ಸುಂದರ, ಸಾಫ್ಟ್ ತುಟಿಗಳಿರಬೇಕೆಂದು ಪ್ರತಿ ಹೆಣ್ಣೂ ಬಯಸುತ್ತಾಳೆ. ಆದರೆ ಬದಲಾಗುವ ಋತು ನಮ್ಮ ಚರ್ಮಕ್ಕೆ ಮಾಡಿದಂತೆ ತುಟಿಗಳನ್ನೂ ಡ್ರೈ ಮಾಡಿಬಿಡುತ್ತವೆ. ಈ ಕಾರಣ ನಾವು ಮನೆಯಲ್ಲಿರಲಿ ಹೊರಗಿರಲಿ, ನಮ್ಮ ಗಮನವೆಲ್ಲ ಒಡೆದ, ಡ್ರೈ ತುಟಿಗಳ ಮೇಲೆಯೇ  ಇರುತ್ತದೆ. ಇದರಿಂದಾಗಿ ನಮ್ಮ ಬೇರೆಲ್ಲ ಕೆಲಸಗಳೂ ಕೆಡುತ್ತವೆ, ಮನಸ್ಸು ಬೇರೇನೂ ಚಿಂತಿಸದು. ಇದೇ ದೊಡ್ಡ ಚಿಂತೆ ಆಗಿಹೋಗುತ್ತದೆ.

ಆದರೆ ಮುಖಕ್ಕಿಂತ ಹೆಚ್ಚಾಗಿ ತುಟಿಗಳು ಏಕೆ ಬೇಗ ಡ್ರೈ ಆಗುತ್ತವೆ ಎಂದು ಗೊತ್ತೇ? ಇದಕ್ಕೆ ಕಾರಣ ದೇಹದ ಬೇರೆ ಭಾಗಗಳಿಗೆ ಹೋಲಿಸಿದಾಗ, ತುಟಿಗಳಲ್ಲಿ ತೈಲೀಯ ಗ್ರಂಥಿಗಳು ಇರುವುದಿಲ್ಲ. ಹಾಗಾಗಿಯೇ ಬೇಗ ಬೇಗ ಡ್ರೈ ಆಗುತ್ತವೆ. ಇದರಲ್ಲಿ ಹೀಲಿಂಗ್ ಪ್ರೋಸೆಸ್‌ ಸಹ ಬಲು ನಿಧಾನ. ಹೀಗಾಗಿ ಒಡೆದ ಡ್ರೈ ಲಿಪ್ಸ್ ಗುಣಕಾಣಲು ಸ್ವಲ್ಪ ಸಮಯ ಬೇಕು.

ಸಾಮಾನ್ಯವಾಗಿ ಚಳಿಗಾಲದಲ್ಲಿ ಮಾತ್ರ ತುಟಿಗಳು ಹೀಗೆ ಒಡೆಯುತ್ತವೆ, ಡ್ರೈನೆಸ್‌ ಸಮಸ್ಯೆ ಹೆಚ್ಚೆಂದು ಭಾವಿಸುತ್ತೇವೋ ಹಾಗೇನೂ ಇಲ್ಲ. ಇದಕ್ಕಾಗಿ ಕೇವಲ ತೀವ್ರ ಚಳಿ, ಶುಷ್ಕ ಗಾಳಿ ಅಷ್ಟೇ ಕಾರಣಲ್ಲ, ಬದಲಿಗೆ ಸೂರ್ಯನ ಹಾನಿಕಾರಕ UV ಕಿರಣಗಳು, ಅಗ್ಗದ ಲಿಪ್‌ ಸ್ಟಿಕ್‌ ಸಹ ಅಷ್ಟೇ ಕಾರಣ. ಹೀಗಾಗಿ ಅಗ್ಗದ  ಕಾಸಿಗೆ ಆಸೆಬಿದ್ದು ಮುಗ್ಗಲು ಮಾಲು ಖರೀದಿಸಿ ತುಟಿಗೆ ಹಚ್ಚಬೇಡಿ. ಇನ್ನಿತರ ಕಾರಣಗಳು ಎಂದರೆ :

ಮತ್ತೆ ಮತ್ತೆ ತುಟಿಗಳ ಮೇಲೆ ನಾಲಿಗೆ ಆಡಿಸುವುದು.

ಬಹಳ ಕಾಲವಾದರೂ ತುಟಿಗಳಿಗೆ ಮ್ಯಾಟ್‌ ಲಿಪ್‌ ಸ್ಟಿಕ್‌ ಬಳಸದೆ ಇರುವುದು.

ಔಷಧಿಗಳ ಸೈಡ್‌ ಎಫೆಕ್ಟ್ಸ್.

ಬದಲಾಗುವ ಋತು.

ಹೆಚ್ಚು ಮಸಾಲೆ ಪದಾರ್ಥದ ಸೇವನೆ.

ನೀವು ನಿಮ್ಮ ತುಟಿಗಳ ಬಗ್ಗೆ ಗಮನ ಹರಿಸದಿದ್ದರೆ, ಅದು ಅಗತ್ಯವಾಗಿ ಒಡೆದು, ಡ್ರೈ ಆಗುತ್ತದೆ. ಎಷ್ಟೋ ಸಲ ಇದರಿಂದ ರಕ್ತ ಸಹ ತೊಟ್ಟಿಕ್ಕುತ್ತದೆ. ಹೀಗಾಗಿ ಇವುಗಳ ರಕ್ಷಣೆ ಅತ್ಯಗತ್ಯ. ಹೀಗಾಗಿ ಸಮಸ್ಯೆ ಉಲ್ಬಣಗೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ. ತಜ್ಞರ ಸಲಹೆ ಎಂದರೆ, ಡ್ರೈನೆಸ್‌ ಹೆಚ್ಚಿದಷ್ಟೂ, ನೀವು ಕೆಮಿಕಲ್ಸ್ ಯುಕ್ತ ಲಿಪ್‌ ಬಾಮ್ ಬಳಸಲೇಬೇಡಿ, ಏಕೆಂದರೆ ಇವು ಕೆಲವು ಕಾಲ ಮಾತ್ರ ತುಟಿಗಳಿಗೆ ಆರಾಮ ನೀಡಬಲ್ಲ. ಹೀಗಾಗಿ ನೀವು ಕೆಲವು ವಿಶಿಷ್ಟ ಟೆಸ್ಟೆಡ್‌ ರೆಮಿಡೀಸ್‌ ಬಳಸಿಕೊಂಡೇ ಈ ಸಮಸ್ಯೆಯಿಂದ ಪಾರಾಗಬಹುದು ಎನ್ನುತ್ತಾರೆ.

ತುಟಿಗಳಿಗೂ ಎಕ್ಸ್ ಫಾಲಿಯೇಶನ್‌ ತುಟಿಗಳು ಒಡೆದು ಪದರ ಉದುರ ತೊಡಗಿದರೆ ಬಲು ನೋವಾಗುತ್ತದೆ. ಹೀಗಾಗಿ ಚರ್ಮದಂತೆಯೇ ಇದನ್ನೂ ಎಕ್ಸ್ ಫಾಲಿಯೇಟ್‌ ಮಾಡಿಸಿ. ಇದರಿಂದಾಗಿ ತುಟಿಗಳಿಂದ ಡೆಡ್‌ ಸ್ಕಿನ್‌ ಸೆಲ್ಸ್ ತೊಲಗುವುದಲ್ಲದೆ, ಅದರ ಮೇಲೆ ಒಂದು ಸ್ಮೂತ್‌ ಪದರ ಮೂಡಿಬರುತ್ತದೆ. ಇದಕ್ಕಾಗಿ ನೀವು ತುಸು ಸಕ್ಕರೆಗೆ ಕೆಲವು ಹನಿ ಜೇನು, ಚಿಟಕಿ ಸೈಂಧವ ಲವಣ, ತುಪ್ಪ ಬೆರೆಸಿ ಅದರಿಂದ ತುಟಿಗಳ ಮೇಲೆ ವೃತ್ತಾಕಾರವಾಗಿ ಸ್ಕ್ರಬ್‌ ಮಾಡಿ. ನಂತರ ಒದ್ದೆ ಟಿಶ್ಯು ಪೇಪರ್‌ ನಿಂದ ತುಟಿ ಒರೆಸಿ, ಕ್ಲೀನ್‌ ಮಾಡಿ. ನಂತರ ಆಲಿವ್‌/ಕೋಕೊನಟ್‌ ಎಣ್ಣೆಯಿಂದ ಮಸಾಜ್‌ ಮಾಡಿ ಅದಕ್ಕೆ ಮಾಯಿಶ್ಚರ್‌ ಒದಗಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ