ಕಂಗಳ ಸುತ್ತಲೂ ಕಪ್ಪು ಗೆರೆ ಅಥವಾ ಉಂಗುರ ಕಾಣಿಸತೊಡಗಿದರೆ, ನಿಮ್ಮ ಸೌಂದರ್ಯ ಕುಂದತೊಡಗುತ್ತದೆ. ಆಗ ನೀವು ಸುಸ್ತಾದವರಂತೆ, ಆಗ ತಾನೇ ಮಲಗಿ ಎದ್ದವರಂತೆ ಡಲ್ ಆಗಿ ಕಾಣಿಸುತ್ತೀರಿ. ಧಾರಾಳ ನಿದ್ದೆ ಮಾಡದಿದ್ದರೆ, ಹಾರ್ಮೋನ್‌ಗಳ ಬದಲಾವಣೆ, ಟೆನ್ಶನ್‌, ಜಂಕ್‌ ಫುಡ್‌ನ ಅತಿ ಸೇವನೆ ಇತ್ಯಾದಿಗಳಿಂದಾಗಿ ಕಂಗಳ ಸುತ್ತಲೂ ಡಾರ್ಕ್‌ ಸರ್ಕಲ್ಸ್ ಮೂಡುತ್ತವೆ.

ಆರಂಭದಲ್ಲೇ ಗಮನಿಸಿಕೊಂಡು, ಇದನ್ನು ದೂರ ಮಾಡಲು ಯತ್ನಿಸದಿದ್ದರೆ, ಇದು ಶಾಶ್ವತ ಉಳಿದುಬಿಡುತ್ತದೆ. ಬನ್ನಿ, ಇದರಿಂದ ಮುಕ್ತಿ ಪಡೆಯುವುದು ಹೇಗೆಂದು ನೋಡೋಣ :

ಸದಾ ಹೈಡ್ರೇಟೆಡ್ಆಗಿರಿ : ದೇಹದಿಂದ ವಿಷಯುಕ್ತ ಪದಾರ್ಥ ಹೊರಹಾಕುವುದು ಅತಿ ಅನಿವಾರ್ಯ. ನೀವು ಇಡೀ ದಿನ ನಿಯಮಿತವಾಗಿ ನೀರು ಕುಡಿಯುತ್ತಿದ್ದರೆ ಮಾತ್ರ ಹೀಗೆ ಮಾಡಲು ಸಾಧ್ಯ. ಆದ್ದರಿಂದ ಪ್ರತಿದಿನ ಕನಿಷ್ಠ 8-10 ಗ್ಲಾಸ್‌ ನೀರು ಕುಡಿಯಬೇಕು.

ಬ್ಯಾಲೆನ್ಸ್ಡ್ ಡಯೆಟ್ಸೇವಿಸಿ : ಜಂಕ್‌ ಫುಡ್‌ ಸೇವಿಸಲೇಬೇಡಿ. ಇದರಲ್ಲಿ ಚರ್ಮದ ಆರೋಗ್ಯ ಹಾಳಾಗುವ ಅನೇಕ ಅಂಶಗಳಿವೆ. ಚರ್ಮ ಊದಲೂಬಹುದು. ಈ ಕಾರಣ ಡಾರ್ಕ್‌ ಸರ್ಕಲ್ಸ್ ಹೆಚ್ಚುತ್ತವೆ. ಆದ್ದರಿಂದ ಸೀಸನ್‌ ಫ್ರೂಟ್ಸ್ ಸೇವಿಸಿ, ಧಾರಾಳ ತರಕಾರಿ ಬಳಸಿರಿ. ಸಲಾಡ್‌, ಮೊಳಕೆ ಕಟ್ಟಿದ ಹಸಿ ಕಾಳು ಇತ್ಯಾದಿ ಜೊತೆ ನಿಂಬೆ ರಸ, ಪುದೀನಾ, ಕಿವೀ ಫ್ರೂಟ್‌ ಕೂಡ ಸೇವಿಸಿ. ಈ ಹುಳಿ ಪದಾರ್ಥಗಳಲ್ಲಿ ಧಾರಾಳ ವಿಟಮಿನ್‌ `ಸಿ' ಅಡಗಿದೆ, ಇದರಿಂದಾಗಿ ಡಾರ್ಕ್‌ ಸರ್ಕಲ್ಸ್ ತಾನಾಗಿ ದೂರಾಗುತ್ತದೆ.

ನಿದ್ದೆ ಕಡಿಮೆ ಆಗಬಾರದು : ಕನಿಷ್ಠ 6-7 ತಾಸು ಆಳವಾದ ನಿದ್ದೆ ಅತ್ಯಗತ್ಯ.

ಆದಷ್ಟೂ ಟೆನ್ಶನ್ಕಡಿಮೆ ಇರಲಿ : ಆಧುನಿಕ ಜೀವನ ಸದಾ ಟೆನ್ಶನ್‌ನಿಂದ ಕೂಡಿರುತ್ತದೆ. ವ್ಯಾಯಾಮದ ಮಾಧ್ಯಮದಿಂದ ನೀವು ಟೆನ್ಶನ್‌ ಕಡಿಮೆ ಮಾಡಬಹುದು.  ನಿಮ್ಮ ನರಗಳಿಗೆ ಆರಾಮ ನೀಡಿ. ಎಂಡೋರ್ಫಿನ್‌ ಸಂಚಾರ ಕಡಿಮೆ ಇರಲಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮದಲ್ಲಿ ಹೊಳಪು ಮೂಡುತ್ತದೆ ಹಾಗೂ ಡಾರ್ಕ್‌ ಸರ್ಕಲ್ಸ್ ತಂತಾನೇ ಮರೆಯಾಗುತ್ತದೆ.

ಚರ್ಮದ ಆರೈಕೆ : ನೀವು ಡಾರ್ಕ್‌ ಸರ್ಕಲ್ಸ್ ನಿಂದ ಮುಕ್ತಿ ಬಯಸಿದರೆ, ನಿಮ್ಮ ಚರ್ಮದ ಪ್ರಕಾರಕ್ಕೆ ತಕ್ಕಂತೆ ಅದರ ಆರೈಕೆ ಮಾಡಿ. ಆಗ ಮಾತ್ರವೇ ನಿಮ್ಮ ಚರ್ಮ ಸ್ವಸ್ಥ, ಮೃದು ಆಗಿರುತ್ತದೆ. ಕಂಗಳ ಮೇಕಪ್‌ ತೆಗೆದ ನಂತರ ಅದರ ಸುತ್ತಲೂ ಬಾದಾಮಿ ಎಣ್ಣೆ ಅಥವಾ ವಿಟಮಿನ್‌ 'ಈ'ಯುಕ್ತ ಕ್ರೀಂ, ಸೀರಮ್ ನಿಂದ ಮಸಾಜ್‌ ಮಾಡಿ. ಬಿಸಿಲಿಗೆ ಹೊರಡುವ ಮೊದಲು ಸನ್‌ಸ್ಕ್ರೀನ್ ಹಚ್ಚಲು ಮರೆಯದಿರಿ.

ಮದ್ಯ ಬೇಡವೇ ಬೇಡ : ಧೂಮಪಾನ, ಮದ್ಯಪಾನ ಹೆಣ್ಣಿನ ಸೌಂದರ್ಯದ ಪರಮ ಶತ್ರುಗಳು. ಇವು ಚರ್ಮದ ಅಂದ ಕೆಡಿಸುತ್ತವೆ. ಆದ್ದರಿಂದ ಇದರ ಸಹವಾಸ ಬೇಡ.

ಲೈಟ್ಕ್ರೀಂ ಬಳಸಿರಿ : ಅಲರ್ಜಿ ಕಾರಣದಿಂದಲೂ ಡಾರ್ಕ್‌ ಸರ್ಕಲ್ಸ್ ಹೆಚ್ಚುತ್ತವೆ. ಆದ್ದರಿಂದ ಅಲರ್ಜಿ ಇದೆಯೇ ಪರೀಕ್ಷಿಸಿಕೊಳ್ಳಿ. ಆ್ಯಂಟಿ ಹಿಸ್ಟಮೈನ್‌ ಸೇವಿಸಿ. ಇದು ಡಾರ್ಕ್‌ ಸರ್ಕಲ್ಸ್ ಇಲ್ಲದಂತೆ ಮಾಡಬಲ್ಲದು. ಕೆಟಿನಾಲ್ ‌ಕ್ರೀಮ್ ನ್ನು ನಿಯಮಿತವಾಗಿ ಬಳಸಿರಿ. ಅದರಿಂದಲೂ ಈ ಸಮಸ್ಯೆ ನಿವಾರಣೆ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ