ಭಾರತೀಯ ನವ ವಧುಗಳ ಬಗ್ಗೆ ಸ್ವೀಡನ್ನಿನ ಸುಪ್ರಸಿದ್ಧ ಮೇಕಪ್ ಆರ್ಟಿಸ್ಟ್ ರೋಸನ್ ರೇಮ್ ಹೇಳುತ್ತಾರೆ, “ಭಾರತೀಯ ನವ ವಧುವಿನಂಥ ಸುರ ಸುಂದರಿ ಜಗತ್ತಿನಲ್ಲೇ ಮತ್ತಾರೂ ಇಲ್ಲ!”
ಈಕೆ ಮೇಕಪ್ ಎಕ್ಸ್ ಪರ್ಟ್ ಮಾತ್ರವಲ್ಲದೆ ಓರಿ ಫ್ಲೇಮ್ ನ ಗ್ಲೋಬಲ್ ಬ್ಯೂಟಿ ಡೈರೆಕ್ಟರ್ ಸಹ ಆಗಿದ್ದರು. ಈಕೆ ಹಲವಾರು ಪ್ರಖ್ಯಾತ ಅಂತಾರಾಷ್ಟ್ರೀಯ ಮಾಡೆಲ್ಸ್ ಜೊತೆ ಕೆಲಸ ಮಾಡಿದ್ದಾರೆ. ಈಕೆ 2011ರಲ್ಲಿ ಭಾರತಕ್ಕೆ ಬಂದಿದ್ದಾಗ, ಭಾರತೀಯ ನವ ವಧುವಿಗೆ ಮೇಕಪ್ ಮಾಡಿ ಹೊಸ ವ್ಯಾಖ್ಯಾನವನ್ನೇ ನೀಡಿದರು. ಒಂದು ಬ್ಯೂಟಿ ಕಾಂಟೆಸ್ಟ್ ನಲ್ಲಿ ಈಕೆ ಮಾಡೆಲ್ ಕ್ಷಿಪ್ರಾ ಮಲಿಕ್ ಳಿಗೆ ಲೈವೇ ಮೇಕ್ ಓವರ್ ಮಾಡಿ, ನವ ವಧುವಿನ ಹೊಸ ರೂಪ ಪ್ರಸ್ತುತಪಡಿಸಿದರು.
ಈಕೆಯ ಪ್ರಕಾರ ಒಂದು ಉತ್ಕೃಷ್ಟ ವಿಧಾನದಲ್ಲಿ ನವ ವಧುವಿಗೆ ಶೃಂಗಾರ ಮಾಡಿ, ಗ್ಲಿಟರ್‌ಮೆಟಾಲಿಕ್, ಹಸಿರು ಬೂದು ಬಣ್ಣಗಳ ಸಂಗಮಗೊಳಿಸಿ, ವಧು ಎಂಥ ಮನೋಹರ ಸೌಂದರ್ಯ ಪಡೆಯಬಲ್ಲಳೆಂದು ತೋರಿಸಿಕೊಟ್ಟರು. ಜೊತೆಗೆ ಪರಂಪರಾಗತ ಕೆಂಪು, ಹೊಳೆ ಹೊಳೆಯುವ ಬಣ್ಣಗಳು ವಿಶ್ವದೆಲ್ಲೆಡೆ ಮೆಚ್ಚುಗೆ ಗಳಿಸಿರುವುದನ್ನು ತೋರಿಸಿಕೊಟ್ಟರು.
ಈಕೆ ಕಣ್ಣುಗಳ ಹುಬ್ಬುಗಳಿಗೆ ವಿಶೇಷ ಆಕಾರ ನೀಡಿ, ಕಂಗಳನ್ನು ಸಮ್ಮೋಹಕಗೊಳಿಸುವ ವಿಧಾನ ತೋರಿಸಿದರು. ಇವರ ಸಲಹೆಗಳು ಈ ರೀತಿ ಇವೆ :
ಫೌಂಡೇಶನ್ ನ್ನು ಸದಾ ಚೀಕ್ ಬೋನ್ಸ್ ನಿಂದ ಶುರು ಮಾಡಿ. ನಂತರ ಅದನ್ನು ಇಡೀ ಮುಖಕ್ಕೆ ಹರಡಿರಿ.
ಬ್ಲಶರ್ ನ ಬ್ರಶ್ಶನ್ನು ಚೀಕ್ ಬೋನ್ಸ್ ಗೆ ಹಚ್ಚಿದ ನಂತರ, ಕಂಗಳ ಕೊನೆಯಿಂದ ಶುರು ಮಾಡಿ ಗಲ್ಲದವರೆಗೂ ತನ್ನಿರಿ.
ಬ್ರಶ್ಶನ್ನು ಕಂಗಳ ಕೊನೆಯಿಂದ ಗಲ್ಲದವರೆಗೂ ನಂಬರ್ 3 ಆಕಾರದಲ್ಲಿ ತಂದು ಫಿನಿಶ್ ಮಾಡಿ. ಇದರಿಂದ ಮುಖದ ಸೂಕ್ತ ಆಕಾರ ಸಿಗುತ್ತದೆ.
ನವ ವಧುವಿಗೆ ಮೇಕಪ್ ಮಾಡುವಾಗ ಕಂಗಳ ಮೇಕಪ್ ಕಡೆ ವಿಶೇಷ ಗಮನ ಹರಿಸುವ ಅಗತ್ಯವಿದೆ.
ಎಲ್ಲಕ್ಕೂ ಮೊದಲು ಲೈಟ್ ಐ ಶ್ಯಾಡೋವನ್ನು ಕಂಗಳ ಎರಡೂ ಬದಿ ಹಚ್ಚಿರಿ. ಇದರಿಂದ ಕಂಗಳು ಸ್ಮೋಕಿ ಎನಿಸುತ್ತವೆ.
ಕಂಗಳ ಅರ್ಧದಷ್ಟು ಭಾಗಕ್ಕೆ ಲೈಟ್ ಮತ್ತು ಉಳಿದ ಭಾಗಕ್ಕೆ ಗೋಲ್ಡನ್ ಐ ಶ್ಯಾಡೋ ಹಚ್ಚಿರಿ. ಮೇಕಪ್ ಹೆಚ್ಚು ಹೊತ್ತು ಉಳಿಯಬೇಕಾದರೆ, ಅದನ್ನು ಚೆನ್ನಾಗಿ ಹರಡಿಬಿಡಿ.
ಗೋಲ್ಡನ್ ಐ ಶ್ಯಾಡೋವನ್ನು ಕಿವಿಗಳ ಬದಿಯಿಂದ ಕಂಗಳ ಕೆಳಭಾಗಕ್ಕೆ ಅರ್ಧದಷ್ಟು ಹಚ್ಚಿರಿ. ಇದಾದ ಮೇಲೆ ಲೈಟ್ ಐ ಶ್ಯಾಡೋವನ್ನು , ಹುಬ್ಬುಗಳ ಕೆಳಗಿನಿಂದ ಶುರು ಮಾಡಿ, ಪೂರ್ತಿ ಕೆಳಬಂದು, ಗೋಲ್ಡನ್ ಐ ಶ್ಯಾಡೋ ಜೊತೆ ಮರ್ಜ್ ಮಾಡಿ.
ವಧುವಿನ ಡ್ರೆಸ್ ಗೆ ಹೊಂದುವಂಥ ಐ ಶ್ಯಾಡೋ ಮಾತ್ರ ಬಳಸಿರಿ.
ಕಾಜಲ್ ಪೆನ್ಸಿಲ್ ನಿಂದ ಕಂಗಳ ಒಳಗೆ, ಮೇಲೆ, ಕೆಳಗೆ ಎಲ್ಲಾ ಕಡೆ ಕಾಜಲ್ ಎಳೆಯಿರಿ. ಇದಾದ ಮೇಲೆ ಐ ಲೈನರ್ ತೀಡಬೇಕು. ಮಸ್ಕರಾ ಹಚ್ಚುವಾಗ, ಇದನ್ನು 3 ಕೋನಗಳಿಂದಲೂ ಹಚ್ಚಬೇಕು ಎಂಬುದರ ಕಡೆ ಗಮನವಿರಲಿ. ಕಣ್ಣು ರೆಪ್ಪೆ ಅಲುಗಾಡಿದರೂ, ಮಸ್ಕರಾ ಹರಡಿಕೊಳ್ಳುವುದಿಲ್ಲ ಎಂಬುದೇ ಇಲ್ಲಿ ಲಾಭ.
ಕಣ್ಣು ರೆಪ್ಪೆಗಳನ್ನು 3 ಭಾಗವಾಗಿ ವಿಂಗಡಿಸಿ. ಮಸ್ಕರಾ ಪೆನ್ಸಿಲ್ ನ್ನು ಈ ರೆಪ್ಪೆಗಳ 3 ಭಾಗಗಳ 3 ಕೋನಗಳಲ್ಲೂ ತೀಡುತ್ತಾ ಹಚ್ಚಿರಿ. ಎಲ್ಲಕ್ಕೂ ಮೊದಲು ಮೇಲ್ಭಾಗ, ನಂತರ ಕಂಗಳ ಅಂಚಿನ ಕಡೆಗೆ ಹಾಗೂ ಕೊನೆಯಲ್ಲಿ ಉಳಿದ ಭಾಗಕ್ಕೆ ಹಚ್ಚುತ್ತಾ ತೀಡಬೇಕು. ನಂತರ ಇದೇ ಪ್ರಕ್ರಿಯೆಯನ್ನು ರೆಪ್ಪೆಯ ಕೆಳಭಾಗಕ್ಕೂ ಅಳವಡಿಸಿ.
ತುಟಿಗಳ ಮೇಕಪ್ ಗಾಗಿ, ಲಿಪ್ ಸ್ಟಿಕ್ ನ್ನು ಸದಾ ಕೆಳ ತುಟಿಗೆ ಹಚ್ಚುವುದರಿಂದಲೇ ಶುರು ಮಾಡಬೇಕು.
ತುಟಿಗಳ ಅಂಚಿನಿಂದ ಲಿಪ್ ಸ್ಟಿಕ್ ತೀಡುತ್ತಾ, ನಂತರ ಮೇಲ್ಭಾಗದ ತುಟಿಗಳತ್ತ ಹೋಗಬೇಕು.
ತುಟಿಗಳ ಲಿಪ್ ಸ್ಟಿಕ್ ಮೇಲೆ ದೀರ್ಘಬಾಳಿಕೆ ಬರಬೇಕೇ? ಇದಕ್ಕಾಗಿ ಲಿಪ್ ಸ್ಟಿಕ್ ಹಚ್ಚಿದ ನಂತರ, ಅದರ ಮೇಲೆ ಪೌಡರ್ ಶೈನ್‌ಸಿಂಪಡಿಸಿ. ಲಿಪ್ ಸ್ಟಿಕ್ ಹಚ್ಚು ಮೊದಲು ತುಟಿಗಳಿಗೆ ಲಿಪ್ ಬಾವ್ ತೀಡಿರಿ. ಇದರಿಂದ ಲಿಪ್ ಸ್ಟಿಕ್ ಚೆನ್ನಾಗಿ ಹರಡುತ್ತದೆ. ಕೊನೆಯಲ್ಲಿ ವಧುವಿಗೆ ಸುಂದರ ಬೊಟ್ಟು ಇಟ್ಟು, ಸುತ್ತಲು ಚುಕ್ಕಿಗಳಿಂದ ಅಲಂಕರಿಸಿ.
ಇವರ ಪ್ರಕಾರ ಭಾರತೀಯ ವಧುವಿಗೆ ಅತಿ ಹೊಳೆಯುವ ಬಣ್ಣಗಳ ಅಗತ್ಯವಿಲ್ಲ. ಯಾವುದು ಅತಿ ಗಾಡಿ ಎನಿಸಿ ಮುಖಕ್ಕೆ ರಾಚುತ್ತದೋ ಅದು ಬೇಡ, ಸೌಮ್ಯ ಮೇಕಪ್ ನಿಂದ ಅವಳ ಸೌಂದರ್ಯ ಎದ್ದು ತೋರುವಂತೆ ಮಾಡಿ ಎನ್ನುತ್ತಾರೆ.
– ಪ್ರತಿನಿಧಿ