ಮೇಕಪ್‌ನಲ್ಲಿ ಲಿಪ್‌ಸ್ಟಿಕ್‌ಗೆ ತನ್ನದೇ ಆದ ಮಹತ್ವಪೂರ್ಣ ಪಾತ್ರವಿದೆ. ಸಿಂಪಲ್ ಲಿಪ್‌ಸ್ಟಿಕ್‌ ಸಹ ಇಡೀ ಮುಖದ ರಂಗನ್ನೇ ಬದಲಿಸಿ ಬಿಡುತ್ತದೆ. ಹೀಗಿರುವಾಗ ಮೇಕಪ್‌ಗೆ ಲಿಪ್‌ಸ್ಟಿಕ್‌ನಿಂದ ಫೈನಲ್ ಟಚ್‌ ನೀಡಬೇಕಾಗುತ್ತದೆ.

ಮೇಕಪ್‌ ಎಕ್ಸ್ ಪರ್ಟ್‌ ಸಹ ಲಿಪ್‌ಸ್ಟಿಕ್‌ `ಗೇಮ್ ಚೇಂಜರ್‌' ತರಹ ಕೆಲಸ ನಿರ್ವಹಿಸುತ್ತದೆ ಎಂಬ ಅಂಶವನ್ನೇ ಎತ್ತಿಹಿಡಿಯುತ್ತಾರೆ. ಇದನ್ನು ನಾವು ಕೊನೆಯ ಟಚ್‌ ಆಗಿ ಬಳಸಿದರೂ ಸಹ, ಇದು ಎಲ್ಲಕ್ಕಿಂತಲೂ ಮಹತ್ವಪೂರ್ಣ ಹಾಗೂ ಅತ್ಯಗತ್ಯ ಸ್ಟೆಪ್‌ ಆಗಿದೆ, ಇದು ಇಡೀ ಮುಖ ಚಹರೆಯ ರಂಗನ್ನೇ ಬದಲಿಸಬಲ್ಲ ಕೆಲಸ ಮಾಡಬಲ್ಲದು.

ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಬೇಕಾದಷ್ಟು ಲಿಪ್‌ಸ್ಟಿಕ್‌ ವೆರೈಟಿಗಳು ಲಭ್ಯವಿವೆ, ಇವು ಮುಖಕ್ಕೆ ವಿಭಿನ್ನ ಬಗೆಯ ಎಫೆಕ್ಟ್ಸ್ ನೀಡುತ್ತವೆ. ಹೀಗಾಗಿ ನೀವು ನಿಮ್ಮ ಲೈಕಿಂಗ್‌ ಫಿನಿಶಿಂಗ್‌ಗೆ ತಕ್ಕಂತೆ ಯಾವ ಲಿಪ್‌ಸ್ಟಿಕ್‌ ಬಳಸುತ್ತೀರಿ ಎಂಬುದು ನಿಮ್ಮ ವೈಯಕ್ತಿಕ ಆಯ್ಕೆಗೆ ಬಿಟ್ಟದ್ದು.

ಲಿಪ್‌ಸ್ಟಿಕ್‌ನಲ್ಲಿ ವೈವಿಧ್ಯತೆ

ಮ್ಯಾಟ್‌ ಲಿಪ್‌ಸ್ಟಿಕ್‌ : ದೀರ್ಘಾವಧಿ ಬಳಕೆಗಾಗಿ ಮ್ಯಾಟ್‌ ಲಿಪ್‌ಸ್ಟಿಕ್‌ ವಿಭಿನ್ನ ಪ್ರಭಾವ ಬೀರಬಲ್ಲದು. ಮುಖ್ಯವಾಗಿ ಇದರ ಮ್ಯಾಟ್‌ ಫಿನಿಶ್‌ ವೆರೈಟಿ ಟೆಕ್ಸ್ ಚರ್‌ ಬೆಟರ್‌ ಕಲರ್‌ ಔಟ್‌ಪುಟ್‌ ಹೆಂಗಸರಿಗೆ ಬಹಳ ಇಷ್ಟವಾಗುತ್ತದೆ.

ಈ ಲಿಪ್‌ಸ್ಟಿಕ್‌ ಮುಖ್ಯವಾಗಿ ಪಿಗ್ಮೆಂಟೆಡ್‌ ತುಟಿಗಳಿಗೆ ಬಲು ಬೆಸ್ಟ್ ಎನಿಸುತ್ತದೆ. ಇದಕ್ಕಾಗಿ ನಾಯ್ಕಾ ಸಲಹೆ ಎಂದರೆ ನೀವು ನಾಯ್ಕಾ ಸೋ ಮ್ಯಾಟ್‌ ಲಿಪ್‌ಸ್ಟಿಕ್‌ ಕಲೆಕ್ಷನ್‌ ಬಳಸಿಕೊಳ್ಳಬಹುದು ಅಂತ.

ಲಿಪ್‌ ಕ್ರೀಂ ನೀಡಲಿದೆ ಎಕ್ಸ್ ಟ್ರಾ ಮಾಯಿಶ್ಚರ್‌: ಎಷ್ಟೋ ಸಲ ಋತುಮಾನದ ಬದಲಾವಣೆಯಿಂದಾಗಿ ನಮ್ಮ ತುಟಿಗಳು ಒಣಗತೊಡಗುತ್ತವೆ. ಆಗ ತುಟಿಗಳಿಗೆ ಅಗತ್ಯವಾಗಿ ಮಾಯಿಶ್ಚರ್‌ ಒದಗಿಸಬೇಕಾಗುತ್ತದೆ. ಇದಕ್ಕಾಗಿ ಲಿಪ್ಸ್ ಕ್ರೀಂಗಿಂತ ಬೆಸ್ಟ್ ಬೇರಾವುದು? ಏಕೆಂದರೆ ಅದರಲ್ಲಿ ವ್ಯಾಕ್ಸ್  ಹೈ ಆಯಿಲ್ ಅಂಶಗಳು ಅಡಗಿದ್ದು ಇವು ತುಟಿಗಳಿಗೆ ಎಕ್ಸ್ ಟ್ರಾ ಮಾಯಿಶ್ಚರ್ ಒದಗಿಸುವ ಕೆಲಸ ಮಾಡುತ್ತದೆ. ಇದನ್ನು ನೀವು ದಿನ ಬಳಸುತ್ತಾ ಸಾಕಷ್ಟು ಫೀಲ್ ಗುಡ್‌  ಭಾವನೆ ಹೊಂದುವಿರಿ.

ಇದಕ್ಕಾಗಿ ನಾಯ್ಕಾ ಸಲಹೆ ಎಂದರೆ, ನೀವು ಶುಗರ್‌ ನೇವರ್‌ನಿಂದ ಡ್ರೈ ಕ್ರೀಂ ಲಿಪ್‌ಸ್ಟಿಕ್‌ನ್ನು ಬಳಸಬೇಕು.

ಲಿಪ್‌ ಕ್ರೆಯಾನ್‌ನಿಂದ ಸ್ಮೂಥ್‌ ಟಚ್‌:  ಮೇಕಪ್‌ ಪ್ರಾಡಕ್ಟ್ಸ್ ಯಾರಿಗೆ ತಾನೇ ಇಷ್ಟವಾಗದು? ಹೀಗಿರುವಾಗ ಲಿಪ್‌ ಕ್ರೆಯಾನ್‌ಸಾಕಷ್ಟು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಏಕೆಂದರೆ ಇದು ಸ್ಮೂಥ್‌ ಫಿನಿಶ್‌ ಜೊತೆ ಇದರ ಟೆಕ್ಸ್ ಚರ್‌ ಬಲು ಸಾಫ್ಟ್ ಆಗಿರುತ್ತದೆ. ಜೊತೆಗೆ ನೀವು ಇದನ್ನು ಲಿಪ್‌ ಲೈನರ್‌ ದೃಷ್ಟಿಯಿಂದ ಅಥವಾ ಲಿಪ್ಸ್ ನ್ನು ಕಲರ್‌ ಮಾಡಲಿಕ್ಕೂ ಸಹ ಬಳಸಬಹುದು.

ಇದಕ್ಕಾಗಿ ನಾಯ್ಕಾ ಸಲಹೆ ಎಂದರೆ, ನೀವು ಲ್ಯಾಕ್ಮೆ ಎನ್‌ರಿಚ್ಡ್ ಲಿಪ್‌ ಕ್ರೆಯಾನ್‌ ಬಳಸಿರಿ.

ಲಿಪ್‌ ಗ್ಲಾಸ್‌ನಿಂದ ಗ್ಲಾಸಿ ಲಿಪ್ಸ್ ಪಡೆಯಿರಿ : ಗ್ಲಾಸಿ ಲಿಪ್ಸ್ ನೋಡಲು ಬಲು ಆಕರ್ಷಕ. ಜೊತೆಗೆ ನಿಮ್ಮ ಔಟ್‌ಫಿಟ್ಸ್ ನ ಗ್ರೇಸ್‌ಹೆಚ್ಚಿಸುವಲ್ಲಿಯೂ ಸಹ ಮುಖ್ಯ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಲಿಪ್‌ಸ್ಟಿಕ್‌ನಲ್ಲಿ ಲಿಪ್‌ ಗ್ಲಾಸ್‌ ಅಧಿಕ ಡಿಮ್ಯಾಂಡ್‌ ಗಳಿಸುತ್ತಿದೆ. ಏಕೆಂದರೆ ಇದರಿಂದ ಸಣ್ಣ ಹಾಗೂ ತೆಳು ತುಟಿಗಳು ಸಮರ್ಪಕ ಆಕಾರದಲ್ಲಿ ಕಂಡುಬರುವುದರ ಜೊತೆಗೆ ಡ್ರೈ ಲಿಪ್ಸ್ ನ ಡ್ರೈನೆಸ್‌ಸಹ ದೂರವಾಗುತ್ತದೆ. ಏಕೆಂದರೆ ಇದರಲ್ಲಿ ಮಾಯಿಶ್ಚರ್‌ ಬಹು ಹೆಚ್ಚಾಗಿರುತ್ತದೆ ಹಾಗೂ ಇದರ ಸೆಮಿ ಶೀರ್‌ ಫಿನಿಶ್‌ ಗ್ಲಾಸಿ ಲುಕ್ಸ್ ನ್ನು ಇನ್ನಷ್ಟು ಹೆಚ್ಚಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ