ನಿಮ್ಮ ಪತಿ ಅಥವಾ ಪ್ರೇಮಿಗಾಗಿ ಪುಷ್ಪಗುಚ್ಛ, ಬ್ಯೂಟಿಫುಲ್ ಕಾರ್ಡ್‌ ಅಥವಾ ಬಗೆಬಗೆಯ ಉಡುಗೊರೆಗಳನ್ನು ನೀಡಬಹುದು. ಆದರೆ ಇವಿಷ್ಟೇ ಸಾಲದು, ನಿಮ್ಮ ಪ್ರಿಯಕರನಿಗಾಗಿ ನೀವು ಗ್ಲಾಮರಸ್‌  ಅಪ್‌ ಟು ಡೇಟ್‌ ಆಗಿ ಸಿಂಗರಿಸಿಕೊಳ್ಳಬೇಕಿದೆ. ನಿಮ್ಮ ಆ ಬ್ಯೂಟಿಫುಲ್ ಲುಕ್ಸ್ ನಿಂದ ಆತ ರೋಮಾಂಚಿತಗೊಂಡು, ಆತನ ಮನ ನಿಮ್ಮನ್ನು ತನ್ನ ಬಾಹುಗಳಲ್ಲಿ ತುಂಬಿಸಿಕೊಂಡು ಡ್ಯಾನ್ಸ್ ಮಾಡುವುದರಲ್ಲಿ ಸಂದೇಹವಿಲ್ಲ.

ತ್ವಚೆಯ ಆರೈಕೆ ಲ್ಯಾಕ್ಮೆ ಬ್ಯೂಟಿ ಸೆಲೂನ್‌ನ ಸೌಂದರ್ಯ ತಜ್ಞೆಯ ಪ್ರಕಾರ, ಫೆಬ್ರವರಿ ಅಂದರೆ ಇನ್ನೂ ಚಳಿಯ ತಿಂಗಳು. ಬಿಸಿಲು ಇನ್ನೂ ತೀವ್ರ ಆಗಿರುವುದಿಲ್ಲ. ಋತು ಬದಲಾಗುತ್ತಿರುವ ಈ ಸೀಸನ್‌ನಲ್ಲಿ ಅದರ ಪ್ರಭಾವವನ್ನು ದೇಹದ ಎಲ್ಲಾ ಭಾಗದ ಮೇಲೂ ನೋಡಬಹುದು. ಎಲ್ಲಕ್ಕೂ ಹೆಚ್ಚಿನ ಪ್ರಭಾವ ತ್ವಚೆಯ ಮೇಲಾಗುತ್ತದೆ. ಹೀಗಾಗಿ ಅದರ ಆರೈಕೆ ಅತಿ ಮುಖ್ಯವಾಗುತ್ತದೆ. ಋತು ಬದಲಾವಣೆಯ ಕಾರಣ ತ್ವಚೆಯಲ್ಲಿ ಶುಷ್ಕತೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಚರ್ಮ ಎಳೆದಂತೆ ಅನಿಸುತ್ತದೆ. ಇದಕ್ಕಾಗಿ ತ್ವಚೆಗೆ ತಕ್ಕಂತೆ ಮಾಯಿಶ್ಚರೈಸರ್‌ ಬಳಸಬೇಕು. ಮುಖ ನಮ್ಮ ದೇಹದ ಬಹು ಮುಖ್ಯ ಅಂಗವಾಗಿದೆ.

ಹೀಗಾಗಿ ಇದರ ಆರೈಕೆಗೆ ಹೆಚ್ಚಿನ ಮಹತ್ವ ಕೊಡಬೇಕಿದೆ. ನಿಮ್ಮ ಮುಖ ಸುಂದರ ಹಾಗೂ ಕಾಂತಿಯುತವಾಗಿರಲು, ಪ್ರತಿದಿನ ಮುಖವನ್ನು 3 ಬಾರಿ ಕ್ಲೆನ್ಸರ್‌ನಿಂದ ತೊಳೆಯಿರಿ. ನಿಮ್ಮ ತ್ವಚೆ ಆಯ್ಲಿ ಆಗಿದ್ದರೆ, ಕಡಿಮೆ ಹಾಗೂ ಹೆಚ್ಚು ಶುಷ್ಕವಾಗಿದ್ದರೆ ಅಧಿಕ ಮಾಯಿಶ್ಚರೈಸರ್‌ ಬಳಸಬೇಕು. ಸಾಮಾನ್ಯವಾಗಿ ಮಹಿಳೆಯರು ಏನು ಭಾವಿಸುತ್ತಾರೆಂದರೆ, ತ್ವಚೆಯನ್ನು ಸೂರ್ಯನ ಅಪಾಯಕಾರಿ ಯುವಿ ಕಿರಣಗಳಿಂದ ರಕ್ಷಿಸಿಕೊಳ್ಳಲು, ಕೇವಲ ಬೇಸಿಗೆಯಲ್ಲಿ ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿದರೆ ಸಾಕು, ಚಳಿಗಾಲದಲ್ಲಿ ಬೇಡ ಎಂದುಕೊಳ್ಳುತ್ತಾರೆ. ಆದರೆ ವಾಸ್ತವ ಹಾಗಲ್ಲ, ಸನ್‌ಸ್ಕ್ರೀನ್‌ ಲೋಶನ್‌ನ್ನು ಎಲ್ಲಾ ಕಾಲದಲ್ಲೂ ಹಚ್ಚಿಕೊಳ್ಳಬೇಕು.

ಸ್ಪೆಷಲ್ ಡೇಗಾಗಿ ವಿಶೇಷ ಮೇಕಪ್

ಸ್ಪೆಷಲ್ ಡೇ ಮೇಕಪ್‌ ನಿಮ್ಮ ಸೌಂದರ್ಯವನ್ನು 2 ಪಟ್ಟು ಎತ್ತಿ ತೋರುವಂತೆ ಇರಬೇಕು. ಒಮ್ಮೊಮ್ಮೆ ಮೇಕಪ್‌ ಹೆಚ್ಚಾಗುವುದರಿಂದ ಸಹಜ ಸೌಂದರ್ಯ ಮುಚ್ಚಿ ಹೋಗುತ್ತದೆ. ಹೀಗಾಗಿ ಮೇಕಪ್‌ ನ್ಯಾಚುರಲ್ ಬ್ಯಾಲೆನ್ಸ್ಡ್ ಆಗಿರುವಂತೆ ಎಚ್ಚರವಹಿಸಿ. ಮೇಕಪ್‌ ಎಂದೂ ಕೃತಕ ಅನ್ನಿಸಬಾರದು. ಇನ್ನೊಬ್ಬರನ್ನು ನೋಡಿಕೊಂಡು ನೀವೆಂದೂ ಓವರ್‌ ಮೇಕಪ್‌ ಮಾಡಿಕೊಳ್ಳಬೇಡಿ. ಅದು ನಿಮಗೆ ಸೂಟ್‌ ಆಗದು.

ಉತ್ತಮ ಗುಣಮಟ್ಟದ ನ್ಯಾಚುರಲ್ ಮೇಕಪ್‌ನಿಂದ ನೀವು ವ್ಯಾಲೆಂಟೈನ್‌ ಡೇ ದಿನದ ಆಕರ್ಷಣೆಯ ಕೇಂದ್ರಬಿಂದು ಆಗಬಲ್ಲಿರಿ. ಮೇಕಪ್‌ ಹೇಗೆ ಶುರು ಮಾಡುವುದು?

ಮೊದಲು ಮುಖವನ್ನು ಕ್ಲೀನ್‌ ಮಾಡಿ ಕ್ಲೆನ್ಸರ್‌ನಿಂದ ಮುಖವನ್ನು ಶುಚಿಗೊಳಿಸಿ. ಸ್ಕಿನ್‌ ಟೋನರ್‌ ಬಳಸಿ ತ್ವಚೆಯನ್ನು ಹೊಳೆಯುವಂತೆ ಮಾಡಿ. ಸ್ಪಂಜ್‌ನಿಂದ ಮಿಕ್ಸ್ ಮಾಡುತ್ತಾ ಫೌಂಡೇಶನ್‌ನ್ನು ಮುಖಕ್ಕೆ ಹಚ್ಚಿರಿ. ಅದರ ಮೇಲೆ ಲಘುವಾಗಿ ಟಾಲ್ಕಂ ಪೌಡರ್‌ ಸಿಂಪಡಿಸಿ. ಉಬ್ಬಿದ ಚೀಕ್‌ಬೋನ್ಸ್ ಮುಖಕ್ಕೆ ಹೆಚ್ಚಿನ ಕಳೆ ನೀಡುತ್ತದೆ. ಇದಕ್ಕಾಗಿ ನಿಮ್ಮ ಡ್ರೆಸ್‌ಗೆ ಮ್ಯಾಚ್‌ ಆಗುವ ಬಣ್ಣದ ರೂಸ್‌ ಹಚ್ಚಿರಿ. ಪಿಂಕ್‌, ಪೀಚ್‌ ಕಲರ್ಸ್‌ ಹೆಚ್ಚು ಸೂಟ್‌ ಆಗುತ್ತವೆ. ಮುಖದ ನಂತರ ಕಂಗಳ ಮೇಕಪ್‌ ಸಹ ಅಷ್ಟೇ ಸ್ಪೆಷಲ್ ಆಗಿದೆ. ಕಂಗಳ ಮೇಲೆ ಐ ಶ್ಯಾಡೋ ತೆಳು ಮತ್ತು ಡ್ರೆಸ್‌ಗೆ ಮ್ಯಾಚ್‌ ಆಗುವಂತಿರಬೇಕು. ಕಂಗಳನ್ನು ಕಾಡಿಗೆಯಿಂದ ತೀಡಲು, ಐ ಲೈನರ್‌ ಬಳಸಬೇಕು. ಇದು ಬ್ಲ್ಯಾಕ್‌  ಬ್ರೌನ್‌ ಮಾತ್ರವಲ್ಲದೆ, ಇನ್ನೂ ಅನೇಕ ಬಣ್ಣಗಳಲ್ಲಿ ದೊರಕುತ್ತದೆ. ಕಂಗಳನ್ನು ಇನ್ನಷ್ಟು ಆಕರ್ಷಕಗೊಳಿಸಲು ಮಸ್ಕರಾ ಬಳಸಿರಿ. ಮುಖವನ್ನು ಬ್ಯೂಟಿಫುಲ್ ಆಗಿಸಲು ಬಲು ಸಮಾಧಾನವಾಗಿ ತುಟಿಗಳ ಮೇಕಪ್‌ ಮಾಡಬೇಕು. ತುಟಿಗಳಿಗೆ ಹಚ್ಚುವ ಲಿಪ್‌ಸ್ಟಿಕ್‌ ಬಣ್ಣ, ಮುಖದ ಮೇಕಪ್‌ ಮತ್ತು ಡ್ರೆಸ್‌ಗೆ ತಕ್ಕಂತೆ ಪೂರಕವಾಗಿರಬೇಕು. ಬ್ರೌನ್‌ ಪ್ಲಮ್ ಕಲರ್‌ ಎಲ್ಲಾ ಡ್ರೆಸ್‌ಗಳಿಗೂ ಸೂಟ್‌ ಆಗುತ್ತದೆ. ತುಟಿಗಳ ಕಾಂತಿ ಹೆಚ್ಚಿಸಲು ಲಿಪ್‌ಸ್ಟಿಕ್‌ ಮೇಲೆ ಲಿಪ್‌ಗ್ಲಾಸ್‌ ತೀಡಿ, ಲಿಪ್‌ಡಸ್ಟ್ ಸಹ ಸಿಂಪಡಿಸಿ. ವ್ಯಾಲೈಂಟೈನ್‌ ಮೇಕಪ್‌ಗಾಗಿ ನಿಮ್ಮ ಕೂದಲಿಗೆ ಹೊಸ ಲುಕ್ಸ್ ಕೊಡಿ. ನಿಮ್ಮದು ತುಸು ಕುಳ್ಳು ವ್ಯಕ್ತಿತ್ವ ಆಗಿದ್ದರೆ, ಕೂದಲನ್ನು ಎತ್ತರದ ಸ್ಟೈಲ್‌ನಲ್ಲಿ ತೋರಿಸುವಂಥ ಆಯ್ಕೆ ಇರಲಿ. ಇದಕ್ಕಾಗಿ ಸ್ಟೈಲಿಶ್‌ ಜಡೆ ಹೆಣೆಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ