ಪ್ರತಿಯೊಬ್ಬ ನವ ವಧು ಬಯಸುವುದೇನೆಂದರೆ ನನ್ನ ಸ್ಟೈಲ್ ಮತ್ತು ಲುಕ್‌ನಿಂದ ಜೀವನ ಸಂಗಾತಿಯ ಮತ್ತು ಎಲ್ಲ ಬಂಧುಗಳ ಮನವನ್ನು ಸೂರೆಗೊಳ್ಳಬೇಕು ಎಂದು. ಹಾಗಾದರೆ ಪತಿಯ ಮನಸ್ಸನ್ನು ಸೆಳೆಯಲು ಅವಳು ಏನು ಮಾಡಬೇಕು?
ಸೆಲೆಬ್ರಿಟಿ ಮೇಕಪ್
ಆರ್ಟಿಸ್ಟ್ ಅನಿತಾ ರಾಜನ್ ಹೀಗೆ ಹೇಳುತ್ತಾರೆ, ``ಎಲ್ಲಕ್ಕಿಂತ ಮೊದಲು ನವ ವಧು ಪರ್ಸನಾಲಿಟಿ, ಸ್ಕಿನ್ ಟೈಪ್, ಹೇರ್ ಟೆಕ್ಸ್ ಚರ್, ಕಲರ್, ಐ ಬ್ರೋಸ್ ಶೇಪ್, ಫೇಸ್ ಕಟ್‌ಗಳನ್ನು ಪರೀಕ್ಷಿಸಬೇಕಾಗುತ್ತದೆ. ಇದರಲ್ಲಿ ಏನಾದರೂ ಕೊರತೆ ಕಂಡರೆ ಎಕ್ಸರ್‌ಸೈಜ್ ಮತ್ತು ಸ್ಕಿನ್ ಕೇರ್ ರೊಟೀನ್‌ನ ಸಲಹೆ ನೀಡಲಾಗುತ್ತದೆ. ಇದರಿಂದ ಚರ್ಮ ಯೌವನ ಮತ್ತು ಕಾಂತಿಯುತವಾಗಿ ಕಾಣುತ್ತದೆ.''
ಸ್ಕಿನ್ ಕೇರ್ ರೊಟೀನ್ : ಬ್ರೈಡ್‌ಲ್ ಮೇಕಪ್ ಆರ್ಟಿಸ್ಟ್ ಆಕಾಂಕ್ಷಾ ನಾಯಕ್ ಸ್ಕಿನ್‌ಕೇರ್ ರೊಟೀನ್ ಬಗ್ಗೆ ಹೀಗೆ ಹೇಳುತ್ತಾರೆ, ``ನವ ವಧು ತನ್ನ ಸ್ಕಿನ್ ಟೈಪ್ ವಿಷಯಾಗಿ ತಿಳಿದಿರುವುದು ಅಗತ್ಯ. ಮದುವೆಗೆ ಮೊದಲು ಅವಳು ದಿನ ಕ್ಲೆನ್ಸಿಂಗ್, ಟೋನಿಂಗ್‌ಮತ್ತು ಮಾಯಿಶ್ಚರೈಸಿಂಗ್‌ನ ರೊಟೀನ್ ಕೈಗೊಳ್ಳಬೇಕು. ಶುಷ್ಕ ಚರ್ಮವಾದರೆ ಸೋಪ್ ಫ್ರೀ ಕನ್ಸೀಲರ್ ಬಳಸಬೇಕು. ದಿನಕ್ಕೆ 2 ಸಲ ಮಾಯಿಶ್ಚರೈಸ್ ಮಾಡಬೇಕು.``ಆಯ್ಲಿ ಸ್ಕಿನ್ ಆದರೆ ಕ್ಲೆನ್ಸಿಂಗ್ ಜೊತೆಗೆ ದಿನದಲ್ಲಿ 2-3 ಸಲ ಮುಖ ತೊಳೆಯಬೇಕು. ಈ ಸ್ಕಿನ್ ಟೈಪ್‌ಗೆ ಟೋನಿಂಗ್ ಅಗತ್ಯ. ಇದರಿಂದ ಮುಖ ಚರ್ಮದ ರಂಧ್ರಗಳು ಮುಚ್ಚಿ ಚರ್ಮದಿಂದ ತೈಲ ಒಸರುವುದು ನಿಲ್ಲುತ್ತದೆ. ಟೋನಿಂಗ್ ಜೊತೆಗೆ ವಾಟರ್ ಬೇಸ್ಡ್ ಮಾಯಿಶ್ಚರೈಸರ್ ಹಚ್ಚಬೇಕು. ಆಯ್ಲಿ ಸ್ಕಿನ್‌ಗೆ ಫೇಸ್ ಮಾಸ್ಕ್ ಕೂಡ ಅಗತ್ಯ. ಇದರಿಂದ ಮುಖದ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.''
ಬೇಸ್ ಮೇಕಪ್‌ನ ಆಯ್ಕೆ : ಮೇಕಪ್‌ಗೆ ಸೂಕ್ತ ಫೌಂಡೇಶನ್ ಅತ್ಯಗತ್ಯ. ಬೇಸ್ ಮೇಕಪ್ ಸರಿಯಾಗಿದ್ದು, ಅದರ ಬಣ್ಣ ಚರ್ಮಕ್ಕೆ ಹೊಂದಿಕೆಯಾದರೆ, ಒಂದು ಲೈನರ್ ಹಚ್ಚುವುದರಿಂದಲೇ ನವ ವಧು ಸುಂದರವಾಗಿ ಕಾಣಬಲ್ಲಳು.
ಮುಖದ ಮೇಲೆ ಕಲೆ, ಪಿಂಪಲ್ಸ್, ಡಾರ್ಕ್ ಸ್ಪಾಟ್ಸ್ ಇಲ್ಲದವರಿಗೆ ಕ್ರೀಮ್ ಬೇಸ್ಡ್ ಮೇಕಪ್ ಸರಿ ಇರುತ್ತದೆ. ಆದರೆ ಆಯ್ಲಿ ಸ್ಕಿನ್‌ಗೆ ಇದನ್ನು ಬಳಸಲೇಬಾರದು. ಕಲೆಯುಳ್ಳ ಚರ್ಮಕ್ಕೆ ವಾಟರ್ ಬೇಸ್ಡ್ ಮೇಕಪ್ ಬೇಕಾಗುತ್ತದೆ. ಬಿಸಿಲಿನಲ್ಲಿರಬೇಕಾದ ಸಂದರ್ಭದಲ್ಲೂ ವಾಟರ್ ಬೇಸ್ಡ್ ಮೇಕಪ್ ಸೂಕ್ತವಾಗಿರುತ್ತದೆ.
ಕಾಂಪ್ಲೆಕ್ಸ್ ಗೆ ತಕ್ಕಂತೆ ಮೇಕಪ್ : ಭಾರತೀಯರು 3 ಬಗೆಯ ಕಾಂಪ್ಲೆಕ್ಷನ್‌ನವರಾಗಿರುತ್ತಾರೆ. ಗೌರವರ್ಣ, ಗೋಧಿ ಬಣ್ಣ, ಶ್ಯಾಮಲ ವರ್ಣ. ಆದ್ದರಿಂದ ಕಾಂಪ್ಲೆಕ್ಸ್ ಗೆ ಅನುಸಾರವಾಗಿ ಈ ರೀತಿಯಲ್ಲಿ ಮೇಕಪ್ ಆರಿಸಿ :
ಗೌರವರ್ಣದ ಚರ್ಮ : ನೀವು ಗೌರವರ್ಣದವರಾದರೆ ನಿಮಗೆ ರೋಸಿ ಟಿಂಟ್ ಬೇಸ್ ಕಲರ್‌ಮತ್ತು ಕೆಲವು ಸಂದರ್ಭಗಳಲ್ಲಿ ಹೊಂಬಣ್ಣದ ಫೌಂಡೇಶನ್ ಬೇಸ್ ಹೊಂದುತ್ತದೆ. ಐ ಮೇಕಪ್ ಮಾಡುವಾಗ ಐ ಬ್ರೋಸ್‌ಗೆ ಬ್ರೌನ್ ಕಲರ್ ಬಳಸಿ. ಗೌರವರ್ಣಕ್ಕೆ ಪಿಂಕ್ ಮತ್ತು ತಿಳಿ ಕೆಂಪು ಬಣ್ಣದ ಬ್ಲಶರ್ ಹಾಗೂ ತಿಳಿ ಬಣ್ಣದ ಲಿಪ್‌ಸ್ಟಿಕ್ ಚೆನ್ನಾಗಿರುತ್ತದೆ.
ಗೋಧಿ ಬಣ್ಣದ ಚರ್ಮ : ನಿಮ್ಮದು ಗೋಧಿ ಬಣ್ಣದ ಚರ್ಮವಾದರೆ. ತಿಳಿ ಬಣ್ಣದ ಫೌಂಡೇಶನ್ ದೂರವಿರಿಸಿ. ಕಣ್ಣಿಗೆ ಬ್ರಾಂಜ್ ಅಥವಾ ಬ್ರೌನ್ ಕಲರ್ ಬಳಸಿ. ಬ್ರಾಂಜ್ ಕಲರ್ ಬ್ಲಶರ್ ಮತ್ತು ಡಾರ್ಕ್ ಕಲರ್ ಲಿಪ್‌ಸ್ಟಿಕ್ ನಿಮಗೆ ಸೂಕ್ತವಾಗಿರುತ್ತದೆ.