ನೀವು ಸಹ ಮುರಿದುಹೋಗುವ, ಚಿಕ್ಕದಾದ ಮತ್ತು ಬಲಹೀನ ಉಗುರುಗಳಿಂದ ಬೇಸತ್ತಿದ್ದೀರಾ? ಒಂದು ವೇಳೆ ಹೌದು ಎಂದಾದರೆ ಗಾಬರಿಪಡಬೇಡಿ. ನಾವು ಹೇಳುವ ಮನೆ ಔಷಧಿಗಳಿಂದ ಉಗುರಿನ ಎಲ್ಲ ಸಮಸ್ಯೆಗಳೂ ದೂರವಾಗಿ ನೆಮ್ಮದಿಯಾಗಿರುತ್ತೀರಿ.
ಆಲಿವ್ ಆಯಿಲ್ ಮತ್ತು ನಿಂಬೆ ಮಿಶ್ರಣ
1 ಚಮಚ ಆಲಿವ್ ಆಯಿಲ್‌ನಲ್ಲಿ ಕೆಲವು ಹನಿ ನಿಂಬೆರಸ ಸೇರಿಸಿ ಮಿಶ್ರಣ ತಯಾರಿಸಿ. ಅದನ್ನು ಉಗುರಿಗೆ ಹಚ್ಚಿ ಚೆನ್ನಾಗಿ ಉಜ್ಜಿ. ಮಿಶ್ರಣದ ರಾಸಾಯನಿಕಗಳು ಉಗುರುಗಳ ಒಳಗೆ ಹೋಗದಂತಿರಬೇಕು.
ಉಪ್ಪಿನಿಂದ ಚಿಕಿತ್ಸೆ
ಮುರಿದುಹೋಗುವ ಉಗುರುಗಳಿಗೆ ಉಪ್ಪು ಬಹಳಷ್ಟು ಪರಿಣಾಮಕಾರಿಯಾಗಿರುತ್ತದೆ. 2 ಚಮಚ ಉಪ್ಪು, 2 ಹನಿ ನಿಂಬೆರಸ ಮತ್ತು ಗೋಧಿ ಬೀಜದ ಎಣ್ಣೆ ಸೇರಿಸಿದ ಮಿಶ್ರಣವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಕಲಸಿ. ನಂತರ ಆ ನೀರಿನಲ್ಲಿ 10 ನಿಮಿಷಗಳವರೆಗೆ ಕೈಗಳನ್ನು ಅದ್ದಿ. ವಾರಕ್ಕೆ 2 ಬಾರಿ ಈ ಪ್ರಕ್ರಿಯೆ ಪುನರಾವರ್ತಿಸಿ.
ಹಾಲಿನಲ್ಲಿ ಮೊಟ್ಟೆಯ ಹಳದಿ ಭಾಗ
ಉಗುರುಗಳ ಪೋಷಣೆ ಅತ್ಯಗತ್ಯ. ಅದನ್ನು ಮೊಟ್ಟೆಯ ಹಳದಿ ಭಾಗ ಮತ್ತು ಹಾಲು ಪೂರೈಸುತ್ತದೆ. ಮೊಟ್ಟೆಯ ಹಳದಿ ಭಾಗ ಮತ್ತು ಹಾಲಿನ ಮಿಶ್ರಣವನ್ನು ಉಗುರಿನ ಮೇಲೆ ಹಚ್ಚಿ. 1-2 ದಿನಗಳಲ್ಲಿಯೇ ವ್ಯತ್ಯಾಸ ತಿಳಿದುಬರುತ್ತದೆ.
ವ್ಯಾಸೆಲಿನ್
ವ್ಯಾಸೆಲಿನ್ ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಚೆನ್ನಾಗಿರುವ ಮತ್ತು ಆರೋಗ್ಯವಂತ ಉಗುರುಗಳಿಗೂ ದಿನಕ್ಕೊಮ್ಮೆ ಇದನ್ನು ಅಗತ್ಯವಾಗಿ ಉಪಯೋಗಿಸಿ.
ಹರ್ಬಲ್ ಮಾಸ್ಕ್
ಇದು ಮನೆಯಲ್ಲಿಯೇ ಮಾಡಿಕೊಳ್ಳುವಂಥದ್ದು. ಇದನ್ನು ಒಮ್ಮೆ ಉಪಯೋಗಿಸಿದರೆ ಸಾಕು ನೀವು ಅದಕ್ಕೇ ಶರಣಾಗುತ್ತೀರಿ. 1 ಕಪ್ ಬಿಸಿನೀರಿನಲ್ಲಿ 1 ಸಣ್ಣ ಚಮಚ ಕೆಮೋಮೈಲ್ ಮತ್ತು ಪುದೀನಾ ಎಲೆಗಳನ್ನು ಸೇರಿಸಿ 1 ಗಂಟೆ ನೆನೆಸಿಡಿ. ನಂತರ ಆ ನೀರನ್ನು ಶೋಧಿಸಿ ಅದರಲ್ಲಿ ಕೆಲವು ಹನಿ ಆಲಿವ್ ಆಯಿಲ್ ಮತ್ತು 2 ಚಮಚ ಗೋಧಿಹಿಟ್ಟು ಹಾಕಿ ಚೆನ್ನಾಗಿ ಕಲಸಿ ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಉಗುರುಗಳ ಮೇಲೆ ಹಚ್ಚಿ. ಕೆಲವು ದಿನಗಳು ಉಪಯೋಗಿಸಿದ ನಂತರ ಉಗುರುಗಳ ಸೌಂದರ್ಯ ಹೆಚ್ಚುತ್ತದೆ. ಬ್ರ್ಯಾಂಡೆಡ್ ನೇಲ್ ಪಾಲಿಶ್ ಮಾತ್ರ ಮಹಿಳೆಯರು ನೇಲ್ ಪಾಲಿಶ್‌ನ್ನು ದಿನವು ಉಪಯೋಗಿಸುತ್ತಾರೆ. ನೀವು ಉದ್ದದ ಹಾಗೂ ಸುಂದರ ಉಗುರುಗಳನ್ನು ಬಯಸುವಿರಾದರೆ ಅಗ್ಗದ ನೇಲ್ ಪಾಲಿಶ್ ಹುಡುಕಬೇಡಿ. ಚೆನ್ನಾಗಿರುವ ಬ್ರ್ಯಾಂಡೆಡ್‌ಕಂಪನಿಯ ನೇಲ್ ಪಾಲಿಶ್‌ನ್ನೇ ಉಪಯೋಗಿಸಿ. ಅಗ್ಗದ ಹಾಗೂ ಲೋಕಲ್ ನೇಲ್ ಪಾಲಿಶ್‌ಗಳನ್ನು ಕಳಪೆ ಕೆಮಿಕಲ್ಗಳಿಂದ ತಯಾರಿಸಲಾಗಿರುತ್ತದೆ. ಅವು ಉಗುರುಗಳ ತ್ವಚೆಯ ಪೌಷ್ಟಿಕತೆಯನ್ನು ಕಸಿದು ಅವುಗಳ ಬಣ್ಣವನ್ನು ಹಾಳುಮಾಡುತ್ತವೆ.
- ಎಸ್. ಮಂಜುಳಾ.