ನಮ್ಮ ಮಹಿಳೆಯರಿಗೆ ಹೇರ್‌ ರೀಬಾಂಡಿಂಗ್‌, ಹೇರ್‌ ಸ್ಟ್ರೇಟ್‌ನಿಂಗ್‌, ಹೇರ್‌ ಸ್ಮೂತನಿಂಗ್‌ನಂತಹ ಟ್ರೀಟ್‌ಮೆಂಟ್‌ಗಳು ಹೊಸದೇನೂ ಅಲ್ಲ. ಹೆಚ್ಚಿನ ಮಹಿಳೆಯರು ಇವುಗಳಲ್ಲಿ ಒಂದು ಟ್ರೀಟ್‌ಮೆಂಟ್‌ನ್ನು ಮಾಡಿಸಿಯೇ ಇರುತ್ತಾರೆ. ಯುವತಿಯರಿಗಂತೂ ಇವುಗಳಿಲ್ಲದೆ ನಡೆಯುವುದೇ ಇಲ್ಲ. ಈಗ ಈ ಮೂರರೊಂದಿಗೆ ಹೇರ್‌ ಟ್ರೀಟ್‌ಮೆಂಟ್‌ ಕೂಡ ಸೇರಿದೆ. ಕಾಸ್ಮೆಟಿಕ್‌ ಇಂಡಸ್ಟ್ರಿಯಲ್ಲಿ ಹೇರ್‌ ಕೆರಾಟಿನ್‌ ಟ್ರೀಟ್‌ಮೆಂಟ್‌ ಎಂದು ಪ್ರಸಿದ್ಧವಾಗಿರುವ ಈ ಟ್ರೀಟ್‌ಮೆಂಟ್‌ ಕೂದಲಿನಲ್ಲಿ ಕೆರಾಟಿನ್‌ನ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ಮಾಡಲಾಗುತ್ತದೆ.

ಕೆರಾಟಿನ್‌ ಟ್ರೀಟ್‌ಮೆಂಟ್‌ ಗೃಹಶೋಭಾದ ಫ್ಯಾಬ್‌ ಮೀಟಿಂಗ್‌ನಲ್ಲಿ ಬ್ಯೂಟಿಶಿಯನ್‌ಗಳಿಗೆ ಕೆರಾಟಿನ್‌ ಟ್ರೀಟ್‌ಮೆಂಟ್‌ ಇದರ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಲೆಂದು ಬಂದಿದ್ದ ಬ್ಯೂಟಿ ಎಕ್ಸ್ ಪರ್ಟ್‌ ಸ್ಯಾಮ್ ಈ ಟ್ರೀಟ್‌ಮೆಂಟ್‌ ಬಗ್ಗೆ ಹೀಗೆ ಹೇಳುತ್ತಾರೆ, ``ಮಹಿಳೆಯರಿಗೆ ವಯಸ್ಸು ಹೆಚ್ಚುತ್ತಿದ್ದಂತೆ ಹಾರ್ಮೋನ್‌ ಬದಲಾವಣೆಯಿಂದಾಗಿ ಕೂದಲು ಮತ್ತು ಉಗುರಿನ ಮೇಲೆ ಹೆಚ್ಚಿನ  ಪ್ರಭಾವ ಉಂಟಾಗುತ್ತದೆ. ಉಗುರುಗಳಲ್ಲಿ ಕ್ಯುಟಿಕಲ್ ಲಾಸ್‌ನ ಸಮಸ್ಯೆ ಉಂಟಾದರೆ ಕೂದಲಿಗೆ ಪ್ರೋಟೀನ್‌ ಲಾಸ್‌ನ ತೊಂದರೆ ಎದುರಾಗುತ್ತದೆ. ಕೂದಲು ಕೆರಾಟಿನ್‌ ಎಂಬ ಪ್ರೋಟೀನ್‌ ಯುಕ್ತವಾದುದರಿಂದ ಅದರ ಕೊರತೆಯುಂಟಾದಾಗ ಕೂದಲು ತೆಳುವಾಗುತ್ತದೆ.

``ಇಂತಹ ಕೂದಲಿಗೆ ರೀಬಾಂಡಿಂಗ್‌ ಮತ್ತು ಸ್ಟ್ರೇಟ್‌ನಿಂಗ್‌ನಿಂದ ಹೆಚ್ಚೇನೂ ಪ್ರಭಾವ ಉಂಟಾಗುವುದಿಲ್ಲ. ಬದಲಾಗಿ, ಕೂದಲು ದುರ್ಬಲವಾಗಿರುವುದರಿಂದ ಅದರ ಉದುರುವಿಕೆ ಹೆಚ್ಚಾಗುತ್ತದೆ. ಇಂತಹ ಕೂದಲಿಗೆ ಕೆರಾಟಿನ್‌ ಟ್ರೀಟ್‌ಮೆಂಟ್‌ ಒಂದು ವರದಾನದಂತಿರುತ್ತದೆ. ಈ ಟ್ರೀಟ್‌ಮೆಂಟ್‌ನಲ್ಲಿ ಕೂದಲಿಗೆ ಪ್ರೋಟೀನ್‌ನ್ನು ಲೇಪಿಸಿ ಪ್ರೆಸಿಂಗ್‌ ಮೂಲಕ ಅದನ್ನು ಲಾಕ್‌ಮಾಡಲಾಗುತ್ತದೆ.''

ಕೆರಾಟಿನ್‌ ಟ್ರೀಟ್‌ಮೆಂಟ್‌ನ ಪ್ರಕ್ರಿಯೆ

ಮೊದಲು 2 ಸಲ ಶ್ಯಾಂಪೂ ವಾಶ್‌ ಮಾಡಿ ಕೂದಲಿನ ಅಂಟನ್ನು ತೆಗೆಯಲಾಗುತ್ತದೆ. ನಂತರ ಕೂದಲನ್ನು ಸಂಪೂರ್ಣವಾಗಿ ಬ್ಲೋ ಡ್ರೈ ಮಾಡಲಾಗುತ್ತದೆ. ಏಕೆಂದರೆ ಹೀಗೆ ಕೂದಲಿನಲ್ಲಿ ತೇವಾಂಶವನ್ನು ಇಲ್ಲವಾಗಿಸುವುದರಿಂದ ಕೆರಾಟಿನ್‌ ಅಂಶ ಕೂದಲಿನೊಳಕ್ಕೆ ಚೆನ್ನಾಗಿ ಒಂದಾಗಲು ಅನುಕೂಲವಾಗುತ್ತದೆ. ಬ್ಲೋ ಡ್ರೈ ನಂತರ ಕೂದಲನ್ನು 4 ಭಾಗವಾಗಿಸಿ ಕುತ್ತಿಗೆಯ ಕಡೆಯಿಂದ ಪ್ರಾಡಕ್ಟ್ ಹಚ್ಚಲು ಪ್ರಾರಂಭಿಸಲಾಗುತ್ತದೆ. ಇದಾದ ಮೇಲೆ ಕೂದಲನ್ನು ಫಾಯಿಲ್ ‌ಪೇಪರ್‌ನಿಂದ 25-30 ನಿಮಿಷಗಳ ಕಾಲ ಕವರ್‌ ಮಾಡಲಾಗುತ್ತದೆ. ನಂತರ ಮತ್ತೊಮ್ಮೆ ಕೂದಲನ್ನು ಬ್ಲೋ ಡ್ರೈ ಮಾಡಾಲಾಗುತ್ತದೆ. ನಂತರ 130 ರಿಂದ 200 ಡಿಗ್ರಿ ತಾಪಮಾನದಲ್ಲಿ ಕೂದಲನ್ನು ಪ್ರೆಸಿಂಗ್‌ ಮಾಡಲಾಗುತ್ತದೆ. ಕೆರಾಟಿನ್‌ ಅಂಶ ಕೂದಲಿನಲ್ಲಿ ಒಂದಾಗಲಿ ಎಂಬುದೇ ಇದರ ಉದ್ದೇಶ.

ಈ ಪ್ರಕ್ರಿಯೆಯ 24 ಗಂಟೆಗಳ ನಂತರ ಕೂದಲನ್ನು ತೊಳೆದು 180 ಡಿಗ್ರಿ ತಾಪಮಾನದಲ್ಲಿ ಮತ್ತೊಮ್ಮೆ ಪ್ರೆಸಿಂಗ್‌ ಮಾಡಲಾಗುತ್ತದೆ. ನಂತರ ಕೆರಾಟಿನ್‌ಯುಕ್ತ ಶ್ಯಾಂಪೂನಿಂದ ತೊಳೆಯಲಾಗುತ್ತದೆ. ಕೆರಾಟಿನ್‌ ಕಂಡೀಶನರ್‌ ಹಚ್ಚಿ 6-7 ನಿಮಿಷಗಳ ನಂತರ ಕೂದಲನ್ನು ತೊಳೆದು ಬ್ಲೋ ಡ್ರೈ ಮಾಡಲಾಗುತ್ತದೆ.

ಈ ಟ್ರೀಟ್‌ಮೆಂಟ್‌ ರೀಬಾಂಡಿಂಗ್‌ ಅಲ್ಲ ಅನೇಕ ಮಹಿಳೆಯರು ಕೆರಾಟಿನ್‌ ಟ್ರೀಟ್‌ಮೆಂಟ್‌ನ್ನು ರೀಬಾಂಡಿಂಗ್‌ ಎಂದು ಭಾವಿಸುತ್ತಾರೆ. ಈ ಬಗ್ಗೆ ಸ್ಯಾಮ್ ಹೀಗೆ ಹೇಳುತ್ತಾರೆ, ``ಕೆರಾಟಿನ್‌ ಟ್ರೀಟ್‌ಮೆಂಟ್‌ ಕೂದಲಿನ ಫ್ರೀಝಿನೆಸ್‌ ದೂರಗೊಳಿಸಿ ಅದಕ್ಕೆ ಸ್ಮೂತ್‌ ಅಂಡ್‌ ಶೈನೀ ಲುಕ್‌ ಒದಗಿಸುತ್ತದೆ. ಆದರೆ ಇದು ಕೂದಲನ್ನು ಸ್ಟ್ರೇಟ್‌ ಆಗಿಸುವುದಿಲ್ಲ. ಕೂದಲು ಮೊದಲೇ ನೇರವಾಗಿದ್ದರೆ, ಅಂತಹ ಕೂದಲಿಗೆ ಕೊಂಚ ಕಾಲ ಸ್ಟ್ರೇಟ್‌ನಿಂಗ್‌ ಎಫೆಕ್ಟ್ ಇರುವುದು ನಿಜ. ಆದರೆ ಗುಂಗುರು ಕೂದಲು ಶ್ಯಾಂಪೂ ವಾಶ್‌ನ ನಂತರ ಮೊದಲಿನಂತೆಯೇ ಆಗುತ್ತದೆ. ಕೂದಲಿಗೆ ಸ್ಮೂತ್‌ನೆಸ್‌ ಮತ್ತು ಶೈನಿಂಗ್‌ ಇರುತ್ತದೆ. ಜೊತೆಗೆ ಕೂದಲು ಹಿಂದಿಗಿಂತ ಹೆಲ್ದಿ ಆಗಿರುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ