ನಾವು ಯೌವನದಿಂದ ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆ, ಹಲವಾರು ಬಗೆಯ ಚಿಂತೆ, ತೊಂದರೆಗಳು ನಮ್ಮನ್ನು ಆಕ್ರಮಿಸುತ್ತವೆ. ದೈಹಿಕ ತೊಂದರೆಗಳ ವಿಷಯ ಗಮನಿಸಿದಾಗ, ಮುಖದಲ್ಲಿ ಎದ್ದು ಕಾಣುವ ಡಬಲ್ ಚಿನ್‌ (ದುಪ್ಪಟ್ಟು ಗಲ್ಲ) ಬಲು ದೊಡ್ಡ ತಲೆ ನೋವಾಗಿದೆ. ಇದು ನೋಡಲು ವಿಕಾರ ಎನಿಸುವುದಲ್ಲದೆ, ಹೆಣ್ಣಿನ ಸೌಂದರ್ಯಕ್ಕೆ ಕುಂದು ತಂದೊಡ್ಡುತ್ತದೆ. ಇನ್ನಿತರ ದೈಹಿಕ ಸಮಸ್ಯೆಗಳಿಗ ಹೋಲಿಸಿದಾಗ, ಇದು ಸಾಧಾರಣ ಚಿಕ್ಕ ಸಮಸ್ಯೆಯೇ ಇರಬಹುದು, ಆದರೆ ಹೆಲ್ತ್ ಕಾನ್ಶಿಯಸ್‌ ಆದ ಜನ ಇದನ್ನು ನಿರ್ಲಕ್ಷಿಸದೆ ವಿಶೇಷ ಗಮನ ನೀಡುತ್ತಾರೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಫ್ಯಾಟ್‌ ಹೆಚ್ಚುವುದರಿಂದ ಮುಖದಲ್ಲಿ ಡಬಲ್ ಚಿನ್‌ ಮೂಡುತ್ತದೆ, ಇದು ಯಾವ ವಯಸ್ಸಿನವರಿಗಾದರೂ ಆಗಬಹುದು. ಈ ಡಬಲ್ ಚಿನ್‌ ಮುಖ ಮತ್ತು ದೇಹದ ಸೌಂದರ್ಯವನ್ನು ಎಷ್ಟೋ ಪಟ್ಟು ಕಡಿಮೆ ಮಾಡಿಬಿಡುತ್ತದೆ.

ಈ ಕುರಿತಾಗಿ ಫಿಜಿಯೋಥೆರಪಿಸ್ಟ್ ರ ಅಭಿಪ್ರಾಯವೆಂದರೆ, ಡಬಲ್ ಚಿನ್‌ ಸಮಸ್ಯೆ ಒಂದು ಜೆನಿಟಿಕ್‌ ಫ್ಯಾಕ್ಟರ್‌ ಆಗಿದೆ. ಅಕಸ್ಮಾತ್‌ ತಾಯಿಗೆ ಈ ಸಮಸ್ಯೆ ಇದ್ದರೆ, ಅದು ಆಕೆಯ ಮಗಳಿಗೂ ಬರಬಹುದು, ಶೇ.90 ಕೇಸ್‌ ಗಳಲ್ಲಿ ಹೀಗಾಗುತ್ತದೆ. ಜೊತೆಗೆ ಅದು ವ್ಯಕ್ತಿಯ ದೇಹದಲ್ಲಿ ಕೊಬ್ಬು ಎಲ್ಲಿ ಶೇಖರಣೆಗೊಳ್ಳುತ್ತಿದೆ ಎಂಬುದನ್ನೂ ಆಧರಿಸಿದೆ. ಅಕಸ್ಮಾತ್‌ ಅದು ಗಲ್ಲದ ಬಳಿಯೇ ಹೆಚ್ಚಾಗಿದ್ದರೆ, ಡಬಲ್ ಚಿನ್‌ ಆಗುವುದು ಸಹಜ, ಸ್ವಾಭಾವಿಕ. ಆದ್ದರಿಂದ ಇದನ್ನು ಆದಷ್ಟೂ ನಿಯಂತ್ರಿಸಬೇಕು ಅಥವಾ ಡಬಲ್ ಚಿನ್‌ ಆಗುವುದಕ್ಕೆ ಅವಕಾಶವನ್ನೇ ಕೊಡಬಾರದು. ಅಷ್ಟು ಮಾತ್ರವಲ್ಲ, ಇನ್ನೂ ಹಲವು ಕಾರಣಗಳಿವೆ. ಡಬಲ್ ಚಿನ್‌ ಆಗಲಿಕ್ಕೆ ಮತ್ತೊಂದು ಮುಖ್ಯ ಕಾರಣ. ದೇಹದಲ್ಲಿ ವಿಟಮಿನ್ಸ್ ಕೊರತೆ. ರುಚಿಗೆ ಮಾರುಹೋಗುವ ಜನ, ಪೋಷಕಾಂಶಗಳ ಗೊಡವೆಗೇ ಹೋಗುವುದಿಲ್ಲ, ಆ ಕಾರಣ ಸ್ವಲ್ಪ ಕಾಲದ ನಂತರ ಇಂಥ ಸಮಸ್ಯೆಗಳು ಎದುರಾಗುತ್ತವೆ.

ಡಬಲ್ ಚಿನ್‌ ಆಗಲು ಮತ್ತೊಂದು ಮುಖ್ಯ ಕಾರಣ ದೇಹ ಸಕ್ರಿಯವಾಗಿ ಚಟುವಟಿಕೆಯಿಂದಿರದೆ, ಸೋಮಾರಿತನ ರೂಢಿಸಿಕೊಳ್ಳುವುದು. ಹೀಗಾಗಿ ಧಾರಾಳ ವಿಟಮಿನ್‌ ಸೇವನೆಯೊಂದಿಗೆ, ಬೆಳಗಿನ ವ್ಯಾಯಾಮ, ಆಟೋಟಗಳಿಗೂ ಅಷ್ಟೇ ಮಹತ್ವ ಕೊಡಬೇಕು. ಇದರಿಂದ ಪಾರಾಗಲು ವೈದ್ಯರು ಹಲವಾರು ಉಪಾಯಗಳನ್ನು ಸೂಚಿಸುತ್ತಾರೆ. ಅಂದರೆ ಕೆಲವು ವಿಶಿಷ್ಟ ಬಗೆಯ ವಿಟಮಿನ್‌ ಸೇವನೆ, ಡಬಲ್ ಚಿನ್‌ ಎಕ್ಸರ್‌ ಸೈಜ್‌ ಹಾಗೂ ನೈಸರ್ಗಿಕ ತೈಲಗಳಿಂದ ಮಸಾಜ್‌ ಚಿಕಿತ್ಸೆ ಇವೆಲ್ಲ ಕೂಡಿ ನಿಮ್ಮನ್ನು ಡಬಲ್ ಚಿನ್‌ ಸಮಸ್ಯೆಯಿಂದ ಪಾರು ಮಾಡಬಲ್ಲವು. ಹೀಗಾಗಿ ಈ ಮೂರು ಸಲಹೆಗಳನ್ನೂ ಅಗತ್ಯವಾಗಿ ನೀವು ಅನುಸರಿಸಿದರೆ, ಖಂಡಿತಾ ಡಬಲ್ ಚಿನ್‌ ನಿಮ್ಮನ್ನು ಕಾಡದು.

ಡಯೆಟ್ನಲ್ಲಿ ವಿಟಮಿನ್

ಡಬಲ್ ಚಿನ್‌ ನಿಂದ ಮುಕ್ತರಾಗಲು ವಿಟಮಿನ್‌ `ಈ' ಸೇವನೆ ಹೆಚ್ಚಿಸಿ. ಇದು ನಮ್ಮ ದಿನನಿತ್ಯದ ಆಹಾರದಲ್ಲೇ ಹೆಚ್ಚು ಲಭ್ಯವಿವೆ. ಅಂದರೆ ಹಾಲಿನ ಉತ್ಪನ್ನಗಳು, ಬ್ರೌನ್‌ ರೈಸ್‌, ಬೀನ್ಸ್, ಸೋಯಾ, ಸೇಬು, ಹಸಿ ಕಡಲೆಕಾಯಿಬೀಜ, ಇತ್ಯಾದಿ..... ಇಷ್ಟು  ಮಾತ್ರವಲ್ಲದೆ, ನಮ್ಮ ನಿಯಮಿತ ಆಹಾರ ಪದಾರ್ಥಗಳ ಸೇವನೆಯಿಂದಲೂ ಇದರ ಇನ್‌ ಟೇಕ್‌ ಹೆಚ್ಚಿಸಬಹುದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ