ಪ್ರತಿಯೊಂದು ತುಡಿಯುವ ಹೃದಯಕ್ಕೂ ಒಂದೇ ಆಸೆ..... ತನ್ನ ಪ್ರಿಯತಮನ ಜೊತೆ ವಿಶಾಲ ಗಗನದಲ್ಲಿ ಹಕ್ಕಿಯಂತೆ ಹಾರಾಡುತ್ತಾ ಹಾಯಾಗಿದ್ದುಬಿಡಬೇಕು, ಪ್ರಣಯ ಸರೋವರದಲ್ಲಿ ಪೂರ್ತಿ ಮಿಂದು ಪ್ರಪಂಚವನ್ನೇ ಮರೆಯೋಣ ಎಂಬಂತೆ. ಪ್ರೀತಿ, ಪ್ರೇಮ ಎನ್ನುತ್ತಾ ಸಂಗಾತಿ ಜೊತೆ ಕನಸು ಕಾಣುವುದೇ ಜೀವನವಲ್ಲ, ಮದುವೆ ಆಗಿ ಈ ಲೋಕದಲ್ಲೇ ಆ ಕನಸನ್ನು ನನಸಾಗಿಸಿಕೊಳ್ಳಬೇಕಿದೆ. ಮದುವೆ ಎಂಬುದು ತಾನಾಗಿ ಸಕ್ಸಸ್‌ ಆಗಿಬಿಡುವುದಿಲ್ಲ, ಅದಕ್ಕಾಗಿ ಸಂಗಾತಿಗಳಿಬ್ಬರೂ ಪ್ರಯತ್ನಪಟ್ಟು ತಮ್ಮ ಮದುವೆಯನ್ನು ಜೀವನದುದ್ದಕ್ಕೂ ಸವಿಯುವಂತಾಗಬೇಕು. ಮಧುಚಂದ್ರದ ಮೋಹಕ ದಿನಗಳು ಕಳೆದ ನಂತರ ಪ್ರೇಮದ ಗುಂಗು ಇಳಿಯಿತೆಂದು ಉದಾಸೀನ ಮಾಡಬಾರದು. ಜೀವನದ ಕಟು ವಾಸ್ತವ ದಿನಗಳು ಈ ಗಾಢತೆಯನ್ನು ಕಡಿಮೆಗೊಳಿಸಿದರೂ ಪರಸ್ಪರ ಆಪ್ತತೆ ಬಿಟ್ಟುಕೊಡಬಾರದು. ಯಾರೋ ತಮ್ಮ  ಪ್ರೇಮಾಲಾಪಕ್ಕೆ ಅಡ್ಡಿಪಡಿಸಿದರು ಎಂಬಂತೆ ಖಂಡಿತಾ ಭಾವಿಸಬಾರದು.

ದಂಪತಿ ವೈವಾಹಿಕ ಜೀವನದ ಸರಿಯಾದ ಅರ್ಥ ತಿಳಿದದ್ದೇ ಆದರೆ, ಗೃಹಸ್ಥ ಜೀವನವನ್ನು ಖುಷಿ ಖುಷಿಯಾಗಿ ಕಳೆಯಬಹುದು. ಇದಕ್ಕಾಗಿ ಕೆಲವು ವಿಷಯ ಅರಿತಿರಬೇಕು, ಅದನ್ನು ಅನುಷ್ಠಾನಕ್ಕೂ ತರಬೇಕು.

ಮದುವೆ ಅಂದ್ರೆ ಪಾರ್ಟ್‌ನರ್‌ ಶಿಪ್‌ : ಮದುವೆ ಒಂದು ತರಹ 50-50 ಪಾರ್ಟ್‌ನರ್‌ಶಿಪ್‌. ಇಬ್ಬರಲ್ಲೂ ಪರಸ್ಪರ ತಿಳಿವಳಿಕೆ, ವಿಶ್ವಾಸ, ಗೌರವಾದರಗಳು ಇರಬೇಕಾದುದು ಅನಿವಾರ್ಯ. ಆಗ ಮಾತ್ರ ಹೃದಯಾಂತರಾಳದ ಭಾವನೆಗಳನ್ನು ನಿಸ್ಸಂಕೋಚವಾಗಿ ಶೇರ್‌ ಮಾಡಬಹುದು. ಪರಸ್ಪರ ಕಷ್ಟ ಸುಖ, ತೊಂದರೆ, ಸಮಸ್ಯೆ ಅರಿಯಬಹುದು.

ಕರಣ್‌ ಸಮೀರ್‌ ಉತ್ತಮ ಫ್ರೆಂಡ್ಸ್. ಇಬ್ಬರೂ ಬಾಲ್ಯದಿಂದ ಪರಸ್ಪರರನ್ನು ಬಲ್ಲವರು, ಒಟ್ಟಿಗೆ ಓದಿದವರು, ಈಗ ಒಂದೇ ಕಂಪನಿಯಲ್ಲಿ ದುಡಿಯುತ್ತಿದ್ದಾರೆ. ಮನೆ ಅಥವಾ ಆಫೀಸ್‌ ಇರಲಿ, ಸಮೀರ್‌ ಎಲ್ಲರೊಂದಿಗೆ ಬೇಗ ಸ್ನೇಹ ಬೆಳೆಸಿ ಎಲ್ಲೆಡೆ ಆತ್ಮೀಯತೆ ಹರಡುತ್ತಾನೆ, ಸದಾ ಹಸನ್ಮುಖಿಯಾಗಿ ಎಲ್ಲರನ್ನೂ ನಕ್ಕು ನಲಿಸುತ್ತಾನೆ. ಎಲ್ಲರೂ ಸಮೀರನನ್ನು ಯಶಸ್ವೀ ಸ್ಮಾರ್ಟ್‌ಯಂಗ್‌ ಮ್ಯಾನ್‌ ಎನ್ನುತ್ತಾರೆ.

ಆದರೆ ಕರಣ್‌ ಗಂಭೀರ ಸ್ವಭಾವದವನು. ಯಾರ ಮೇಲೂ ಪ್ರಭಾವ ಬೀರಲಾಗದ ವ್ಯಕ್ತಿತ್ವ ಅವನದು. ತಾನು ಉತ್ತಮ ಜ್ಞಾನಿ ಆಗಿದ್ದರೂ ಕೆಲವೇ ಕೆಲಸಗಳಲ್ಲಿ ಮಾತ್ರ ಯಶಸ್ವೀ ಎನಿಸುತ್ತಿದ್ದಾನೆ. ಬಹಳ ಕಡಿಮೆ ಜನ ಮಾತ್ರ ಅವನನ್ನು ಮೆಚ್ಚತ್ತಾರೆ. ಒಂದು ದಿನ ಯಾವುದೋ ಸೆಮಿನಾರ್‌ನಲ್ಲಿ ಸಮೀರ್‌ನನ್ನು ಅವನ ಸ್ಮಾರ್ಟ್‌ನೆಸ್‌ ಬಗ್ಗೆ ಯಾರೋ ಕೇಳಿದರು, ಅದಕ್ಕೆ ಅವನು ತನ್ನ ಪತ್ನಿಯೇ ಕಾರಣ ಎಂದು ನಗುತ್ತಾ ಉತ್ತರಿಸಿದ.

ಸಮೀರನ ಈ ಉತ್ತರ ಆಶ್ಚರ್ಯಜನಕ ಆಗಿದೆ ಎಂದರೆ ತಪ್ಪಿಲ್ಲ, ಅದರಲ್ಲಿ ಅಷ್ಟು ನಿಜ ಅಡಗಿದೆ. ಮದುವೆ ಸಂದರ್ಭದಲ್ಲಿ ಯಾವ ಪತಿ ಸ್ಮಾರ್ಟ್‌, ಸುಂದರ, ಫಿಟ್‌ ಆಗಿರುತ್ತಾನೋ ಮದುವೆಯಾದ 1-2 ವರ್ಷಗಳಲ್ಲೇ ಅವನ ಮುಖ ಕಾಂತಿಹೀನವಾಗುತ್ತದೆ. ದೇಹ ತಾನಾಗಿ ದುಂಡಾಗುತ್ತದೆ.

ಸುಸ್ತು, ಸಿಡಿಮಡಿತನ ಎಷ್ಟು ಹೆಚ್ಚುತ್ತದೆಂದರೆ, ಮನೆಗೆ ಬಂದ ಮೇಲೆ ಎರಡು ಪ್ರೀತಿಯ ಮಾತೂ ಬಾರದು. ಯಾವಾಗ ವೀಕೆಂಡ್ ಬರುತ್ತದೋ, ಇಡೀ ದಿನ ಹಾಯಾಗಿ ಮಲಗಿ ವಿಶ್ರಾಂತಿ ಪಡೋಣ...... ಎಲ್ಲಿಗೂ ಹೋಗುವುದೇ ಬೇಡ ಎನಿಸಿಬಿಡುತ್ತದೆ. ಕೆಲವರು ಯಾವುದೋ ಪೈಜಾಮಾ ಜುಬ್ಬಾದಲ್ಲಿ ದಿನವಿಡೀ ಮನೆಯಲ್ಲೇ ಕಳೆದರೆ, ಹಲವರು ಸಿಕ್ಕಿದ ಬರ್ಮುಡಾ ಟೀ ಶರ್ಟ್‌ ಧರಿಸಿ ಪಾರ್ಕ್, ಮಾಲ್ ‌ಎಂದು ಸುತ್ತಾಡುವುದರಲ್ಲಿ  ಕಳೆದುಬಿಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ