ಹಬ್ಬಗಳ ಸಂದರ್ಭದಲ್ಲಿ ಮಾರ್ಕೆಟ್‌ನಲ್ಲಿ ಎಲ್ಲೆಲ್ಲೂ ಬಗೆಬಗೆಯ ಹೊಸ ಹೊಸ ಫುಟ್‌ವೇರ್ಸ್ ತುಂಬಿರುತ್ತವೆ. ತಮಗೆ ಭಾರಿ ರಿಯಾಯಿತಿ ಸಿಗುವ ಈ ಸಂದರ್ಭದಲ್ಲಿ ಮಹಿಳೆಯರು ಕೇವಲ ಅವುಗಳ ಅಂದಚೆಂದಕ್ಕೆ ಮಾರುಹೋಗಿ, ತಮ್ಮ ಕಂಫರ್ಟ್‌ನ್ನೇ ಮರೆತುಬಿಡುತ್ತಾರೆ. ಆದರೆ ನಂತರ ಅವರಿಗೆ ಈ ಕೊರತೆ ಬಗ್ಗೆ ಅರಿವಾಗುತ್ತದೆ..... ತಡ ಆಗಿರುತ್ತದೆ.
ಸಾಮಾನ್ಯವಾಗಿ ಮಹಿಳೆಯರು ಅವುಗಳ ಲುಕ್ಸ್ ಗೆ ಮಾರುಹೋಗಿ, ಸ್ವಲ್ಪ ಹೊತ್ತು ತಾನೇ ಧರಿಸಬೇಕಿರುವುದು ಎಂದು ಯಾವುದನ್ನೋ ಕೊಂಡುಕೊಳ್ಳುತ್ತಾರೆ. ಆದರೆ ಒಂದು ಅಧ್ಯಯನದ ಪ್ರಕಾರ, ಫುಟ್‌ವೇರ್‌ನ್ನು ಸ್ವಲ್ಪವೇ ಹೊತ್ತು ಧರಿಸಿದ್ದರೂ, ಅದರ ತಪ್ಪು ಆಯ್ಕೆ ಪಾದದ ಚಲನೆಗೆ ಅಡ್ಡಿಪಡಿಸಿ, ನ್ಯೂರೋಮಸ್ಕ್ಯುಲರ್ ಕಂಟ್ರೋಲ್‌ನ್ನು ಸಹ ಪ್ರಭಾವಿತಗೊಳಿಸುತ್ತದೆ. ಇದರಿಂದ ನಿಮ್ಮ ನಡಿಗೆ ಕೆಡುವುದಲ್ಲದೆ, ಪಾದಗಳಿಗೆ ಇನ್ನಿಲ್ಲದ ತೊಂದರೆ ಕಾಡುತ್ತದೆ.
ಹಾಗೆಂದು ಕೇವಲ ಕಂಫರ್ಟ್‌ಗೆ ಮಾತ್ರ ಗಮನಕೊಟ್ಟು, ಸ್ಟೈಲ್‌ನ್ನು ಕಡೆಗಣಿಸಬಾರದು. ಆದ್ದರಿಂದ ಕೆಳಗಿನ ಸಲಹೆಗಳನ್ನು ನೆನಪಲ್ಲಿಟ್ಟುಕೊಂಡು, ಸ್ಟೈಲಿಶ್ ಆರಾಮದಾಯಕ ಫುಟ್‌ವೇರ್ ಆರಿಸುವುದರ ಜೊತೆ ನಿಮ್ಮ ಫುಟ್‌ವೇರ್ ಲುಕ್ಸ್ ನ್ನೂ ಎನ್‌ಹ್ಯಾನ್ಸ್ ಮಾಡಿ.
ಫುಟ್‌ವೇರ್‌ನಲ್ಲಿ ಬಳುಕುವಿಕೆ ಇರಲಿ : ನಿಮ್ಮ ಫುಟ್‌ವೇರ್‌ನಲ್ಲಿ ಬಳಕುವಿಕೆ ಇದ್ದರೆ, ಅದು ಎಲ್ಲಕ್ಕಿಂತಲೂ ಆರಾಮದಾಯಕ ಎನಿಸುತ್ತದೆ. ಅಸಲಿಗೆ ನಡೆಯುವಾಗ, ಹಿಮ್ಮಡಿ ಮತ್ತು ಪಂಜಾಗಳ ಮೇಲೆ ಹೆಚ್ಚು ಒತ್ತು ಬೀಳುವುದರಿಂದ ಕಷ್ಟವಾಗುತ್ತದೆ. ಹೀಗಾಗಿ ಫುಟ್‌ವೇರ್ ಕೊಳ್ಳುವ ಮುನ್ನ ಅದರ ಮುಂಭಾಗ, ಹಿಂಭಾಗಗಳು ಮೃದುವಾಗಿವೆ ತಾನೇ, ಅದರಲ್ಲಿ ಬಳುಕುವಿಕೆ ಇದೆಯೇ ಎಂದು ಪರೀಕ್ಷಿಸಿ. ಇಂಥ ಫುಟ್‌ವೇರ್ ಹೆಚ್ಚು ದಿನ ಬಾಳಿಕೆ ಬರುತ್ತವೆ.
ಭಾರವಾದ ಫುಟ್‌ವೇರ್ ಬೇಡ : ಮಾರುಕಟ್ಟೆಯಲ್ಲಿ ನಮಗೆ ತೆಳು ಹಾಗೂ ಭಾರದ ಎರಡೂ ಬಗೆ ಫುಟ್‌ವೇರ್ ಲಭ್ಯ. ನಿಮ್ಮ ಪಾದಗಳು ಕ್ಷೇಮವಾಗಿರಬೇಕೆಂದರೆ, ತೆಳುವಾಗಿರುವಂಥದ್ದನ್ನೇ ಕೊಳ್ಳಿರಿ. ತೆಳುವಾಗಿರುವುದು ಟ್ರೆಂಡಿ ಅಲ್ಲ ಅಂದುಕೊಳ್ಳಬಾರದು, ಇವು ಕೂಡ ಭಾರದ ಫುಟ್‌ವೇರ್‌ನಷ್ಟೇ ಆಕರ್ಷಕ ಎನಿಸುತ್ತವೆ. ಆದರೆ ಭಾರಿ ತೂಕದ ಫುಟ್‌ವೇರ್ ಗಳಿಂದ ಪಾದಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಒತ್ತಡ ಬೀಳುತ್ತದೆ. ಒಮ್ಮೊಮ್ಮೆ ಇಂಥ ಫುಟ್‌ವೇರ್ ಧರಿಸುವುದರಿಂದ ಹಿಮ್ಮಡಿಗಳು ಉಳುಕಲೂಬಹುದು. ಅದೇ ಭಾರವಿಲ್ಲದವುಗಳಾದರೆ, ಆರಾಮವಾಗಿ ಹೆಜ್ಜೆ ಹಾಕುತ್ತಾ ನಡೆಯಬಹುದು.
ಝೀರೋ ಹೀಲ್ಸ್ ಫುಟ್‌ವೇರ್ ಕೊಳ್ಳುವ ಮೊದಲು : ಹಬ್ಬಗಳಲ್ಲಿ ಜನ ಸದಾ ಸಾಂಪ್ರದಾಯಿಕ ಉಡುಗೆ ಧರಿಸುತ್ತಾರೆ. ಇವುಗಳ ಗೆಟಪ್ ಸುಧಾರಿಸಲು ಫುಟ್‌ವೇರ್ ಸಹ ಅದೇ ರೀತಿಯಿಂದ ಆರಿಸಬೇಕಾದುದು ಅವಶ್ಯಕ. ಹೀಗಾದಾಗ ಮಹಿಳೆಯರು ಎತ್ತರದ ಹಿಮ್ಮಡಿಯ ಫುಟ್‌ವೇರ್ ಆರಿಸುತ್ತಾರೆ. ಆದರೆ ತಜ್ಞರ ವಿಶ್ಲೇಷಣೆ ಪ್ರಕಾರ, ಇಂಥ ಹೈಹೀಲ್ಸ್ ಧರಿಸುವುದರಿಂದ ಸೊಂಟ, ಮಂಡಿಯಲ್ಲೂ ತೊಂದರೆ ತಪ್ಪಿದ್ದಲ್ಲ. ಅದೇ ತರಹ ಇರುವ ಝೀರೋ ಹೀಲ್ಸ್ ನ್ನು ಸಹ ಆರೋಗ್ಯದ ದೃಷ್ಟಿಯಿಂದ ಹಿತಕರವಲ್ಲ ಎನ್ನುತ್ತಾರೆ. ಹೀಗಾಗಿ ಫುಟ್‌ವೇರ್ ಆರಿಸುವಾಗ ಅಗಲದ (ಪೆನ್ಸಿಲ್ ಪಾಯಿಂಟ್ ಇತ್ಯಾದಿ ಅಲ್ಲ) ಹೀಲ್ಸ್ ಇರುವಂಥದ್ದನ್ನೇ ಆರಿಸಿ. ಫುಟ್‌ವೇರ್‌ನಲ್ಲಿ ಹೀಲ್ ಇದ್ದರೆ, ಹಿಮ್ಮಡಿಗಳಿಗೆ ತುಸು ಆಸರೆ ಸಿಗುತ್ತದೆ. ಹೀಗಾಗಿ ದೇಹದ ಪೂರ್ತಿ ಭಾಗ ಪಾದದ ಮುಂಭಾಗ, ಹಿಮ್ಮಡಿಗಳು ಹೀಗೆ ಸಮನಾಗಿ ವಿಭಾಗಿಸಲ್ಪಡುತ್ತದೆ, ಆಗ ಪಾದಕ್ಕೆ ನೋವು ಎನಿಸುವುದಿಲ್ಲ.