ಸಾಮಾನ್ಯವಾಗಿ ನೀವು ಕಂಕುಳಿನ ಕೂದಲ ಸಮಸ್ಯೆಯಿಂದಾಗಿ, ಸ್ಲೀವ್ ಲೆಸ್ ಧರಿಸಲು ಪ್ಲಾನ್‌ ಮಾಡಿದ್ದರು, ಕೊನೆ ಘಳಿಗೆಯಲ್ಲಿ ಅದನ್ನು ಕೈಬಿಟ್ಟು ಬೇರಾವುದನ್ನೋ ಧರಿಸಿ, ಕಸಿವಿಸಿಗೆ ಒಳಗಾಗಿರಬಹುದು. ಒಮ್ಮೊಮ್ಮೆ ಇಷ್ಟೆಲ್ಲ ಬದಲಾವಣೆ ಮಾಡಿಕೊಂಡು ಸರಿಯಾದ ಸಮಯಕ್ಕೆ ಪಾರ್ಟಿಗೆ ಹೋಗಲು ಆಗದೆಯೂ ಇರಬಹುದು. ಎಷ್ಟೋ ಸಲ ಈ ಗಡಿಬಿಡಿ ಮಧ್ಯೆ ಪಾರ್ಲರ್‌ಗೆ ಹೋಗಿ ವ್ಯಾಕ್ಸ್ ಮಾಡಿಸಲು ಕೂಡ ಸಮಯ ಉಳಿದಿರುವುದಿಲ್ಲ. ಹೀಗಿರುವಾಗ ನೀವು ಲೇಟೆಸ್ಟ್ ಫ್ಯಾಷನ್‌ಗೆ ಬದಲಾಗಿ, ನಿಮ್ಮ ಯಾವುದೋ ಹಳೆಯ ಡ್ರೆಸ್ಸನ್ನೇ ಧರಿಸಿ ಹೋಗಬೇಕಾದೀತು, ಆಗ ನಿಮಗೆ ಮುಜುಗರ ತಪ್ಪಿದ್ದಲ್ಲ. ಆದರೆ ಈ ಸಲದ ಬೇಸಿಗೆಗೆ ನೀವು ಹಾಟ್‌ ಫ್ಯಾಷನೆಬಲ್ ಆಗಿ ಕಾಣಿಸಬೇಕು. ಆದರೆ ನಿಮ್ಮ ಡ್ರೆಸ್‌ ಜೊತೆ ಕಾಂಪ್ರಮೈಸ್‌ ಮಾಡಿಕೊಳ್ಳಲು ಇಷ್ಟವಿಲ್ಲ ಎಂದರೆ, ಕೋಲ್ಡ್ ವ್ಯಾಕ್ಸ್ ಸ್ಟ್ರಿಪ್‌ ನಿಮಗೆ ಬೆಸ್ಟ್ ಆಯ್ಕೆ ಎನಿಸುತ್ತದೆ. ಇದರಿಂದ ಎಲ್ಲಾದರೂ, ಯಾವಾಗ ಬೇಕಾದರೂ ನೀವೇ ಖುದ್ದು ವ್ಯಾಕ್ಸ್ ಮಾಡಿಕೊಳ್ಳಬಹುದು. ಪಾರ್ಲರ್‌ಗೆ ಹೋಗಿ ನೀವು ವ್ಯಾಕ್ಸಿಂಗ್‌ಗಾಗಿ ಗಂಟೆಗಟ್ಟಲೇ ಕಾಯಬೇಕಾದ ಅಗತ್ಯವಿಲ್ಲ.

ಈ ಸ್ಟ್ರಿಪ್‌ನ ವೈಶಿಷ್ಟ್ಯಈಝಿ ಟು ಯೂಸ್‌ : ಕೋಲ್ಡ್ ವ್ಯಾಕ್ಸ್ ಸ್ಟ್ರಿಪ್‌ನ್ನು ಬಳಸುವುದು ಬಲು ಸುಲಭ. ಇದರಲ್ಲಿ ವ್ಯಾಕ್ಸ್ ನ್ನು ಮೊದಲೇ ಬಿಸಿ ಮಾಡು, ನಿಧಾನವಾಗಿ ಹರಡು, ನಂತರ ತೆಗೆಯಬೇಕಾದ ರಗಳೆಗಳೇ ಇಲ್ಲ. ಮತ್ತೆ ಹೇಗೆ ಅಂತೀರಾ? ಸ್ಟ್ರಿಪ್‌ನ್ನು ಕೈಯಿಂದ 8-10 ಸೆಕೆಂಡ್‌ ರಬ್‌ ಮಾಡಿ, ಗ್ರೋಥ್‌ ಆಗಿರುವ ಭಾಗಕ್ಕೆ ಉಲ್ಟಾ ಮೆತ್ತಿ ತೆಗೆದರೆ, ನಿಮಿಷಗಳಲ್ಲಿ ನಿಮಗೆ ಹೇರ್‌ ಫ್ರೀ ಸ್ಕಿನ್‌ ಸಿಗುತ್ತದೆ. ಇದರ ದೊಡ್ಡ ವೈಶಿಷ್ಟ್ಯವೆಂದರೆ, ಇದನ್ನು ವಯೋಭೇದವಿಲ್ಲದೆ ಎಲ್ಲಾ ಮಹಿಳೆಯರೂ ಬಳಸಬಹುದು.

ಸಮಯದ ಉಳಿತಾಯ : ವ್ಯಾಕ್ಸ್ ಮಾಡಿಸಲು ಪಾರ್ಲರ್‌ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಜೊತೆಗೆ ವ್ಯಾಕ್ಸಿಂಗ್ ಮಾಡಿಸುವುದಕ್ಕಾಗಿ ತಗಲುವ ಸಮಯ ಬೇರೆ. ಆದರೆ ಕೋಲ್ಡ್ ವ್ಯಾಕ್ಸ್ ಸ್ಟ್ರಿಪ್‌ನಲ್ಲಿ ಟೈಂ ಲಿಮಿಟೇಶನ್‌ ಇಲ್ಲ. ಹೀಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ, ಬೇಕಾದ ಸಮಯದಲ್ಲಿ ವ್ಯಾಕ್ಸ್ ಮಾಡಿಕೊಳ್ಳಬಹುದು, ಅದೂ ಯಾವ ಜಂಜಾಟಗಳೂ ಇಲ್ಲದೆ!

ಕ್ಯಾರಿ ಮಾಡುವುದು ಈಝಿ : ನೀವು ಎಲ್ಲಾದರೂ ಹೊರಗೆ ಹೊರಟಿದ್ದೀರಿ ಎಂದರೆ, ಇದನ್ನು ಆರಾಮವಾಗಿ ನಿಮ್ಮ ಹ್ಯಾಂಡ್‌ ಬ್ಯಾಗಿಗೆ ಹಾಕಿಕೊಂಡು ಹೋಗಬಹುದು. ಇದು ಲೀಕ್‌ ಆಗುವ ಪ್ರಶ್ನೆ ಇಲ್ಲ, ಭಾರ ಇಲ್ಲ.

ನೋವೇ ಇಲ್ಲ : ವ್ಯಾಕ್ಸಿಂಗ್‌ ಮಾಡಲು ಇದು ಎಲ್ಲಕ್ಕೂ ಸುಲಭ ವಿಧಾನ. ಇದರಿಂದ ನಿಮಿಷಾರ್ಧದಲ್ಲಿ ಕೂದಲನ್ನು ತೊಲಗಿಸಬಹುದು. ಇದರಿಂದ ನಿಮ್ಮ ಚರ್ಮದ ಮೇಲೆ ಎಲ್ಲೂ ರೆಡ್‌ ರಾಶೆಸ್‌ ಕಾಣಿಸುವುದಿಲ್ಲ, ನೋವು ಅಥವಾ ಉರಿ ಇಲ್ಲವೇ ಇಲ್ಲ. ಇದು ಡೆಡ್‌ ಸ್ಕಿನ್‌ನ ಮೇಲ್ಪದರವನ್ನೂ ತೆಗೆದು, ಚರ್ಮವನ್ನು ಇನ್ನಷ್ಟು ಸ್ಮೂತ್‌ ಸಾಫ್ಟ್ ಮಾಡುತ್ತದೆ.

ಆರೋಗ್ಯಕರ : ಪಾರ್ಲರ್‌ಗೆ ಎಷ್ಟೋ ತರಹದ ಮಹಿಳೆಯರು ಬರುತ್ತಿರುತ್ತಾರೆ. ಎಲ್ಲರ ಮೇಲೂ ಒಂದೇ ಪ್ರಾಡಕ್ಟ್ ನ್ನು ಬಳಸುತ್ತಿರುತ್ತಾರೆ. ಇದರಿಂದ ಸೋಂಕು ತಗುಲುವ ಅಪಾಯ ತಪ್ಪಿದ್ದಲ್ಲ. ಆದರೆ ಕೋಲ್ಡ್ ವ್ಯಾಕ್ಸ್ ಸ್ಟ್ರಿಪ್‌ ಹಾಗಲ್ಲ, ಅದು ಸಂಪೂರ್ಣ ಆರೋಗ್ಯಕರ. ಒಂದು ಸ್ಟ್ರಿಪ್‌ ತೆಗೆದು ಬಳಸಿ, ಬಿಸಾಡಿದರಾಯಿತು. ಇದರ ಮತ್ತೊಂದು ವೈಶಿಷ್ಟ್ಯ ಎಂದರೆ, ಇದರಲ್ಲಿ ಯಾವುದೇ ಬಗೆಯ ದುರ್ವಾಸನೆ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ