ನಿಮ್ಮ ಚರ್ಮ ಕ್ಲಿಯರ್‌ ಆಗಿದ್ದರೆ, ಆಗ ನೀವು ಹೆವಿ ಫೌಂಡೇಶನ್‌ ಬಳಸುವ ಅಗತ್ಯವಿಲ್ಲ. ಆ ಜಾಗದಲ್ಲಿ ಲೈಟ್‌ ಫೌಂಡೇಶನ್‌ಗೆ ತುಸು ಶಿಮರ್‌ ಬೆರೆಸಿ ಹಚ್ಚಬೇಕು. ಇದು ನಿಮ್ಮ ಸ್ಕಿನ್‌ಗೆ ಗ್ಲೋಯಿಂಗ್‌ ಟಚ್‌ ನೀಡುತ್ತದೆ.

ಮುಖದ ಕಂಟೂರಿಂಗ್‌ ಸದಾ ಲೈಟ್‌ ಆಗಿರಬೇಕು. ಇದಕ್ಕಾಗಿ ಇತ್ತೀಚೆಗೆ ಹೆಚ್ಚು ಟ್ರೆಂಡ್‌ನಲ್ಲಿರುವ, ಪೀಚ್‌ ಪಿಂಕ್‌ ಬ್ಲಶ್‌ ಬಳಸಿ ಉತ್ತಮ ಲುಕ್ಸ್ ಪಡೆಯಬಹುದು.

ಲೈಟ್‌ ಐ ಮೇಕಪ್‌ ಮಾಡಲು ಯತ್ನಿಸಿ. ಅಂದ್ರೆ ಕಂಗಳಿಗೆ ಸಾಫ್ಟ್ ಟಚ್‌ ನೀಡಲು ಯತ್ನಿಸಿ. ಇದು ನಿಮ್ಮ ಡೇ &ಈವ್ನಿಂಗ್‌ ಲುಕ್ಸ್ ಗೆ ಹೆಚ್ಚು ಒಪ್ಪುತ್ತದೆ.

ತುಟಿಗಳನ್ನು ಆಕರ್ಷಕಗೊಳಿಸಲು ಮರೆಯದಿರಿ. ಈ ಬಾರಿಯ ಫ್ಯಾಷನ್‌ನಲ್ಲಿ ಇದಕ್ಕೆ ಮಹತ್ವದ ಪಾತ್ರವಿದೆ. ಇದಕ್ಕಾಗಿ ನೀವು ತುಟಿಗಳಿಗೆ ಪಿಂಕ್‌ ನ್ಯೂಡ್‌ ಯಾ ಗೋಲ್ಡನ್‌ ಟಚ್‌ (ಶಿಮರೀ ಲುಕ್‌ ಸೇರಿದಂತೆ) ನೀಡುವುದರಿಂದ ಬೆಟರ್‌ ಲುಕ್ಸ್ ಪಡೆಯಬಹುದು.

ಇತ್ತೀಚೆಗೆ ಬ್ಯಾರೀಜ್‌, ಡೀಪ್‌ ಬ್ರೌನ್‌ ಮತ್ತು ಪಿಂಕ್‌ ಕಲರ್‌ವುಳ್ಳ ಮೆಟಾಲಿಕ್‌ ಫಿನಿಶ್‌ ಫ್ಯಾಷನ್‌ನಲ್ಲಿದೆ. ಆದರೂ ಮುಖಕ್ಕೆ ಇದನ್ನು ಆದಷ್ಟೂ ಕಡಿಮೆ ಬಳಸಿರಿ. ಏಕೆಂದರೆ ಇದು ರೂಪ ಹದಗೆಡಿಸಬಲ್ಲದು.

ನಿಮ್ಮ ಅಲಂಕಾರ ಹೀಗಿರಲಿ

ನ್ಯೂಡ್‌ ಲಿಪ್ಸ್ ಐ : ನ್ಯೂಡ್‌ ಶೇಡ್‌ ಲಿಪ್‌ಸ್ಟಿಕ್‌ ಜೊತೆ ನೀವು ನಿಮ್ಮ ಐ ಲ್ಯಾಶೆಸ್‌ಗೆ ಮಸ್ಕರಾದ ನೆರವಿನಿಂದ ಕರ್ಲ್ ಮಾಡುವ ಜೊತೆ ಇನ್ನರ್‌ ಲಿಡ್ಸ್ ಮೇಲೆ ಲೈಟಾಗಿ ವೈಟ್‌ ಕಾಜಲ್ ತೀಡಿ, ಅಮೇಝಿಂಗ್‌ ಲುಕ್ಸ್ ಪಡೆಯಬಹುದು. ಇದರ ಜೊತೆಯಲ್ಲೇ ಕಂಗಳ ಕೆಳಗಿನ ಸುಕ್ಕುಗಳನ್ನು ಕನ್ಸೀಲರ್‌ ನೆರವಿನಿಂದ ದೂರಗೊಳಿಸಿ ಪರ್ಫೆಕ್ಟ್ ಲುಕ್ಸ್ ಪಡೆಯಿರಿ.

ಸ್ಮೋಕಿ ಕಂಗಳು : ಈ ಸ್ಪ್ರಿಂಗ್‌ ಸೀಸನ್‌ನಲ್ಲಿ ನೀವು ಬ್ಲೂ, ಪರ್ಪಲ್, ಯೆಲ್ಲೋ, ಪಿಂಕ್‌ನಂಥ ಐ ಶ್ಯಾಡೋಗಳಿಂದ ಕಂಗಳಿಗೆ ಸ್ಮೋಕಿ ಲುಕ್‌ ಕೊಡಿ, ಜೊತೆಗೆ ಲೈಟ್‌ ಲಿಪ್‌ ಶೇಡ್ಸ್ ಟ್ರೈ ಮಾಡಿ. ನೀವೇನೂ ಮಾತನಾಡದಿದ್ದರೂ ನಿಮ್ಮ ಕಂಗಳೇ ಎಲ್ಲವನ್ನೂ ಹೇಳಿಬಿಡುತ್ತವೆ.

ಗ್ಲೋಯಿಂಗ್‌ ಸ್ಕಿನ್‌ : ಚರ್ಮವನ್ನು ಹೆಚ್ಚು ಚಾರ್ಮಿಂಗ್‌ ಗ್ಲೋಯಿಂಗ್‌ ಆಗಿ ತೋರ್ಪಡಿಸಲು, ಪೀಚೀ ಬ್ಲಶ್‌ ಲೈಟ್‌ ಲಿಕ್ವಿಡ್‌ ಫೌಂಡೇಶನ್‌ ಅಥವಾ ಕ್ರೀಂ ಟ್ರೈ ಮಾಡಿ. ಜೊತೆಗೆ ನ್ಯೂಡ್‌ ಶೇಡ್ಸ್ ಲಿಪ್‌ಸ್ಟಿಕ್‌ ಇದ್ದರೆ ಹೆಚ್ಚು ಸೂಕ್ತ.

ಗ್ಲಿಟರ್‌ ಐ ಲೈನರ್ಸ್‌, ಲಿಪ್‌ ಟಿಂಟ್ಸ್ : ಈಗ ಬೋರಿಂಗ್‌ ಬ್ಲ್ಯಾಕ್‌ ಐ ಲೈನರ್ಸ್‌ ಬದಲಾಗಿ ಗೋಲ್ಡ್, ಸಿಲ್ವರ್‌ ಲೈನರ್‌ಗಳನ್ನು ಬಳಸಿ ಕಂಗಳನ್ನು ಅತ್ಯಾಕರ್ಷಕಗೊಳಿಸಬಹುದು. ಲಿಪ್‌ ಟಿಂಟ್ಸ್ ಲಿಪ್ಸ್ ಗೆ ಮಾಯಿಶ್ಚರ್‌ ನೀಡುವ ಜೊತೆಗೆ, ಹೆಚ್ಚಿನ ಗ್ರೇಸ್‌ ನೀಡುತ್ತದೆ.

ಹೈಲೈಟರ್‌ : ಇದು ಕೇವಲ ಕೆನ್ನೆಗಳಿಗೆ ಶೈನಿಂಗ್‌ ನೀಡುವುದು ಮಾತ್ರವಲ್ಲದೆ, ಕಂಗಳ ಅಂಚಿನಲ್ಲಿ ತೀಡುವುದರಿಂದ ಕಂಗಳು ದೊಡ್ಡದಾಗಿ ಮಿಂಚುತ್ತವೆ. ಇದರ ಜೊತೆಗೆ ಇದನ್ನು ನೀವು ಲಿಪ್‌ಸ್ಟಿಕ್‌ ಮೇಲೆ ಗೋಲ್ಡನ್‌ ಫಿನಿಶ್‌ ರೂಪದಲ್ಲಿಯೂ ಬಳಸಬಹುದು. ಲೈಟ್‌ ಕಂಟೂರಿಂಗ್‌ ಲುಕ್ಸ್ :  ಲೈಟ್‌ ಕಂಟೂರಿಂಗ್‌ ಸ್ಟಿಕ್‌ ಬಳಸಿ ನೀವು ಬಯಸಿದ ಗ್ಲಾಮರಸ್‌ ಲುಕ್ಸ್ ಪಡೆಯಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ