ನಿಮ್ಮ ಪರ್ಫೆಕ್ಟ್ ಹೇರ್ ಕಟ್ ನಿಮ್ಮ ಸೌಂದರ್ಯಕ್ಕೆ ಮೆರುಗು ನೀಡುತ್ತದೆ ಎಂದರೆ, ಅವ್ಯವಸ್ಥಿತವಾಗಿ ಹರಡಿರುವ ಕೂದಲು ನಿಮ್ಮನ್ನು ಸೋಮಾರಿ ಮಹಿಳೆಯ ಗುಂಪಿಗೆ ಸೇರಿಸುತ್ತದೆ. ಹೇರ್ ಕಟ್ ಮಾಡಿಸುವಾಗ ನಿಮ್ಮ ಮುಖ, ಕುತ್ತಿಗೆ ಮತ್ತು ಭುಜಗಳ ಆಕಾರಕ್ಕೆ ತಕ್ಕಂತೆ ಮತ್ತು ನಿಮ್ಮ ವ್ಯಕ್ತಿತ್ವಕ್ಕೆ ಅನುರೂಪವಾಗಿ ಕಟಿಂಗ್ ಇರಬೇಕು.
ಮುಖದ ಆಕಾರ : ಹೇರ್ ಕಟ್ ಪರ್ಫೆಕ್ಟ್ ಆಗಿರಲು ನಿಮ್ಮ ಮುಖದ ಆಕಾರ ಯಾವುದು ಎಂದು ನೀವು ತಿಳಿದಿರಬೇಕು. ಆಗ ಮಾತ್ರ ಯಾವ ಹೇರ್ ಕಟ್ ನಿಮ್ಮ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ ಎಂದು ನಿಮಗೆ ತಿಳಿಯುತ್ತದೆ. ಇದಕ್ಕಾಗಿ ನಿಮ್ಮ ಕೂದಲನ್ನು ಪೋನಿಟೇಲ್ ಮಾದರಿಯಲ್ಲಿ ಕಟ್ಟಿ, ಕನ್ನಡಿಯ ಮುಂದೆ ನಿಲ್ಲಿ. ಕನ್ನಡಿಯ ಹತ್ತಿರಕ್ಕೆ ಮುಖವನ್ನು ಇರಿಸಿ ಸ್ಕೆಚ್ ಪೆನ್‌ನಿಂದ ಕನ್ನಡಿಯ ಮೇಲೆ ನಿಮ್ಮ ರೂಪುರೇಖೆಯನ್ನು ಗುರುತು ಹಾಕಿ. ನಿಮ್ಮ ಪ್ರತಿಬಿಂಬದಿಂದ ನಿಮ್ಮ ಮುಖದ ಶೇಪ್ ತಿಳಿದುಬರುತ್ತದೆ.
ಕೋಲು ಮುಖ : ಚಿಕ್ಕ ಮತ್ತು ಮೀಡಿಯಮ್ ಆಕಾರದ ಕೂದಲು ಕೋಲು ಮುಖದವರಿಗೆ ಚೆನ್ನಾಗಿ ಕಾಣುತ್ತದೆ. ಇದು ಮುಂದಲೆಯ ಮೇಲೆ ಕಾಣಿಸುವಂತೆ ಮಾಡಿರಬೇಕು. ಕೆನ್ನೆಯ ಹತ್ತಿರ ಲೇಯರ್‌ನೊಂದಿಗಿದ್ದು ಶೋಲ್ಡರ್ ಲೆಂತ್‌ನ ಹೇರ್ ಕಟ್ ಮುಖಕ್ಕೆ ಚೆನ್ನಾಗಿ ಹೊಂದುತ್ತದೆ. ಇದಲ್ಲದೆ ಸ್ಚ್ರೇಟ್ ಕೂದಲಿನ ಬದಲು ಬೇಬಿ ಮತ್ತು ಕರ್ಲೀ ಟೆಕ್ಸ್ ಚರ್‌ಉಳ್ಳ ಹೇರ್‌ಸ್ಟೈಲ್ ಚೆನ್ನಾಗಿರುತ್ತದೆ.
ಓವಲ್ ಫೇಸ್ : ನಿಮ್ಮ ಮುಖ ಓವಲ್ ಶೇಪ್‌ನಲ್ಲಿದ್ದರೆ, ಅದಕ್ಕೆ ಸಾಮಾನ್ಯವಾಗಿ ಎಲ್ಲ ಬಗೆಯ ಹೇರ್ ಕಟ್ ಚೆನ್ನಾಗಿ ಕಾಣುತ್ತದೆ. ಬೇಕಾದರೆ ನೀವು ಶಾರ್ಟ್ ಅಥವಾ ಲಾಂಗ್ ಲೇಯರ್ ಅಥವಾ ಬಾಬ್‌ಕಟ್ ಮಾಡಿದ ಮುಖವನ್ನು ಕವರ್ ಮಾಡದೆ ನಿಮ್ಮ ಫೇಶಿಯಲ್ ಫೀಚರ್‌ನ್ನೂ ಹೈಲೈಟ್ ಮಾಡುವಂತಿರಬೇಕು. ರೇಜರ್, ವರ್ಟಿಕಲ್ ಲೇಯರ್ ಮತ್ತು ಫೆದರ್ ಟಚ್ ಮುಂತಾದವುಗಳನ್ನೂ ನೀವು ಆರಿಸಿ.
ಡೈಮಂಡ್ ಫೇಸ್‌ಕಟ್ : ಚೀಕ್ ಬೋನ್ಸ್ ಗೆ ಹೋಲಿಸಿದರೆ ಹಣೆ ಮತ್ತು ಜಾ ಲೈನ್ ಎದ್ದು ಕಾಣಿಸದಂಥವರಿಗೆ ಡೈಮಂಡ್ ಫೇಸ್‌ಕಟ್ ಇರುತ್ತದೆ. ಇಂತಹ ಫೇಸ್ ಶೇಪ್ ಇರುವವರು ಚೀಕ್‌ಬೋನ್ಸನ್ನು ಕೊಂಚ ಕವರ್‌ಮಾಡುತ್ತಾ ಮುಖದ ಉದ್ದ ಕಡಿಮೆ ಕಾಣುವಂತಹ ಹೇರ್ ಕಟ್ ಆರಿಸಿಕೊಳ್ಳಬೇಕು. ಕೂದಲನ್ನು ಸ್ಟ್ರೇಟ್ ಆಗಿಸಿಕೊಳ್ಳದೆ ಅದರಲ್ಲಿ ಕೊಂಚ ಟೆಕ್ಸ್ ಚರ್ ಕ್ರಿಯೇಟ್‌ಮಾಡಿ. ಮಲ್ಟಿಪಲ್ ಲೇಯರ್ ಫಾಕ್ಸ್ ಪಿರಮಿಡ್ ಮತ್ತು ಬ್ಯಾಂಗಲ್ ವಿತ್ ಮೀಡಿಯಮ್ ಫೆದರ್‌ನಲ್ಲಿ ನೀವು ಯಾವುದೇ ಕಟ್‌ಆರಿಸಿ.
ರೌಂಡ್ ಫೇಸ್‌ಕಟ್ : ಮುಖದ ಆಕಾರ ಗುಂಡಾಗಿರುವ ಮಹಿಳೆಯರು ಮುಖ ಕೊಂಚ ಉದ್ದವಾಗಿ ಕಾಣುವಂತಹ ಹೇರ್ ಕಟ್ ಆರಿಸಿಕೊಳ್ಳಬೇಕು. ರೌಂಡ್ ಶೇಪ್ ಹೇರ್ ಕಟ್ ಬ್ಲಂಟ್ (ಶಾರ್ಪ್), ಲೇಯರ್, ಪಾಟ್ ಶೇಪ್ ಕಟ್ ಮುಂತಾದ ಚಿನ್‌ಗಿಂತ ಕೆಳಗೆ ಬರುವಂತಹ ಹೇರ್ ಕಟ್‌ನ್ನು ಆರಿಸಿಕೊಂಡರೆ ಮುಖ ತೆಳುವಾಗಿ ಮತ್ತು ಉದ್ದವಾಗಿರುವಂತೆ ತೋರುತ್ತದೆ.
ಟ್ರೈಯಾಂಗ್ಯುಲರ್ ಫೇಸ್‌ಕಟ್ : ಈ ಫೇಸ್ ಕಟ್‌ಇರುವವರಿಗೆ ಚೀಕ್ ಬೋನ್ಸ್ ಎದ್ದು ಕಾಣುತ್ತದೆ. ಲೇಯರ್‌ಉಳ್ಳ ಹೇರ್ ಕಟ್, ಜಾ ಲೈನ್‌ನ್ನು ಬ್ಯಾಲೆನ್ಸ್ ಮಾಡಿ ಸುಂದರವಾದ ಲುಕ್ ಒದಗಿಸುತ್ತದೆ. ಈ ಮಹಿಳೆಯರು ಶಾರ್ಟ್ ಹೇರ್ ಕಟ್‌ನಲ್ಲಿ ವಯಸ್ಸಿಗಿಂತ ಕಡಿಮೆಯಾಗಿ ಮತ್ತು ಹೆಚ್ಚು ಸುಂದರವಾಗಿ ಕಾಣುತ್ತಾರೆ. ಆದ್ದರಿಂದ ಅವರು ಶಾರ್ಟ್ ಲೇಯರ್, ಜಿಗ್‌ಜಾಗ್ ಕ್ರಾಸ್ ಲೇಯರ್‌ಮತ್ತು ಪಾಟ್ ಶೇಪ್‌ಕಟ್‌ಗಳನ್ನು ಟ್ರೈ ಮಾಡಬಹುದು.