ಮುಖ ನಮ್ಮ ವ್ಯಕ್ತಿತ್ವದ ಕನ್ನಡಿಯಾದರೆ ಕಣ್ಣುಗಳು ಸೌಂದರ್ಯದ ಅಳತೆಗೋಲು. ಕಣ್ಣುಗಳನ್ನು ಇನ್ನಷ್ಟು ಸುಂದರಗೊಳಿಸುವುದು ಹೇಗೆಂದು ತಿಳಿಯೋಣ ಬನ್ನಿ......

ಹೌದು, ಸೌಂದರ್ಯದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಆತ್ಮವಿಶ್ವಾಸದಿಂದ ಸಫಲತೆ ಸಿಗುತ್ತದೆ. ಮನೆಯಲ್ಲಾಗಲೀ, ಆಫೀಸ್ ನಲ್ಲಾಗಲೀ ಅಥವಾ ಯಾವುದಾದರೂ ಪಾರ್ಟಿಯಲ್ಲಾಗಲೀ ಎಲ್ಲ ಕಡೆ ಸ್ಮಾರ್ಟ್‌ ನೆಸ್‌ ಮತ್ತು ಸೌಂದರ್ಯವೇ ಮಾನದಂಡವಾಗಿರುತ್ತದೆ. ಆದರೆ ಪ್ರತಿಯೊಬ್ಬರೂ ಸುಂದರವಾಗಿರಬೇಕೆಂಬ ಅಗತ್ಯವಿಲ್ಲ. ಮೇಕಪ್‌ ಮೂಲಕ ನೀವು ನಿಮ್ಮ ವ್ಯಕ್ತಿತ್ವ, ಬಣ್ಣ ಮತ್ತು ರೂಪಗಳಿಗೆ ಕಾಂತಿ ತರಬಹುದು.

ಇದರ ಬಗ್ಗೆ ಮುಂಬೈನ ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್ ಮತ್ತು ಫ್ಯಾಷನ್‌ ಸ್ಟೈಲಿಸ್ಟ್ ಓಜಸ್‌ ಹೀಗೆ ಹೇಳುತ್ತಾರೆ, ``ನಾನು 12 ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದೇನೆ. ಮೇಕಪ್‌ ನಿಂದ ಮುಖ ಫ್ರೆಶ್‌ ಆಗಿ ಕಾಣುತ್ತದೆ. ಮುಖದ ಮೇಲಿನ ಯಾವುದೇ ಕಲೆಯನ್ನು ಮೇಕಪ್‌ ನಿಂದ ಅಡಗಿಸಬಹುದು. ಮೇಕಪ್‌ ನಿಂದ ನಿಮ್ಮ ಮುಖವಷ್ಟೇ ಅಲ್ಲ, ನೀವು ಮಾತನಾಡುವ ರೀತಿ, ನಡೆಯುವ ವಿಧಾನದವರೆಗೆ ಬದಲಿಸಬಹುದು. ಐಶ್ಚರ್ಯ ರೈ, ಪ್ರಿಯಾಂಕಾ ಚೋಪ್ರಾ, ರಾಣಿ ಮುಖರ್ಜಿ ಅಥವಾ ಸೋನಂ ಕಪೂರ್‌ ಇತ್ಯಾದಿ ನಟಿಯರು ಮೇಕಪ್‌ ಮಾಡಿಕೊಂಡು ತಮಗೆ ಟ್ರೆಂಡಿ ಫ್ರೆಶ್‌ ಲುಕ್‌ ತಂದುಕೊಂಡಿದ್ದಾರೆ.

ಬಹಳಷ್ಟು ಸೌಂದರ್ಯ ಸಾಧನಗಳನ್ನು ಮುಖಕ್ಕೆ ಹಚ್ಚಿಕೊಂಡ ಮಾತ್ರಕ್ಕೇ ನೀವು ಸುಂದರವಾಗಿ ಕಾಣಬೇಕೆಂದಿಲ್ಲ. ತೆಳುವಾಗಿ ಪೌಡರ್‌ ಮತ್ತು ಕಾಜಲ್ ಹಚ್ಚುವುದರಿಂದಲೂ ಸುಂದರವಾಗಿ ಕಾಣಬಹುದು.

ಇಂದು ಕಾಸ್ಮೆಟಿಕ್‌ ಉದ್ಯೋಗ ಬಹಳಷ್ಟು ಹರಡಿದೆ. ಒಳ್ಳೆಯ ಉತ್ಪನ್ನ ಸುಲಭವಾಗಿ ಸಿಗುತ್ತದೆ. ಮಹಿಳೆಯರು ಅವನ್ನು ಉಪಯೋಗಿಸುತ್ತಲೂ ಇದ್ದಾರೆ. ಆದರೆ ಅವರಿಗೆ ಈ ಉತ್ಪನ್ನಗಳನ್ನು ಹಚ್ಚಿಕೊಳ್ಳುವ ಮಾಹಿತಿಯೂ ಸಿಗಬೇಕು. ಆಗಲೇ ಅವರು ಸುಂದರವಾಗಿ ಕಾಣಿಸಬಹುದು. ಮುಖದ ಮೇಕಪ್‌ ನಲ್ಲಿ ಕಣ್ಣುಗಳಿಗೆ ಸರಿಯಾಗಿ ಮೇಕಪ್‌ ಮಾಡಬೇಕು.

ಇದರ ಬಗ್ಗೆ ವಿವರವಾದ ಮಾಹಿತಿ ಹೀಗಿದೆ :

ಕಣ್ಣುಗಳ ಮೇಕಪ್

ಈ ಬಾರಿ 4 ರೀತಿಯ ಐ ಮೇಕಪ್‌ ಹೆಚ್ಚು ಜನಪ್ರಿಯವಾಗುವುದೆಂದು ಓಜಸ್‌ ಹೇಳುತ್ತಾರೆ. ಇವು ಹಗಲಿಗೆ ಬೇರೆ ಹಾಗೂ ರಾತ್ರಿಗೆ ಬೇರೆ ಇರುತ್ತದೆ.

ಈಸಿ ಡೇಲಿ ಲುಕ್‌ ನಲ್ಲಿ ಕಪ್ಪು, ರಾಡಿಶ್‌ ಹಾಗೂ ಪಿಂಕ್‌ ಬಣ್ಣಗಳನ್ನು ಬೆರೆಸಿ ಎಲಿಗೆಂಟ್‌ ಲುಕ್‌ ಕೊಡಲಾಗಿದೆ. ಅದನ್ನು ಯಾವುದೇ ವಯಸ್ಸಿನ ಮಹಿಳೆ ಹಚ್ಚಿಕೊಳ್ಳಬಹುದು.

ಯೂನಿವರ್ಸ್‌ ಚಿಪ್‌ ನ ಮೂಲಕ ಕಣ್ಣುಗಳ ಮೇಕಪ್‌ ಗೆ ಸಾಫ್ಟ್ ಲುಕ್‌ ಕೊಡಲಾಗಿದೆ. ಇದರಲ್ಲಿ ಸಾಫ್ಟ್ ಕಲರ್‌ ಅಂದರೆ ಬಿಳಿ, ಸ್ಕಿನ್ ಕಲರ್‌ ಮತ್ತು ಕ್ರೀಮೀಶೇಡ್‌ ಇತ್ಯಾದಿಗಳಿವೆ. ಇದನ್ನು ನೀವು ಹಗಲಲ್ಲಿಯೂ ಉಪಯೋಗಿಸಬಹುದು.

ಎಮೋಶನಲ್ ಪಿಸ್ತಾ ಗ್ರೀನ್‌, ಬದನೆ ಬಣ್ಣದ ಪ್ರಯೋಗವಾಗಿದೆ. ಇದರಲ್ಲಿ ತುಟಿಗಳ ಬಣ್ಣ ತೆಳುವಾಗಿದೆ. ಇದನ್ನು ಹಗಲಿನಲ್ಲಿಯೂ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಕಾಜಲ್ ಉಪಯೋಗಿಸಿ ನಿಮ್ಮ ಕಣ್ಣುಗಳನ್ನು ಸ್ಮೋಕಿಯಾಗಿಯೂ ಮಾಡಿಕೊಳ್ಳಬಹುದು.

ರಾತ್ರಿಯಲ್ಲಿ ಡಾರ್ಕ್‌ ಮತ್ತು ಶೈನಿಂಗ್‌ ಇರುವ ಐಲೈನರ್‌ ಅಥವಾ ಕಾಜಲ್ ಉಪಯೋಗಿಸಿ. ಹಗಲಿನಲ್ಲಿ ಯಾವಾಗಲೂ ತೆಳುವಾದ ಶೇಡ್‌ ಆರಿಸಿಕೊಳ್ಳಿ. ತೆಳುಬಣ್ಣದ ಲಿಪ್‌ ಸ್ಟಿಕ್‌ ಉಪಯೋಗಿಸಿ ತುಟಿಗಳಿಗೆ ಸಾಫ್ಟ್ ಲುಕ್‌ ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ