ಯೋಗರ್ಟ್ಕಿವೀ ಸಲಾಡ್

ಸಾಮಗ್ರಿ : 1-1 ಕಪ್‌ ಗಟ್ಟಿ ಮೊಸರು, ಗಾಢ ಕ್ರೀಂ, 2-3 ಪೀಸ್‌ ಕಿವೀ ಫ್ರೂಟ್‌, 2-3 ಚಮಚ ಸ್ಟ್ರಾಬೆರಿ ಜ್ಯಾಂ, ಸ್ಟ್ರಾಬೆರಿ ಕ್ರಶ್‌, 1 ಚಿಟಕಿ ಜಾಯಿಕಾಯಿಪುಡಿ, 1 ಸ್ಟಾರ್‌ ಅನೀಸ್‌, 2 ಚಮಚ ಕಂಡೆನ್ಸ್ಡ್ ಮಿಲ್ಕ್.

ವಿಧಾನ : ಕ್ರೀಂ, ಕಂಡೆನ್ಸ್ಡ್ ಮಿಲ್ಕ್, ಮೊಸರು ಬೆರೆಸಿ ಗೊಟಾಯಿಸಿ. ಇದನ್ನು 1-2 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ ಕೂಲ್ ‌ಮಾಡಿ. ಸ್ಟ್ರಾಬೆರಿ ಕ್ರಶ್‌ಗೆ ಜ್ಯಾಂ ಬೆರೆಸಿ ಕದಡಿಕೊಳ್ಳಿ. ಇದು ತುಸು ಗಟ್ಟಿ ಎನಿಸಿದರೆ ಜೊತೆಗೆ ಸ್ಟ್ರಾಬೆರಿ ರಸ ಬೆರೆಸಿಕೊಳ್ಳಿ. ಇದನ್ನು ಸಹ ಫ್ರಿಜ್‌ನಲ್ಲಿರಿಸಿ. ಕಿವೀ ಫ್ರೂಟ್‌ನ್ನು ಬಿಲ್ಲೆಗಳಾಗಿ ತುಂಡರಿಸಿ. ಒಂದು ಸರ್ವಿಂಗ್‌ ಬೌಲ್‌ಗೆ ಮೊದಲು ಮೊಸರು ಮಿಶ್ರಣ, ನಂತರ ಸ್ಟ್ರಾಬೆರಿ ಕ್ರಶ್‌, ಕೊನೆಯಲ್ಲಿ ಎಲ್ಲಕ್ಕೂ ಮೇಲೆ ಕಿವೀ ಫ್ರೂಟ್‌ ಬರಲಿ. ಇದರ ಮೇಲೆ ಜಾಯಿಕಾಯಿಪುಡಿ ಉದುರಿಸಿ ಕೂಲ್ ‌ಕೂಲ್ ಆಗಿ ಸವಿಯಲು ಕೊಡಿ.

ಗಾರ್ಡನ್ಫ್ರೆಶ್ಸಲಾಡ್

ಸಾಮಗ್ರಿ : ಚಿಕ್ಕ ಆಕಾರದ 1-1 ಕಲ್ಲಂಗಡಿಹಣ್ಣು, ಕರ್ಬೂಜಾ, 2 ಮಾಗಿದ  ಬಾಳೆಹಣ್ಣು, 1 ಸೇಬು, 1-1 ಮಧ್ಯಮ ಗಾತ್ರದ ಸೌತೇಕಾಯಿ, ಮೂಲಂಗಿ, ಸೀಬೇಕಾಯಿ, ಅಗತ್ಯವಿದ್ದಷ್ಟು ಸಲಾಡ್‌ ಎಲೆ, ಉದ್ದಕ್ಕೆ ಹೆಚ್ಚಿದ ಕ್ಯಾರೆಟ್‌, ಬೀಟ್‌ರೂಟ್‌ ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸಲಾಡ್‌ ಆಯಿಲ್‌, ನಿಂಬೆರಸ, ಜೇನುತುಪ್ಪ.

ವಿಧಾನ : ಚಿತ್ರದಲ್ಲಿರುವಂತೆ ಕರ್ಬೂಜಾ, ಕಲ್ಲಂಗಡಿಹಣ್ಣುಗಳನ್ನು ಸ್ಕೂಪ್‌ಗೊಳಿಸಿ ಬಾಲ್ಸ್ ಮಾಡಿಡಿ. ಬಾಳೆಹಣ್ಣನ್ನು ದಪ್ಪ ಬಿಲ್ಲೆಗಳಾಗಿಸಿ. ಸೇಬು, ಸೀಬೆ ಸಣ್ಣ ಸ್ಲೈಸ್‌ಗಳಾಗಲಿ. ಸೌತೆ, ಮೂಲಂಗಿಯನ್ನು ಉದ್ದಕ್ಕೆ ಹೆಚ್ಚಿಡಿ. ಸಲಾಡ್‌ ಎಲೆ ಶುಚಿಗೊಳಿಸಿ ಪ್ಲೇಟ್‌ ಮೇಲೆ ಹರಡಿರಿ. ಡ್ರೆಸ್ಸಿಂಗ್‌ ಸಾಮಗ್ರಿ ಪೂರ್ತಿ ಬೆರೆಸಿಕೊಳ್ಳಿ. ಸಲಾಡ್‌ ಎಲೆ ಮೇಲೆ ಉಳಿದ ಸಾಮಗ್ರಿಗಳನ್ನು ಚಿತ್ರದಲ್ಲಿರುವಂತೆ ಅಲಂಕರಿಸಿ, ಮೇಲೆ ಡ್ರೆಸ್ಸಿಂಗ್‌ ಉದುರಿಸಿ. ಊಟದ ಜೊತೆ ಸವಿದರೆ ಸೊಗಸು!

ಪೈನಾಪಲ್ ಕ್ಯಾರೆಟ್ಕೋಸ್ಲಾ

ಸಾಮಗ್ರಿ : ಅರ್ಧರ್ಧ ಕಪ್‌ ಉದ್ದಕ್ಕೆ ತೆಳ್ಳಗೆ ಹೆಚ್ಚಿದ ಕ್ಯಾರೆಟ್‌, ಸೇಬು, ಅನಾನಸ್‌, ಸೌತೇಕಾಯಿ, ಎಲೆಕೋಸು, ಒಂದಿಷ್ಟು ಸೀಡ್ಲೆಸ್‌ ದಾಳಿಂಬೆ ಹರಳು, ತುಂಡರಿಸಿದ ಬಾದಾಮಿ (ನೆನೆಸಿ ಸಿಪ್ಪೆ ಬಿಡಿಸಿದ್ದು), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓರಿಗೆನೋ, ಮೆಯೋನೀಸ್‌, ಸಲಾಡ್‌ ಆಯಿಲ್‌.

ವಿಧಾನ : ಹೆಚ್ಚಿದ ಕ್ಯಾರೆಟ್‌ ಮತ್ತು ಎಲೆಕೋಸನ್ನು 1 ತಾಸು ಐಸ್‌ ನೀರಲ್ಲಿ ನೆನೆಹಾಕಿಡಿ. ನಂತರ ಇದನ್ನು ಸ್ಟೀಲ್ ‌ಜರಡಿಗೆ ಹಾಕಿ, ಎಲ್ಲಾ ನೀರೂ ಸೋರಿಹೋಗುವಂತೆ ಮಾಡಿ. ನಂತರ ಅದನ್ನು ಒಂದು ಬಟ್ಟಲಿಗೆ ಹಾಕಿಡಿ. ಇದಕ್ಕೆ ಸೇಬು, ಅನಾನಸ್‌, ಸೌತೇಕಾಯಿ ಇತ್ಯಾದಿ ಸೇರಿಸಿ. ನಂತರ ಇದಕ್ಕೆ ಓರಿಗೆನೊ, ಉಪ್ಪು, ಮೆಣಸು ಸೇರಿಸಿ ಎಲ್ಲವನ್ನೂ ಒಟ್ಟಿಗೆ ಟಾಸ್‌ ಮಾಡಿ. ಇದನ್ನು ಸರ್ವಿಂಗ್‌ ಡಿಶ್‌ಗೆ ಹಾಕಿ, ದಾಳಿಂಬೆ ಹರಳು, ಬಾದಾಮಿ ತುಂಡುಗಳಿಂದ ಅಲಂಕರಿಸಿ ಸವಿಯಲು ಕೊಡಿ.

ಬೇಬಿ ಪೊಟೇಟೊ ಡೆಲಿಕೆಸಿ
ಸಾಮಗ್ರಿ : 10-15 ಬೇಬಿ ಪೊಟೇಟೋ, 10-15 ಚೆರ್ರಿ ಟೊಮೇಟೊ, 10-15 ಬೇಬಿ ಆನಿಯನ್‌, 8-10 ರಾಸ್‌ಬೆರಿ, 8-10 ಕಪ್ಪು ದ್ರಾಕ್ಷಿ, 1 ದೊಡ್ಡ ಆಲೂಗಡ್ಡೆ, 3-4 ಚಮಚ ಆಲಿವ್ ‌ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಪುದೀನಾ ಚಟ್ನಿ, ಚಾಟ್‌ ಮಸಾಲ, ಕರಿಯಲು ಆಲಿವ್ ಎಣ್ಣೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ