ಕೂದಲು ದುರ್ಬಲ ಆಗುವುದಕ್ಕೆ ಬಹಳ ಕಾರಣಗಳಿವೆ. ವಯಸ್ಸು, ಹಾರ್ಮೋನ್‌ ಬದಲಾವಣೆ, ಟೆನ್ಶನ್‌, ಥಿನ್‌ ಬ್ಲಡ್‌, ಔಷಧಿ, ದಿಢೀರ್‌ ಕುಸಿಯುವ ದೇಹ ತೂಕ, ಪರಿಸರದ ಬದಲಾವಣೆ, ಹೀಟ್‌ ಜನರೇಟಿಂಗ್‌ ಉತ್ಪನ್ನಗಳ ಬಳಕೆ ಇತ್ಯಾದಿಗಳ ಕಾರಣ ಕೂದಲು ಶುಷ್ಕ ಹಾಗೂ ದುರ್ಬಲ ಆಗುತ್ತದೆ.

ಕೂದಲು ಎಂದಿಗೂ ಹೀಗೆ ಅನಾರೋಗ್ಯಕ್ಕೆ ಸಿಕ್ಕಿ ಹಾಕಿಕೊಳ್ಳಲು ಬಿಡಬೇಡಿ. ಇದರ ನಿವಾರಣೆಗಾಗಿ ಇಲ್ಲಿದೆ ಪರಿಹಾರ :

ಗುಲಾಬಿ ಜಲ : ಗುಲಾಬಿ ಜಲದ  ವ್ಯಾಲ್ಯೂ ಕೂದಲಿನ ಬಲು ಹತ್ತಿರವಿರುತ್ತದೆ. ಇದರರ್ಥ ಇದು ಕೂದಲಿನ ತೈಲಾಂಶವನ್ನು ಕಡಿಮೆ ಮಾಡಬಲ್ಲದು ಹಾಗೂ ಅದರ ನೈಸರ್ಗಿಕ ಹೊಳಪು ಸಹ ಹೆಚ್ಚುತ್ತದೆ. ಗುಲಾಬಿ ಜಲ ಕೂದಲಿಗೆ ಅತ್ಯುತ್ತಮ ಮಾಯಿಶ್ಚರೈಸರ್‌ ಆಗಿದೆ. ಸ್ನಾನದ ಬಕೆಟ್‌ ನೀರಿಗೆ ಗುಲಾಬಿ ಜಲ ಬೆರೆಸಿ ಕೂದಲನ್ನು ತೊಳೆಯಿರಿ.

ನೆಲ್ಲಿಕಾಯಿ : ಕೂದಲು ಉದುರುವುದನ್ನು ತಡೆಯಲು ಮತ್ತೊಂದು ಉತ್ತಮ ಉಪಾಯ ಎಂದರೆ ನೆಲ್ಲಿಕಾಯಿ ಬಳಕೆ. ನಿಮ್ಮ ತಲೆಗೂದಲಿಗೆ ಪ್ರತಿದಿನ ಆಮ್ಲ ಕೇಶ ತೈಲದಿಂದ ಮಸಾಜ್‌ ಮಾಡಿ, ನಂತರ ತಲೆಗೂದಲು ಬಾಚಬೇಕು. ಇದರಿಂದ ಸ್ಕಾಲ್ಪ್ ನ (ತಲೆಬುರುಡೆಯ ಮೇಲ್ಪದರ) ಆಳಕ್ಕೆ ಎಣ್ಣೆ ಇಳಿದು, ಆ ಭಾಗದ ಚರ್ಮ ಸಶಕ್ತಗೊಂಡು, ಕೂದಲು ಹೊಳೆಯ ತೊಡಗುತ್ತದೆ.

ನೆಲ್ಲಿಕಾಯಿ ವಿಟಮಿನ್‌ `ಸಿ'ಯಿಂದ ಸಮೃದ್ಧವಾಗಿದೆ. ಹೀಗಾಗಿ ಇದು ವಯಸ್ಸಿಗೆ ಮೊದಲೇ ನರೆಗೂದಲು ಆಗುವುದನ್ನು ತಪ್ಪಿಸುವುದಲ್ಲದೆ, ಬಹಳ ತುರಿಕೆ, ನವೆ ಇರುವ ಸ್ಕಾಲ್ಪ್ ಗೆ ಉತ್ತಮ ಔಷಧಿಯಾಗಿದೆ. ಇದಂತೂ ದಿ ಬೆಸ್ಟ್ ಫಸ್ಚ್ ಕ್ಲಾಸ್ ಕಂಡೀಶನರ್‌ ಎನಿಸಿದೆ. ಅದು ತಲೆಬುರುಡೆಯ ಒಳಗಿಳಿದು ಕೂದಲಿನ ಬುಡಕ್ಕೆ ಉತ್ತಮ ಪೋಷಣೆ ಒದಗಿಸುತ್ತದೆ.

ಸೀಗೆಪುಡಿಗೆ ಚಿಗರೆಪುಡಿ, ನೆಲ್ಲಿ ಪೇಸ್ಟ್ ಹಾಕಿ ಮಿಶ್ರಣ ಕಲಸಿಕೊಳ್ಳಿ. ಇದನ್ನು ತಲೆಯ ಬುಡಕ್ಕೆ ಚೆನ್ನಾಗಿ ತಿಕ್ಕಿ 30-40 ನಿಮಿಷ ಹಾಗೇ ಬಿಡಿ, ನಂತರ ಸ್ನಾನ ಮಾಡಿ.

ಆಲೂಗಡ್ಡೆ : ಆಲೂನಲ್ಲಿ ವಿಟಮಿನ್‌, ಝಿಂಕ್‌, ಕಬ್ಬಿಣಾಂಶಗಳು ಧಾರಾಳಾಗಿವೆ. ಇದು ಸ್ಕಾಲ್ಪ್ ಗೆ ಹೆಚ್ಚಿನ ಪೋಷಣೆ ಒದಗಿಸುತ್ತದೆ ಹಾಗೂ ಕೂದಲಿನ ಬೆಳವಣಿಗೆಗೆ ಸಹಕಾರಿ.

ಆಲೂ ಸಿಪ್ಪೆ ಹೆರೆದು ತುಸು ನಿಂಬೆರಸ ಬೆರೆಸಿ ಹಸಿ ಆಲೂ ಪೇಸ್ಟ್ ಮಾಡಿಡಿ. ಹರ್ಬಲ್ ಶ್ಯಾಂಪೂ ಬಳಸಿ ಕೂದಲು ತೊಳೆದ ನಂತರ, ಈ ಪೇಸ್ಟ್ ಹಚ್ಚಿ ಅರ್ಧ ಗಂಟೆ ಒಣಗಲು ಬಿಡಿ. ನಂತರ ಸ್ವಚ್ಛ ನೀರಿನಲ್ಲಿ ಚೆನ್ನಾಗಿ ತಲೆ ತೊಳೆಯಿರಿ. ಹೆಚ್ಚು ಉದ್ದ, ದಟ್ಟ ಕೂದಲಿರುವವರಿಗೆ ಒಂದು ಕಪ್‌ ಹಾಗೂ ಸಾಧಾರಣ, ಕಡಿಮೆ ಕೂದಲಿನವರಿಗೆ ಅರ್ಧ ಕಪ್‌ ಆಲೂ ಪೇಸ್ಟ್ ಸಾಕು.

ಕರಿಬೇವು : ಕರಿಬೇವು ಸೇವನೆ ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಕೂದಲಿಗೂ ಅಷ್ಟೇ ಒಳ್ಳೆಯದು. ಕೂದಲಿನ ಸರ್ವತೋಮುಖ ಆರೋಗ್ಯ ಅಂದರೆ ದಟ್ಟ, ಉದ್ದ, ಒತ್ತೊತ್ತಾಗಿ, ನರೆಗೂದಲು ತಪ್ಪುವಂತೆ, ಕೂದಲು ಉದುರದಂತೆ ಮಾಡಲು ಇದು ರಾಮಬಾಣ. ಇದರಲ್ಲಿ ವಿಟಮಿನ್‌, ಕ್ಯಾಲ್ಶಿಯಂ, ರಂಜಕ, ಕಬ್ಬಿಣಾಂಶಗಳು ಧಾರಾಳ ಅಡಗಿದ್ದು, ಇವು ಕೂದಲನ್ನು ಸದಾ ಸಶಕ್ತವಾಗಿಡುತ್ತವೆ. ಕರಿಬೇವಿನ ಪೋಷಕಾಂಶಗಳು ಡೆಡ್‌ ಸ್ಕಿನ್‌ ಸೆಲ್ಸ್ ನ್ನು ದೂರಗೊಳಿಸಲು ನೆರವಾಗುತ್ತದೆ. ಹೊಸ ಆರೋಗ್ಯಕರ ಕೂದಲು ಹುಟ್ಟಲಿಕ್ಕೂ ಇದು ಪೂರಕ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ