ನೀತಾಳ ಫಿಸಿಕಲ್ ಪರ್ಫೆಕ್ಟ್ ಆಗಿತ್ತು, ಆದರೆ ಅವಳ ಚರ್ಮ ಅಷ್ಟು ಚಾರ್ಮಿಂಗ್ ಆಗಿರಲಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಪ್ರತಿ ದುಬಾರಿ ಕ್ರೀಮನ್ನೂ ಅವಳು ಚರ್ಮದ ಸೌಂದರ್ಯ ಹೆಚ್ಚಿಸಲು ಬಳಸುತ್ತಿದ್ದಳು. ಆದರೆ ಯಾವುದೇ ಲಾಭ ಆಗಿರಲಿಲ್ಲ. ಆಗ ಅವಳು ಈ ಬಗ್ಗೆ ತನ್ನ ಫ್ರೆಂಡ್ ಶೀಲಾಳನ್ನು ಕೇಳಿದಾಗ, ಕೇವಲ ದುಬಾರಿ ಕ್ರೀಂ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚದು. ಅದರ ಬದಲಿಗೆ ಚರ್ಮಕ್ಕೆ ಸೂಕ್ತ ದೈನಂದಿನ ಪೋಷಣೆ ಒದಗಿಸುವುದರಿಂದ ಗ್ಲೋ ಹೆಚ್ಚುತ್ತದೆ ಎಂದಳು. ನೀವು ಸೌಂದರ್ಯತಜ್ಞೆ ಶೀಲಾ ಮಾತನ್ನು ಒಪ್ಪುವುದಾದರೆ, ಈ ಕೆಳಗಿನ ಸಲಹೆಗಳನ್ನು ಅನುಸರಿಸಿ.
ಸ್ಕಿನ್ ಟೈಪ್ ಕ್ಲೆನ್ಸಿಂಗ್
ಟಿವಿ ಜಾಹೀರಾತುಗಳಿಗೆ ಮರುಳಾಗಿ ಹೆಂಗಸರು ಸ್ಕಿನ್‌ಕೇರ್ ಉತ್ಪನ್ನ ಖರೀದಿಸುವ ಕ್ರೇಜ್ ಬೆಳೆಸಿಕೊಂಡಿರುತ್ತಾರೆ. ಆದರೆ ಇಂಥವನ್ನು ಕೊಳ್ಳುವ ಮೊದಲು ನಮ್ಮ ಸ್ಕಿನ್ ಟೈಪ್ ಕಡೆ ಗಮನ ಕೊಡಬೇಕಾದುದು ಅತ್ಯಗತ್ಯ. ಏಕೆಂದರೆ ಇದನ್ನು ತಿಳಿಯದೆ ಪ್ರಾಡಕ್ಟ್ಸ್ ಬಳಸುವುದರಿಂದ ನಿರೀಕ್ಷಿತ ಪರಿಣಾಮ ಸಿಗುವುದಿಲ್ಲ. ಹೀಗಾಗಿ ಸ್ಕಿನ್ ಟೈಪ್ ತಿಳಿದುಕೊಳ್ಳಬೇಕಾದುದು ಅನಿವಾರ್ಯ.
ನಿಮ್ಮ ಚರ್ಮ ರಫ್ ಆಗಿದ್ದರೆ ಇದರರ್ಥ ನಿಮ್ಮದು ಡ್ರೈ ಸ್ಕಿನ್. ಇಂಥವರು ಸುವಾಸನೆಯುಳ್ಳ ಕ್ಲೆನ್ಸರ್ ಎಂದೂ ಬಳಸಬಾರದು, ಬದಲಿಗೆ ಸಾಫ್ಟ್ ಕ್ಲೆನ್ಸರ್ ಮಾತ್ರ ಬಳಸಬೇಕು. ನಿಮ್ಮ ಚರ್ಮದಲ್ಲಿ ದೊಡ್ಡ ದೊಡ್ಡ ರೋಮರಂಧ್ರಗಳ ಜೊತೆ ಜಿಡ್ಡುಜಿಡ್ಡಾಗಿ ಅಂಟುವಂತಿದ್ದರೆ, ಅದು ಆಯ್ಲಿ ಸ್ಕಿನ್. ಇಂಥವರು ಕೇವಲ ಆಯಿಲ್‌ಫ್ರೀ ಫೇಸ್‌ವಾಶ್ ಮಾತ್ರ ಬಳಸಬೇಕು.
ಯಾವುದೇ ಬ್ರಾಂಡ್ ವಸ್ತು ಉಪಯೋಗಿಸಿದರೂ ಉರಿ ಉರಿ ಅಥವಾ ರೆಡ್‌ನೆಸ್ ಕಾಣಿಸುತ್ತದೆ. ಅದುವೇ ಸೆನ್ಸಿಟಿವ್ ಸ್ಕಿನ್. ಇಂಥವರು ಸದಾ ಮೈಲ್ಡ್ ಕ್ಲೆನ್ಸರ್ ಮಾತ್ರ ಬಳಸಬೇಕು. ನಿಮ್ಮ ದೇಹದ ಚರ್ಮವನ್ನು ಟವೆಲ್‌ನಿಂದ ಒರಟಾಗಿ ಉಜ್ಜಬೇಡಿ. ಆಗ ಸ್ಕಿನ್ ರೆಡ್ ಆಗುತ್ತದೆ. ಇದಾವುದಕ್ಕೂ ಸೇರದ್ದೇ ನಾರ್ಮಲ್ ಸ್ಕಿನ್, ಅದು ಕ್ಲಿಯರ್ ಆಗಿರುತ್ತದೆ. ಇಂಥವರು ಯಾವುದೇ ಬಗೆಯ ಬ್ರಾಂಡ್‌ನ ಪ್ರಾಡಕ್ಟ್ಸ್ ಬಳಸಬಹುದು. ಅಂದರೆ ಕ್ವೆನ್ಲಿಂಗ್ ಬಳಸಿ ಬೆವರು, ಆಯಿಲ್, ಕೊಳೆ ಇತ್ಯಾದಿ ಎಲ್ಲವನ್ನೂ ತೆಗೆಯಬಹುದು.
ಟೋನಿಂಗ್
ಒಮ್ಮೊಮ್ಮೆ ಕ್ಲೆನ್ಸಿಂಗ್ ನಂತರ ಚರ್ಮದಲ್ಲಿ ತುಸು ಕೊಳೆ ಅಂಶ ಉಳಿದುಬಿಡುತ್ತದೆ. ಇದನ್ನು ಟೋನರ್ ನೆರವಿನಿಂದ ತೆಗೆಯಬೇಕು. ಇದಕ್ಕಾಗಿ ಹತ್ತಿಯನ್ನು ಟೋನರ್‌ನಲ್ಲಿ ಅದ್ದಿಕೊಂಡು ಮುಖ, ಕುತ್ತಿಗೆಯ ಭಾಗಕ್ಕೆ ಸವರಿಕೊಳ್ಳಿ. ಈ ತರಹದ ಎಕ್ಸ್ ಟ್ರಾ ಕ್ಲೆನ್ಸಿಂಗ್ ಎಫೆಕ್ಟ್ ನಿಮ್ಮ ಚರ್ಮದಲ್ಲಿ ಮಾಯಿಶ್ಚರ್ ಉಳಿಸುತ್ತದೆ. ಹೀಗಾಗಿ ಕ್ಲೆನ್ಸಿಂಗ್ ನಂತರ ಅಗತ್ಯ ಟೋನಿಂಗ್ ಮಾಡಿ.
ಎಕ್ಸ್ ಫಾಲಿಯೇಶನ್ನಿನ ಮಹತ್ವ
ಪ್ರತಿದಿನ ನಮ್ಮ ಚರ್ಮದಲ್ಲಿ ಲಕ್ಷಾಂತರ ಸ್ಕಿನ್ ಸೆಲ್ಸ್ ಮೂಡುತ್ತವೆ, ಒಮ್ಮೊಮ್ಮೆ ಈ ಸೆಲ್ಸ್ ಚರ್ಮದ ಪದರದ ಮೇಲೆಯೇ ಆಗಿರುತ್ತವೆ. ಆಗ ನಾವು ಇದನ್ನು ತೊಲಗಿಸಲೇಬೇಕು. ಎಕ್ಸ್ ಫಾಲಿಯೇಶನ್ ಪ್ರಕ್ರಿಯೆಯಿಂದ ಇಂಥ ಡೆಡ್ ಸ್ಕಿನ್ ಸೆಲ್ಸ್ ರಿಮೂವ್ ಮಾಡುವುದು ಸುಲಭ. ಇದರಿಂದ ಆ್ಯಕ್ನೆ, ಬ್ಲ್ಯಾಕ್‌ಹೆಡ್ಸ್ ನ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಇದರ ಬೆಸ್ಟ್ ರಿಸಲ್ಟ್ ಗಾಗಿ ಇದನ್ನು ಟೋನಿಂಗ್ ನಂತರ, ಮಾಯಿಶ್ಚರೈಸಿಂಗ್‌ಗೆ ಮೊದಲೇ ಮಾಡಿ ಮುಗಿಸಬೇಕು.