ಕಡಲೆ ಹಿಟ್ಟಿನಿಂದ ಹೊಳೆಯು ಚರ್ಮ ಪಡೆಯುವ ವಿಧಾನ ಬಲು ಪುರಾತನ ಕಾಲದ್ದು. ಕಡಲೆ ಹಿಟ್ಟು ಚರ್ಮದ ಶುಚಿತ್ವ, ಶುಭ್ರತೆಗೆ ಹೆಸರಾಗಿದೆ. ಜೊತೆಗೆ ಇದಕ್ಕೆ ಶ್ಯಾಮಲ ಚರ್ಮವನ್ನು ಆದಷ್ಟೂ ತಿಳಿಯಾಗಿಸುವ ವಿಶಿಷ್ಟ ಗುಣ ಇದೆ. ನೀವು ನೈಸರ್ಗಿಕವಾಗಿ ಬೆಳ್ಳಗಾಗುವ ಆಸೆ ಹೊಂದಿದ್ದರೆ, ಪ್ರತಿದಿನ ಅಗತ್ಯವಾಗಿ ಕಡಲೆ ಹಿಟ್ಟು ಬಳಸಿರಿ.

ಇದನ್ನು ಹಲವು ಬಗೆಯ ಉತ್ಪನ್ನಗಳೊಂದಿಗೆ ಬೆರೆಸಿಕೊಂಡು ಚರ್ಮದ ಸೌಂದರ್ಯವನ್ನು ನೈಸರ್ಗಿಕ ವಿಧಾನದಲ್ಲಿ ಹೆಚ್ಚಿಸಬಹುದಾಗಿದೆ. ಇದರ ಅತಿ ಹೆಚ್ಚಿನ ಲಾಭವೆಂದರೆ ಇದು ನಾರ್ಮಲ್, ಆಯ್ಲಿ, ಡ್ರೈ ಸ್ಕಿನ್‌ ಮೂರೂ ಬಗೆಯ ಚರ್ಮದವರಿಗೂ ಅನ್ವಯಿಸುತ್ತದೆ. ಇದರಿಂದ ಯಾರಿಗೂ ಹಾನಿಯಿಲ್ಲ.

ಯಾವುದೇ ಸಂದೇಹವಿಲ್ಲದೆ ಮೂರೂ ಬಗೆಯ ಚರ್ಮದವರು ಇದನ್ನು ಬಳಸಬಹುದು. ಟ್ಯಾನ್‌, ಡೆಡ್‌ ಸ್ಕಿನ್‌ ತೊಲಗಿಸುವಲ್ಲಿಯೂ ಇದು ಪೂರಕ. ಹೀಗಾಗಿ ಕಾಂತಿಭರಿತ ಚರ್ಮ ನಿಮ್ಮದಾಗುತ್ತದೆ. ಗೌರವರ್ಣ ಒದಗಿಸುವುದರ ಜೊತೆಯಲ್ಲೇ ಇದು ಹಲವಾರು ರೋಗಗಳನ್ನೂ ದೂರವಿಡುತ್ತದೆ. ಇದು ಒಣಗುತ್ತಿರುವ ಚರ್ಮವನ್ನು ನಳನಳಿಸುವಂತೆ ಮಾಡಬಲ್ಲದು. ಮೊಡವೆ, ಆ್ಯಕ್ನೆಗಳಿರುವ ಚರ್ಮವನ್ನು ಕಪ್ಪು ಕಲೆ ಉಳಿಯದಂತೆ ಸರಿಪಡಿಸಬಲ್ಲದು.

ಕಡಲೆ ಹಿಟ್ಟಿನ ಲಾಭಗಳು

ಚರ್ಮದ ಮೇಲೆ ಇದರ ಫೇಸ್‌ಪ್ಯಾಕ್‌ ಮಾಸ್ಕ್ ಬಳಸಿ, ಚರ್ಮ ಕಾಂತಿಯುತವಾಗಿ ಹೊಳೆಯುವಂತೆ ಮತ್ತು ಗೌರವರ್ಣ ಹೊಂದುವಂತೆ ಮಾಡಬಹುದು. ಇದು ಕ್ಷಾರೀಯ ಗುಣ ಹೊಂದಿದೆ, ಆದ್ದರಿಂದ ಹುಳಿ ಮೊಸರಿಗೆ ಬೆರೆಸಿ ತುಸು ಆಮ್ಲೀಯ ಮಾಡಬೇಕು. ಹೀಗಾಗಿ ನಿಯಮಿತವಾಗಿ ಇದನ್ನು ಬಳಸುತ್ತಿರಬೇಕು.

ಪುರಾತನ ಕಾಲದಿಂದಲೂ ಹೆಂಗಸರು ಇದನ್ನು ಮುಖ, ಕುತ್ತಿಗೆ, ಕೂದಲಿಗೂ ಬಳಸುತ್ತಿದ್ದಾರೆ. ಕುತ್ತಿಗೆ, ಕಂಕುಳ ಭಾಗ ಕಪ್ಪಾಗಿದೆ ಎನಿಸಿದರೆ, ಇದರ ಪ್ಯಾಕ್‌ ನೀಡಿ ಆ ಭಾಗಗಳಿಗೆ ಗೌರವರ್ಣ ತರಿಸಬಹುದು.

ಮೊಡವೆಗಳನ್ನು ದೂರವಿಡಲು : ನಿಮ್ಮ ಮುಖ ಚರ್ಮದಲ್ಲಿ ಹೆಚ್ಚು ಮೊಡವೆಗಳಿವೆಯೇ? ಚಿಂತಿಸಬೇಡಿ. ಅರ್ಧ ಕಪ್‌ ಕಡಲೆಹಿಟ್ಟಿಗೆ 1 ಚಮಚ ಚಂದನದ ಪುಡಿ, 2 ಚಿಟಕಿ ಅರಿಶಿನ, ಹಸಿ ಹಾಲು ಬೆರೆಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಕನಿಷ್ಠ 3 ಸಲ ಇದನ್ನು ರಿಪೀಟ್‌ ಮಾಡಿ. ಹಾಗೆಯೇ ವಾರಕ್ಕೆ 2 ಸಲ ತುಸು ಕಡಲೆ ಹಿಟ್ಟಿಗೆ 2-3 ಹನಿ ಜೇನು ಬೆರೆಸಿ, ಅದನ್ನು ಮುಖಕ್ಕೆ ಹಚ್ಚಿ ತೊಳೆಯುವುದರಿಂದಲೂ ಮೊಡವೆ, ಆ್ಯಕ್ನೆ ದೂರಾಗುತ್ತವೆ.

ಆಯ್ಲಿ ಸ್ಕಿನ್‌ಗಾಗಿ : ನಿಮ್ಮದು ಆಯ್ಲಿ ಸ್ಕಿನ್‌ ಸಮಸ್ಯೆಯೇ? ಇದಕ್ಕಾಗಿ ಅರ್ಧ ಕಪ್‌ ಕಡಲೆಹಿಟ್ಟಿಗೆ, 2-3 ಹನಿ ರೋಸ್‌ ವಾಟರ್‌ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಆಗ ಮೊಡವೆಗಳು ಎಷ್ಟೋ ತಗ್ಗುತ್ತವೆ. ಇದರಿಂದ ಮುಖದಲ್ಲಿನ ಕಲ್ಮಶವೆಲ್ಲ ತೊಳೆದುಹೋಗಿ, ಚರ್ಮ ಎಷ್ಟೋ ಕೋಮಲವಾಗುತ್ತದೆ. ಕಡಲೆ ಹಿಟ್ಟಿಗೆ ಜೇನು, ಚಿಟಕಿ ಅರಿಶಿನ, ತುಸು ಹಾಲು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತುಸು ಬಿಸಿ ನೀರಿನಿಂದ ಮುಖ ತೊಳೆಯಿರಿ.

ಓಪನ್‌ ಫೋರ್ಸ್‌ಗಾಗಿ : ಚರ್ಮವನ್ನು ಶುಚಿಯಾಗಿಟ್ಟುಕೊಳ್ಳಲು ಹಾಗೂ ರೋಮರಂಧ್ರಗಳನ್ನು ಟೈಟ್‌ಗೊಳಿಸಲು ಸಹ ಕಡಲೆ ಹಿಟ್ಟು ಹಿತಕಾರಿ ಎನಿಸಿದೆ. ಹೀಗಾಗಿ ಇದಕ್ಕೆ ಸೌತೆ ರಸ ಬೆರೆಸಿ ಪೇಸ್ಟ್ ಮಾಡಿ. ನಂತರ ಫೇಸ್‌ಪ್ಯಾಕ್‌ ತರಹ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಓಪನ್‌ ಫೋರ್ಸ್‌ ಸಮಸ್ಯೆ ದೂರವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ