ಈ ಕುರಿತಾಗಿ ಎಕ್ಸ್ ಪರ್ಟ್ಸ್ ಹೇಳುವುದೆಂದರೆ, ಎಲ್ಲರ ಚರ್ಮ ಬೇರೆ ಬೇರೆಯೇ ಆಗಿರುತ್ತದೆ. ಹೀಗಾಗಿ ಸ್ಕಿನ್‌ ಕೇರ್‌ಗಾಗಿ ಚರ್ಮದಲ್ಲಿ ಹೆಚ್ಚಿನ ಆರ್ದ್ರತೆ ಉಳಿಸಿಕೊಳ್ಳಲು ಬಳಸುವ ಮಾಯಿಶ್ಚರೈಸರ್‌ ಚರ್ಮಕ್ಕೆ ಅನುಸಾರವಾಗಿರಬೇಕು.

ಆಯ್ಲಿ ಸ್ಕಿನ್‌ : ಈ ಬಗೆಯ ಚರ್ಮ ಹೆಚ್ಚು ಸೆನ್ಸಿಟಿವ್ ‌ಆಗಿರುತ್ತದೆ. ಹೀಗಾಗಿ ಈ ಸ್ಕಿನ್‌ಗೆ ವಾಟರ್‌ ಬೇಸ್ಡ್ ಯಾ ಜೆಲ್ ‌ಬೇಸ್ಡ್ ಮಾಯಿಶ್ಚರೈಸರನ್ನೇ ಬಳಸಬೇಕು.

ನಾರ್ಮಲ್ ಸ್ಕಿನ್‌ : ಈ ಬಗೆಯ ಚರ್ಮ ಬಲು ಕ್ಲೀನ್‌ಕ್ಲಿಯರ್‌ ಟೆಕ್ಸ್ ಚರ್‌ನದ್ದಾಗಿರುತ್ತದೆ. ಇದರ ದೊಡ್ಡ ವೈಶಿಷ್ಟ್ಯವೆಂದರೆ, ಇದಕ್ಕೆ ಹೆಚ್ಚಿನ ಆರೈಕೆ ಏನೂ ಬೇಕಾಗಿಲ್ಲ. ಇದರ ಮಾಯಿಶ್ಚರೈಸರ್‌ ಅತ್ತ ಹೆಚ್ಚು ಆಯ್ಲಿ ಆಗಿರಬಾರದು ಅಥವಾ ಇತ್ತ ಪೂರ್ತಿ ಜೆಲ್ ‌ಬೇಸ್ಡ್ ಸಹ ಆಗಿರಬಾರದು. ಇಂಥ ಚರ್ಮಕ್ಕೆ ನಾರ್ಮಲ್ ಸ್ಕಿನ್‌ ಲೋಶನ್‌ ಸಹ ಚೆನ್ನಾಗಿ ಕೆಲಸ ಮಾಡುತ್ತದೆ.

ಡ್ರೈ ಸ್ಕಿನ್‌ : ಇಂಥ ಚರ್ಮಕ್ಕೆ ಅತಿ ಹೆಚ್ಚಿನ ಆರೈಕೆಯ ಅಗತ್ಯವಿದೆ. ಈ ಚರ್ಮದಲ್ಲಿ ಮೊದಲೇ ಮಾಯಿಶ್ಚರ್‌ನ ಕೊರತೆ ಇರುತ್ತದೆ, ಆ ಕಾರಣದಿಂದಾಗಿ ಇಂಥ ಚರ್ಮ ಹೆಚ್ಚು ಸ್ಟ್ರೆಚ್‌ ಆಗುತ್ತದೆ. ಇಂಥ ಚರ್ಮದ ಸರಿಯಾದ ಆರೈಕೆ ಆಗದಿದ್ದರೆ, ಇಲ್ಲಿ ಕ್ರಾಕ್ಸ್ ಮೂಡುವ ಸಾಧ್ಯತೆಗಳಿವೆ.

ಡ್ರೈ ಸ್ಕಿನ್‌ಗೆ ಬೇಗ ರಿಂಕಲ್ಸ್ ಅಟ್ಯಾಕ್‌ ಆಗುತ್ತದೆ. ಇದಕ್ಕೆ ಆಯಿಲ್ ‌ಬೇಸ್ಡ್ ಮಾಯಿಶ್ಚರೈಸರ್‌ ಪರ್ಫೆಕ್ಟ್ ಆಗಿರುತ್ತದೆ. ಏಕೆಂದರೆ ಇದು ಎಷ್ಟು ಬೇಕೋ ಅಷ್ಟೇ ಮಾಯಿಶ್ಚರ್‌ ಒದಗಿಸುತ್ತದೆ. ಒಂದು ಪಕ್ಷ ಸ್ಕಿನ್‌ ಅತ್ಯಧಿಕ ಡ್ರೈ ಆಗಿದ್ದರೆ ನಿಯಮಿತವಾಗಿ ಮಾಯಿಶ್ಚರೈಸರ್‌ ಬಳಸುತ್ತಿರಿ.

ಬಗೆಬಗೆಯ ಸ್ಕಿನ್‌ ಕೇರ್‌

ಸ್ಕಿನ್‌ ಕೇರ್‌ಗಾಗಿ ಈಗ ತರತಹದ ಉಪಾಯಗಳು ಲಭ್ಯವಿವೆ. ಉದಾ : ಪ್ರಯಾಣದ ಸಂದರ್ಭದಲ್ಲಿ ಸ್ಕಿನ್‌ ಕೇರ್‌ನ ಹೆಚ್ಚಿನ ಅಗತ್ಯವಿದೆ. ಏಕೆಂದರೆ ಆ ಸಮಯದಲ್ಲಿ ಬಿಸಿಲು ಧೂಳು ನಿಮ್ಮ ಚರ್ಮಕ್ಕೆ ಹೆಚ್ಚಿನ ಹಾನಿ ಉಂಟು ಮಾಡುತ್ತದೆ. ಈ ಸಂದರ್ಭಕ್ಕಾಗಿ ವಾಟರ್‌ ಬೇಸ್ಡ್ ಮಾಯಿಶ್ಚರೈಸರ್‌ನ ಹೆಚ್ಚಿನ ಅಗತ್ಯವಿದೆ. ಇದರಲ್ಲಿ ವಿಟಮಿನ್ಸ್  ಫ್ರಾಗ್ರೆನ್ಸ್ ಸಹ ಇರುತ್ತದೆ. ಚರ್ಮದಲ್ಲಿ ಏನಾದರೂ ತೊಂದರೆಗಳಿದ್ದರೆ ಅಂದ್ರೆ ರಿಂಕಲ್ಸ್, ಡಾರ್ಕ್‌ ಸ್ಪಾಟ್ಸ್, ಡಲ್‌ನೆಸ್‌......... ಆಗ ಮಾಯಿಶ್ಚರೈಸರ್‌ ಬದಲಾಗಿ ಸೀರಂ ಲಾಭಕಾರಿ ಆಗುತ್ತದೆ.

ಸ್ಕಿನ್‌ ಕೇರ್‌ನಲ್ಲಿ ಸ್ಕಿನ್‌ ಆಯಿಲ್ಸ್ ನ ಪಾತ್ರ ಮಹತ್ತರವಾದುದು. ಇದು ಸಹ ಚರ್ಮದ ಅನೇಕ ಸಮಸ್ಯೆ ದೂರ ಮಾಡುತ್ತದೆ. ಈ ಆಯಿಲ್ಸ್ ನ ವೈಶಿಷ್ಟ್ಯವೆಂದರೆ ಇದನ್ನು ಯಾವುದೇ ಬಗೆಯ ಚರ್ಮಕ್ಕೂ ಬಳಸಬಹುದಾಗಿದೆ. ಇದು 100% ನೈಸರ್ಗಿಕ, ಸೆನ್ಸಿಟಿವ್ ಸ್ಕಿನ್‌ನಿಂದ ಏಜಿಂಗ್‌ ಸ್ಕಿನ್‌ವರೆಗೂ ಬಹಳ ಲಾಭಕಾರಿ.

ಸ್ಕಿನ್‌ ಕೇರ್‌ನಲ್ಲಿ ಸ್ಕಿನ್‌ ಟೈಪ್‌ ಅನುಸಾರ ಮಾಯಿಶ್ಚರೈಸರ್‌ ಮೇಕಪ್‌ ಪ್ರಾಡಕ್ಟ್ಸ್ ಬಳಸದಿದ್ದರೆ, ಇದು ಚರ್ಮಕ್ಕೆ ಹಾನಿಕರ ಆಗಬಹುದು. ಹೀಗಾಗಿ ಸಮರ್ಪಕ ಸ್ಕಿನ್‌ ಕೇರ್‌ ರೊಟೀನ್‌ ಹಾಗೂ ಪರ್ಫೆಕ್ಟ್ ಪ್ರಾಡಕ್ಟ್ಸ್ ನ್ನು ಮಾತ್ರ ಆರಿಸಿ. ಚರ್ಮವನ್ನು ಶುಭ್ರ ಹಾಗೂ ಮಾಯಿಶ್ಚರೈಸ್‌ ಮಾಡಲು, ಎಲ್ಲಕ್ಕೂ ಉತ್ತಮ ಆಯ್ಕೆ ಎಂದರೆ ಜೇನಿನ ಬಳಕೆ. ಇದರಿಂದ ಚರ್ಮದಲ್ಲಿ ಹೆಚ್ಚಿನ ಹೊಳಪು ಬರುತ್ತದೆ, ಅದು ಸ್ಪಷ್ಟ ಕಾಣಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ