ಸಾಂಪ್ರದಾಯಿಕ ರೂಪ ಪಾರಂಪರಿಕ ಶೃಂಗಾರ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ನೀವು ಸಹ ಇಂಥ ಟ್ರೆಡಿಶನಲ್ ಲುಕ್ಸ್ ಪಡೆಯ ಬಯಸಿದರೆ ರೇಷ್ಮೆ ಲಂಗದಾವಣಿ, ಜರಿ ಸೀರೆ, ಘಾಘ್ರಾಚೋಲಿ, ಸಲ್ವಾರ್‌ ಸೂಟ್‌ ಇತ್ಯಾದಿ ಆರಿಸಿ.

ಈ ಮೇಕಪ್‌ಗಾಗಿ ಎಲ್ಲಕ್ಕೂ ಮೊದಲು ಮುಖಕ್ಕೆ ಬೇಸ್‌ ಆಗಿ ಸೂಫ್ಲೆ ಬಳಸಬೇಕು. ಇದನ್ನು ಬಳಸಿದ ತಕ್ಷಣವೇ ಅದು ಪೌಡರ್‌ರೂಪದಲ್ಲಿ ಬದಲಾಗುತ್ತದೆ, ಮುಖಕ್ಕೆ ಮ್ಯಾಟ್‌ ಲುಕ್‌ ತಂದುಕೊಡುತ್ತದೆ. ನಿಮ್ಮದು ಡ್ರೈ ಸ್ಕಿನ್‌ ಆಗಿದ್ದರೆ, ಆಗ ನೀವು ಫೌಂಡೇಶನ್

ರೂಪದಲ್ಲಿ ಟಿಂಟೆಡ್‌ ಮಾಯಿಶ್ಚರೈಸರ್‌ ಬಳಸಬಹುದು. ಇದರಿಂದ ನಿಮ್ಮ ಸ್ಕಿನ್‌ ಸಾಫ್ಟ್ ಆಗಲಿದೆ, ಚರ್ಮಕ್ಕೆ ಹೆಚ್ಚಿನ ಕಾಂತಿ ಬರುತ್ತದೆ. ಇದಾದ ಮೇಲೆ ಕೆನ್ನೆಗಳಿಗೆ ಪಿಂಕ್‌ ಯಾ ಪೀಚ್‌ ಕಲರ್‌ನ ಬ್ಲಶ್‌ ಆನ್‌ ಹಚ್ಚಿರಿ.

ಕಂಗಳ ಮೇಕಪ್‌ಗಾಗಿ ಐಶ್ಯಾಡೋ ಡ್ರೆಸ್‌ಗೆ ಮ್ಯಾಚಿಂಗ್‌ ಆಗಿರುವಂತೆ ನೋಡಿಕೊಳ್ಳಿ. ಐಲಿಡ್‌ ಮೇಲೆ ಕೆಳಗಿನಿಂದ ಮೇಲುಭಾಗಕ್ಕೆ ಲೈಟ್‌ ಟೋನ್‌ ನೀಡುತ್ತಾ ಐಶ್ಯಾಡೋ ಹಚ್ಚಿರಿ. ಆದರೆ ಸೈಡ್‌ ಕಾರ್ನರ್ಸ್‌ ಬಳಿ, ತೆಳುವಾಗಿ ಡಾರ್ಕ್‌ ಐಶ್ಯಾಡೋ ಹಚ್ಚಿರಿ. ನೀವು ಮಲ್ಟಿಶೇಡ್‌ ಲಹಂಗಾ, ಸೀರೆ ಯಾ ಸೂಟ್‌ ಧರಿಸಿದ್ದರೆ, ಒಂದೇ ಶೇಡ್‌ನ ಐ ಶ್ಯಾಡೋ ಹಚ್ಚಿರಿ. ಆಗ ಲೈನರ್‌ ಬೇರೆ  ಬಣ್ಣವಿರಲಿ.

ಕಣ್ಣೆವೆಗಳು ದಟ್ಟವಾಗಿರುವಂತೆ ತೋರಿಸಲು, ಕೃತಕ ಐ ಲ್ಯಾಶೆಸ್‌ ಬಳಸಿರಿ. ಇದಕ್ಕಾಗಿ ಮೊದಲು ಕಣ್ಣೆವೆಗಳನ್ನು ಕರ್ಲರ್‌ನಿಂದ ಕರ್ಲ್ ಮಾಡಿ. ನಂತರ ಲಾಂಗ್ ಲ್ಯಾಶ್‌ ಮಸ್ಕರಾದ ಕೋಟ್‌ ಹಚ್ಚಿರಿ. ಫಿನಿಶ್‌ ಮಾಡುವುದಕ್ಕಾಗಿ ವಾಟರ್‌ ಲೈನ್‌ ಮೇಲೆ ಅಗತ್ಯ ಕಾಜಲ್ ಹಚ್ಚಿರಿ.

ಎಥ್ನಿಕ್‌ ಉಡುಗೆಗಳಿಗೆ ಕಂಪ್ಲೀಟ್‌ ಲುಕ್‌ ನೀಡಲು ಹಣೆಗೆ ಯಾವುದೇ ಸ್ಟಡ್‌ ಯಾ ಸ್ವರೋಸ್ಕಿಯುಕ್ತ ಬಿಂದಿ ಅಂಟಿಸಿ. ನಿಮ್ಮ ಭವ್ಯ ಸೌಂದರ್ಯದ ಜೊತೆ ಜೊತೆಯಲ್ಲೇ ನಿಮ್ಮ ಕೈಗಳ ಸೌಂದರ್ಯವನ್ನೂ ಹೊಗಳಬೇಕೆಂದರೆ, ನಿಮ್ಮ ಉಗುರುಗಳಿಗೆ 3D  ನೇಲ್ ಆರ್ಟ್‌ ಮಾಡಿಸಿ.

ನಿಮ್ಮ ಡ್ರೆಸ್‌ಗೆ ಹೊಂದುವಂಥ ಆದರೆ ಡಾರ್ಕ್‌ ಆಗಿರುವ ಲಿಪ್‌ಸ್ಟಿಕ್‌ ಆರಿಸಿಕೊಳ್ಳಿ. ಉದಾ: ಪ್ಲಮ್, ಚೆರ್ರಿ, ಹಾಟ್‌ ಪಿಂಕ್‌, ಫ್ಯೂಶಿಯಾ ಇತ್ಯಾದಿ. ತುಟಿಗಳಿಗೆ ಪರ್ಫೆಕ್ಟ್ ಶೇಪ್‌ ನೀಡಲು, ಲಿಪ್‌ಸ್ಟಿಕ್‌ಗೆ ಹೊಂದುವಂಥ ಲಿಪ್‌ ಲೈನರ್‌ನಿಂದ ತುಟಿಗಳ ಶೇಪ್ ಡಿಫೈನ್‌ ಮಾಡಿ.

ಹೇರ್‌ ಸ್ಟೈಲ್

‌ಪಟಾಕಿಗಳ ಜೊತೆ ಆನಂದವಾಗಿ ಕಾಲ ಕಳೆಯುವಾಗ, ನೀವು ಕೂದಲನ್ನು ಹಾಗೆ ಓಪನ್‌ ಬಿಡುವ ಬದಲು ಅದನ್ನು ಸ್ಟೈಲಿಶ್‌ ಆಗಿ ಹೆಣೆದುಕೊಳ್ಳಿ. ಇತ್ತೀಚೆಗೆ ಬ್ರೆಡ್ಸ್ ಫ್ಯಾಷನ್‌ ಹೆಚ್ಚು ಚಾಲ್ತಿಯಲ್ಲಿದೆ. ಹೀಗಾಗಿ ಫ್ರಂಟ್‌ ಭಾಗದಿಂದ ಸ್ಟೈಲಿಂಗ್‌ ಮಾಡಲು ನೀವು ಕೂದಲಲ್ಲಿ ಬ್ರೆಡ್ಸ್ ಮೂಡಿಸಿ. ಅದನ್ನು ಹಿಂಬದಿಗೆ ತಂದು ಬನ್‌ ಮಾಡಿಕೊಳ್ಳಿ ಅಥವಾ ಹಿಂಬದಿಯ ಕೂದಲಿನಿಂದ ಸೈಡ್‌ ಜಡೆ ಹೆಣೆದುಕೊಳ್ಳಿ. ಸ್ವರೋಸ್ಕಿಯುಕ್ತ ಹೇರ್‌ ಆ್ಯಕ್ಸೆಸರೀಸ್‌ ನಿಮ್ಮನ್ನು ಇನ್ನಷ್ಟು ಹೆಚ್ಚು ಸುಂದರವಾಗಿ ಕಂಗೊಳಿಸುವಂತೆ ಮಾಡುತ್ತದೆ. ಜಡೆ ಅಥವಾ ಬನ್‌ ಅಲಂಕರಿಸಲು ನೀವು ಇದನ್ನು ಬಳಸಬಹುದು.

ಇಂಡೋವೆಸ್ಟರ್ನ್‌ ಫ್ಯೂಷನ್‌ ಲುಕ್ಸ್

ನೀವು ದೀಪಾವಳಿಯ ದಿನ ಈ ಪರಿಯ ಮೇಕಪ್‌ನಿಂದ ಸುಶೋಭಿಸಬೇಕೇ? ಆಗ ವಿಭಿನ್ನ ಸ್ಟೈಲ್‌ಗಳಲ್ಲಿ ಮೇಕಪ್‌ ಮಿಕ್ಸ್ ಮಾಡಿ. ಮೇಕಪ್‌ಗೆ ಮುಂಚೆ ಅಗತ್ಯವಾಗಿ ಮುಖ ಕ್ಲೀನ್‌ ಮಾಡಿ. ನಂತರ ಒಳ್ಳೆಯ ಮಾಯಿಶ್ಚರೈಸರ್‌ನಿಂದ ಮುಖವನ್ನು ಮಸಾಜ್‌ ಮಾಡಿ. ಬೇಸ್‌ಗಾಗಿ ಶ್ಯಾಮಲ ವರ್ಣದವರು ತಮ್ಮ ಬಣ್ಣಕ್ಕಿಂತ ಒಂದು ಶೇಡ್‌ ತೆಳು ಇರುವ ಫೌಂಡೇಶನ್‌ ಆರಿಸಿಕೊಳ್ಳಬೇಕು.  ಗೌರವ ವರ್ಣದವರು ಫೌಂಡೇಶನ್‌ ಅಥವಾ ಬೇಸ್‌ಗಾಗಿ ನಿಮ್ಮ ತ್ವಚೆಯ ಅನುಸಾರ ಆರಿಸಿ. ಡಾರ್ಕ್‌ ಕಾಂಪ್ಲೆಕ್ಷನ್‌ಗೆ ಪೀಚ್‌ಹಾಗೂ ಪೀಚೀ ಬ್ರೌನ್‌ ಕಲರ್‌ನ ಬ್ಲಶ್‌ ಆನ್‌ ಹಚ್ಚಬಹುದು. ಗೌರವ ವರ್ಣದವರು ರೆಡ್ಡಿಶ್‌ ಬ್ರೌನ್‌ ಹಾಗೂ ಪಿಂಕ್‌ ಕಲರ್‌ನ ತೆಳು ಡಾರ್ಕ್‌ ಬ್ಲಶರ್‌ ಬಳಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ