೆಂಪಾಗುವಿಕೆ, ಸೋಂಕಿನ ಸಂಕಟ ಹೆಚ್ಚುತ್ತದೆ. ಈ ಕಿರಣಗಳು ಕಂಗಳ ಕಾಂತಿ ಪ್ರಭಾವಿತಗೊಳಿಸುವುದರೊಂದಿಗೆ ರೆಟೀನಾವನ್ನೂ ಹಾಳು ಮಾಡಬಲ್ಲದು. ಇದರಿಂದ ಮುಕ್ತಿ ಹೊಂದಲು ಆಗಾಗ ಕಂಗಳಿಗೆ ತಣ್ಣೀರು ಚಿಮುಕಿಸಿ. ಕಂಗಳು ಉರಿಯ ತೊಡಗಿದಾಗ ಅದನ್ನು ಉಜ್ಜುವ ಬದಲು, ಶುಭ್ರ ಬಟ್ಟೆಯಿಂದ `ಉಫ್‌' ಎಂದು ಊದಿ ಅಲ್ಲಿರಿಸಿಕೊಂಡು ಕ್ಲೀನ್‌ ಮಾಡಿ. ಕಂಗಳನ್ನು ತಂಪುಗೊಳಿಸುವ ಐ ಡ್ರಾಪ್ಸ್ ಬಳಸಿರಿ. ಮನೆಯಿಂದ ಹೊರ ಹೊರಡುವಾಗ ಸನ್ ಗ್ಲಾಸಸ್‌ ಧರಿಸಲು ಮರೆಯದಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ