ವೆಸ್ಟರ್ನ್ ಥೀಂ ಪಾರ್ಟಿಗೆ ಹೋಗಬೇಕೆಂದು ನೀವು ಸೀಸನ್ ಪಾರ್ಟಿಗೆ ತಕ್ಕಂತೆ ಪರ್ಫೆಕ್ಟ್ ಡ್ರೆಸ್ ಕೊಂಡಿರಿ, ಸರಿ. ಆದರೆ ನೀವು ಅದಕ್ಕೆ ಸಪೋರ್ಟಿವ್ ಮೇಕಪ್ ಹೇರ್ ಸ್ಟೈಲ್ ಕಡೆ ಗಮನ ಕೊಟ್ಟಿದ್ದೀರಾ ಇಲ್ವಾ ನಿಮ್ಮ ಡ್ರೆಸ್‌ಎಷ್ಟೇ ಬ್ಯೂಟಿಫುಲ್ ಆಗಿರಲಿ, ಎಲ್ಲರ ಮೊದಲ ನೋಟ ಮುಖದ ಮೇಲೆ ನಂತರ ಹೇರ್‌ಸ್ಟೈಲ್‌ನತ್ತ ತಿರುಗುತ್ತದೆ. ಹೀಗಾಗಿ ನೀವು ಪಾರ್ಟಿಯಲ್ಲಿ ಹಿಟ್ ಆಗಬಯಸಿದರೆ, ಬ್ಯೂಟಿ ಎಕ್ಸ್ ಪರ್ಟ್ಸ್ ನೀಡಿರುವ ಈ ಸಲಹೆಗಳನ್ನು ಅಗತ್ಯ ಅನುಸರಿಸಿ.
ವೆಸ್ಟರ್ನ್ ಮೇಕಪ್
ನಿಮ್ಮ ಮುಖ ಚರ್ಮ ಎಷ್ಟೇ ಮೊಡವೆ ಹೊಂದಿರಲಿ, ಅನ್ ಈವೆನ್ ಟೋನ್ ಆಗಿರಲಿ, ಅದರ ಮೇಲೂ ಸಹ ಪರ್ಫೆಕ್ಟ್ ಆಗಿ ಮೇಕಪ್ ಮಾಡಿದರೆ, ಸಾಕಷ್ಟು ಉತ್ತಮ ಗುಡ್ ಲುಕ್ಸ್ ಎದ್ದು ಕಾಣುತ್ತದೆ. ಇದಕ್ಕಾಗಿ ಎಲ್ಲಕ್ಕೂ ಮುಂಚೆ ಮುಖಕ್ಕೆ ಪ್ರೈಮರ್‌ಹಚ್ಚಬೇಕು. ಇದುವೇ ಮೇಕಪ್ ಬೇಸ್. ಇದನ್ನು ಹಚ್ಚಿದ 4-5 ನಿಮಿಷಗಳ ನಂತರ ವೆಟ್ ಟಿಶ್ಯೂನಿಂದ ಚರ್ಮ ಸ್ವಚ್ಛಗೊಳಿಸಿ. ನಂತರ ಕನ್ಸೀಲಿಂಗ್ ಮಾಡಿ. ಏಕೆಂದರೆ ಇದರ ನೆರವಿನಿಂದ ಮುಖದಲ್ಲಿನ ಕಲೆ, ಗುರುತು, ಅನ್ ಈವೆನ್ ಟೋನ್, ಮೊಡವೆಗಳಿಗೆ ಸಿಂಗಲ್ ಟೋನ್ ಆಗಿಸಲು ನೆರವು ಸಿಗುತ್ತವೆ.
ಕನ್ಸೀಲರ್‌ನ ಬಳಕೆ ನಂತರ ಯೆಲ್ಲೋ ಪಿಗ್ಮೆಂಟ್ ಬಳಸಿರಿ. ಪಿಂಪಲ್ಸ್ ಇರುವಲ್ಲಿ ಗ್ರೀನ್ ಕಲರ್ ಕನ್ಸೀಲರ್ ಅಪ್ಲೈ ಮಾಡಿ. ಸ್ಕಿನ್‌ಪ್ರಾಬ್ಲಮ್ಯಾಟಿಕ್ ಅನಿಸಿದರೆ ಡರ್ಮಾಬೇಸ್ ಬಳಸಿರಿ. ಇದಾದ ಮೇಲೆ ಫಿಕ್ಸರ್ ಹಚ್ಚಿರಿ, ಆಗ ಮೇಕಪ್ ಚೆನ್ನಾಗಿ ಫಿಕ್ಸ್ ಆಗುತ್ತದೆ. ನಂತರ ಜಾ ಲೈನ್, ಮೂಗು, ಚೀಕ್ಸ್ ಬಳಿ ಕಂಟ್ರೋಲಿಂಗ್‌ಗೆಂದು ಮಿಗ್ರೊ ಕಲರ್ ಬಳಸಿರಿ. ಇದಾದ ಮೇಲೆ ಪೀಚ್ ಕಲರ್ ಬ್ಲಶರ್ ಬಳಸಬೇಕು. ಯಾವಾಗ ಕಂಟ್ರೋಲಿಂಗ್ ಮಾಡಿದರೂ ಡಾರ್ಕ್ ಕಲರ್‌ನ ಬ್ಲಶರ್ ಮೆರೂನ್ ಕಲರ್‌ನಲ್ಲಿ ಬದಲಾಗುತ್ತದೆ, ಹೀಗಾಗಿ ಕಂಟ್ರೋಲಿಂಗ್ ಜೊತೆ ಪೀಚ್‌ಯಾ ಪಿಂಕ್ ಕಲರ್ ಮಾತ್ರ ಬಳಸಬೇಕು.
ಐ ಬ್ರೋಸ್ ಮೇಕಪ್
ಇವನ್ನು ನ್ಯಾಚುರಲ್ ವಿಧಾನದಿಂದಲೇ ಡಿಫೈನ್ ಮಾಡಬೇಕು. ನಂತರ ಅವುಗಳ ಕೆಳಗೆ ಹೈಲೈಟಿಂಗ್ ಮಾಡಿ. ಬ್ರೌನ್ ಕಲರ್‌ನಿಂದ ಕ್ರೀಸ್ ಲೈನ್ ಎಳೆಯಿರಿ. ಐ ಬಾಲ್ ಏರಿಯಾ ಯಾವ ಡ್ರೆಸ್‌ಗೆ ಹೊಂದುವಂಥ ಕಲರ್ ಮಾತ್ರವೇ ಬಳಸಬೇಕೆಂದು ನೆನಪಿಡಿ. ನಂತರ 12 ನಿಮಿಷ ಬಿಟ್ಟು ಜೆಲ್ ಲೈನರ್ ಬಳಸುವುದರ ಜೊತೆ ಜೊತೆಯಲ್ಲೇ ಕೃತಕ ಐ ಲ್ಯಾಶೆಸ್ ಬಳಸಿರಿ.
ಈ ಐಲ್ಯಾಶ್ ಬಳಸುವ ಮೊದಲು ಗ್ಲೂ ಹಚ್ಚಿ ಅದನ್ನು 40 ಸೆಕೆಂಡ್ಸ್ ಹಾಗೇ ಬಿಡಿ. ಹೀಗೆ ಮಾಡುವುದರಿಂದ ಲ್ಯಾಶೆಸ್ ಬಹಳ ಬೇಗ ಫಿಕ್ಸ್ ಆಗುತ್ತವೆ. ಹೀಗೆ ಲ್ಯಾಶೆಸ್ ಅಳವಡಿಸಿದ ಬಳಿಕ, ನ್ಯಾಚುರಲ್ ಆರ್ಟಿಫಿಶಿಯಲ್ ಲ್ಯಾಶೆಸ್‌ನ್ನು ಮಸ್ಕರಾ ಬ್ರಶ್‌ನಿಂದ ಫಿಕ್ಸ್ ಮಾಡಿ. ನಿಮ್ಮ ನ್ಯಾಚುರಲ್ ಲ್ಯಾಶೆಸ್ ಮೊದಲೇ ದಟ್ಟವಾಗಿದ್ದರೆ, ಆಗ ಅದನ್ನು ಮಸ್ಕರಾದಿಂದಲೇ ಗ್ರೂಮ್ ಮಾಡಬೇಕೆಂದು ಮರೆಯದಿರಿ.
ಮುಖ ಹೈಲೈಟ್ ಮಾಡಿ
ಮುಖದ ಯಾವ ಭಾಗವನ್ನು ಲಿಫ್ಟ್ ಮಾಡಬೇಕಿದೆಯೋ, ಅದಕ್ಕಾಗಿ ಅಗತ್ಯ ಹೈಲೈಟರ್ ಬಳಸಿರಿ. ಭಾರತೀಯ ಚರ್ಮದ ದೃಷ್ಟಿಯಿಂದ, ಲೈಟ್ ಗ್ಲೋ ಕಲರ್ ಎಲ್ಲಕ್ಕೂ ಉತ್ತಮ. ಇದನ್ನು ಸಾಮಾನ್ಯವಾಗಿ ಚೀಕ್ ಬೋನ್ಸ್, ನೋಸ್ ಟಿಪ್, ಹಣೆ, ಗಲ್ಲದ ಏರಿಯಾದಲ್ಲೂ ಬಳಸಿರಿ.