ಹೆಂಗಸರು ತಮ್ಮ ಲುಕ್ಸ್ ಸುಧಾರಿಸಿಕೊಂಡು ಬ್ಯೂಟಿಫುಲ್ ಆಗಿ ಕಂಡುಬರಲು ಮೇಕಪ್‌ ಉಡುಗೆ ಜೊತೆ ಒಡವೆ ಆರಿಸುವಲ್ಲಿ ಬಹಳ ಶ್ರಮವಹಿಸುತ್ತಾರೆ. ಆದರೆ ಈ ಸಲದ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿ ಹೇರ್‌ ಕಲರ್‌ಡೂ ಸಾಕಷ್ಟು ಕ್ರೇಝ್ ಇದೆ. ಹೇರ್‌ ಕಲರಿಂಗ್‌ ಮಾಡುವುದೂ ಒಂದು ಕಲೆ. ಇದು ಎಲ್ಲರಿಗೂ ಒಲಿಯುವಂಥದ್ದಲ್ಲ. ಹೀಗಾಗಿ ಯಾರಾದರೂ ಹೇರ್‌ ಎಕ್ಸ್ ಪರ್ಟ್‌ರಿಂದಲೇ ಹೇರ್‌ ಕಲರ್‌ ಮಾಡಿಸುವುದು ಲೇಸು. ನೀವು ಇದರ ಬಗ್ಗೆ ಮಾಹಿತಿ ಇರಿಸಿಕೊಳ್ಳಿ, ಹೊಸ ಹೊಸ ಟ್ರೆಂಡ್ಸ್ ಗಮನಿಸಿಕೊಳ್ಳುತ್ತಿರಿ.

ಸಾಲಿಡ್‌ ಸಿಂಗಲ್ ಟೋನ್‌ ಕಲರ್‌

ಇತ್ತೀಚೆಗೆ ಹೆಚ್ಚು ಹೆಚ್ಚು ಹುಡುಗಿಯರು ಸಿಂಗಲ್ ಕಲರ್‌ ಟೋನ್‌ ಬಯಸುತ್ತಾರೆ. ಗಾಢ ಬೂದು, ಲೈಟ್‌ ಬೂದು, ಚೆಸ್ಟ್ ನಟ್‌, ಬ್ಲಾಂಡ್‌, ಪ್ಲಾಟಿನಂ ಬ್ಲಾಂಚ್‌ ಇತ್ಯಾದಿ. ಇಂಥ ಸಿಂಗಲ್ ಕಲರ್‌ ಬಹಳ ಚೆನ್ನಾಗಿರುತ್ತದೆ. ಇದನ್ನು ಕಾಂಟ್ರಾಸ್ಟಿಂಗ್‌ ಶೇಡ್ಸ್ ಗೆ ಹೋಲಿಸಿದಾಗ ಸಂಭಾಳಿಸುವುದೂ ಸುಲಭ. ಇದು ರೆಟ್ರೋ ಮೇಕಪ್‌ ಅಂದ್ರೆ 80-90ರ ದಶಕದ ಕೊಡುಗೆ.

ಲೈಟ್‌ ಪೇಸ್ಟಲ್ ಪಿಂಕ್‌, ಪೀಚ್‌, ರೋಜ್‌, ಗೋಲ್ಡ್ ಪಿಂಕ್‌, ಹನೀ ಗೋಲ್ಡ್, ಲೈಲಾಕ್‌, ನ್ಯೂಡ್‌ ಟೋನ್ಸ್ ಇತ್ಯಾದಿ ಪೇಸ್ಟಲ್ ಕಲರ್ಸ್‌ ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿದೆ. ಇಂದಿನ ಅಪ್‌ಟುಡೇಟ್‌ ಹುಡುಗಿಯರು ಬಹುತೇಕ ಇವೇ ಬಣ್ಣಗಳನ್ನು ಮೆಚ್ಚುತ್ತಾರೆ. ಇದು ಅವರನ್ನು ಹೆಚ್ಚು ಕ್ಲಾಸಿಕ್‌ ಬ್ಯೂಟಿಫುಲ್ ಮಾಡುತ್ತದೆ. ಕೂದಲಿನ ಮಧ್ಯೆ ಲೈಟ್‌ ಪೇಸ್ಟಲ್ ಕಲರ್‌ನ ಹೈಲೈಟ್ಸ್ ನಿಮ್ಮನ್ನು ಬೇರೆಯವರಿಂದ ವಿಭಿನ್ನವಾಗಿ ತೋರಿಸಲು ಸಹಕಾರಿ.

ಕೂದಲನ್ನು ಹೀಗೆ ಬಣ್ಣಗೊಳಿಸಿದ ನಂತರ ನಿಮಗೆ ಸ್ಟೈಲಿಂಗ್‌ನ ಅಗತ್ಯ ಇಲ್ಲ. ಹಳೆಯ ಹೈಲೈಟ್ಸ್ ಗೆ ಹೊಸ ಜೀವನ ನೀಡುವ ಈ ವಿಧಾನ ಸುಪರ್ಬ್‌ ಎನ್ನಬಹುದು. ಆದರೆ ನೀವು ಗಮನಿಸಬೇಕಾದುದು ಎಂದರೆ, ನೈಸರ್ಗಿಕ ಬಣ್ಣದ ಆಧಾರದಿಂದ ಲೈಟ್ ಪೇಸ್ಟಲ್‌ಗೆ ಮೊದಲು ನಿಮಗೆ ಬ್ಲೀಚ್‌ನ ಅಗತ್ಯ ಬೀಳಬಹುದು. ಜೊತೆಗೆ ನೀವು ಬಣ್ಣಗಳ ವಿವಿಧ ವಿಧಾನಗಳನ್ನೂ ಟ್ರೈ ಮಾಡಬಹುದು. ಇದರ ಡಲ್ ಹೈಲೈಟ್ಸ್ ಸಹ ಕೂದಲಿನ ಮಧ್ಯೆ ಬಲು ಸುಂದರವಾಗಿ ಕಂಗೊಳಿಸುತ್ತದೆ.

ಕೂದಲ ತುದಿಗೆ ಲೋ ಲೈಟ್ಸ್

ಇದು ಇತ್ತೀಚಿನ ಬಲು ಫೇಮಸ್‌ ಟ್ರೆಂಡ್‌. ಬಹಳಷ್ಟು ಸೆಲೆಬ್ರಿಟೀಸ್‌ನ್ನು ಈ ಸ್ಟೈಲ್ನಲ್ಲಿ ನೋಡಬಹುದು. ಇದರಲ್ಲಿ ಕಲರಿಂಗ್‌ನ್ನು ಕೂದಲಿನ ಬುಡದಿಂದ ಮಾಡುವ ಬದಲು ಅದರ ತುದಿಯಲ್ಲಿ ಬೇರೆ ಬೇರೆ ವಿಧದ ಡೈಮೆನ್ಶನ್ ನಲ್ಲಿ ಮಾಡಲಾಗುತ್ತದೆ. ಮೊದಲು ಬಹುತೇಕ ಕೂದಲ ತುದಿಗೆ ಕೇವಲ ಒಂದೇ ಬಣ್ಣದ ಹೈಲೈಟ್ಸ್ ಆಗುತ್ತಿತ್ತು. ಆದರೆ ಈ ಫೆಸ್ಟಿವ್‌ ಸೀಸನ್‌ನಲ್ಲಿ ನೀವು ಬದಲಾವಣೆ ತೋರಿಸಬಹುದು. ಇದೀಗ ಡೈಮೆನ್ಶನ್ಸ್ ಯಾ ಲೋಲೈಟ್ಸ್ ಜೋಡಿಸಿ ನೀವು ನಿಮ್ಮ ಕೂದಲಲ್ಲಿ ಬಹಳಷ್ಟು ಹೆಚ್ಚಿನ ಟೋನ್ಸ್ ತರಬಹುದು. ಇದು ನಿಮ್ಮ ಕೂದಲಿಗೆ ಇನ್ನಷ್ಟು ನ್ಯಾಚುಲರ್ ಮತ್ತು ಅಧಿಕ ನೈಸರ್ಗಿಕ ರೂಪ ಒದಗಿಸಬಹುದು. ಲೋ ಲೈಟ್ಸ್ ನ ತೆಳು ಬಣ್ಣ ನಿಮ್ಮ ನೈಸರ್ಗಿಕ ಕೂದಲ ಬುಡದ ಬಣ್ಣಕ್ಕೆ ಹೋಲಿಸಿದಾಗ ಬಲು ವಿಭಿನ್ನವಾಗಿರುತ್ತದೆ. ಇದು ಇತ್ತೀಚಿನ ಹೊಸ ಟ್ರೆಂಡ್‌ ಆಗಿದೆ. ಇದು ನಿಮ್ಮ ನ್ಯಾಚುರಲ್ ಫೀಚರ್ಸ್‌ ಎದ್ದು ತೋರುವಂತೆ ಮಾಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ