ಬೇಸಿಗೆಗೆ ಯಾರು ಕಾಯುತ್ತಾರೋ ಇಲ್ಲವೋ ಆದರೆ ಬೇಸಿಗೆ ಕಾಲದಲ್ಲಿ ಸಿಗುವಂತಹ ಹಣ್ಣುಗಳಿಗಾಗಿ ಪ್ರತಿಯೊಬ್ಬರೂ ದಾರಿ ಕಾಯುತ್ತಾರೆ. ಏಕೆಂದರೆ ಈ ಋತುವಿನಲ್ಲಿ ಮಾವು, ನೇರಳೆ, ಕರಬೂಜ, ದ್ರಾಕ್ಷಿ, ನಿಂಬೆ ಇತ್ಯಾದಿ ಹಣ್ಣುಗಳು ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿರುತ್ತವೆ. ಮಾವಿನ ಹಣ್ಣಂತೂ ಎಲ್ಲರಿಗೂ ಪ್ರಾಣ. ಅದನ್ನು ನೋಡಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಮಾವಿನ ಜೊತೆ ಜೊತೆಗೆ ಇತರ ಹಣ್ಣುಗಳೂ ನಮ್ಮ ರುಚಿಯನ್ನು ಹೆಚ್ಚಿಸುತ್ತವೆ. ವಿಟಮಿನ್‌ಗಳಿಂದ ತುಂಬಿದ ಈ ಹಣ್ಣುಗಳು ಶಕ್ತಿದಾಯಕವೂ ಹೌದು, ಸೌಂದರ್ಯವರ್ಧಕವೂ ಹೌದು.

ಹಣ್ಣು ತಿನ್ನುವುದರಿಂದ ತ್ವಚೆಯು ಒಳಗಿನಿಂದ ಸ್ವಚ್ಛವಾಗುತ್ತದೆಯಲ್ಲದೆ, ಹೊರಗಿನಿಂದಲೂ ಅದರ ಹೊಳಪು ಇನ್ನಷ್ಟು ಹೆಚ್ಚುತ್ತದೆ. ಧೂಳು, ಉಷ್ಣತೆ, ಬೆವರು ಇತ್ಯಾದಿಗಳಿಂದ ತ್ವಚೆ ಹಾಳಾಗುತ್ತದೆ. ಆದರೆ ಹಣ್ಣು ತಿನ್ನುವುದರಿಂದ ತ್ವಚೆಗೆ ಪ್ರಾಕೃತಿಕ ಪೋಷಣೆ ಸಿಗುತ್ತದೆ. ಹಣ್ಣುಗಳ ಲೇಪನದಿಂದ ತ್ವಚೆಯ ಪ್ರಾಕೃತಿಕ ಹೊಳಪು ಹೆಚ್ಚುತ್ತದೆ.

ಹಣ್ಣುಗಳಿಂದ ತ್ವಚೆಯ ಸೌಂದರ್ಯ ಹೇಗೆ ಹೆಚ್ಚಿಸುವುದೆಂದು ತಿಳಿಯೋಣ ಬನ್ನಿ.

ಮಾವಿನಹಣ್ಣು

ಹಣ್ಣುಗಳ ರಾಜ ಮಾವಿನಹಣ್ಣಿನಲ್ಲಿ ವಿಟಮಿನ್‌ `ಎ' ನ ಪ್ರಮಾಣ ಅತ್ಯಂತ ಹೆಚ್ಚಾಗಿರುತ್ತದೆ. ತ್ವಚೆಗೆ ಮತ್ತು ಕಣ್ಣುಗಳಿಗಂತೂ ಇದು ಲಾಭಕಾರಿ. ತ್ವಚೆಯ ಹೊರಗಿನ ಸೌಂದರ್ಯ ಹೆಚ್ಚಿಸಲೂ ಸಹ ಇದು ಉಪಯೋಗವಾಗುತ್ತದೆ. ಸನ್‌ ಟ್ಯಾನ್‌ ದೂರ ಮಾಡಲು ಮತ್ತು ಮುಖದ ಹೊಳಪು ಹೆಚ್ಚಿಸಲು 2 ಚಮಚ ಮಾವಿನ ತಿರುಳಿಗೆ 1 ಚಮಚ ಜೇನುತುಪ್ಪ, 1 ಚಮಚ ಮೊಸರು ಮತ್ತು 1 ಚಿಟಕಿ ಅರಿಶಿನ ಸೇರಿಸಿ ಪ್ಯಾಕ್‌ ತಯಾರಿಸಿ ಮುಖಕ್ಕೆ ಹಚ್ಚಿ ಮಸಾಜ್‌ ಮಾಡಿ. 10-15 ನಿಮಿಷಗಳ ನಂತರ ಮುಖ ತೊಳೆಯಿರಿ. ಮುಖ ತಾಜಾ ಆಗಿ ಕಾಣುವುದು.

ಕರಬೂಜ

ಶರೀರಕ್ಕೆ ತಂಪು ಕೊಡು ಕರಬೂಜ ತ್ವಚೆಗೂ ಬಹಳ ಉಪಯೋಗವಾಗಿದೆ. 2 ಚಮಚ ಕರಬೂಜದ ತಿರುಳಿಗೆ ಅರ್ಧ ಚಮಚ ಜೇನುತುಪ್ಪ, ಅರ್ಧ ಚಮಚ ಮುಲ್ತಾನಿ ಮಿಟ್ಟಿ ಬೆರೆಸಿ 2-3 ನಿಮಿಷ ಮುಖಕ್ಕೆ ಮಸಾಜ್‌ ಮಾಡಿ. 10 ನಿಮಿಷಗಳ ನಂತರ ಮುಖ ತೊಳೆಯಿರಿ. ತ್ವಚೆ ಹೊಳೆಯುತ್ತದೆ.

watermelon.299192954-large

ಬಾಳೆಹಣ್ಣು

ವರ್ಷಪೂರ್ತಿ ಸಿಗುವ ಬಾಳೆಹಣ್ಣಿಗೆ ಬೇಸಿಗೆಯಲ್ಲೂ ಬೇಡಿಕೆ ಇದೆ. ಬಾಳೆಹಣ್ಣನ್ನು ತ್ವಚೆಯ ಮೇಲೆ ಉಪಯೋಗಿಸಿದರೆ ಮುಖಕ್ಕೆ ಹೊಳಪು ಬರುತ್ತದೆ. ಬಾಳೆಹಣ್ಣಿಗೆ ಕೊಂಚ ಜೇನುತುಪ್ಪ ಬೆರೆಸಿ ಮುಖ ಹಾಗೂ ಕುತ್ತಿಗೆಯ ಮೇಲೆ 5 ನಿಮಿಷ ಮಸಾಜ್‌ ಮಾಡಿ. 5 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಇದರಿಂದ ಬ್ಲ್ಯಾಕ್‌ ಹೆಡ್ಸ್ ಕೂಡ ದೂರವಾಗುತ್ತವೆ.

banana

ದ್ರಾಕ್ಷಿ

ದ್ರಾಕ್ಷಿ ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ. ಅದನ್ನು ತಿನ್ನುವುದರಿಂದಲೂ ನಮ್ಮ  ತ್ವಚೆ ಹೊಳೆಯತೊಡಗುತ್ತದೆ. ಹೊರಗಿನ ತ್ವಚೆಯ ಚಿಕಿತ್ಸೆಗೂ ದ್ರಾಕ್ಷಿಯನ್ನು ಉಪಯೋಗಿಸುತ್ತಾರೆ. ದ್ರಾಕ್ಷಿ ಹಣ್ಣಿನ ತಿರುಳಿಗೆ ಮುಲ್ತಾನಿ ಮಿಟ್ಟಿ ಸೇರಿಸಿ ದ್ರಾಕ್ಷಿ ಪ್ಯಾಕ್‌ ತಯಾರಿಸಿ ಮತ್ತು ಮುಖಕ್ಕೆ ಹಚ್ಚಿ. 15-20 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಮುಖ ಸ್ವಚ್ಛವಾಗಿ ಹೊಳೆಯತೊಡಗುತ್ತದೆ.

grapes

 

ಪರಂಗಿ ಹಣ್ಣು

ವರ್ಷ ಪೂರ್ತಿ ಸಿಗುವ ಪರಂಗಿ ಹಣ್ಣಿನಲ್ಲಿ ತ್ವಚೆಯ ಸೌಂದರ್ಯ ಹೆಚ್ಚಿಸುವ ಎಲ್ಲ ಅಂಶಗಳಿವೆ. ದಿನ ಪರಂಗಿ ಹಣ್ಣಿನ 4-5 ತುಂಡುಗಳನ್ನು ತಿನ್ನುವುದರಿಂದ ಮುಖದಲ್ಲಿನ ನೆರಿಗೆಗಳು ಕಡಿಮೆಯಾಗುತ್ತವೆ. 1 ಚಮಚ ಪರಂಗಿ ಹಣ್ಣು, 1 ಚಮಚ ಜೇನುತುಪ್ಪ ಮತ್ತು 1 ಚಮಚ ಮುಲ್ತಾನಿ ಮಿಟ್ಟಿ ಬೆರೆಸಿ ಮುಖಕ್ಕೆ ಹಚ್ಚಿ. 10-15 ನಿಮಿಷಗಳ ನಂತರ ಮುಖ ತೊಳೆಯಿರಿ. ಮುಖ ಹೊಳೆಯುವ ಜೊತೆಗೆ ನೆರಿಗೆಗಳೂ ಕಡಿಮೆಯಾಗುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ