ಬೇಸಿಗೆ ಕಾಲದಲ್ಲಿ ಚರ್ಮಕ್ಕೆ ಹೆಚ್ಚಿನ ರಕ್ಷಣೆಯ ಅಗತ್ಯವಿರುತ್ತದೆ. ಬಿರು ಬಿಸಿಲಿನ ಸಂಪರ್ಕದಿಂದಾಗಿ ಸ್ಕಿನ್‌ಡ್ಯಾಮೇಜ್‌, ಸನ್‌ಟ್ಯಾನ್‌, ಡಾರ್ಕ್‌ ಸ್ಪಾಟ್ಸ್ ಮತ್ತು ಪಿಗ್ಮೆಂಟೇಶನ್‌ ಉಂಟಾಗುತ್ತದೆ. ಅದರ ಜೊತೆಗೆ ಪ್ರೀಮೆಚೂರ್‌ಏಜಿಂಗ್‌ನ ಚಿಹ್ನೆಗಳಾದ ರಿಂಕಲ್ಸ್ ಮತ್ತು ಫೈನ್‌ ಲೈನ್ಸ್ ಮುಖದ ಮೇಲೆ ಮೂಡಿ ಬರುವ ಸಂಭವ ಹೆಚ್ಚುತ್ತದೆ. ಅದಕ್ಕಾಗಿ ಚರ್ಮವನ್ನು ಹೈಡ್ರೇಟ್‌ ಮಾಡುವುದು ಬಹಳ ಮುಖ್ಯ. ಅಂದರೆ ಚರ್ಮದ ಆರ್ದ್ರತೆ ಕಡಿಮೆಯಾಗದಿರುವಂತೆ ನೋಡಿಕೊಳ್ಳಬೇಕು. ಅದರಿಂದ ಚರ್ಮ ಆಂತರ್ಯದಲ್ಲಿ ಆರೋಗ್ಯಕರವಾಗಿಯೂ ಬಾಹ್ಯದಲ್ಲಿ ಸುಂದರವಾಗಿಯೂ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಚರ್ಮಕ್ಕೆ ಹೆಲ್ದೀ ಡೋಸ್‌ ನೀಡಲು ಈ ಫೇಸ್‌ ಪ್ಯಾಕ್‌ಗಳನ್ನು ಟ್ರೈ ಮಾಡಿ ನೋಡಿ :

ಸೌತೆಕಾಯಿ ಫೇಸ್‌ಪ್ಯಾಕ್‌

ಫೇಸ್‌ಪ್ಯಾಕ್‌ನೊಂದಿಗೆ ಮುಖದ ಡೆಡ್‌ಸ್ಕಿನ್‌ನ್ನು ಸ್ಕ್ರಬಿಂಗ್‌ಮೂಲಕ ನಿವಾರಿಸಲು ಬಯಸುವಿರಾದರೆ, ಮುಖಕ್ಕೆ ಸೌತೆಕಾಯಿಯ ಫೇಸ್‌ಪ್ಯಾಕ್‌ಹಚ್ಚಿರಿ. ಸೌತೆಕಾಯಿಯ ಚೂರುಗಳನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ಅದಕ್ಕೆ ಕೊಂಚ ಸಕ್ಕರೆ ಸೇರಿಸಿ ಸ್ವಲ್ಪ ಸಮಯ ಫ್ರಿಜ್‌ನಲ್ಲಿಡಿ. ಇದನ್ನು ಮುಖಕ್ಕೆ ಹಚ್ಚಿ ಮತ್ತು ಒಣಗಿದ ನಂತರ ಉಜ್ಜುತ್ತಾ ತೆಗೆಯಿರಿ. ಇದರಿಂದ ಡೆಡ್‌ಸ್ಕಿನ್‌ನ ಪದರ ನಿವಾರಣೆಯಾಗುತ್ತದೆ.

ಮೊಸರಿನ ಫೇಸ್‌ಪ್ಯಾಕ್‌

ಸುಡು ಬಿಸಿಲಿನಲ್ಲಿ ಚರ್ಮಕ್ಕೆ ತಂಪನ್ನೀಯಲು ಮುಖಕ್ಕೆ ಮೊಸರಿನ ಫೇಸ್‌ಪ್ಯಾಕ್‌ ಹಚ್ಚಿರಿ. 1 ದೊಡ್ಡ ಚಮಚ ಮೊಸರಿಗೆ 1 ಚಿಕ್ಕ ಚಮಚ ಚಂದನದ ಪುಡಿ ಸೇರಿಸಿ ತಯಾರಿಸಿದ ಫೇಸ್‌ಪ್ಯಾಕ್‌ನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ. 10 ನಿಮಿಷಗಳ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ಫ್ರೆಶ್‌ ಫೀಲಿಂಗ್‌ ಉಂಟಾಗುತ್ತದೆ.

ಚಂದನದ ಫೇಸ್‌ಪ್ಯಾಕ್‌

ಬೇಸಿಗೆಯ ಬಿಸಿಯಲ್ಲಿ ಚಂದನದ ತಂಪು ನಿಮಗೆ ಆರಾಮದಾಯಕವಾಗಿರುತ್ತದೆ. ಇದಕ್ಕಾಗಿ ನೀವು 1 ಬೌಲ್‌ನಲ್ಲಿ  1 ದೊಡ್ಡ ಚಮಚ ಚಂದನದ ಪುಡಿಗೆ ಕೊಂಚ ರೋಸ್‌ ವಾಟರ್‌ ಸೇರಿಸಿ ಪ್ಯಾಕ್‌ ಸಿದ್ಧಪಡಿಸಿ. ಅದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.

ಪುದೀನಾ ಫೇಸ್‌ಪ್ಯಾಕ್‌

ಪುದೀನಾಯುಕ್ತ ಶರಬತ್ತಿನಿಂದ ಹೊಟ್ಟೆಯ ಉಷ್ಣತೆಯು ನಿವಾರಣೆಯಾಗುವಂತೆ. ಬಿಸಿಲಿನಿಂದ ಘಾಸಿಯಾಗಿರುವ ಚರ್ಮಕ್ಕೆ ಪುದೀನಾ ಫೇಸ್‌ಪ್ಯಾಕ್‌ ಆರಾಮ ನೀಡುತ್ತದೆ. 1 ದೊಡ್ಡ ಚಮಚ ನುಣ್ಣಗೆ ಅರೆದ ಪುದೀನಾ ಎಲೆಗೆ 2 ಚಿಕ್ಕ ಚಮಚ ರೋಸ್‌ ವಾಟರ್‌ ಸೇರಿಸಿ ಅದನ್ನು ಮುಖಕ್ಕೆ ಹಚ್ಚಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಇದಕ್ಕೆ 1 ಚಿಟಕಿ ಅರಿಶನವನ್ನು ಸೇರಿಸಿ ಹಚ್ಚಿದರೆ ಮುಖಕ್ಯೆ ಹೆಚ್ಚಿನ ಕಾಂತಿ ಬರುತ್ತದೆ.

ಕುಂಬಳ ಫೇಸ್‌ಪ್ಯಾಕ್‌

ಸ್ವಲ್ಪ ಕುಂಬಳಕಾಯಿಯನ್ನು ತುರಿದು ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಪೂರ್ತಿ ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್‌ಪ್ಯಾಕ್‌ನಿಂದ ಸನ್‌ ಟ್ಯಾನ್‌ ದೂರವಾಗುವುದಲ್ಲದೆ ಫೈನ್‌ ಲೈನ್‌, ಬ್ಲ್ಯಾಕ್‌ ಹೆಡ್ಸ್, ರಿಂಕಲ್ಸ್ ಕೂಡ ಕಡಿಮೆಯಾಗುತ್ತವೆ ಮತ್ತು ಚರ್ಮ ಕೋಮಲವಾಗುತ್ತದೆ.

ವಾಟರ್‌ ಮೆಲನ್‌ ಫೇಸ್‌ಪ್ಯಾಕ್‌

ಬೇಸಿಗೆಯಲ್ಲಿ ದೇಹದ ನೀರಿನಂಶವನ್ನು ಕಾಪಾಡಲು ಕಲ್ಲಂಗಡಿ ಹಣ್ಣನ್ನು ತಿನ್ನುವುದು ಉಪಯೋಗಕರ ಆಗಿರುವಂತೆ, ಚರ್ಮದ ನೀರಿನಂಶವನ್ನು ಉಳಿಸಿಕೊಳ್ಳಲು ವಾಟರ್‌ ಮೆಲನ್‌ ಫೇಸ್‌ಪ್ಯಾಕ್‌ ಬಳಸುವುದು ಅತ್ಯಂತ ಪ್ರಯೋಜನಕರವಾಗಿರುತ್ತದೆ. ವಾಟರ್‌ ಮೆಲನ್‌ ಜೂಸ್‌ಗೆ ಸ್ವಲ್ಪ ಮೊಸರು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಹೀಗೆ ತಯಾರಿಸಿದ ಫೇಸ್‌ಪ್ಯಾಕ್‌ನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಮುಖ ತೊಳೆಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ