ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಬ್ಯಾಕ್ಟೀರಿಯಾ, ಫಂಗಸ್‌ ಮತ್ತು ಇತರೆ ಸೋಂಕುಗಳು ಹರಡುವ ಸಾಧ್ಯತೆ ಅಧಿಕವಾಗಿದ್ದು, ಚರ್ಮಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳು ತಲೆದೋರುತ್ತವೆ. ಹೀಗಾಗಿ ಚರ್ಮ ಮತ್ತು ಕೂದಲಿಗೆ ಬಹಳಷ್ಟು ಹಾನಿಯುಂಟಾಗುವ ಸಂಭವವಿರುತ್ತದೆ. ಆದ್ದರಿಂದ ಈ ಕಾಲದಲ್ಲಿ ಕೆಲವು ಅಂಶಗಳ ಬಗ್ಗೆ ಗಮನವಿಡುವುದರಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಂದ ಪಾರಾಗಬಹುದು :

ಮಾನ್‌ಸೂನ್‌ನಲ್ಲಿ ಚರ್ಮದ ರಕ್ಷಣೆ

ಸ್ವಚ್ಛತೆ ಅಥವಾ ಕ್ಲೆನ್ಸಿಂಗ್‌ : ಮಳೆ ನೀರಿನಲ್ಲಿ ಬಹಳಷ್ಟು ಕೆಮಿಕಲ್ಸ್ ಇರುತ್ತವೆ. ಆದ್ದರಿಂದ ಮಾನ್‌ಸೂನ್‌ನಲ್ಲಿ ಚರ್ಮವನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಬೇಕು. ಮೇಕಪ್‌ ತೆಗೆಯಲು ಮಿಲ್ಕ್ ಕ್ಲೆನ್ಸರ್‌ ಅಥವಾ ಮೇಕಪ್‌ ರಿಮೂವರ್‌ನ್ನು ಬಳಸಬೇಕು. ಹೀಗೆ ಸ್ವಚ್ಛಗೊಳಿಸುವುದರಿಂದ ಚರ್ಮದ ರೋಮರಂಧ್ರಗಳು ತೆರೆದುಕೊಳ್ಳುತ್ತವೆ. ಸಾಬೂನಿಗೆ ಬದಲು ಫೇಸ್‌ವಾಶ್‌, ಫೇಶಿಯಲ್, ಪೇವ್‌ ಇತ್ಯಾದಿಗಳು ಉತ್ತಮ.

ಟೋನಿಂಗ್‌ : ಕ್ಲೆನ್ಸಿಂಗ್‌ ನಂತರ ಟೋನಿಂಗ್‌ ಮಾಡಬೇಕು. ಮಾನ್‌ಸೂನ್‌ನಲ್ಲಿ ಗಾಳಿ ಮತ್ತು ನೀರಿನಲ್ಲಿ ಮೈಕ್ರೋಬ್ಸ್ ಬಹಳವಾಗಿ ಅಂಕುರಿಸುತ್ತವೆ. ಆದ್ದರಿಂದ ಸ್ಕಿನ್‌ ಇನ್‌ಫೆಕ್ಷನ್‌ ಮತ್ತು ಚರ್ಮ ಒಡೆಯುವುದನ್ನು ತಡೆಯಲು ಆ್ಯಂಟಿ ಬ್ಯಾಕ್ಟೀರಿಯಲ್ ಟೋನರ್‌ ಹೆಚ್ಚು ಉಪಯುಕ್ತವಾಗಿರುತ್ತದೆ. ಅತಿ ಶುಷ್ಕ ಚರ್ಮಕ್ಕೆ ಸಾಧಾರಣ ಟೋನರ್‌ ಬಳಸುವುದು ಬೇಡ. ಸೌಮ್ಯವಾದ ಟೋನರ್‌ನ್ನು ಬಳಸಬಹುದು. ಇದು ಎಣ್ಣೆ ಚರ್ಮ ಮತ್ತು ಮೊಡವೆಯಿಂದ ಕೂಡಿದ ಚರ್ಮಕ್ಕೆ ಸೂಕ್ತವಾಗಿರುತ್ತದೆ.

ಮಾಯಿಶ್ಚರೈಸರ್‌ : ಬೇಸಿಗೆಯಂತೆ ಮಳೆಗಾಲದಲ್ಲಿಯೂ ಮಾಯಿಶ್ಚರೈಸಿಂಗ್‌ ಅವಶ್ಯಕ. ಮಾನ್‌ಸೂನ್‌ನಲ್ಲಿ ಒಣ ಚರ್ಮದ ಮೇಲೆ ಡೀಮಾಯಿಶ್ಚರೈಸಿಂಗ್‌ನ ಪ್ರಭಾವ ಉಂಟಾಗುತ್ತದೆ ಹಾಗೂ ತೈಲೀಯ ತ್ವಚೆಯ ಮೇಲೆ ಇದರ ಓವರ್‌ಹೈಡ್ರೇಟಿಂಗ್‌ ಪ್ರಭಾವ ಉಂಟಾಗುತ್ತದೆ. ಮಳೆಗಾಲದಲ್ಲಿ ಗಾಳಿಯು ತೇವಾಂಶದಿಂದ ಕೂಡಿರುವುದರಿಂದ ಚರ್ಮ ಸಂಪೂರ್ಣವಾಗಿ ಡೀಹೈಡ್ರೇಟ್‌ ಆಗುವ ಸಂಭವಿರುತ್ತದೆ. ಇದರ ಪರಿಣಾಮವಾಗಿ ಚರ್ಮ ಜೀವಕಳೆಯನ್ನು ಕಳೆದುಕೊಂಡು ಕಾಂತಿಹೀನವಾಗುತ್ತದೆ.

ಎಲ್ಲ ಬಗೆಯ ಚರ್ಮಗಳಿಗೂ ಪ್ರತಿ ರಾತ್ರಿ ಮಾಯಿಶ್ಚರೈಸ್‌ ಮಾಡಬೇಕು. ಇಲ್ಲವಾದರೆ ನವೆ ಪ್ರಾರಂಭವಾಗುತ್ತದೆ. ನೀವು ಮಳೆಯಲ್ಲಿ ಆಗಾಗ ನೆನೆಯುತ್ತಿದ್ದರೆ ನಾನ್‌ವಾಟರ್‌ ಬೇಸ್ಡ್ ಮಾಯಿಶ್ಚರೈಸರ್‌ ಬಳಸಿ. ನಿಮ್ಮದು ತೈಲೀಯ ತ್ವಚೆಯಾದರೂ ಸಹ ರಾತ್ರಿ ಹೊತ್ತಿನಲ್ಲಿ ವಾಟರ್‌ ಬೇಸ್ಡ್ ಲೋಶನ್‌ನ್ನು ತೆಳುವಾಗಿ ಹಚ್ಚಬೇಕು.

ಸನ್‌ಸ್ಕ್ರೀನ್‌ : ಬಿಸಿಲು ಇರುವಾಗ ನಿಮ್ಮ ಚರ್ಮಕ್ಕೆ ಯುವಿಎ ಮತ್ತು ಯುವಿಬಿ ಕಿರಣಗಳಿಂದ ರಕ್ಷಣೆ ಬೇಕಾಗುತ್ತದೆ. ಆದ್ದರಿಂದ ಮನೆಯಿಂದ ಹೊರಡುವ 20 ನಿಮಿಷಗಳ ಮೊದಲು 25 ಎಸ್‌ಪಿಎಫ್‌ವುಳ್ಳ ಸನ್‌ಸ್ಕ್ರೀನ್‌ ಹಚ್ಚಿ ಮತ್ತು ಪ್ರತಿ 3-4 ಗಂಟೆಗಳಿಗೊಮ್ಮೆ ಹಚ್ಚುತ್ತಿರಿ. ಬಿಸಿಲಿರುವಾಗ ಮಾತ್ರ ಸನ್‌ಸ್ಕ್ರೀನ್‌ ಹಚ್ಚಿದರೆ ಸಾಕು ಎನ್ನುವ ಭಾವನೆ ಸರಿಯಲ್ಲ. ಮಳೆಗಾಲದಲ್ಲಿಯೂ ವಾತಾವರಣದಲ್ಲಿರುವ UV ಕಿರಣಗಳನ್ನು ನಿರ್ಲಕ್ಷಿಸಬೇಡಿ.

ಒಣಗಿಸಿಕೊಳ್ಳಿ : ಮಳೆಯಲ್ಲಿ ನೆನೆದರೆ, ಶರೀರವನ್ನು ಒಣಗಿಸಿಕೊಳ್ಳಿ. ಹೊರಗಡೆ ಹೋಗಿರುವಾಗ ಮಳೆ ನೀರನ್ನು ಒರೆಸಿಕೊಳ್ಳಲು ನಿಮ್ಮೊಂದಿಗೆ ಟಿಶ್ಶೂ/ಚಿಕ್ಕ ಟವೆಲ್ ಕೊಂಡೊಯ್ಯಿರಿ. ಡಸ್ಟಿಂಗ್‌ ಪೌಡರ್‌ನ್ನು ಬಳಸುವುದು ಒಳ್ಳೆಯದು. ಮನೆಗೆ ಹಿಂದಿರುಗಿದ ನಂತರ ಸ್ವಚ್ಛವಾದ ನೀರಿನಲ್ಲಿ ಸ್ನಾನ ಮಾಡಿ.

ನಿರ್ವಹಣೆ : ಕಾಂತಿಯುತ ಮತ್ತು ಕಲೆರಹಿತ ಚರ್ಮಕ್ಕಾಗಿ ಚರ್ಮರೋಗ ತಜ್ಞರ ಸಲಹೆಯಂತೆ ಸ್ಕಿನ್‌ ಟ್ರೀಟ್‌ಮೆಂಟ್‌ ಪಡೆಯಿರಿ. ಲೇಸರ್‌ ಟ್ರೀಟ್‌ಮೆಂಟ್‌ಗೆ ಮಾನ್‌ಸೂನ್‌ ಸೂಕ್ತವಾದ ಸಮಯ. ಏಕೆಂದರೆ ಈ ಕಾಲದಲ್ಲಿ ಹೆಚ್ಚು ಸಮಯ ಬಿಸಿಲು ಇಲ್ಲದಿರುವುದರಿಂದ ಚಿಕಿತ್ಸೆಯ ನಂತರದ ಪ್ರಕ್ರಿಯೆಯು ಸುಲಭವಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ