ಸುಂದರವಾಗಿ ಕಾಣಿಸಿಕೊಳ್ಳ ಬೇಕೆಂಬುದು ನಿಮ್ಮ ಇಂಗಿತವಾಗಿದ್ದರೆ ಮತ್ತು ಮೇಕಪ್‌ನ ಲೇಟೆಸ್ಟ್ ಟ್ರೆಂಡ್ಸ್ ಬಗ್ಗೆ ನೀವು ಅಪ್‌ಡೇಟ್ ಆಗಲು ಬಯಸಿದರೆ, ನಿಮ್ಮ ಸ್ಮಾರ್ಟ್‌ಫೋನ್‌ನ್ನು ನಿಮ್ಮ ಬ್ಯೂಟಿ ಎಕ್ಸ್ ಪರ್ಟ್‌ನ್ನಾಗಿ ಮಾಡಿಕೊಳ್ಳಬಹುದು. ಅಂದರೆ ಸ್ಮಾರ್ಟ್‌ಫೋನ್‌ನಲ್ಲಿರುವ ಬ್ಯೂಟಿ ಆ್ಯಪ್‌ ಸೌಂದರ್ಯದ ಎಲ್ಲ ಮಾಹಿತಿಯ ಬಗೆಗೆ ನಿಮ್ಮನ್ನು ಅಪ್‌ಡೇಟ್‌ ಮಾಡಿಸುತ್ತದೆ.

ಮಾಡ್ ಫೇಸ್

ಈ ಆ್ಯಪ್‌ನಲ್ಲಿ ನಿಮ್ಮ ಸೆಲ್ಛೀ ತೆಗೆದುಕೊಂಡು ಯಾವ ಸೆಲೆಬ್ರಿಟಿ ಹೇರ್‌ಸ್ಟೈಲ್ ನಿಮಗೆ ಹೊಂದುತ್ತದೆ ಮತ್ತು ಯಾವ ಹೇರ್‌   ಸ್ಟೈಲ್‌ನಲ್ಲಿ ನೀವು ಹೇಗೆ ಕಾಣುವಿರಿ ಎಂಬುದನ್ನೆಲ್ಲ ನೋಡಿಕೊಳ್ಳಬಹುದು. ಈ ಬ್ಯೂಟಿ ಆ್ಯಪ್‌ನಲ್ಲಿ ಇದೆಲ್ಲವನ್ನು ನೀವು ಕೆಲವೇ ಕ್ಷಣಗಳಲ್ಲಿ ತಿಳಿಯಬಹುದು. ಇದಲ್ಲದೆ, ಯಾವ ಹೇರ್‌ ಕಲರ್‌ ನಿಮಗೆ ಹೊಂದಿಕೆಯಾಗುತ್ತದೆ. ಯಾವ ಮೇಕಪ್‌ನಿಂದ ನಿಮ್ಮ ಸೌಂದರ್ಯ ಅರಳುತ್ತದೆ. ಯಾವುದರಿಂದ ಅಂದವಾಗಿ ಕಾಣುತ್ತೀರಿ ಎಂಬುದೆಲ್ಲವನ್ನೂ ಈ ಆ್ಯಪ್‌ ನಿಮಗೆ ತಿಳಿಸಿಕೊಡುತ್ತದೆ.

ಬ್ಯೂಟಿಫುಲ್ ಮೀ

ಈ ಆ್ಯಪ್‌ ನಿಮ್ಮ ಫೋಟೋವನ್ನು ವಿಶ್ಲೇಷಿಸಿ, ನಿಮ್ಮ ಸ್ಕಿನ್‌ ಹೇಗಿದೆ? ಅದಕ್ಕೆ ಯಾವ ಫೌಂಡೇಶನ್‌ನ ಶೇಡ್‌ ಬಳಸಬೇಕು, ಅದು ಏಜಿಂಗ್‌ನ ಪ್ರಭಾವಕ್ಕೊಳಗಾಗಿದೆಯೇ ಎಂಬುದನ್ನು ತಿಳಿಸುತ್ತದೆ. ಜೊತೆಗೆ ಈ ಆ್ಯಪ್‌ ಕೂದಲಿನ ಸೌಂದರ್ಯಕ್ಕೆ ಟಿಪ್ಸ್, ಹೊಸ ಬ್ಯೂಟಿ ಪ್ರಾಡಕ್ಟ್ ಮತ್ತು ಟ್ರೆಂಡ್ಸ್ ಬಗ್ಗೆಯೂ ಮಾಹಿತಿ ನೀಡುತ್ತದೆ.

ಬ್ಯೂಟಿಲಿಶ್

ಈ ಆ್ಯಪ್‌ನಿಂದ ಇತ್ತೀಚಿನ ಮೇಕಪ್‌ ಮತ್ತು ಹೇರ್‌ ಸ್ಟೈಲ್‌ನ ಟ್ರೆಂಡ್ಸ್ ಮತ್ತು ಆ ಟ್ರೆಂಡ್‌ನ್ನು ಅನುಸರಿಸುವ ರೀತಿ ನಿಮಗೆ ತಿಳಿದುಬರುತ್ತದೆ. ಜೊತೆಗೆ ಇದರಲ್ಲಿ ಬ್ಯೂಟಿ ರಿಲೇಟೆಡ್‌ ಟಿಪ್ಸ್, ಬ್ಯೂಟಿ ಪ್ರಾಡಕ್ಟ್ ಗಳ ರಿವ್ಯೂ ಮತ್ತು ಅವುಗಳ ಶಾಪಿಂಗ್‌ ಆಪ್ಶನ್ ಕೂಡ ಲಭ್ಯವಿರುತ್ತದೆ.

ಐ ಮೇಕಪ್‌ ಟ್ಯುಟೋರಿಯಲ್

ಕಣ್ಣುಗಳ ಮೇಕಪ್‌ನಿಂದ ನಿಮ್ಮ ಮುಖಕ್ಕೆ ಕಳೆ ಬರುತ್ತದೆ. ಆದ್ದರಿಂದ ನಿಮ್ಮ ಕಣ್ಣುಗಳ ಮೇಕಪ್‌ ಆಕರ್ಷಕವಾಗಿರುವುದು ಮುಖ್ಯ. ಐ ಮೇಕಪ್‌ ಟ್ಯುಟೋರಿಯಲ್‌ನ ಸಹಾಯದಿಂದ ನೀವು ವಿವಿಧ ಬಗೆಯಲ್ಲಿ ಕಣ್ಣುಗಳ ಮೇಕಪ್‌ ಮಾಡಿಕೊಂಡು ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬಹುದು.

ಟ್ರೈ ಇನ್‌ ಆನ್‌ ಮೇಕಪ್‌

ಪ್ರತಿಯೊಬ್ಬ ಮಹಿಳೆಗೂ ಫೌಂಡೇಶನ್‌ ಐ ಶ್ಯಾಡೊ ಮತ್ತು ಲಿಪ್‌ಸ್ಟಿಕ್‌ನ ಯಾವ ಶೇಡ್‌ ಆರಿಸಿಕೊಳ್ಳಬೇಕು ಎಂಬುದು ಒಂದು ಸವಾಲಾಗಿಬಿಡುತ್ತದೆ. ಈ ವಿಶೇಷ ಆ್ಯಪ್‌ನ ಸೌಲಭ್ಯದಿಂದ ಈ ಸಮಸ್ಯೆ ಪರಿಹಾರವಾಗುತ್ತದೆ. ನಿಮ್ಮ ಮುಖದ ಒಂದು ಫೋಟೋ ತೆಗೆದು ನೀವು ಕೊಳ್ಳಬೇಕೆಂದಿರುವ ಬ್ಯೂಟಿ ಪ್ರಾಡಕ್ಟ್ ನ ಬಾರ್‌ಕೋಡ್‌ನಿಂದ ಸ್ಕ್ಯಾನ್‌ ಮಾಡಬೇಕು. ಆಗ ನಿಮಗೆ ಆ ಪ್ರಾಡಕ್ಟ್ ಲೇಪಿಸಿರುವ ನಿಮ್ಮ ಮುಖದ ಫೋಟೋ ಮೂಡಿಬರುತ್ತದೆ. ಇದರಿಂದ ನೀವು, ಆ ಪ್ರಾಡಕ್ಟ್ ನಿಮಗೆ ಹೊಂದುವುದೇ ಎಂದು ಪರೀಕ್ಷಿಸಿ ನಂತರ ಕೊಳ್ಳಬಹುದು.

ಹೇರ್‌ ಡಿಸೈನ್‌

ಈ ಆ್ಯಪ್‌ನ ಸಹಾಯದಿಂದ ಅನೇಕ ರೀತಿಯ ಹೇರ್‌ ಸ್ಟೈಲ್‌ಗಳನ್ನು ಮಾಡಬಹುದು. ಇದರಲ್ಲಿ ಹೇರ್‌ ಸ್ಟೈಲ್‌ಗೆ ಸಂಬಂಧಿಸಿದ ಟ್ಯುಟೋರಿಯಲ್ ಲಭ್ಯವಿದೆ ಮತ್ತು ಹೇರ್‌ ಸ್ಟೈಲ್ ಮಾಡುವ ರೀತಿಯನ್ನು ಸ್ಟೆಪ್‌ ಬೈ ಸ್ಟೆಪ್‌ ತೋರಿಸಲಾಗಿದೆ. ಇದರಲ್ಲಿ  ಒಂದು ಸ್ಮಾರ್ಟ್‌ ಮಿರರ್‌ ಕೂಡ ಇದ್ದು, ಅದರಲ್ಲಿ ನೀವು ಮಾಡಿದ ಹೇರ್‌ ಸ್ಟೈಲ್‌ನ ಫೋಟೋವನ್ನು ತೆಗೆಯಬಹುದಾಗಿದೆ. ಅದನ್ನು ನಿಮ್ಮ ಬಂಧುಮಿತ್ರರೊಂದಿಗೆ ಶೇರ್‌ ಮಾಡಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ