ಚಳಿಗಾಲದ ಹಿತಕರ ಚಳಿ ಯಾರಿಗೆ ತಾನೇ ಇಷ್ಟವಿಲ್ಲ? ಈ ಸೀಸನ್ ತನ್ನೊಂದಿಗೆ ಅನೇಕ ಸಮಸ್ಯೆಗಳನ್ನೂ ತರುತ್ತದೆ. ಈ ಸೀಸನ್ ನಲ್ಲಿ ಸೌಂದರ್ಯ, ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳೂ ತಲೆದೋರಬಹುದು. ಈ ಸೀಸನ್ ನಲ್ಲಿ ಚರ್ಮ ಡ್ರೈ ಆಗಿಹೋಗುವುದು ತೀರಾ ಮಾಮೂಲಿ ವಿಷಯ. ಎಷ್ಟೋ ಸಲ ಚರ್ಮದ ಮೇಲೆ ಕಪ್ಪು ಕಲೆ ಅಥವಾ ಚರ್ಮ ಪೂರ್ತಿ ಕಪ್ಪಾಗುವ ಸಾಧ್ಯತೆಗಳೂ ಇವೆ. ಅತಿಯಾದ ಥಂಡಿ ಈ ಸಮಸ್ಯೆ ಹೆಚ್ಚಿಸುತ್ತದೆ.
ಈ ಚಳಿಗಾಲದಲ್ಲಿ ನಮ್ಮ ಚರ್ಮ ಏಕೆ ಕಪ್ಪಾಗುತ್ತದೆ ಎಂದು ಆಶ್ಚರ್ಯ ಪಡುತ್ತೇವೆ. ಇದಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ವಿವರವಾಗಿ ತಿಳಿಯೋಣ.
ಚರ್ಮದ ಕಾಳಜಿ ವಹಿಸಿ
ಸಾಮಾನ್ಯವಾಗಿ ಗಮನಿಸಿದರೆ ಜನ ಬೇಸಿಗೆಯಲ್ಲಿ ಸನ್ ಸ್ಕ್ರೀನ್ ಅಧಿಕವಾಗಿ ಬಳಸುತ್ತಾರೆ. ಆದರೆ ಚಳಿಗಾಲ ಆರಂಭವಾಗುತ್ತಿದ್ದಂತೆ ಅವರು ಸನ್ ಸ್ಕ್ರೀನ್ ಬಳಸುವುದನ್ನು ನಿಲ್ಲಿಸಿಬಿಡುತ್ತಾರೆ. ಸನ್ ಸ್ಕ್ರೀನ್ ಬಳಸದೇ ಹಾಗೆ ಬಿರು ಬಿಸಿಲಲ್ಲಿ ಗಂಟೆಗಟ್ಟಲೇ ಓಡಾಡುತ್ತಾರೆ. ಈ ಕಾರಣದಿಂದಾಗಿಯೇ ನಮ್ಮ ಚರ್ಮ ಕಪ್ಪಾಗುತ್ತದೆ. ಹೀಗಾಗಿ ಚಳಿಗಾಲದಲ್ಲೂ ತಪ್ಪದೆ ನಿಯಮಿತವಾಗಿ ಸನ್ ಸ್ಕ್ರೀನ್ ಬಳಸುತ್ತಿರಬೇಕು.
ಧಾರಾಳ ನೀರು ಕುಡಿಯಿರಿ
ಚಳಿಗಾಲದಲ್ಲಿ ಜನ ನೀರು ಕುಡಿಯುವುದನ್ನು ಬಲು ಕಡಿಮೆ ಮಾಡುತ್ತಾರೆ. ಇದು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹದಲ್ಲಿ ನೀರಿನ ಕೊರತೆ ಕಾಡತೊಡಗುತ್ತದೆ. ಈ ಕಾರಣ ಡೀಹೈಡ್ರೇಶನ್ ಸಮಸ್ಯೆ ಸಹ ಹೆಚ್ಚಾಗುತ್ತದೆ. ನೀರು ಚರ್ಮವನ್ನು ಹೈಡ್ರೇಟ್ ಗೊಳಿಸಿ, ಆರ್ದ್ರತೆ ಒದಗಿಸಿ, ಚರ್ಮ ಸದಾ ಸ್ವಸ್ಥ ಸುಂದರವಾಗಿರುವಂತೆ ನೋಡಿಕೊಳ್ಳುತ್ತದೆ.
ಮಾಯಿಶ್ಚರೈಸರ್ ನ್ನು ಮರೆಯದಿರಿ
ಚಳಿಗಾಲದಲ್ಲಿ ಚರ್ಮವನ್ನು ಸರಿಪಡಿಸಲು, ಮಾಯಿಶ್ಚರೈಸರನ್ನು ಬಳಸಲು ಮರೆಯದಿರಿ. ಚಳಿಗಾಲದಲ್ಲಿ ಅತಿ ಶೀತದ ಗಾಳಿಯಿಂದಾಗಿ ಸ್ಕಿನ್ ಡ್ರೈ ಆಗಿ ಒಡೆಯ ತೊಡಗುತ್ತದೆ. ಈ ಕಾರಣ ಒಮ್ಮೊಮ್ಮೆ ರಕ್ತ ಜಿನುಗಿ, ಮುಂದೆ ಆ ಭಾಗದ ಚರ್ಮ ಕಪ್ಪಾಗಿ ಹೋಗುತ್ತದೆ. ಆಗ ಇದರ ಮೇಲೆ ನೀವು ಉತ್ತಮ ಗುಣಮಟ್ಟದ ಸ್ಟಾಂಡರ್ಡ್ ಕಂಪನಿಯ ಹರ್ಬ್ಸ್ ಮಾಯಿಶ್ಚರೈಸಿಂಗ್ ಲೋಶನ್ ಬಳಸಲು ಮರೆಯದಿರಿ. ಇದರ ಜೊತೆ ಆ್ಯಲೋವೇರಾ ವಿತ್ ಕೋಕೋಬಟರ್ ಇದ್ದರೆ ಇನ್ನೂ ಬಹಳ ಉತ್ತಮ. ಇದು ಚರ್ಮವನ್ನು ಅತ್ಯುತ್ತಮವಾಗಿ ಹೈಡ್ರೇಟ್ ಆಗಿರಿಸಿ, ಚರ್ಮವನ್ನು ಆರ್ದ್ರಗೊಳಿಸಿ ಸ್ವಸ್ಥವಾಗಿಡುವಲ್ಲಿ ಇದು ಬಲು ಸಹಕಾರಿ.
ಸ್ಕಿನ್ ಕೇರ್ ರೊಟೀನ್
ಮೊದಲು ವಾತಾವರಣಕ್ಕೆ ತೆರೆದಿಟ್ಟ ಮುಖ, ಕೈ ಕಾಲು ಇತ್ಯಾದಿ ಅಂಗಗಳನ್ನು ಉತ್ತಮ ಫೇಸ್ ವಾಶ್ ಬಳಸಿ ಶುಚಿಗೊಳಿಸಿ. ನಂತರ ಕ್ಲೆನ್ಸಿಂಗ್ ಮಿಲ್ಕ್ ನಿಂದ ಪ್ರತಿದಿನ ಈ ಭಾಗಗಳನ್ನು ನೀಟಾಗಿ ಕ್ಲೀನ್ ಮಾಡಬೇಕು. ಮತ್ತೊಂದು ವಿಷಯ, ವಾರದಲ್ಲಿ ಕನಿಷ್ಠ ಒಂದು ಸಲವಾದರೂ ಮುಖಕ್ಕೆ ಉತ್ತಮ ಹರ್ಬಲ್ ಫೇಸ್ ಪ್ಯಾಕ್ ಒದಗಿಸಿ. ಚರ್ಮ ಅತಿ ಡ್ರೈ ಅನಿಸಿದರೆ ಕ್ರೀಂ ಅಥವಾ ಕೋಲ್ಡ್ ಕ್ರೀಂ ಬಳಸಲು ಮರೆಯದಿರಿ.
- ಪ್ರತಿನಿಧಿ