ನವವಧುವಿನ ಶೃಂಗಾರವೆಂದರೆ ಮೆಹಂದಿ ಇಲ್ಲದೆ ನಡೆಯಲಾರದು. ಮದುವೆಯ ಆನಂದದ ಕ್ಷಣಗಳನ್ನು ಜೀವನವಿಡೀ ನೆನಪಿನಲ್ಲಿಡಲು ನವವಧು ತನ್ನ ಅಲಂಕಾರದಲ್ಲಿ ಮೆಹಂದಿಗೆ ವಿಶೇಷ ಸ್ಥಾನ ನೀಡುತ್ತಾಳೆ. ವಿವಾಹದ ಸಂದರ್ಭದಲ್ಲಿ ಮೆಹಂದಿಯ ಯಾವ ಯಾವ ಡಿಸೈನ್‌ಗಳು ಮೆಚ್ಚುಗೆ ಗಳಿಸಿವೆ ಎಂದು ತಿಳಿಯಿರಿ :

ಮಾರ್ವಾಡೀ ಮೆಹಂದಿ : ಮಾರ್ವಾಡೀ ಮೆಹಂದಿಯಲ್ಲಿ ಅತ್ಯಂತ ತೆಳುವಾದ ಕೋನ್‌ನ್ನು ಬಳಸಲಾಗುತ್ತದೆ ಮತ್ತು ಸುಂದರವಾದ ಡಿಸೈನ್‌ನ್ನು ಬಿಡಿಸಲಾಗುತ್ತದೆ. ಇದರಲ್ಲಿ ರಾಜಸ್ಥಾನೀ ಸಂಸ್ಕೃತಿಯನ್ನು ಬಿಂಬಿಸುವ ಶಹನಾಯಿ, ಡೋಲು ಮುಂತಾದ ವಾದ್ಯಗಳು, ನವಿಲು ಮೊದಲಾದ ಡಿಸೈನ್‌ಗಳನ್ನೂ ಎರಡೂ ಕೈಗಳಿಗೂ ಒಂದೇ ತರಹ ಬಿಡಿಸಲಾಗುತ್ತದೆ. ಇದು ಕೊಂಚ ಕಷ್ಟದ ಕೆಲಸ.

ಅರೇಬಿಯನ್‌ ಮೆಹಂದಿ :  ಇದರಲ್ಲಿ ಬ್ಲ್ಯಾಕ್‌ ಕೆಮಿಕಲ್‌ನಿಂದ ಔಟ್‌ಲೈನ್‌ ಮಾಡಿ ನಂತರ ಸಾಂಪ್ರದಾಯಿಕ ಹಸಿರು ಮೆಹಂದಿಯಿಂದ ಶೇಡಿಂಗ್‌ ಮಾಡಿ ಡಿಸೈನ್‌ನ್ನು ತುಂಬಿಸಲಾಗುತ್ತದೆ. ಇದರಲ್ಲಿ ಡಿಸೈನ್‌ ಎದ್ದು ಕಾಣುವುದರಿಂದ ಮೆಹಂದಿ ಬಲು ಸುಂದರವಾಗಿರುತ್ತದೆ. ಕಪ್ಪು ಮತ್ತು ಕಡು ಕೆಂಪುಬಣ್ಣದ ಈ ಮೆಹಂದಿ ನಿಮ್ಮ ಡ್ರೆಸ್‌ಗೆ ಮ್ಯಾಚ್‌ ಮಾಡಬಹುದು.

ಕಲರ್‌ಫುಲ್ ಫ್ಯಾಂಟಸಿ ಮೆಹಂದಿ : ಇಂದಿನ ಫ್ಯಾಷನ್‌ ಯುಗದಲ್ಲಿ ಜ್ಯೂವೆಲರಿ, ಫುಟ್‌ವೇರ್‌, ಆ್ಯಕ್ಸೆಸರೀಸ್‌ ಎಲ್ಲವನ್ನೂ ಡ್ರೆಸ್‌ನೊಂದಿಗೆ ಮ್ಯಾಚ್‌ ಮಾಡುವಾಗ ಮೆಹಂದಿಯನ್ನೇಕೆ ಹಿಂದೆ ಬಿಡಬೇಕು? ಕಲರ್‌ಫುಲ್ ಫ್ಯಾಂಟಸಿ ಮೆಹಂದಿಯ ಮೂಲಕ ನಿಮ್ಮ ಡ್ರೆಸ್‌ಗೆ ಮ್ಯಾಚ್‌ ಆಗುವ ಬಣ್ಣದ ಮೆಹಂದಿ ಡಿಸೈನ್‌ನ್ನು ನಿಮ್ಮ ಕೈಗಳ ಮೇಲೆ ಮಾಡಿಸಿಕೊಳ್ಳಬಹುದು.

ಜ್ಯೂವೆಲ್ ‌ಮೆಹಂದಿ : ಇದೊಂದು ಬಗೆಯ ಮೆಹಂದಿ ಜ್ಯೂವೆಲರಿ. ಇದನ್ನು ನೋಡಿದಾಗ ನೀವು ಜ್ಯೂವೆಲರಿ ಧರಿಸಿರುವಿರೆಂಬ ಭಾವನೆ ಬರಿಸುವಂತೆ ಮಾಡುವ ಚ್ಯಾಲೆಂಜ್‌ ಮೇಕಪ್‌ ಆರ್ಟಿಸ್ಟ್ ಗೆ ಇರುತ್ತದೆ. ಇದರಲ್ಲಿ ಮೆಹಂದಿ ಮತ್ತು ವಿವಿಧ ಬಣ್ಣಗಳೊಂದಿಗೆ ಚಿನ್ನ, ಬೆಳ್ಳಿಯ  ಸ್ಪಾರ್ಕ್‌ ಡಸ್ಟನ್ನು ಸಹ ಬಳಸಲಾಗುತ್ತದೆ. ಇದು ನಿಮ್ಮ ಡ್ರೆಸ್‌ ಮತ್ತು ಜ್ಯೂವೆಲರಿಗೆ ಮ್ಯಾಚಿಂಗ್‌ಆಗಿರಬೇಕೆಂಬುದನ್ನು ನೆನಪಿಡಿ.

ಜರ್ದೋಜಿ ಮೆಹಂದಿ : ವಿಶೇಷ ಪಾರ್ಟಿ ಅಥವಾ ಮದುವೆಯ ಸಂದರ್ಭಗಳಲ್ಲಿ ಯುವತಿಯರು ಈ ಬಗೆಯ ಮೆಹಂದಿಯನ್ನು ಕೈಕಾಲು, ಬೆನ್ನು ಭುಜಗಳಲ್ಲದೆ ನಾಭಿಯ ಮೇಲೂ ಹಾಕಿಸಿಕೊಳ್ಳಬಹುದು.

ಟ್ಯಾಟೂ ಮೆಹಂದಿ : ಇಂದು ಯುವತಿಯರಲ್ಲಿ ಟ್ಯಾಟೂ ಮೆಹಂದಿಯ ಚಾಲ್ತಿ ಹೆಚ್ಚಾಗಿದೆ. ಇದನ್ನು ಭುಜ, ಹೊಟ್ಟೆ, ಬೆನ್ನು ಮತ್ತು ಶರೀರದ ಇತರೆ ತೆರೆದ ಭಾಗಗಳಲ್ಲಿ ಚಿಟ್ಟೆ, ಡ್ರ್ಯಾಗನ್‌ ಮುಂತಾದ ಚಿಕ್ಕ ಡಿಸೈನ್‌ಗಳ ರೂಪದಲ್ಲಿ ಮಾಡಿಸಿಕೊಳ್ಳಬಹುದು. ಈ ಟ್ಯಾಟೂ ಸುಂದರ ಲುಕ್‌ ನೀಡುತ್ತದೆ. ಜೊತೆಗೆ ನಿಮ್ಮನ್ನು ಸ್ಟೈಲಿಶ್‌ ಮತ್ತು ಫ್ಯಾಷನೆಬಲ್ ಕ್ಯಾಟಗಿರಿಯಲ್ಲಿ ಸೇರಿಸುತ್ತದೆ.

- ಸ್ವರ್ಣಲತಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ