ಪ್ರತಿಯೊಂದು ಮೇಕಪ್‌ ಪ್ರಾಡಕ್ಟ್ ಗೂ ತನ್ನದೇ ಆದ ಬಾಳಿಕೆಯ ಕಾಲಾವಧಿಯಿದೆ. ಮಸ್ಕರಾಗೆ 3 ತಿಂಗಳು, ಐ ಲೈನರ್‌ಗೆ 6 ತಿಂಗಳು, ಫೌಂಡೇಶನ್‌ಗೆ 1 ವರ್ಷ….. ಇತ್ಯಾದಿ. ಆದರೆ ಎಷ್ಟೋ ಸಲ ಅತಿ ದುಬಾರಿ ಪ್ರಾಡಕ್ಟ್ ಸಹ ಎಕ್ಸ್ ಪೈರಿ ಡೇಟ್‌ಗೆ ಮೊದಲೇ ಹಾಳಾಗುವ ಲಕ್ಷಣ ತೋರುತ್ತವೆ.

ಇದಕ್ಕೆ ಮುಖ್ಯ ಕಾರಣ ಎಂದರೆ ನಾವು ಕಾಸ್ಮೆಟಿಕ್ಸ್ ನ್ನು ಸರಿಯಾಗಿ ಸಂಭಾಳಿಸದೆ ನಿರ್ಲಕ್ಷಿಸುವುದೇ ಆಗಿದೆ. ನೀವು ನಿಮ್ಮ ಮೇಕಪ್‌ ಪ್ರಾಡಕ್ಟ್ಸ್ ನ ಬಾಳಿಕೆಯನ್ನು ಅದರ ಎಕ್ಸ್ ಪೈರಿ ಡೇಟ್‌ಗಿಂತಲೂ ಹೆಚ್ಚಿಸಬಹುದು. ಹೇಗೆ ಅಂತೀರಾ?

ಕಾಸ್ಮೆಟಿಕ್ಸ್ ಬೇಗ ಹಾಳಾಗದಿರಲು ಈ ಸಲಹೆಗಳನ್ನು ಗಮನಿಸಿ :

ಬೆರಳುಗಳನ್ನು ಬಳಸದಿರಿ : ಯಾವುದೇ ಬಗೆಯ ಕಾಸ್ಮೆಟಿಕ್ಸ್ ಬಳಸುವಾಗಲೂ ಅದರಲ್ಲಿ ನೇರವಾಗಿ ಬೆರಳುಗಳನ್ನು ಅದ್ದಬೇಡಿ. ನಮ್ಮ ಬೆರಳಲ್ಲಿ ಒಂದು ಬಗೆಯ ತೈಲವಿರುತ್ತದೆ, ಜೊತೆಗೆ ಬೆವರು, ಕೊಳೆ. ಇದರ ಸಂಪರ್ಕದಿಂದ ಪ್ರಾಡಕ್ಟ್ ನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆ ಆಗುತ್ತದೆ.

ಮೇಕಪ್‌ ಪ್ರಾಡಕ್ಟ್ಸ್ ಶೇರ್‌ ಮಾಡದಿರಿ : ನಿಮ್ಮ ಮೇಕಪ್‌ ಪ್ರಾಡಕ್ಟ್ಸ್ ನ್ನು ಬೇರೆಯವರ ಜೊತೆ (ಮುಖ್ಯಾಗಿ ಹಾಸ್ಟಲ್‌ಮೇಟ್ಸ್ ಗಮನಿಸಿ) ಶೇರ್‌ ಮಾಡಬೇಡಿ. ಅದರಲ್ಲೂ ಬ್ರಶ್‌, ಸ್ಪಂಜ್‌ ಬಳಸದೆ ನೇರವಾಗಿ ನಿಮ್ಮ ಕೈ ಮೇಲೆ ಹಾಕಿಕೊಂಡು ಬಳಸುವಂಥದ್ದು.

ಮೇಕಪ್‌ ಬ್ರಶ್‌ ಸದಾ ಕ್ಲೀನ್‌ ಆಗಿರಲಿ : ಮೇಕಪ್‌ ಮಾಡಿಕೊಳ್ಳಲು ಕೇವಲ ಕ್ಲೀನ್‌ ಬ್ಲಶ್‌ ಬಳಸುವುದು ಮಾತ್ರವಲ್ಲ, ಅದನ್ನು ಸದಾ ನೀವು ಕ್ಲೀನ್‌ ಆಗಿಯೂ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ನಿಮ್ಮ ಬ್ರಶ್ಶನ್ನು ಸ್ವಲ್ಪ ಹೊತ್ತು ಬಿಸಿ ನೀರಲ್ಲಿ ನೆನೆಹಾಕಿಡಿ. ನಂತರ ಮೈಲ್ಡ್ ಶ್ಯಾಂಪೂನಿಂದ ತೊಳೆಯಿರಿ. ನಂತರ ಕಾಟನ್‌ ಬಟ್ಟೆಯಿಂದ ಒರೆಸಿ, ಬಳಸಿಕೊಳ್ಳಿ.

ಮತ್ತೆ ಮತ್ತೆ ಡಿಪ್‌ ಮಾಡಬೇಡಿ : ಯಾವುದೇ ಲಿಕ್ವಿಡ್‌ ಮೇಕಪ್‌ ಪ್ರಾಡಕ್ಟ್ ನ್ನು ಅಂದರೆ ಐ ಲೈನರ್‌, ಐ ಶ್ಯಾಡೋ, ಲಿಪ್‌ ಗ್ಲಾಸ್‌, ಮಸ್ಕರಾ, ನೇಲ್ ಪಾಲಿಶ್‌ ಇತ್ಯಾದಿ ಬಳಸುವಾಗ ಮತ್ತೆ ಮತ್ತೆ ಅಪ್ಲಿಕೇಟರ್‌ನ್ನು ಬಾಟಲಿಯಲ್ಲಿ ಅದ್ದಬಾರದು. ಹೀಗೆ ಮಾಡುವುದರಿಂದ ಹೊರಗಿನ ಗಾಳಿ ಈ ದ್ರವಕ್ಕೆ ಸೇರಿ, ಬಾಟಲಿ ಕ್ಲೋಸ್‌ ಮಾಡುವಾಗ ಅದು ಅಲ್ಲೇ ಉಳಿದುಬಿಡುತ್ತದೆ. ಅದರಿಂದ ಈ ಪ್ರಾಡಕ್ಟ್ಸ್ ಬೇಗ ಕೆಡುತ್ತವೆ. ಇಷ್ಟು ಮಾತ್ರವಲ್ಲದೆ ನೆನಪಿಡಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ, ನಿಮ್ಮ ಕಾಸ್ಮೆಟಿಕ್ಸ್ ನ ಮುಚ್ಚಳ ಚೆನ್ನಾಗಿ ಕ್ಲೋಸ್‌ ಆಗಿದೆ ತಾನೇ ಎಂಬುದು. ಅದು ತುಸು ಸಡಿಲ ಆಗಿದ್ದರೂ ಹೊರಗಿನ ಗಾಳಿ ಒಳ ನುಗ್ಗುತ್ತದೆ. ಈ ರೀತಿ ಅಂಥ ಪ್ರಾಡಕ್ಟ್ಸ್ ಕೆಡುತ್ತವೆ.

– ಪ್ರತಿನಿಧಿ 

ಸ್ಮಾರ್ಟ್‌ ಐಡಿಯಾಸ್‌

ಸ್ಪಂಜ್‌ ಬದಲಿಗೆ ಬ್ರಶ್‌ ಬಳಸಿರಿ : ಫೌಂಡೇಶನ್‌, ಬ್ಲಶ್‌ ಆನ್‌ನಂಥ ಮೇಕಪ್‌ ಪ್ರಾಡಕ್ಟ್ಸ್ ಹಚ್ಚಲು ಸ್ಪಂಜ್‌ ಬದಲಾಗಿ ಬ್ರಶ್‌ ಬಳಸಿರಿ. ಸ್ಪಂಜ್‌ ಬಳಸುವುದರಿಂದ ಅದು ಮೇಕಪ್‌ನ್ನು ಹೀರಿಕೊಳ್ಳುತ್ತದೆ, ನಂತರ ಅದನ್ನು ಬಳಸಲಿಕ್ಕೂ ಆಗದು. ಆದರೆ ಬ್ರಶ್‌ ಕೂದಲಿನಿಂದ ತಯಾರಾದುದು, ಹೀಗಾಗಿ ಅದು ಮೇಕಪ್‌ ಹೀರಿಕೊಳ್ಳದು. ಆದ್ದರಿಂದ ನೀವು ಸಲೀಸಾಗಿ ಬೇಕಾದ ಪ್ರಾಡಕ್ಟ್ ಬಳಸಿರಿ.

ನ್ಯೂ ಕಂಟೇನರ್‌ನ್ನೇ ಬಳಸಿರಿ : ಕಾಸ್ಮೆಟಿಕ್ಟ್ ಪ್ರಾಡಕ್ಟ್ಸ್ ನ ಸುದೀರ್ಘ ಬಾಳಿಕೆಗಾಗಿ ಸದಾ ನ್ಯೂ ಕಂಟೇನರ್‌ನ್ನೇ ಬಳಸಿರಿ. ಉದಾ: ಲಿಕ್ವಿಡ್‌ ಫೌಂಡೇಶನ್‌, ಐ ಶ್ಯಾಡೋ, ಲಿಪ್‌ ಗ್ಲಾಸ್‌, ಬ್ಲಶ್‌ ಆನ್‌ ಇತ್ಯಾದಿ. ಅಂದರೆ ಲಿಕ್ವಿಡ್‌ ಪ್ರಾಡಕ್ಟ್ಸ್ ನ ಅರ್ಧ ಭಾಗವನ್ನು ಒಂದು ಬೇರೆ ಕಂಟೇನರ್‌ಗೆ ಹಾಕಿ, ಅದನ್ನು ಡೇಲಿ ಬೇಸಿಸ್‌ಗೆ ಬಳಸುವುದು.

ಪೌಡರ್‌ ಬೇಸ್ಡ್ ಪ್ರಾಡಕ್ಟ್ಸ್ ಗೆ ಆದ್ಯತೆ ನೀಡಿ : ನೀವು ಯಾವ  ಮೇಕಪ್‌ ಪ್ರಾಡಕ್ಟ್ ನ್ನು ಪ್ರತಿದಿನ ಬಳಸುವುದಿಲ್ಲವೋ, ಆಗ ವಾಟರ್‌ಯಾ ಕ್ರೀಮೀ ಬೇಸ್ಡ್ ಮೇಕಪ್‌ ಪ್ರಾಡಕ್ಟ್ಸ್ ನ್ನು ಖರೀದಿಸುವ ಬದಲು ಪೌಡರ್‌ ಬೇಸ್ಡ್ ಮೇಕಪ್‌ ಪ್ರಾಡಕ್ಟ್ಸ್ ಖರೀದಿಸಿ. ವಾಟರ್‌ಕ್ರೀಮೀ ಬೇಸ್ಡ್ ಪ್ರಾಡಕ್ಟ್ ಗೆ ಹೋಲಿಸಿದಾಗ, ಪೌಡರ್‌ ಬೇಸ್ಡ್ ಪ್ರಾಡಕ್ಟ್ಸ್ ಸುದೀರ್ಘ ಕಾಲ ಬಾಳಿಕೆ ಬರುತ್ತದೆ, ಬೇಗ ಕೆಡುವುದಿಲ್ಲ.

ಬಳಸುವಾಗ ಮಾತ್ರ ಪ್ಯಾಕ್‌ ತೆರೆಯಿರಿ : ನೀವು ಯಾವುದೇ ವಿಶೇಷ ಸಂದರ್ಭಕ್ಕಾಗಿ ಹಚ್ಚಲೆಂದು ಲಿಪ್‌ಸ್ಟಿಕ್‌, ಐ ಲೈನರ್‌, ಇತ್ಯಾದಿ ಏನೇ ಪ್ರಾಡಕ್ಟ್ ನ್ನು ಅಡ್ವಾನ್ಸ್ ಆಗಿ ಕೊಂಡರೂ, ಖರೀದಿಸಿದ ತಕ್ಷಣ ಅದನ್ನು ಓಪನ್‌ ಮಾಡುವ ಬದಲು, ಯಾವ ದಿನ ಅದನ್ನು ಬಳಸುತ್ತೀರೋ ಆಗ ಓಪನ್‌ ಮಾಡಿ. ಇದರಿಂದ ಆ ಪ್ರಾಡಕ್ಟ್ ಹೆಚ್ಚು ದಿನ ಬಾಳಿಕೆ ಬರುತ್ತದೆ.

ಬಿಸಿ ನೀರಲ್ಲಿ ನೆನೆಹಾಕಿ : ಮಸ್ಕರಾ, ಲಿಪ್‌ಗ್ಲಾಸ್‌, ಲಿಕ್ವಿಡ್‌ ಲಿಪ್‌ಸ್ಟಿಕ್‌, ಲಿಕ್ವಿಡ್‌ ಐ ಲೈನರ್‌ ಇತ್ಯಾದಿ ಮೇಕಪ್‌ ಪ್ರಾಡಕ್ಟ್ಸ್ ಎಕ್ಸ್ ಪೈರಿ ಡೇಟ್‌ಗೆ ಮೊದಲೇ ಒಣಗಿದ್ದರೆ, ಅವುಗಳ ಮುಚ್ಚಳನ್ನು ಗಟ್ಟಿಯಾಗಿ ಮುಚ್ಚಿ, ಅದನ್ನು ಬಾಟಲ್ ಸಮೇತ ಬಿಸಿ ನೀರಿಗೆ ಹಾಕಿ ಮುಚ್ಚಳ ಮುಚ್ಚಿಡಿ.

ಕೂಲ್ ಡ್ರೈ ಜಾಗದಲ್ಲಿಡಿ : ಕಾಸ್ಮೆಟಿಕ್ಸ್ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ನ್ನು ಸದಾ ಕೂಲ್‌ಡ್ರೈ ಜಾಗದಲ್ಲಿಡಬೇಕು. ಇದರ ಮೇಲೆ ಸೂರ್ಯಕಿರಣ ನೇರ ಬೀಳಬಾರದು. ಆ ಬಿಸಿಲಿನಿಂದ ಲಿಪ್‌ಸ್ಟಿಕ್‌ನಂಥ ಕ್ರೀಮೀ ಕಾಸ್ಮೆಟಿಕ್‌ ಪ್ರಾಡಕ್ಟ್ ಮೆಲ್ಟ್ ಆಗಬಹುದು. ಹಾಗೆಯೇ ಟೋನರ್‌ ಡ್ರೈ ಆಗಬಹುದು.

ಪ್ರಾಡಕ್ಟ್ ಕೆಡುವುದು ಯಾವಾಗ

ದುರ್ವಾಸನೆ : ನಿಮ್ಮ ಪ್ರಾಡಕ್ಟ್ ನಿಂದ ದುರ್ವಾಸನೆ ಬರುತ್ತಿದ್ದರೆ, ಅದು ಕೆಟ್ಟಿದೆ ಎಂದೇ ಅರ್ಥ.

ಲುಕ್ಸ್ : ಕಾಸ್ಮೆಟಿಕ್ಸ್ ಬಣ್ಣ ಬದಲಾಗಿದೆ ಎನಿಸಿದರೆ ಅದರಲ್ಲಿ ಮಾಯಿಶ್ಚರೈಸರ್‌ ಬಂದುಬಿಟ್ಟಿದ್ದರೆ, ಅದು ಪ್ಯಾಚಿ ಡ್ರೈ ಆಗಿ ಕಾಣಿಸಿದರೆ, ಅದನ್ನು ತಕ್ಷಣ ಬದಲಾಯಿಸಿ.

ಟಚ್‌ : ನಿಮ್ಮ ಪ್ರಾಡಕ್ಟ್ ಬಹಳ ಹೆಚ್ಚು ಎಂಬಂತೆ ಅಂಟಂಟಾಗಿರುವುದು ಅಥವಾ ಹೆಚ್ಚು ಒಣಗಿ ಹೋಗಿರುವಂತೆ ಅನಿಸಿದರೆ, ತಕ್ಷಣ ಅದರ ಬಳಸುವಿಕೆ ನಿಲ್ಲಿಸಿ.

ಲಿಪ್‌ಸ್ಟಿಕ್‌

ನಿಮ್ಮ ಲಿಪ್‌ಸ್ಟಿಕ್‌ ಹಾಗೂ ಅದರ ಶೇಡ್ಸ್ ಸದಾ ಫ್ರೆಶ್‌ ಆಗಿರಬೇಕೇ? ಹಾಗಿದ್ದರೆ ಅದನ್ನು ಡ್ರೆಸ್ಸಿಂಗ್‌ ಟೇಬಲ್‌ನ ಡ್ರಾಯರ್‌ನಲ್ಲಿಡುವ ಬದಲು ಫ್ರಿಜ್‌ನಲ್ಲಿಡಿ. ಬಿಸಿಯಾದ ಜಾಗ, ಬಿಸಿಲು ಬೀಳುವೆಡೆ ಇಡುವುದರಿಂದ ಲಿಪ್‌ಸ್ಟಿಕ್‌ ಮೆಲ್ಟ್ ಆಗಿ ಕೆಡುತ್ತದೆ. ಎಷ್ಟೋ ಸಲ ಮಾಯಿಶ್ಚರೈಸರ್‌ ಹೆಚ್ಚಾಗುವುದರಿಂದಲೂ ಲಿಪ್‌ಸ್ಟಿಕ್‌ನ ಶೇಡ್‌ ಬದಲಾಗುತ್ತದೆ.

ಐ ಶ್ಯಾಡೋ

ಇದರ ಹೆಚ್ಚಿನ ಬಾಳಿಕೆಗಾಗಿ, ಕ್ರೀಮಿ ಐ ಶ್ಯಾಡೋ ಬದಲಾಗಿ ಪೌಡರ್‌ ಬೇಸ್ಡ್ ಐ ಶ್ಯಾಡೋ ಖರೀದಿಸಿ. ಅದು ಬೇಗ ಕೆಡುವುದೂ ಇಲ್ಲ, ಮೆಲ್ಟ್ ಯಾ ಡ್ರೈ ಆಗುವುದೂ ಇಲ್ಲ. ಶುಚಿಯಾದ ಹೊಸ ಬ್ರಶ್‌ನ್ನೇ ಬಳಸಿ ಇದರ ಬಾಳಿಕೆ ಹೆಚ್ಚಿಸಿ

ಫೌಂಡೇಶನ್

ಇದರ ಹೆಚ್ಚಿನ ಬಾಳಿಕೆ  ಅದು ವಾಟರ್‌ ಯಾ ಆಯಿಲ್ ಬೇಸ್ಡ್ ಎಂಬುದನ್ನು ಅವಲಂಬಿಸಿದೆ. ಏಕೆಂದರೆ ಆಯಿಲ್ ‌ಬೇಸ್ಡ್ ಫೌಂಡೇಶನ್‌ನಲ್ಲಿ ಆಯಿಲ್ ಇರುವುದರಿಂದ ಅದು ಬೇಗ ಕೆಡುವುದಿಲ್ಲ. ಆದರೆ ವಾಟರ್‌ ಬೇಸ್ಡ್ ನಲ್ಲಿ ನೀರಿನ ಕಾರಣ ಅದು ಬೇಗ ಕೆಡಲು ಅವಕಾಶವಿದೆ. ಇವೆರಡನ್ನೂ ಫ್ರಿಜ್‌ನಲ್ಲಿಟ್ಟು ಅವು ಬೇಗ ಕೆಡುವುದನ್ನು ತಪ್ಪಿಸಬಹುದು.

ಐ ಲೈನರ್

ಇದರ ಹೆಚ್ಚಿನ ಬಾಳಿಕೆಗಾಗಿ ಲಿಕ್ವಿಡ್‌ ಐ ಲೈನರ್‌ ಬದಲಾಗಿ ಪೆನ್ಸಿಲ್ ‌ಐ ಲೈನರ್‌ ಖರೀದಿಸಿ. ನೀವು ಲಿಕ್ವಿಡ್‌ ಐ ಲೈನರ್ ಖರೀದಿಸಿದರೆ, ಅದನ್ನು ನೇರ ಗಾಳಿಗೊಡ್ಡದೆ ಫ್ರಿಜ್‌ನಲ್ಲಿಡಿ, ಇಲ್ಲದಿದ್ದರೆ ಡ್ರೈ ಆದೀತು. ಒಮ್ಮೊಮ್ಮೆ ಈ ಐ ಲೈನರ್‌ ಒಣಗಿದರೆ ಅದನ್ನು ಕೆಲವು ಕ್ಷಣಗಳವರೆಗೆ ಮೈಕ್ರೋವೇವ್‌ನಲ್ಲಿ ಇಟ್ಟು ಬಿಸಿ ಮಾಡಿ. ಇದರಿಂದ ಅದು ಮತ್ತೆ ನಾರ್ಮಲ್ ಆಗುತ್ತದೆ.

ಲಿಪ್‌ ಪೆನ್ಸಿಲ್‌

ಇದರ ಹೆಚ್ಚಿನ ಬಾಳಿಕೆಗಾಗಿ ಇದನ್ನು ಶಾರ್ಪ್‌ನರ್‌ (ಮೆಂಡರ್‌)ನಲ್ಲಿ ಶಾರ್ಪ್‌ ಮಾಡಿದ ನಂತರ, ಅದರ ತುದಿಗೆ ತುಸು ವ್ಯಾಸಲೀನ್‌ ಯಾ ಆಯಿಲ್ ‌ಸವರಿಡಿ. ಹೀಗೆ ಮಾಡುವುದರಿಂದ ಇದನ್ನು ಬಳಸುವಾಗ ಪೆನ್ಸಿಲ್ ‌ಸುಲಭವಾಗಿ ಮೂವ್ ಆಗುತ್ತದೆ. ಇದರಿಂದಾಗಿ ನೀವು ಅದನ್ನು ಉಜ್ಜುವ, ಮತ್ತೆ ಮತ್ತೆ ಶಾರ್ಪ್‌ ಮಾಡುವ ಅಗತ್ಯವಿಲ್ಲ.

ನೇಲ್ ಪಾಲಿಶ್

ಇದನ್ನು ಹಚ್ಚಿಕೊಳ್ಳುವಾಗ, ಅದರ ಬಾಟಲಿಯನ್ನು ಯಾವುದರಿಂದಾದರೂ ಮುಚ್ಚಿಡಿ. ಇಲ್ಲದಿದ್ದರೆ ಗಾಳಿಯ ಸಂಪರ್ಕದಿಂದಾಗಿ ನೇಲ್ ಪಾಲಿಶ್‌ ತನ್ನ  ಎಕ್ಸ್ ಪೈರಿ ಡೇಟ್‌ಗೆ ಮೊದಲೇ ಕೆಟ್ಟು ಹೋದೀತು ಹಾಗೂ ಒಮ್ಮೆ ಇದು ಒಣಗಿತೆಂದರೆ, ಅದಕ್ಕೆ ತುಸು ಅಸಿಟೋನ್‌ (ಥಿನ್ನರ್‌) ಬೆರೆಸಿ, ಮುಚ್ಚಳ ಮುಚ್ಚಿ, ಬಾಟಲ್‌ನ್ನು ಚೆನ್ನಾಗಿ ಕುಲಕಬೇಕು. ಇದರಿಂದಾಗಿ ಅದು ಮೊದಲಿನಂತಾಗುತ್ತದೆ.

ಮಸ್ಕರಾ

ಉಳಿದ ಕಾಸ್ಮೆಟಿಕ್ಸ್ ಗೆ ಹೋಲಿಸಿದಾಗ ಇದರ ಬಾಳಿಕೆ ಬಲು ಕಡಿಮೆ. ಅದಕ್ಕಾಗಿ ಇದನ್ನು ನೇರ ಗಾಳಿ ಸಂಪರ್ಕಕ್ಕೆ ಬದಲು ಬಿಡಲೇಬೇಡಿ. ಇದಕ್ಕಾಗಿ ಇದರ ಬ್ರಶ್ಶನ್ನು ಬಾಟಲಿಗೆ ಹಾಕುವ, ತೆಗೆಯುವ ಕೆಲಸ ಮಾಡುತ್ತಿರಬೇಡಿ. ಇದು ಬೇಗ ಕೆಡಲು ಅಪ್ಲೀಕೇಟರ್‌ ಸಹ ಒಂದು ಕಾರಣ. ಪ್ರತಿ ಸಲ ನೀವು ಹೊಸ ಅಪ್ಲಿಕೇಟರ್‌ ಬಳಸುವಂತಿದ್ದರೆ, ಖಂಡಿತಾ ಇದರ ಬಾಳಿಕೆ ಹೆಚ್ಚುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ