ಒಳ್ಳೆಯ ಸುವಾಸನೆಯಿಂದ ನಮ್ಮ ಯೋಚನೆ ಬದಲಾಗುತ್ತದೆ ಹಾಗೂ ಆ ಯೋಚನೆಯಿಂದ ಜೀವನ ಬದಲಾಗುತ್ತದೆ. ಅಷ್ಟೇ ಅಲ್ಲ, ಸುವಾಸನೆ ನಮ್ಮ ವಿಚಾರಗಳು ಮತ್ತು ಭಾವನೆಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಇದು ನಮ್ಮ ಮನಸ್ಸು ಹಾಗೂ ಮೆದುಳಿನಲ್ಲಿ ಶಾಂತಿ ಹಾಗೂ ಉತ್ಸಾಹವನ್ನು ಹೆಚ್ಚಿಸಿ ಜೀವಿಸುವ ದೃಷ್ಟಿಕೋನವನ್ನೇ ಬದಲಿಸುತ್ತದೆ. ಅದೇ ಕಾರಣವೆಂಬಂತೆ ನಾವೆಲ್ಲರೂ ಒಳ್ಳೆಯ ಸುವಾಸನೆಯನ್ನು ಪಡೆಯಲು ಕಾತುರರಾಗುತ್ತೇವೆ.
ಆದರೆ ಈ ಸುವಾಸನೆ ಕೇವಲ ನಮ್ಮ ಮನಸ್ಸು ಮೆದುಳನ್ನಷ್ಟೇ ಅಲ್ಲ, ಮನೆಯನ್ನು ಕೂಡ ನಂದನವನ ಆಗಿಸಬಲ್ಲದು. ಆಗಲೇ ಹಬ್ಬದ ನಿಜವಾದ ಖುಷಿ ದೊರೆಯುತ್ತದೆ. ಸಂಶೋಧನೆಗಳ ಪ್ರಕಾರ, ಹಬ್ಬಗಳ ತಯಾರಿಯ ವ್ಯಸ್ತತೆಯಲ್ಲಿ ಉಂಟಾದ ಒತ್ತಡ ಮಂದ ಸುವಾಸನೆಯಿಂದ ನಿವಾರಣೆಯಾಗುತ್ತದೆ.
ಬೇರೆ ಬೇರೆ ಪ್ರಕಾರಗಳ ಸುವಾಸನೆಗಳು ನಮ್ಮ ಮೂಡ್‌ನ್ನು ಹೇಗೆ ಪ್ರಭಾವಿತಗೊಳಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಲ್ಯಾವೆಂಡರ್ : ಇದರ ಸುವಾಸನೆ ನಮ್ಮ ಮೆದುಳನ್ನು ಶಾಂತಗೊಳಿಸಲು ನೆರವಾಗುತ್ತದೆ. ಭಾವನಾತ್ಮಕ ಒತ್ತಡ ಹಾಗೂ ಖಿನ್ನತೆಯನ್ನು ನಿವಾರಿಸಿ ನಿರಾಳತೆ ದೊರಕಿಸಿಕೊಡುತ್ತದೆ. ಮೈಗ್ರೇನ್ ಹಾಗೂ ತಲೆನೋವಿನ ಬಾಧೆ ಇರುವವರು ಕೂಡ ಇದರ ಸುವಾಸನೆ ಪಡೆಯಬಹುದು.
ಜಾಸ್ಮಿನ್ : ಇದರ ಸುವಾಸನೆ ದಣಿವು ನಿವಾರಿಸಲು ನೆರವಾಗುತ್ತದೆ. ಇದು ಕೇವಲ ಉತ್ಸಾಹವನ್ನಷ್ಟೇ ಹೆಚ್ಚಿಸುವುದಿಲ್ಲ. ದೇಹದ ಎನರ್ಜಿಯನ್ನು ಕೂಡ ಹೆಚ್ಚಿಸುತ್ತದೆ.
ರೋಸ್‌ಮೆರಿ : ಇದರ ಸುವಾಸನೆ ನೆನಪಿನ ಶಕ್ತಿ ಹೆಚ್ಚಿಸಲು, ದೈಹಿಕ ಎನರ್ಜಿ ವಾಪಸ್ ಪಡೆಯಲು, ತಲೆನೋವು ಮತ್ತು ಮಾನಸಿಕ ದಣಿವು ನಿವಾರಿಸಲು ನೆರವಾಗುತ್ತದೆ.
ಪೆಪ್ಪರ್‌ಮಿಂಟ್ : ಇದು ಎನರ್ಜಿ ಬೂಸ್ಟರ್ ಸುವಾಸನೆಯಾಗಿದೆ. ಇದು ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಸ್ಪಷ್ಟವಾಗಿ ಯೋಚಿಸುವ ಶಕ್ತಿಯನ್ನು ನೀಡುತ್ತದೆ. ಇದು ಮೂಡ್‌ನ್ನು ಅಪ್‌ಲಿಫ್ಟ್ ಮಾಡುತ್ತದೆ.
ಲೆಮನ್ : ಇದರ ಸುವಾಸನೆ ಏಕಾಗ್ರತೆ ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಉಸಿರಿನಲ್ಲಿ ಸೇರಿಕೊಂಡು ತಾಜಾತನದ ಅನುಭವ ನೀಡುತ್ತದೆ.
ತಾಜಾ ಗರಿಕೆ ಹುಲ್ಲು : ಆಸ್ಟ್ರೇಲಿಯಾದ ಸಂಶೋಧಕರ ಪ್ರಕಾರ ತಾಜಾ ಹುಲ್ಲಿನಿಂದ ಎಂತಹ ಕೆಲವು ಕೆಮಿಕಲ್ಸ್ ಹೊರಸೂಸುತ್ತವೆಂದರೆ, ಅವು ವ್ಯಕ್ತಿಯನ್ನು ರಿಲ್ಯಾಕ್ಸ್ ಗೊಳಿಸುತ್ತವೆ. ಇದರ ಸುವಾಸನೆ ವಯಸ್ಸಿನ ಜೊತೆಗೆ ಉಂಟಾಗುವ ಮಾನಸಿಕ ತೊಂದರೆಗಳನ್ನು ನಿವಾರಿಸಲು ಕೂಡ ನೆರವಾಗುತ್ತವೆ. ಹಾಗೆಂದೇ ಈ ತೆರನಾದ ಕೆಲವು ಏರ್‌ಫ್ರೆಶನರ್‌ಗಳು ಬಂದಿದ್ದು, ನೀವು ಎಲ್ಲಿ ಬೇಕಾದರೂ ಅದರ ಸುವಾಸನೆಯ ಅನುಭವ ಮಾಡಿಕೊಳ್ಳಬಹುದು.
ವೆನಿಲಾ : ಒಂದು ಅಧ್ಯಯನದ ಪ್ರಕಾರ, ವೆನಿಲಾದ ಸುವಾಸನೆ ನಿಮ್ಮ ಮನಸ್ಸಿಗೆ ಖುಷಿ ತುಂಬುತ್ತದೆ. ಅದರಿಂದ ಸಿಡಿಮಿಡಿತನ ಕೊನೆಗೊಂಡು ಮೂಡ್ ಸರಿಹೋಗುತ್ತದೆ.
ಮನೆಯನ್ನು ಹೀಗೆ ಸುಗಂಧಗೊಳಿಸಿ
ಒಂದು ಒಳ್ಳೆಯ ಸುಗಂಧದಿಂದ ಮನೆಯ ಮೂಲೆ ಮೂಲೆಯನ್ನು ಹೇಗೆ ಸುವಾಸನಾಮಯಗೊಳಿಸಬಹುದು ಎಂಬುದನ್ನು ತಿಳಿದುಕೊಳ್ಳಿ.
ಮನೆಯ ಪರದೆ, ಕಾರ್ಪೆಟ್ ಹಾಗೂ ಹೊದಿಕೆಗಳನ್ನು ಸ್ವಚಗೊಳಿಸಿ.
ಡಸ್ಟ್ ಬಿನ್‌ನ್ನು ಡಿಟರ್ಜೆಂಟ್‌ನಿಂದ ಉಜ್ಜಿ ಸ್ವಚ್ಛಗೊಳಿಸಿ. ಅದರಿಂದ ಹೊರಬರುವ ದುರ್ಗಂಧ ಅತಿಥಿಗಳಿಗೆ ಮೂಗು ಮುಚ್ಚಿಕೊಳ್ಳುವಂತಹ ವಾತಾವರಣ ಸೃಷ್ಟಿಸಬಾರದು.
ಮೆಟಲ್‌ನಿಂದ ಮಾಡಿದ ಡಸ್ಟ್ ಬಿನ್ ಇದ್ದರೆ, ಅದರಲ್ಲಿ ಕಾಗದ ಹಾಕಿ ಸುಡಬೇಕು. ಆಗ ದುರ್ಗಂಧ ನಿವಾರಣೆಯಾಗುತ್ತದೆ.