ಬೇಸಿಗೆಯ ದಿನಗಳು ಆರಂಭವಾಗುತ್ತಿದ್ದಂತೆ, ಮಹಿಳೆಯರು ಹಾಗೂ ಯುವತಿಯರಿಗೆ ತಮ್ಮ ಚರ್ಮದ ಕುರಿತಾಗಿ ನಾನಾ ಬಗೆಯ ಚಿಂತೆಗಳು ಉಂಟಾಗುತ್ತವೆ. ಅದನ್ನು ಹೇಗೆ ಜೋಪಾನವಾಗಿ ಕಾಪಾಡಿಕೊಳ್ಳುವುದೆಂಬುದೇ ದೊಡ್ಡ ಸಮಸ್ಯೆ ಆಗಿರುತ್ತದೆ.

ಅಸಲಿಗೆ ಇಂಥ ಸಮಸ್ಯೆಗಳಿಂದ ಪಾರಾಗಲು ಸದಾ ಬ್ಯೂಟಿಪಾರ್ಲರ್‌ ಗಳಿಗೇ ಹೋಗಬೇಕು ಎಂದೇನಿಲ್ಲ. ಇದರ ನಿವಾರಣೆಗೆ ಅನೇಕ ಬಗೆಯ ಮನೆ ಮದ್ದುಗಳಿವೆ. ಇದರ ನೆರವಿನಿಂದ ಮನೆಯಲ್ಲಿ ಕುಳಿತೇ ನೀವು ಸುಲಭವಾಗಿ ಚರ್ಮದ ಸೌಂದರ್ಯ ಸಂರಕ್ಷಣೆ ಮಾಡಿಕೊಳ್ಳಬಹುದು.

ಚರ್ಮದ ನವೆಯ ಸಮಸ್ಯೆ

ಆಗಾಗ ಚರ್ಮಕ್ಕೆ ಹೆಚ್ಚಿನ ನವೆ ಉಂಟಾಗಿ ಅದನ್ನು ರಪ ರಪ ಎಂದು ಕೆರೆಯಬೇಕೆನಿಸುತ್ತದೆ. ಇದರಿಂದ ಚರ್ಮದಲ್ಲಿ ಶುಷ್ಕತೆ ಹೆಚ್ಚುತ್ತದೆ. ಇಂಥ ಚರ್ಮಕ್ಕೆ ಮಾಯಿಶ್ಚರೈಸರ್‌ ಅಂದರೆ ಆರ್ದ್ರತೆಯ ಕೊರೆತೆ ಇರುತ್ತದೆ. ಇದಕ್ಕಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ 1 ಚಮಚ ಹಾಲಿನ ಕೆನೆಗೆ ಕೆಲವು ಹನಿ ಗ್ಲಿಸರಿನ್‌, ಆಲಿಲ್ ‌ಆಯಿಲ್ ‌ಹಾಗೂ ಗುಲಾಬಿ ಜಲ ಬೆರೆಸಿಕೊಂಡು ಮುಖ, ಕುತ್ತಿಗೆ ಹಾಗೂ ಕೈಗಳಿಗೆ ಚೆನ್ನಾಗಿ ಸವರಿಕೊಳ್ಳಿ. ಇದನ್ನು ರಾತ್ರಿಯಿಡೀ ಹಾಗೇ ಬಿಡಿ. ಮಾರನೇ ಬೆಳಗ್ಗೆ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಚರ್ಮದಲ್ಲಿನ ಬಿಗಿತ ಹೋಗಿ, ಅದು ಹೆಚ್ಚು ಮೃದುವಾಗುತ್ತದೆ.

ಒಡೆದ ತುಟಿಗಳು

ಒಡೆದ ತುಟಿಗಳನ್ನು ಸರಿಪಡಿಸಲು, ಒಂದಿಷ್ಟು ಗುಲಾಬಿ ದಳಗಳನ್ನು ನುಣ್ಣಗೆ ಅರೆದುಕೊಂಡು, ಇದಕ್ಕೆ ಬೆಣ್ಣೆ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನಾ ತುಟಿಗಳಿಗೆ ಸವರಿಕೊಳ್ಳಿ. ಬೆಳಗ್ಗೆ ಇದನ್ನು ತಣ್ಣೀರಿನಿಂದ ತೊಳೆಯಿರಿ. ಮಧ್ಯೆ ಮಧ್ಯೆ ತುಟಿಗಳನ್ನು ಕಚ್ಚಬಾರದೆಂಬುದನ್ನು ನೆನಪಿಡಿ. ಈ ರೋಸ್‌ ಬಟರ್‌ ಮಿಕ್ಸ್ ನಿಂದ, ತುಟಿಗಳು ಗುಲಾಬಿಯಂತೆ ಮೃದುವಾಗಿ ಹಿತಕರ ಎನಿಸುತ್ತವೆ.

ಮೊಣಕೈಗಳ ಕಪ್ಪಾಗುವಿಕೆ

ನಿಮ್ಮ ಮೊಣಕೈಗಳು ಕಪ್ಪಾಗಿವೆಯೇ? ಇದರಿಂದ ಮುಕ್ತಿ ಪಡೆಯಲು 2 ಚಿಟಕಿ ಅರಿಶಿನ, 1 ಸಣ್ಣ ಚಮಚ ಮಿಲ್ಕ್ ಪೌಡರ್‌, 2 ಸಣ್ಣ ಚಮಚ ಜೇನುತುಪ್ಪ ಹಾಗೂ ಅರ್ಧ ಚಮಚ ನಿಂಬೆಯ ರಸ ಬೆರೆಸಿಕೊಂಡು ಮೊಣಕೈಗೆ ಹಚ್ಚಿಕೊಳ್ಳಿ. ಅದು ಒಣಗಿದ ನಂತರ ಚೆನ್ನಾಗಿ ತೊಳೆದುಕೊಳ್ಳಿ. ಕ್ರಮೇಣ ಮೊಣಕೈಗಳ ಕಪ್ಪು ಕಲೆ ತಾನಾಗಿ ಸರಿಹೋಗುತ್ತದೆ.

ಚರ್ಮದ ಸಮರ್ಪಕ ಸಂರಕ್ಷಣೆ

ಬೇಸಿಗೆಯಲ್ಲಿ ಚರ್ಮದ ಸೌಂದರ್ಯ ಹೆಚ್ಚಿಸಲು ಹಾಗೂ ಅದನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು, ಮನೆಯಲ್ಲೇ ಫೇಸ್‌ ಪ್ಯಾಕ್ ತಯಾರಿ ಮಾಡಿಕೊಳ್ಳಬಹುದು. ಇದಕ್ಕಾಗಿ ಮಾಗಿದ ಬಾಳೆಹಣ್ಣು ಅಥವಾ ಕಲ್ಲಂಗಡಿ ಹಣ್ಣಿನ ಹೋಳನ್ನು ಚೆನ್ನಾಗಿ ಮಸೆದಿಡಿ. ಇದಕ್ಕೆ 1 ಚಮಚ ಮಿಲ್ಕ್ ಪೌಡರ್‌, 2 ಚಮಚ ಜೇನುತುಪ್ಪ ಬೆರೆಸಿಕೊಂಡು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯುವುದರಿಂದ, ಮುಖದ ಚರ್ಮಕ್ಕೆ ಹೆಚ್ಚಿನ ಕಾಂತಿ ಸಿಗುತ್ತದೆ.

- ಪಿ. ಭಾನುಮತಿ

ನಟಿ ಇವಾಲಿನ್ ಸೌಂದರ್ಯ ರಹಸ್ಯ

`ಏ ಜಾನಿ ಹೈ ದಿವಾನಿ' ಖ್ಯಾತಿಯ ನಟಿ ಇವಾಲಿನ್‌ ಳ ಸೌಂದರ್ಯದ ರಹಸ್ಯವೇನು? ಬನ್ನಿ ಆಕೆಯ ಮಾತುಗಳಲ್ಲೇ ತ್ವಚೆಯ ಆರೋಗ್ಯ, ಸೌಂದರ್ಯ ಹಾಗೂ ಮೃದುತ್ವ ಹೆಚ್ಚಿಸುವ ಟಿಪ್ಸ್ ಬಗ್ಗೆ ತಿಳಿಯೋಣ :

ಚರ್ಮದ ಸಂರಕ್ಷಣೆಯನ್ನು ನಿಮ್ಮ ದೈನಂದಿನ ಕೆಲಸವಾಗಿಸಿ. ಕ್ಲೆನ್ಸಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ ಪ್ರತಿನಿತ್ಯ ದಿನಕ್ಕೆ 2 ಸಲವಾದರೂ ಮಾಡಿಕೊಳ್ಳಲೇಬೇಕು. ಇದರಿಂದ ತ್ವಚೆ ಹೆಚ್ಚಿನ ಆರೋಗ್ಯ ಗಳಿಸುತ್ತದೆ. ಇದನ್ನು ಆರಂಭಿಸಲು ಯಾವುದೇ ನೈಸರ್ಗಿಕ ಕ್ಲೆನ್ಸರ್‌ ನಿಂದ ಚರ್ಮವನ್ನು ಮೊದಲು ಚೆನ್ನಾಗಿ ಕ್ಲೀನ್‌ ಮಾಡಿ. ತ್ವಚೆಯನ್ನು ಹೈಡ್ರೇಟೆಡ್‌ ಆಗಿರಿಸಲು ಟೋನರ್‌ ನಿಂದ ಟೋನ್‌ ಮಾಡಿ. ಕೊನೆಯಲ್ಲಿ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ