ಹೆಚ್ಚುತ್ತಿರುವ ವಯಸ್ಸಿನಲ್ಲೂ ತಮ್ಮ ಸೌಂದರ್ಯವನ್ನು ಉಳಿಸಿಕೊಳ್ಳಬೇಕೆಂದು ಬಯಸುವ ಹೆಂಗಸರಿಗೆ ಅದು ಹೇಗೆ ಎಂಬುದು ದೊಡ್ಡ ಸವಾಲೇ ಸರಿ. ಮುಖ್ಯವಾಗಿ 30+ನವರು ತಮ್ಮ ಚರ್ಮದಲ್ಲಿ ಉಂಟಾದ ಜೋತಾಡುವಿಕೆ, ಸುಕ್ಕುಗಳಿಂದ ಬಹಳ ಟೆನ್ಶನ್‌ಗೆ ಒಳಗಾಗುತ್ತಾರೆ. ಅಸಲಿಗೆ, 30+ ನಂತರ ಚರ್ಮದಲ್ಲಿ ನೈಸರ್ಗಿಕ ಮಾಯಿಶ್ಚರೈಸರ್‌ ತಾನಾಗಿ ಕಡಿಮೆ ಆಗುವ ಕಾರಣ ಚರ್ಮದಲ್ಲಿ ಹಿಂದಿನ ಆ ಬಿಗುವು ಇರುವುದಿಲ್ಲ. ಯೌವನ ಜಾರುತ್ತಿರುವ ಅನುಭವ ಗೊತ್ತಾಗುತ್ತದೆ. ಹೀಗಾಗಿ 30+ನವರು ಈ ಚಾಕಲೇಟ್‌ಫೇಶಿಯಲ್‌ಗೆ ಮೊರೆ ಹೋದರೆ ಅವರ ಈ ಸಮಸ್ಯೆಗಳು ದೂರವಾಗುತ್ತವೆ.

ಈ ಕುರಿತಾಗಿ ಸೌಂದರ್ಯ ತಜ್ಞೆಯರು ಹೀಗೆ ವಿವರಿಸುತ್ತಾರೆ, ಚಾಕಲೇಟ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಆ್ಯಂಟಿ ಏಜಿಂಗ್ ಪ್ರಾಪರ್ಟೀಸ್‌ ಹೇರಳವಾಗಿವೆ. ಇದು ಲಿಂಫ್ಯಾಟಿಕ್‌ ಡ್ರೇನೇಜ್‌ ಜೊತೆ ಚರ್ಮದ ಮೇಲಿನ ಡೆಡ್‌ ಸೆಲ್ಸ್ ಪದರವನ್ನು ತೆಗೆಯುತ್ತದೆ ಹಾಗೂ ಚರ್ಮಕ್ಕೆ ಹೆಚ್ಚಿನ ಬಿಗುವು ನೀಡಿ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.

ಹೆಚ್ಚಲಿದೆ ರಿಲ್ಯಾಕ್ಸ್ ಫೀಲ್

ವೈಜ್ಞಾನಿಕ ಆಧಾರದ ಪ್ರಕಾರ ಚಾಕಲೇಟ್‌ನ ಸುಗಂಧ ಹಾಗೂ ಸ್ವಾದ ಎರಡೂ ಕೂಡಿ ಮಾನವ ದೇಹದಲ್ಲಿ ಹ್ಯಾಪಿ ಹಾರ್ಮೋನ್ಸ್ ರಿಲೀಸ್‌ ಮಾಡುತ್ತವೆ. ಇದು ನಮ್ಮ ಮಾನಸಿಕ ಒತ್ತಡವನ್ನು ಎಷ್ಟೋ ಕಡಿಮೆ ಮಾಡುತ್ತದೆ ಹಾಗೂ ಖುಷಿ ಹೆಚ್ಚಿಸುತ್ತದೆ. ಈ ಫೇಶಿಯಲ್ ರಕ್ತದಲ್ಲಿನ ಸೆರೋಟೆನಿನ್‌ ಅಂಶವನ್ನು ಹೆಚ್ಚಿಸಿ, ಒತ್ತಡ ನಿವಾರಿಸುತ್ತದೆ.

ರೈಟ್‌ ಸ್ಕ್ರಬಿಂಗ್‌

ರೈಟ್‌ ಎಫೆಕ್ಟ್ ಇದರ ಆರಂಭ ಹಾಲಿನಿಂದ ಮುಖದ ಮೇಲಿನ ಕ್ಲೆನ್ಸಿಂಗ್‌ನಿಂದ ಶುರು. ಇದಾದ ಮೇಲೆ ಮುಖವನ್ನು ಓಟ್‌ಮೀಲ್‌, ಡಿಸ್ಪ್ರಿನ್‌ ಟ್ಯಾಬ್ಲೆಟ್‌, ಶುಗರ್‌ಫ್ರೀ ಚಾಕಲೇಟ್‌ನ ಕರಗಿದ ಭಾಗ, 1 ಚಮಚ ಇನ್‌ಸ್ಟೆಂಟ್‌ ಕಾಫಿಪುಡಿ ಹಾಗೂ ಜೇನುತುಪ್ಪ ಬೆರೆಸಿದ ಸ್ಕ್ರಬ್‌ನಿಂದ ನೀಟಾಗಿ ತೀಡಬೇಕು.

ಸ್ಕ್ರಬಿಂಗ್‌ನ ಸಮರ್ಪಕ ವಿಧಾನ ಗೊತ್ತೇ?

ಸ್ಕ್ರಬ್‌ ಮಾಡುವಾಗ ಎಂದೂ ಮುಖವನ್ನು ಉಜ್ಜಲು ಹೋಗಬೇಡಿ. ಬದಲಿಗೆ ಸ್ವಲ್ಪ ಹೊತ್ತು ಮುಖದ ಮೇಲೆ ಸ್ಕ್ರಬ್‌ ಉಳಿಸಿಕೊಂಡು ನಂತರ ನಿಧಾನವಾಗಿ ಮಸಾಜ್‌ ತರಹ ಮಾಡಬೇಕು. ಇದಕ್ಕಾಗಿ ನಿಧಾನವಾಗಿ ಕೈ ಬೆರಳನ್ನು ಸರ್ಕ್ಯುಲರ್ ಮೋಶನ್‌ನಲ್ಲಿ ತಿರುಗಿಸುತ್ತಾ ಸ್ಕ್ರಬಿಂಗ್‌ ಮಾಡಬೇಕು. ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ ಹಾಗೂ ಚರ್ಮದ ಡೆಡ್‌ ಸೆಲ್ಸ್ ತೊಲಗುತ್ತವೆ.

ಕೋಲ್ಡ್ ಕಂಪ್ರೆಶರ್‌ ಅಗತ್ಯ

ಸ್ಕ್ರಬಿಂಗ್‌ ನಂತರ ಚರ್ಮಕ್ಕೆ ಹಾಟ್‌ ಕಂಪ್ರೆಶರ್‌ ನೀಡಲು ಸ್ಟೀಂ ಬದಲಾಗಿ ನೀರಿಗೆ ಬೋರಿಕ್‌ ಆಮ್ಲ ಬೆರೆಸಿ, ಅದರಲ್ಲಿ ತೆಳು ಕಾಟನ್‌ ಕರವಸ್ತ್ರ ಅದ್ದಿಕೊಂಡು ಮುಖದ ಮೇಲೆ ಸ್ವಲ್ಪ ಹೊತ್ತು ಹರಡಬೇಕು. ಆಗ ಹಾಟ್‌ ಕಂಪ್ರೆಶರ್‌ನಿಂದಾಗಿ ಮುಖದಲ್ಲಿ ಪೋರ್ಸ್‌ ಓಪನ್‌ ಆಗುತ್ತವೆ. ಅವುಗಳ ಆಕಾರ ದೊಡ್ಡದಾಗುತ್ತದೆ. ದೊಡ್ಡ ಪೋರ್ಸ್‌ ಖಂಡಿತಾ ಕೆಟ್ಟದಾಗಿ ಕಾಣಿಸುತ್ತದೆ. ಹೀಗಾಗಿ ಹಾಟ್‌ ಕಂಪ್ರೆಶರ್‌ ಆದ ತಕ್ಷಣ, ಕೋಲ್ಡ್ ಕಂಪ್ರೆಶರ್‌ ಅಗತ್ಯ ಕೊಡಬೇಕು. ಇದಕ್ಕಾಗಿ ತಣ್ಣೀರು, ಐಸ್‌ ಬಳಸಿಕೊಳ್ಳಿ.

ಮಸಾಜ್‌ನ ಮಹತ್ವ

ಚರ್ಮದ ಒಳಗೆ ನುಸುಳಲು ಚಾಕಲೇಟ್‌ನ ಕರಗಿದ ಭಾಗವನ್ನು ಆ್ಯಲೋವೆರಾದ ಜೆಲ್‌ನಲ್ಲಿ ಬೆರೆಸಿಕೊಂಡು ಚರ್ಮದ ಮೇಲೆ ಹಚ್ಚಬೇಕು ಹಾಗೂ ಎಳನೀರಿನಲ್ಲಿ ಅಲ್ಟ್ರಾಸಾನಿಕ್‌ ಮಸಾಜ್‌ ನೀಡಬಹುದು. ನಿಮ್ಮ ಚರ್ಮ ಆಯ್ಲಿ ಆಗಿದ್ದರೆ, ಜೆಲ್ ಮಿಶ್ರಣಕ್ಕೆ ತುಸು ಸೀ ಸಾಲ್ಟ್ ಬೆರೆಸಿ ನಂತರ ಮಸಾಜ್‌ ಮಾಡಿ. ಸೀ ಸಾಲ್ಟ್ ಚರ್ಮದಿಂದ ಹೆಚ್ಚುವರಿ ತೈಲದ ಅಂಶವನ್ನು ಹೀರಿಕೊಳ್ಳಲು ನೆರವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ