ಋತು ಬದಲಾಗಿದೆ. ಇದೀಗ ಬೇಸಿಗೆಯ ಎಂಟ್ರಿ ಜೋರಾಗಿದೆ. ಬೇಸಿಗೆಯಲ್ಲಿ ತಮ್ಮನ್ನು ತಾವು ಕೂಲ್ ಆಗಿಟ್ಟುಕೊಳ್ಳಲು ಆಧುನಿಕ ತರುಣಿಯರು ಶಾರ್ಟ್ಸ್, ಸ್ಕರ್ಟ್, ಕ್ಯಾಪ್ ಇತ್ಯಾದಿಗಳಿಗೆ ಮೊರೆಹೋಗುತ್ತಾರೆ. ಇತ್ತೀಚೆಗೆ ಉದ್ಯೋಗಸ್ಥ ವನಿತೆಯರಂತೂ ವೆಸ್ಟರ್ನ್ ಲುಕ್ಸ್ ಗೇ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಆಫೀಸಿಗೂ ಸಹ ಶಾರ್ಟ್ ಡ್ರೆಸೆಸ್ ಧರಿಸಿ ಬರಲು ಬಯಸುತ್ತಾರೆ.
ಆದರೆ ನೀವು ಇಂಥ ಡ್ರೆಸೆಸ್ ಕ್ಯಾರಿ ಮಾಡುತ್ತೀರಾದರೆ, ನಿಮ್ಮ ಕೈಕಾಲುಗಳಲ್ಲಿ ಕಾಣಿಸುವ ಅನಗತ್ಯ ಕೂದಲು ಹಿಂಸೆ ಎನಿಸುತ್ತದೆ, ಪಾರ್ಟಿ ಮೂಡ್‌ನಲ್ಲಿ ಕಿರಿಕಿರಿ ತರುತ್ತದೆ. ನಿಮ್ಮ ಸ್ಟೈಲ್ ಫ್ಯಾಷನ್ ಕೆಡುತ್ತದೆ. ಇಂಥ ಸ್ಥಿತಿಯಿಂದ ಪಾರಾಗಲು ಉತ್ತಮ ಕಂಪನಿಯ ಸಾಫ್ಟ್ ಹೇರ್ ರಿಮೂವ್ ಕ್ರೀಂ ಬಳಸಿಕೊಳ್ಳಿ.
ಸುದೀರ್ಘ ಕಾಲದ ಮೃದುತನಕ್ಕಾಗಿ
ಬೇಸಿಗೆಯ ದಿನಗಳಾದ್ದರಿಂದ ಹೊರಗೆ ಕಾಲಿಟ್ಟೊಡನೆ, ನೀವು ಟ್ಯಾನಿಂಗ್‌ಗೆ ಬಲಿಯಾಗುತ್ತೀರಿ. ಆಗ ನಿಮ್ಮ ಚರ್ಮ ಬಿಲ್‌ಕುಲ್ ಡ್ರೈ ಆಗುತ್ತದೆ. ಆಗ ಇಂಥ ಉತ್ತಮ ಹೇರ್ ರಿಮೂವರ್ ಕ್ರೀಂ ಬಳಸುವುದರಿಂದ ನಿಮಗೆ ಅನಗತ್ಯ ಕೂದಲಿನಿಂದ ಮುಕ್ತಿ ದೊರಕುವುದು ಮಾತ್ರವಲ್ಲದೆ, ಚರ್ಮ ಎಷ್ಟೋ ಕೋಮಲವಾಗುತ್ತದೆ.
ಹೇರ್ ರಿಮೂವರ್ ಕ್ರೀಂ 3 ನಿಮಿಷಗಳಲ್ಲಿ ಕೆಲಸ ಮಾಡಬಲ್ಲಂಥ ಈ ಹೇರ್ ರಿಮೂವರ್ ಕ್ರೀಂ, ಎಲ್ಲಾ ವಯಸ್ಸಿನ ಹೆಂಗಸರಿಗೂ ಉತ್ತಮ ಬ್ಯೂಟಿ ಟೂಲ್ ಆಗಿದೆ. ಏಕೆಂದರೆ ಈ ಧಾವಂತದ ಓಡು ಯುಗದಲ್ಲಿ ಎಲ್ಲರಿಗೂ ಸದಾ ಸಮಾಯಾಭಾವ ತಪ್ಪಿದ್ದಲ್ಲ. ಪಾರ್ಲರ್‌ಗೆ ಹೋಗಲು ಖಂಡಿತಾ ಸಮಯ ಸಿಗುವುದಿಲ್ಲ. ನೀವು ಪಾರ್ಟಿಗೆ ಹೋಗಬೇಕು ಅಥವಾ ಆಫೀಸಿನಲ್ಲಿ ಏನಾದರೂ ವಿಶೇಷವಿದ್ದರೆ ಅಥವಾ ಡೇಟ್‌ಗೆ ಹೊರಡಬೇಕಿದ್ದರೆ, ಈ ಹೇರ್ ರಿಮೂವರ್ ಕ್ರೀಂ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಹೇರ್‌ರಿಮೂವರ್‌ಗಾಗಿ ನಿಮಗೆ ವ್ಯಾಕ್ಸ್ ಯಾ ಶೇವ್ ಇಷ್ಟವಿಲ್ಲದಿದ್ದರೆ, ಇದು ಉತ್ತಮ ವಿಕಲ್ಪವಾಗಿದೆ.
ಹೇರ್ ರಿಮೂವರ್ ಹರ್ಬಲ್ ವಿಧಾನ
ಸುಂದರವಾಗಿ ಕಂಡು ಬರಬೇಕೆಂದು ಯಾರು ತಾನೇ ಬಯಸುವುದಿಲ್ಲ? ಆದರೆ ಅನಗತ್ಯ ಕೂದಲು ಈ ಸೌಂದರ್ಯಕ್ಕೆ ಕಪ್ಪು ಮಸಿ ಬಳಿಯುತ್ತದೆ. ಬನ್ನಿ, ಅನಗತ್ಯ ಕೂದಲ ನಿವಾರಣೆಗಾಗಿ ಮನೆಮದ್ದು ಬಳಸುವುದನ್ನು ಅರಿಯೋಣ.
ಪರಂಗಿಕಾಯಿ : ಅನಗತ್ಯ ಕೂದಲಿನಿಂದ ಮುಕ್ತಿ ಪಡೆಯಲು ಪರಂಗಿಕಾಯಿ ಬಲು ಸಹಕಾರಿ. ಇದರಲ್ಲಿ ಪಪೈನ್ ಎಂಬ ಕಿಣ್ವ (ಎನ್‌ಝೈಂ) ಅಡಗಿದ್ದು, ಈ ಪಪೈನ್‌ನಲ್ಲಿ ಕೂದಲನ್ನು ಸಂಪೂರ್ಣ ನಾಶ ಮಾಡುವ ಗುಣವಿದೆ. ಇದು ಕೂದಲು ಹೆಚ್ಚದಂತೆ ತಡೆಯುತ್ತದೆ. ಹೇರ್ ರಿಮೂವರ್‌ಗಾಗಿ ಇದರ ಸಿಪ್ಪೆ ಹೆರೆದು, ಹೋಳಿನ ಪೇಸ್ಟ್ ಮಾಡಿ ಬೇಕಾದ ಕಡೆ ಹಚ್ಚಿ, ಅರ್ಧ ಗಂಟೆ ಬಿಟ್ಟು ತೊಳೆದರೆ ಆಯ್ತು.
ಮೊಟ್ಟೆ : ಆರೋಗ್ಯಕ್ಕೆ ಮೊಟ್ಟೆ ಸೇವನೆ ಎಷ್ಟು ಉತ್ಕೃಷ್ಟವೋ ಇದು ಸೌಂದರ್ಯ ಹೆಚ್ಚಿಸುವಲ್ಲಿಯೂ ಪೂರಕ. ಮೊಟ್ಟೆಯ ಬಿಳಿ ಭಾಗ ಬೇರ್ಪಡಿಸಿ, ಅದನ್ನು ಅನಗತ್ಯ ಕೂದಲಿರುವ ಕಡೆ ಹಚ್ಚಿ 20 ನಿಮಿಷ ಬಿಟ್ಟು ಬಿಸಿ ನೀರಲ್ಲಿ ತೊಳೆದರೆ, ನಿಮಗೆ ಬೇಕಾದ ಪರಿಣಾಮ ಸಿಗುತ್ತದೆ.
ವಿನಿಗರ್ -ಶುಗರ್ : ಮನೆಯಲ್ಲೇ ವ್ಯಾಕ್ಸಿಂಗ್ ಮಾಡಬೇಕೇ? ಹಾಗಿದ್ದರೆ ವಿನಿಗರ್‌ಗೆ ಸಕ್ಕರೆ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಅನಗತ್ಯ ಕೂದಲಿರುವ ಕಡೆ ಹಚ್ಚಿ, 15-20 ನಿಮಿಷ ಬಿಟ್ಟು ಬಿಸಿ ನೀರಲ್ಲಿ ತೊಳೆಯಿರಿ. ಇದೇ ತರಹ ನಿಂಬೆರಸಕ್ಕೆ ಜೇನು, ಸಕ್ಕರೆ ಬೆರೆಸಿ ಸಹ ಪ್ರಯತ್ನಿಸಬಹುದು.