ನೀವು ಸಹ 35ರ ಹರೆಯದಲ್ಲೇ 45ರ ತರಹ ಕಾಣಿಸುತ್ತಿದ್ದೀರಾ? ಮುಖದಲ್ಲಿನ ಸುಕ್ಕು, ನೆರಿಗೆ ನಿಮ್ಮ ಸೌಂದರ್ಯವನ್ನು ಹಾಳು ಮಾಡಿದೆಯೇ? ಹೌದಾದರೆ, ಹೆಚ್ಚುತ್ತಿರುವ ವಯಸ್ಸಿನ ಕಾರಣ ಈ ಗುರುತುಗಳನ್ನು ಹೈಫು ಆ್ಯಂಟಿ ಏಜಿಂಗ್‌ ಸ್ಕಿನ್‌ ಟ್ರೀಟ್‌ಮೆಂಟ್‌ ಮೂಲಕ  ಕಡಿಮೆ ಮಾಡಬಹುದು. ಈ ಟೆಕ್ನಿಕ್‌ ಜೋತು ಬಿದ್ದಿರುವ ಚರ್ಮಕ್ಕೆ ಕಸುವು ತುಂಬುತ್ತದೆ. ಜೊತೆಗೆ ಅದನ್ನು ಹಿಂದಿನಂತೆ ಯಂಗ್‌ಫ್ರೆಶ್‌ ಮಾಡುತ್ತದೆ.

ಈ ಕುರಿತು ಚರ್ಮತಜ್ಞರು ಹೇಳುವುದೆಂದರೆ ತೀಕ್ಷ್ಣ ಬಿಸಿಲು, ಪರಿಸರ ಮಾಲಿನ್ಯ, ಋತು ಬದಲಾವಣೆಯ ಜೊತೆ ಜೊತೆಗ ಸ್ಟ್ರೆಸ್‌, ಸ್ಮೋಕಿಂಗ್‌, ಆಲ್ಕೋಹಾಲ್‌ನಂಥ ದುರಭ್ಯಾಸಗಳು ನೇರವಾಗಿ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತವೆ. ಚರ್ಮ ಶುಷ್ಕಗೊಂಡು, ಜೋತಾಡುತ್ತಾ, ಡಲ್ ಎನಿಸುತ್ತದೆ. ದಿನೇದಿನೇ ಚರ್ಮದಲ್ಲಿನ ಕೊಬ್ಬಿನಂಶ ಕರಗುತ್ತದೆ. ಪರಿಣಾಮ, ಚರ್ಮ ತುಂಬಾ ದುರ್ಬಲವಾಗುತ್ತದೆ. ಇದರಿಂದಾಗಿ ಮುಖದಲ್ಲಿ ಸುಕ್ಕು, ರಿಂಕಲ್ಸ್, ಜೋತುಬೀಳುವ ಸಮಸ್ಯೆ ಹೆಚ್ಚುತ್ತದೆ. ಇದನ್ನೆಲ್ಲ ಕಡಿಮೆ ಮಾಡಲು ಸನ್‌ಸ್ಕ್ರೀನ್‌, ಆ್ಯಂಟಿ ಏಜಿಂಗ್‌ ಕ್ರೀಂ, ಜೆಂಟಲ್ ಮಾಯಿಶ್ಚರೈಸರ್‌ ಇತ್ಯಾದಿ ಬಳಸಬೇಕು. ಇದರ ಜೊತೆ ದೈನಂದಿನ ವ್ಯಾಯಾಮ, ಹೈಫು ಆ್ಯಂಟಿ ಏಜಿಂಗ್‌ ಸ್ಕಿನ್‌ ಟ್ರೀಟ್‌ಮೆಂಟ್‌ನ ಸಹಾಯ ಪಡೆಯಬಹುದು.

ಹೈಫು ಚಿಕಿತ್ಸೆ`ಹೈ ಇಂಟೆನ್ಸಿಟಿ ಫೋಕಸ್ಡ್  ಅಲ್ಟ್ರಾಸೌಂಡ್‌' ಎಂಬುದನ್ನೇ ಸಂಕ್ಷಿಪ್ತವಾಗಿ ಹೈಫು ಎನ್ನುತ್ತಾರೆ. ಇದೊಂದು ವಿಶೇಷ ಬಗೆಯ ಆ್ಯಂಟಿ ಏಜಿಂಗ್‌ ಟ್ರೀಟ್‌ಮೆಂಟ್‌ ಆಗಿದ್ದು, ನಾನ್‌ ಸರ್ಜಿಕಲ್ ಟೆಕ್ನಿಕ್‌ ಆಗಿದೆ. ಇದರ ನೆರವಿನಿಂದ ಮುಖ, ಕುತ್ತಿಗೆ ಜೊತೆಯಲ್ಲೇ ದೇಹದ ಇತರ ಭಾಗಗಳ ಜೋತುಬಿದ್ದ ಚರ್ಮವನ್ನೂ ಟೈಟ್‌ ಮಾಡಬಹುದಾಗಿದೆ. ಇದರಿಂದ ಯೌವನ ಮರಳಿ ಬಂದಷ್ಟೇ ಸಂತಸ ಹೊಂದುವಿರಿ!

ಹೈಫು ಪ್ರಯೋಜನಗಳು

ಇದರ ನೆರವಿನಿಂದ ಹುಬ್ಬು, ಹಣೆ, ಗಲ್ಲ, ಇತ್ಯಾದಿಗಳ ಜೋತುಬಿದ್ದ ಚರ್ಮವನ್ನು ಟೈಟ್‌ ಮಾಡಬಹುದು. ಇದರಿಂದ ಕಂಗಳು, ತುಟಿ, ಹಣೆ, ಮೂಗು ಇತ್ಯಾದಿಗಳ ಸುತ್ತಮುತ್ತ ಹರಡಿರುವ ಫೈನ್‌ ಲೈನ್ಸ್ ನ್ನೂ ತೊಲಗಿಸಬಹುದು. ಇದು ಓಪನ್‌ ಪೋರ್ಸ್‌ನ್ನೂ ಕಡಿಮೆ ಮಾಡುತ್ತದೆ. ಈ ಟೆಕ್ನಿಕ್‌ನಿಂದ ಸ್ಕಿನ್‌ ಟೈಟ್‌ನಿಂಗ್‌ ಜೊತೆಯಲ್ಲೇ ಸ್ಕಿನ್‌ ಲಿಫ್ಟಿಂಗ್‌ ಸಹ ಮಾಡಿಸಬಹುದು. ಉದಾ : ಜಾ ಲೈನ್‌ ಅಥವಾ ಹುಬ್ಬು ತನ್ನ ಜಾಗದಿಂದ ಜೋತಾಡುತ್ತಿದ್ದರೆ, ಅದನ್ನು  ಜಾ ಲಿಫ್ಟಿಂಗ್‌ ಐಬ್ರೋಸ್‌ ಲಿಫ್ಟಿಂಗ್‌ ಟೆಕ್ನಿಕ್‌ ಮೂಲಕ ಮತ್ತೆ ಸ್ವಸ್ಥಾನಕ್ಕೆ ಸೇರಿಸಬಹುದು.

ಹೇಗೆ ಕೆಲಸ ಮಾಡುತ್ತದೆ?

ಈ ಚಿಕಿತ್ಸೆಗಾಗಿ ಮೊದಲು ಮುಖಕ್ಕೆ ಲೋಕಲ್ ಅನಸ್ಥೇಶಿಯಾ ಕ್ರೀಂ ಹಚ್ಚುತ್ತಾರೆ. ಅದರಿಂದ ಚರ್ಮ ಆರ್ದ್ರತೆ ಗಳಿಸುತ್ತದೆ. ನಂತರ ಮೆಶೀನ್‌ ಹ್ಯಾಂಡ್‌ ಪೀಸ್‌ನಿಂದ ಪ್ರಭಾವಿತ ಜಾಗಗಳಲ್ಲಿ ಶಾಕ್‌ (ಲೇಸರ್‌ ಕಿರಣಗಳ ತರಹ) ನೀಡುತ್ತಾರೆ, ಅದರಿಂದ ಆ ಭಾಗ ತುಸು ಬೆಚ್ಚಗಾಗುತ್ತದೆ. ಇದರ ಪ್ರಭಾವದಿಂದ ಸ್ಕಿನ್‌ ಟಿಶ್ಯು ಶ್ರಿಂಕ್‌ ಆಗಿ, ತ್ವಚೆಯಲ್ಲಿ ಕಸುವು ತುಂಬಿಕೊಳ್ಳುತ್ತದೆ.

ಈ ಟೆಕ್ನಾಲಜಿಯಿಂದಾಗಿ ಹೊಸ ಕೊಲ್ಯಾಜೆನ್‌ ಸಹ ಉತ್ಪತ್ತಿ ಆಗುತ್ತದೆ. ಕೊಲ್ಯಾಜೆನ್‌ ಒಂದು ಬಗೆಯ ಸ್ಕಿನ್‌ ಫೈಬರ್‌ ಆಗಿದ್ದು, ವಯಸ್ಸಾಗುತ್ತಿದ್ದಂತೆ ಕಡಿಮೆ ಆಗುತ್ತಾ ಹೋಗುತ್ತದೆ. ಅದು ಕಡಿಮೆ ಆಗುತ್ತಿದ್ದಂತೆ ಮುಖದ ಮೇಲೆ ಸುಕ್ಕು, ನೆರಿಗೆ, ಫೈನ್‌ ಲೈನ್ಸ್ ಎದ್ದು ಕಾಣತೊಡಗುತ್ತವೆ. ಹೀಗಿರುವಾಗ ಈ ಟ್ರೀಟ್‌ಮೆಂಟ್‌ ಮೂಲಕ ಹೊಸ ಕೊಲ್ಯಾಜೆನ್‌ನ ಉತ್ಪತ್ತಿ ಸುಕ್ಕುಗಳ ನಿವಾರಣೆಗೆ ಸಹಕರಿಸುತ್ತದೆ. ಇಡೀ ಮುಖದ ಸುಕ್ಕುಗಳು ಮತ್ತು ಫೈನ್‌ ಲೈನ್ಸ್ ನ್ನು ಕಡಿಮೆಗೊಳಿಸಲು 45-60 ನಿಮಿಷ ಸಾಕು. ಎಲ್ಲಕ್ಕೂ ಹೆಚ್ಚಿನ ಲಾಭವೆಂದರೆ ಈ ಚಿಕಿತ್ಸೆಯಿಂದ ಯಾವುದೇ ನೋವು ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ