ಸಾಮಗ್ರಿ : 1 ಚಮಚ ಶುಂಠಿ ರಸ, ಒಂದಿಷ್ಟು ತೆಳುವಾಗಿ ಹೆಚ್ಚಿದ ಶುಂಠಿ, ಅರ್ಧ ಕಪ್‌ಅನಾನಸ್‌ಜೂಸ್‌, 2 ಚಿಟಕಿ ಜೀರಿಗೆ ಪುಡಿ, ಒಂದಿಷ್ಟು ಹೆಚ್ಚಿದ ಪುದೀನಾ, ಕ್ರಶ್ಡ್ ಐಸ್‌, ಹೆಚ್ಚಿದ 2-3 ಅನಾನಸ್‌ಹೋಳು, 2-3 ಚಮಚ ಶುಗರ್‌ಸಿರಪ್‌, ಅಗತ್ಯವಿದ್ದಷ್ಟು ಫ್ರಿಜ್ ನೀರು, ಉಪ್ಪು, ನಿಂಬೆರಸ.

ವಿಧಾನ : ಪುದೀನಾ, ಶುಂಠಿ ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿಗಳನ್ನೂ ಮಾಕ್‌ಟೇಲ್‌ಶೇಕರ್‌ನಲ್ಲಿ ಬೆರೆಸಿ ಚೆನ್ನಾಗಿ ಕುಲುಕಬೇಕು. ನಂತರ ಇದನ್ನು ಸರ್ವಿಂಗ್‌ಗ್ಲಾಸುಗಳಿಗೆ ಸುರಿದು ಅದಕ್ಕೆ ಶುಂಠಿ, ಪುದೀನಾ, ಅನಾನಸ್‌ತುಂಡರಿಸಿ ತೇಲಿಬಿಟ್ಟು ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಬ್ಲೂ ಕರಂಟ್

ಸಾಮಗ್ರಿ : ಅರ್ಧ ಕಪ್‌ಬ್ಲೂ ಕರಂಟ್‌ರಸ, ಅರ್ಧರ್ಧ ಚಮಚ ಲೆಮೋನೇಡ್‌, ನಿಂಬೆರಸ, 2-2 ಚಮಚ ಬಿಳಿಯ ದ್ರಾಕ್ಷಿ ರಸ, ಬ್ಲೂ ಸೋಡ, ಒಂದಿಷ್ಟು ಪುಡಿ ಐಸ್‌, ಅಲಂಕರಿಸಲು ಚೆರ್ರಿ ನಿಂಬೆಯ ಹೋಳು.

ವಿಧಾನ : ಬ್ಲೂ ಕರಂಟ್‌ರಸಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಕಾಕ್‌ಟೇಲ್ ಶೇಕರ್‌ನಲ್ಲಿ ಚೆನ್ನಾಗಿ ಕುಲುಕಿ ತಣ್ಣಗೆ ಮಾಡಿ. ಈಗ ಇದನ್ನು ಚಿಲ್ಡ್ ಗ್ಲಾಸುಗಳಿಗೆ ಸುರಿದು, ಮೇಲಿನಿಂದ ಸೋಡ ತುಂಬಿಸಿ. ಚೆರ್ರಿ ಮತ್ತು ನಿಂಬೆ ಹೋಳುಗಳಿಂದ ಅಲಂಕರಿಸಿ ಸವಿಯಲು ಕೊಡಿ.

ಪೈನಾಪಲ್ ಚಿಲೀ ಟಿನೀ

ಸಾಮಗ್ರಿ : 200 ಗ್ರಾಂ ಅನಾನಸ್‌, 2 ಚಿಟಕಿ ಬಿಳಿ ಮೆಣಸು, 1 ಚಮಚ ನಿಂಬೆರಸ, ಒಂದಿಷ್ಟು ಪುಡಿ ಐಸ್‌, 1 ಕಪ್‌ಮೂಸಂಬಿ ರಸ, ಅರ್ಧ ಚಮಚ ನೆಲ್ಲಿ ಪೇಸ್ಟ್, 1 ಬಾಟಲ್ ಸೋಡ, ಒಂದಿಷ್ಟು ಹೆಚ್ಚಿದ ಪುದೀನಾ, ನಿಂಬೆ ಹೋಳು.

ವಿಧಾನ : ಅನಾನಸ್‌ಸಿಪ್ಪೆ ಹೆರೆದು ಹೋಳು ಮಾಡಿ ಮಿಕ್ಸಿಯಲ್ಲಿ ಬ್ಲೆಂಡ್‌ಮಾಡಿ ಪ್ಯೂರಿ ತಯಾರಿಸಿ. ನಂತರ ಇದಕ್ಕೆ ಬಿಳಿ ಮೆಣಸು, ನಿಂಬೆರಸ, ಪುದೀನಾ, ನೆಲ್ಲಿ ಪೇಸ್ಟ್, ಮೂಸಂಬಿ ರಸದೊಂದಿಗೆ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಈಗ ಇದಕ್ಕೆ ಐಸ್‌, ಸೋಡ ಬೆರೆಸಿಕೊಳ್ಳಿ. ಗ್ಲಾಸುಗಳಿಗೆ ಇದನ್ನು ಸುರಿದು ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಮಿಶ್ರ ಹಣ್ಣುಗಳ ಶರಬತ್ತು

ಸಾಮಗ್ರಿ : 2-2 ದೊಡ್ಡ ಚಮಚ ಕಲ್ಲಂಗಡಿ ಹಣ್ಣಿನ ರಸ, ಕೆಂಪು ದ್ರಾಕ್ಷಿಯ ಪ್ಯೂರಿ, ಲೀಚೀ ತಿರುಳು, ಶುಗರ್‌ಸಿರಪ್‌, ಒಂದಿಷ್ಟು ಹೆಚ್ಚಿದ ಕೆಂಪು ಹಸಿ ಮೆಣಸಿನಕಾಯಿ, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಗರಂಮಸಾಲ, ಪುಡಿಮೆಣಸು, ಕೆಂಪು ಕಲ್ಲುಸಕ್ಕರೆ.

ವಿಧಾನ : ಬ್ಲೆಂಡರ್‌ಗೆ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ ಚೆನ್ನಾಗಿ ನುಣ್ಣಗೆ ಮಾಡಿಕೊಳ್ಳಿ. ಆಫ್‌ಮಾಡಿ ಮತ್ತೊಮ್ಮೆ ಚಲಾಯಿಸಿ. ನಂತರ ಈ ಶರಬತ್ತನ್ನು 1 ತಾಸು ಫ್ರಿಜ್‌ನಲ್ಲಿರಿಸಿ, ಗ್ಲಾಸುಗಳಿಗೆ ಸುರಿದು, ಪುದೀನಾ ಎಲೆಯಿಂದ ಅಲಂಕರಿಸಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ