ಹಬ್ಬಗಳ ಸಡಗರ ಸಂಭ್ರಮದ ನಿರೀಕ್ಷೆ ಅಷ್ಟಿಷ್ಟಲ್ಲ. ಹೀಗಾಗಿ ಹಬ್ಬಗಳನ್ನು ಎದುರುಗೊಳ್ಳಲು ನೀವು ಸೂಕ್ತವಾಗಿ ಸಿದ್ಧರಾಗಬೇಕು. ಹಿಂದಿನ ದಿನಗಳ ತಯಾರಿ ಜೋರಾಗಿದ್ದಾಗ ಮಾತ್ರ, ಹಬ್ಬದ ದಿನ ನೀವು ಮಿರಿಮಿರಿ ಮಿಂಚಲು ಸಾಧ್ಯ. ಹಬ್ಬಗಳಲ್ಲಿ ಇತರರಿಗಿಂತ ಭಿನ್ನವಾಗಿ ಮಿಂಚುವುದು ಹೇಗೆಂದು ಚಿಂತಿಸುತ್ತಿದ್ದೀರಾ? ಇದಕ್ಕಾಗಿ ತಜ್ಞರ ಸಲಹೆಗಳನ್ನು ಅನುಸರಿಸಿ, ಹಬ್ಬಕ್ಕಾಗಿ ನೀವು ಈ ರೀತಿ ಶೃಂಗಾರ ಮಾಡಿಕೊಂಡು ಸಿದ್ಧರಾಗಿ.

ಫೇಶಿಯಲ್ ಚಾರ್ಮ್

ಹಬ್ಬದ ಹೊಳೆ ಹೊಳೆಯುವ ವಾತಾವರಣದಲ್ಲಿ ನಿಮ್ಮ ಮೈಕಾಂತಿಯೂ ಹಾಗೆಯೇ ಹೊಳೆಯುತ್ತಿರಬೇಕಲ್ಲವೇ? ಹೀಗಾಗಿ ಆಗಾಗ ಸ್ಕಿನ್‌ಗೆ ತಕ್ಕಂತೆ ಫೇಶಿಯಲ್ ಮಾಡಿಸಿ. ಇತ್ತೀಚೆಗೆ ಈ ನಿಟ್ಟಿನಲ್ಲಿ ಗೋಲ್ಡ್ ಫೇಶಿಯಲ್ ಸಾಕಷ್ಟು ಜನಪ್ರಿಯವಾಗಿದೆ. ಈ ಟೆಕ್ನಿಕ್‌ನಲ್ಲಿ ಒಂದು ವಿಶೇಷ ಸ್ಕ್ರಬರ್‌ ಯಂತ್ರದ ಸಹಾಯದಿಂದ ಡೆಡ್‌ ಸೆಲ್ಸ್ ರಿಮೂವ್‌ ಮಾಡುತ್ತಾರೆ. ನಂತರ ಬೇರೆ ಯಂತ್ರದಿಂದ ಚರ್ಮದ ಆಳಕ್ಕೆ ಇಳಿಯುವಂತೆ ಆ ಜಾಗಕ್ಕೆ ಹಣ್ಣಿನ ರಸ, ಗೋಲ್ಡ್ ಸಲ್ಯೂಶನ್‌ ಲೇಪಿಸಲಾಗುತ್ತದೆ. ಹೀಗೆ ಮಾಡುವುದರಿಂದ ಆ ಜಾಗದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಹಬ್ಬ ಶುರುವಾಗುವ 2-3 ದಿನಗಳ ಹಿಂದೆಯೇ ಇದನ್ನು ಮಾಡಿಸಬೇಕು. ಆಗ ಹಬ್ಬ ಕಳೆಯುವವರೆಗೂ ನೀವು ಲಕಲಕ ಮಿಂಚಬಲ್ಲಿರಿ.

ಮನೆ ಮದ್ದು :  1 ಚಮಚ ಸಣ್ಣ ರವೆಯನ್ನು ತುಸು ಬಿಸಿ ಹಾಲಿಗೆ ಹಾಕಿ ಕದಡಿಕೊಳ್ಳಿ. ಇದು ತುಸು ಪೇಸ್ಟ್ ನಂತೆ ಆದಾಗ, 2-3 ಹನಿ ನಿಂಬೆ ರಸ, 2 ಹನಿ ಜೇನು ಬೆರೆಸಿ ಗೊಟಾಯಿಸಿ. ನಂತರ ನೀಟಾಗಿ ಮುಖಕ್ಕೆ ಹಚ್ಚಿರಿ. ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.

1 ಗಂಟೆಯೊಳಗೆ ನಿಮ್ಮ ಮುಖ ಹೊಳೆಯುವುದನ್ನು ಗಮನಿಸಿ.

ಬಾಡಿ ಗ್ಲೋ

ಒಂದು ಕಡೆ ಹಬ್ಬದ ಶಾಪಿಂಗ್‌ಗಾಗಿ ಉತ್ಸಾಹದಿಂದ ಹೊರಡುವಿರಿ. ಈ ತಯಾರಿಗಳ ಕಾರಣ ಸುಸ್ತಾಗುವುದು ಸಹಜ. ದಿನವಿಡೀ ಓಡಾಟದ ಕಾರಣ ಚರ್ಮ ಟ್ಯಾನಿಂಗ್‌ಗೆ ಒಳಗಾಗುತ್ತದೆ. ಹೀಗಾಗಿ ದೇಹವನ್ನು ಟ್ಯಾನ್‌ಫ್ರೀ ರಿಲ್ಯಾಕ್ಸ್ ಆಗಿಡಲು ಬಾಡಿ ಸ್ಕ್ರಬಿಂಗ್‌ ಮಾಡಿಸುವುದು ಲೇಸು. ಇದರಿಂದ ಚರ್ಮದ ಮೃತ ಜೀವಕೋಶಗಳು ತೊಲಗಿ, ಟ್ಯಾನಿಂಗ್‌ ಸಹ ದೂರವಾಗುತ್ತದೆ. ಇದರಿಂದಾಗಿ ಚರ್ಮ ಸಾಫ್ಟ್ ಆಗಿ ಮೈಕಾಂತಿ ಕಳೆಗಟ್ಟುತ್ತದೆ.

ಮನೆ ಮದ್ದು : 1 ಚಮಚ ಕಡಲೆಹಿಟ್ಟಿಗೆ 2 ಚಮಚ ಗೋಧಿ ತೌಡು, 2-2 ಚಿಟಕಿ ಅರಿಶಿನ, ಚಂದನ, 1-2 ಹನಿ ನಿಂಬೆರಸ, ಹಾಲಿನ ಕೆನೆ ಬೆರೆಸಿಕೊಂಡು ಪೇಸ್ಟ್ ತರಹ ಮಾಡಿ ಬೆಳಗೂ ಬೈಗೂ ಹಚ್ಚಿಕೊಳ್ಳಿ. ಅಗತ್ಯವೆನಿಸಿದರೆ ಸ್ನಾನಕ್ಕೆ ಮುಂಚೆ ದೇಹವಿಡೀ ಹಚ್ಚಿಕೊಂಡು ಒಣಗಿದ ನಂತರ ಸ್ನಾನ ಮಾಡಿ. ಕ್ರಮೇಣ ಮೈಕಾಂತಿಯಲ್ಲಿ ಸುಧಾರಣೆ ಕಾಣುತ್ತದೆ.

ಹೊಳೆ ಹೊಳೆಯುವ ಕೂದಲು

ಡ್ರೈನೆಸ್‌ನಿಂದಾಗಿ ಕೂದಲು ನಿರ್ಜೀವವಾಗಿ ಕಾಣುತ್ತದೆ. ಹೀಗಾಗಿ ಅದಕ್ಕೆ ಸಾಫ್ಟ್ ಸಿಲ್ಕಿ ಲುಕ್ಸ್ ನೀಡಲು ಹೇರ್‌ ಸ್ಪಾ ಅತ್ಯಗತ್ಯ. ಇದರಿಂದ ಸ್ಕಾಲ್ಪ್ ನ ರಕ್ತ ಸಂಚಾರ ಸುಧಾರಿಸುತ್ತದೆ, ಡೀಟಾಕ್ಸಿಫಿಕೇಶನ್‌ ಸಲೀಸಾಗುತ್ತದೆ, ಕೂದಲು ಉದುರುವಿಕೆ ತಂತಾನೇ ನಿಲ್ಲುತ್ತದೆ, ಜೊತೆಗೆ ಕೂದಲಿನ ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ