ತುಟಿಗಳ ಸೌಂದರ್ಯ ಹೆಚ್ಚಿಸುವಲ್ಲಿ ಲಿಪ್‌ಸ್ಟಿಕ್‌ಗೆ ವಿಶೇಷ ಮಹತ್ವವಿದೆ. ಆದರೆ ಕೆಲವು ಮಹಿಳೆಯರು ಸೂಕ್ತ ಲಿಪ್‌ಸ್ಟಿಕ್‌ ಆರಿಸಲು ಅಸಮರ್ಥರಾಗಿರುತ್ತಾರೆ. ಇದರ ಪ್ರಭಾವ ಅವರ ಲುಕ್ಸ್ ಮೇಲೆ ಉಂಟಾಗುತ್ತದೆ. ಮುಖ್ಯವಾಗಿ ಬೇಸಿಗೆಯ ಕಾಲದಲ್ಲಿ ಲಿಪ್‌ಸ್ಟಿಕ್‌ಆರಿಸುವ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಲುಕ್‌ ಪೂರ್ತಿಯಾಗಿ ಹಾಳಾಗುತ್ತದೆ. ಬ್ಯೂಟೀಶಿಯನ್‌ ಹೀಗೆ ಹೇಳುತ್ತಾರೆ, ``ಬೇಸಿಗೆ ಕಾಲದಲ್ಲಿ ಮಹಿಳೆಯರು ಕೂಲಿಂಗ್‌ ಎಫೆಕ್ಟ್ ನೀಡುವ ಡ್ರೆಸ್‌ಗಳಿಗಾಗಿ ಹುಡುಕುತ್ತಾರೆ. ಅದೇ ರೀತಿ ಲಿಪ್‌ಸ್ಟಿಕ್‌ನ ಶೇಡ್‌ ಮತ್ತು ಫಿನಿಶಿಂಗ್‌ ಕೂಡ ಕಾಲಕ್ಕೆ ತಕ್ಕಂತಿರಬೇಕು. ಮಹಿಳೆಯರು ತಮ್ಮ ಸ್ಕಿನ್‌ ಟೋನ್‌ನ್ನೂ ಗಮನದಲ್ಲಿಡಬೇಕು. ಏಕೆಂದರೆ ಲಿಪ್‌ಸ್ಟಿಕ್‌ನ ಶೇಡ್‌ ಸ್ಕಿನ್‌ ಟೋನ್‌ಗೆ ಕಳೆ ನೀಡುತ್ತದೆ. ಈ ಕಾಲದಲ್ಲಿ ಗ್ಲಾಸೀ ಬದಲು ಮ್ಯಾಟ್‌ ಫಿನಿಶ್‌ನ ಲಿಪ್‌ಸ್ಟಿಕ್‌ಬಳಸಬೇಕು. ಏಕೆಂದರೆ ಇದು ಲೈಟ್‌ ಮತ್ತು ಸಾಬರ್‌ ಲುಕ್‌ ನೀಡುತ್ತದೆ.''

ಸ್ಕಿನ್‌ ಟೋನ್‌ಗೆ ತಕ್ಕ ಬಣ್ಣ

ಸ್ಕಿನ್‌ ಟೋನ್‌ನ್ನು ಗುರುತಿಸುವ ಉತ್ತಮ ವಿಧಾನವೆಂದರೆ, ಮಣಿಕಟ್ಟಿನ ಮೇಲೆ ಕಂಡುಬರುವ ನರನಾಡಿಗಳ ಬಣ್ಣವನ್ನು ನೋಡುವುದು. ಅದು ನೀಲಿ ಬಣ್ಣವಾಗಿದ್ದರೆ ಕೂಲ್ ಸ್ಕಿನ್‌ ಪ್ರತೀಕವಾಗಿರುತ್ತದೆ ಮತ್ತು ಹಸಿರು ಬಣ್ಣವಾಗಿದ್ದರೆ ವಾರ್ಮ್ ಸ್ಕಿನ್‌ ಎಂದು ತಿಳಿಯಬಹುದು. ಕೂಲ್ ‌ಸ್ಕಿನ್‌ ಟೋನ್‌ಉಳ್ಳ ಮಹಿಳೆಯರ ಬಣ್ಣ ಬೆಳ್ಳಗಿರುತ್ತದೆ. ವಾರ್ಮ್ ಸ್ಕಿನ್‌ ಟೋನ್‌ನ ಮಹಿಳೆಯರು ವೀಟಿಶ್‌, ಡಸ್ಕೀ ಮತ್ತು ಡೀಪ್‌ ಡಾರ್ಕ್‌ ಬಣ್ಣ ಹೊಂದಿರುತ್ತಾರೆ. ಪ್ರತಿಯೊಂದು ಬಣ್ಣದ ಚರ್ಮಕ್ಕೂ ಪ್ರತ್ಯೇಕ ಬಣ್ಣದ ಲಿಪ್‌ಸ್ಟಿಕ್‌ ಚೆನ್ನಾಗಿರುತ್ತದೆ.

ಬಿಳಿ ಬಣ್ಣದ ಚರ್ಮಕ್ಕೆ ಬೇಸಿಗೆಯಲ್ಲಿ ಪಿಂಕ್‌, ಕೋರಲ್, ನ್ಯೂಡ್‌ ಮತ್ತು ಬೇಜ್‌ ಬಣ್ಣಗಳು ಬಹಳ ಚೆನ್ನಾಗಿ ಕಾಣುತ್ತವೆ.

ವೀಟಿಶ್‌ ಅಂದರೆ ಗೋದಿ ಬಣ್ಣ ಉಳ್ಳ ಮಹಿಳೆಯರಿಗೆ ಕಾಪರ್‌ ಮತ್ತು ಬ್ರಾಂಜ್‌, ರೋಸ್‌ ರೆಡ್‌ ಮತ್ತು ಬೆರಿ ಶೇಡ್‌ನ ಲಿಪ್‌ಸ್ಟಿಕ್‌ಚೆನ್ನಾಗಿ ಹೊಂದಿಕೆಯಾಗುತ್ತದೆ.

ಚರ್ಮ ಶ್ಯಾಮಲ ವರ್ಣ ಆಗಿದ್ದರೆ ಬ್ರೌನ್‌ ಮತ್ತು ಪರ್ಪಲ್ ಶೇಡ್‌ನ ಲಿಪ್‌ಸ್ಟಿಕ್‌ಗಳನ್ನು ಎಂದೂ ಬಳಸಬೇಡಿ.

ಅತ್ಯಂತ ಡಾರ್ಕ್‌ ಬಣ್ಣರ ಚರ್ಮದವರಿಗೆ ಬ್ರೌನ್‌, ಪ್ಲಮ್ ಮತ್ತು ಲೈಟ್ ಕಲರ್‌ನ ಲಿಪ್‌ಸ್ಟಿಕ್‌ ಹೊಂದಿಕೆಯಾಗುತ್ತದೆ.

ಲಿಪ್‌ಸ್ಟಿಕ್‌ ಕೊಳ್ಳುವಾಗ ಗಮನಿಸಿ

ಲಿಪ್‌ಸ್ಟಿಕ್‌ ಕೊಳ್ಳುವ ಸಮಯದಲ್ಲಿ ಕೆಲವು ಅಂಶಗಳ ಬಗ್ಗೆ ಗಮನ ನೀಡಬೇಕೆಂದು ಬ್ಯೂಟೀಶಿಯನ್‌ ಹೇಳುತ್ತಾರೆ, ``ಕೆಲವು ಮಹಿಳೆಯರು ಚಾರ್ಟ್‌ ಅಥವಾ ಹೊರಗಿನಿಂದ ಲಿಪ್‌ಸ್ಟಿಕ್‌ನ ಬಣ್ಣ ನೋಡಿ ಕೊಳ್ಳುತ್ತಾರೆ. ಆದರೆ ಇದು ಸರಿಯಾದ ವಿಧಾನವಲ್ಲ. ಪ್ರತಿಯೊಂದು ಬ್ರಾಂಡ್‌ನಲ್ಲೂ ಒಂದೇ ಲಿಪ್‌ಸ್ಟಿಕ್‌ನ 2-3 ಕಲರ್‌ ಟೋನ್‌ ಇರುತ್ತವೆ. ಆದ್ದರಿಂದ ನಿಮ್ಮ ತುಟಿಗಳಿಗೆ ಯಾವ ಕಲರ್‌ ಟೋನ್‌ ಚೆನ್ನಾಗಿ ಕಾಣುವುದು ಎಂದು ತಿಳಿಯಲು ಲಿಪ್‌ಸ್ಟಿಕ್‌ನ್ನು ಟ್ರೈ ಮಾಡಿ ನೋಡಿದ ನಂತರವೇ ಕೊಳ್ಳಬೇಕು.''

ಕೆಳಗೆ ಕೊಟ್ಟಿರುವ ವಿಷಯಗಳನ್ನು ಗಮನಿಸಿ :

ಕೆಳತುಟಿಯ ಬಣ್ಣಕ್ಕಿಂತ 2 ಶೇಡ್‌ ಗಾಢವಾಗಿರುವ ಲಿಪ್‌ಸ್ಟಿಕ್‌ನ್ನೇ ಕೊಳ್ಳಿ. ಬಣ್ಣವನ್ನು ಪರೀಕ್ಷಿಸಲು ಕೆಳತುಟಿಗೆ ಲಿಪ್‌ಸ್ಟಿಕ್‌ ಹಚ್ಚಿ ಮತ್ತು ಮೇಲ್ತುಟಿಯ ಬಣ್ಣದೊಂದಿಗೆ ಹೋಲಿಸಿ ನೋಡಿ. ಬಣ್ಣ ಸಮಾನವಾಗಿದ್ದರೆ ಮಾತ್ರ ಆ ಲಿಪ್‌ಸ್ಟಿಕ್‌ ಖರೀದಿಸಿ.

ಲಿಪ್‌ಸ್ಟಿಕ್‌ನ ಸರಿಯಾದ ಕಲರ್‌ ಎಫೆಕ್ಟ್

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ